Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಶಬರಿಮಲೆಗೆ ಮಾಲೆ ಹಾಕಿದ್ದರೆ ಈ 5 ಬಗೆಯ ಆಹಾರ ಸೇರಿಸಿದರೆ ಆರೋಗ್ಯ ವೃದ್ಧಿಸುವುದು
ನವೆಂಬರ್-ಡಿಸೆಂಬರ್, ಜನವರಿ ಅರ್ಧದವರೆಗೆ ಅಯ್ಯಪ್ಪ ಸ್ವಾಮಿಮಾಲೆ ಹಾಕಿದವರು ಕಠಿಣ ವ್ರತ ನಿಯಮ ಪಾಲಿಸುತ್ತಾರೆ. ಈ ಸಮಯದಲ್ಲಿ ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು, ಅದರಲ್ಲಿಯೂ ಲಘು ಆಹಾರ ಸೇವಿಸಬೇಕು. ಸೂರ್ಯೋದಯಕ್ಕೆ ಮುನ್ನ ಎದ್ದು ತಣ್ಣೀರು ಸ್ನಾನ ಮಾಡಿ ಅಯ್ಯಪ್ಪ ಸ್ವಾಮಿಯ ಮಂತ್ರಗಳು,ಭಜನೆಗಳನ್ನು ಹೇಳುತ್ತಾ ಪೂಜೆ ಮಾಡಬೇಕು, ನಂತರ ಸಾತ್ವಿಕ ಲಘು ಆಹಾರ ಸೇವನೆ.
ಅಯ್ಯಪ್ಪ ವ್ರತ ಕೈಗೊಂಡಾಗ ದೇಹಕ್ಕೆ ಶಕ್ತಿ ತುಂಬಲು ಸಾತ್ವಿಕ ಆಹಾರಕ್ರಮದಲ್ಲಿ ಈ ಬಗೆಯ ಆಹಾರ ಸೇವನೆ ಒಳ್ಳೆಯದು

ಗೆಣಸು, ತರಕಾರಿಗಳು: ನೀವು ನಿಮ್ಮ ಆಹಾರಕ್ರಮದಲ್ಲಿ ಈ ಬಗೆಯ ಆಹಾರ ಸೇವನೆ ಮಾಡುವುದರಿಂದ ದೇಹವನ್ನು ಬೆಚ್ಚಗಿಡುತ್ತದೆ ಅಲ್ಲದೆ ದೇಹಕ್ಕೆ ಶಕ್ತಿ ದೊರೆಯುವುದು. ಚಳಿಗಾಲದಲ್ಲಿಜೀರ್ಣಕ್ರಿಯೆಗೆ ಒಳ್ಳೆಯದು.
ಸಿಹಿ ಗೆಣಸು: ಸಿಹಿ ಗೆಣಸು ಬೇಯಿಸಿ ತಿನ್ನಬಹುದು, ಇದನ್ನು ಸ್ನ್ಯಾಕ್ಸ್ ರೀತಿಯಲ್ಲಿಯೂ ಬಳಸಬಹುದು. ಅಲ್ಲದೆ ಇದನ್ನು ಬೇಯಿಸಿ ತಿನ್ನುವುದು ಕೂಡ ಸುಲಭ, ಹಾಗಾಗಿ ಪ್ರತಿದಿನ ಗೆಣಸು ಸೇವಿಸಿ ತಿಂದರೂ ಒಳ್ಳೆಯದು, ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುವುದು ಅಲ್ಲದೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಓಟ್‌ಮೀಲ್ಸ್: ಒಂದು ಹೊತ್ತು ನಿಮ್ಮ ಆಹಾರಕ್ರಮದಲ್ಲಿ ಓಟ್‌ಮೀಲ್ ಸೇರಿಸಿ. ಓಟ್‌ಮೀಲ್ ದೇಹಕ್ಕೆ ಶಕ್ತಿಯನ್ನು ತುಂಬುವುದು, ದೇಹಕ್ಕೆ ಅವಶ್ಯಕವಾದ ಪೋಷಕಾಂಶ ಒದಗಿಸುತ್ತದೆ.
ಅರ್ಧ ಕಪ್ ಓಟ್ಸ್‌ನಲ್ಲಿರುವ ಪೋಷಕಾಂಶಗಳು
ನಿಮ್ಮ ದೇಹಕ್ಕೆ ಅವಶ್ಯಕವಾದ ಮ್ಯಾಂಗನೀಸ್ 63.9% ರಷ್ಟು ಓಟ್ಸ್‌ನಲ್ಲಿದೆ
ಮೆಗ್ನಿಷ್ಯಿಯಂ 13.3%
ಸತು 17.6ರಷ್ಟು
9.4ರಷ್ಟು ಕಬ್ಬಿಣದಂಶ
ಸತು 13.4ರಷ್ಟು
ಫೋಲೆಟ್ 3.2ರಷ್ಟು
ವಿಟಮಿನ್ಬಿ1
ವಿಟಮಿನ್ ಬಿ5
ಅಲ್ಲದೆ ಕ್ಯಾಲ್ಸಿಯಂ, ಪೊಟಾಷ್ಯಿಯಂ, ವಿಟಮಿನ್ ಬಿ6, ವಿಟಮಿನ್ ಬಿ3
ಇಷ್ಟೆಲ್ಲಾ ಪೋಷಕಾಂಶ ಅರ್ಧ ಕಪ್ ಓಟ್ಸ್ ಸೇವನೆಯಲ್ಲಿ ಸಿಗುತ್ತದೆ.
ತರಕಾರಿ ಸೂಪ್ ಸೇವಿಸಿ
ಟೊಮೆಟೊ, ಜೋಳ ಇವೆಲ್ಲಾ ಹಾಕಿ ಸೂಪ್ ಮಾಡಿ ಸೇವಿಸಿ, ಬಿಸಿ ಬಿಸಿ ಸೂಪ್ ಮೈ ಬೆಚ್ಚಗಿಡಲು ಸಹಕಾರಿ, ಗಂಟಲು,
ನೋವು, ಶೀತ ಈ ಬಗೆಯ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುತ್ತದೆ.
ಸೊಪ್ಪು ಬಳಸಿ
ನೀವು ನಿಮ್ಮ ಆಹಾರಕ್ರಮದಲ್ಲಿ ಸೊಪ್ಪು ಸೇರಿಸಿ. ಈ ಆಹಾರಗಳ ಸೇವನೆಯಿಂದ ಕಬ್ಬಿಣದಂಶ, ಕ್ಯಾಲ್ಸಿಯಂ ,ವಿಟಮಿನ್ ಕೆ, ವಿಟಮಿನ್ ಸಿ, ಇ ದೊರೆಯುತ್ತದೆ.
ಡ್ರೈ ಫ್ರೂಟ್ಸ್
ದಿನಾ ಸ್ವಲ್ಪ ಡ್ರೈ ಫ್ರೂಟ್ಸ್ ಸೇವಿಸಿ, ಇದು ದೇಹಕ್ಕೆ ಅಗ್ಯತವಾದ ಪೋಷಕಾಂಶ ನೀಡುತ್ತದೆ, ಅಲ್ಲದೆ ದಿನಪೂರ್ತಿ ಲವಲವಿಕೆಯಿಂದ ಇರುವಿರಿ. ಈ ಬಗೆಯ ಆಹಾರಕ್ರಮ ಪಾಲಿಸುವುದರಿಂದ ಕಠಿಣ ಕೆಲಸ ಮಾಡುವವರಿಗೆ ಸುಸ್ತಾಗುವುದಿಲ್ಲ, ಅಲ್ಲದ ಮಕ್ಕಳು ಮಲೆಗೆ ಮಾಲೆ ಹಾಕಿದ್ದರೆ ಈ ಬಗೆಯ ಆಹಾರ ನೀಡುವುದು ಒಳ್ಳೆಯದು.
ಅಯ್ಯಪ್ಪಸ್ವಾಮಿ ವ್ರತದ ಆರೋಗ್ಯಕರ ಗುಣಗಳು
ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಲು ಭಕ್ತರು ಕಟ್ಟುನಿಟ್ಟಿನ ವ್ರತ ನಿಯಮ ಪಾಲಿಸುತ್ತಾರೆ, ಆದರೆ ಈ ವ್ರತ ನಿಯಮ ಪಾಲಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಗುಣಗಳಿವೆ.
ಮಿತವಾದ ಸಾತ್ವಿಕ ಆಹಾರ ಮೈ ತೂಕ ನಿಯಂತ್ರಣಕ್ಕೆ ಸಹಕಾರಿ: ಈ ಸಮಯದಲ್ಲಿ ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ ಅಲ್ಲದೆ ಲಘು ಆಹಾರ ಸೇವನೆ ಮಾಡುತ್ತಾರೆ, ಬೆಳಗ್ಗೆ ಬೇಗನೆ ಏಳುವುದರಿಂದ ಬೇಗನೆ ಆಹಾರ ಸೇವಿಸಿ ಮಲಗುತ್ತಾರೆ. ಈ ನಿಯಮ ಪಾಲಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅತ್ಯಧಿಕ ರಕ್ತದೊfತಡ, ಮಧುಮೇಹದ ಸಮಸ್ಯೆವಿದ್ದರೂ ನಿಯಂತ್ರಣಕ್ಕೆ ಬರುತ್ತದೆ, ದೇಹದಲ್ಲಿನ ಬೇಡ ಕೊಬ್ಬಿನಂಶ ಕರಗುವುದು.
ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ: ಈ ಸಮಯದಲ್ಲಿ ಮದ್ಯ, ಮಾಂಸ ಈ ಬಗೆಯ ಆಹಾರಕ್ರಮದಿಂದ ದೂರವಿರುತ್ತಾರೆ, ಹಗಾಗಿ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ಇದರಿಂದ ದೇಹದಲ್ಲಿರುವ ಬೇಡದ ಕಶ್ಮಲ ಹೊರಹೋಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
