Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಕೆಟ್ಟ ಅಭ್ಯಾಸಗಳಿಂದ ನಿಮ್ಮ ಹಲ್ಲು ಹಾಳು ಮಾಡಿಕೊಳ್ಳಬೇಡಿ ಜೋಕೆ!
ಆರೋಗ್ಯವೇ ಭಾಗ್ಯ ಅಂತಾರೆ ಅದೇ ರೀತಿ ನಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ದಿನ ನಿತ್ಯ ಎರಡು ಬಾರಿ ಹಲ್ಲುಜ್ಜಬೇಕು. ಅಷ್ಟೇ ಅಲ್ಲ, ಯಾವುದಾದರೂ ಆಹಾರ ತಿಂದ ನಂತರ ಬಾಯಿಯನ್ನು ಮುಕ್ಕಳಿಸೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಹಲ್ಲಿನ ಆರೋಗ್ಯ ಕಾಪಾಡೋದು ತುಂಬಾನೇ ಕಷ್ಟ.
ಕನಿಷ್ಠ ಪಕ್ಷ ವರ್ಷಕ್ಕೆ ಒಂದು ಬಾರಿಯಾದರೂ ಸರಿ ವೈದ್ಯರ ಬಳಿ ಹೋಗಿ ಚೆಕ್ ಅಪ್ ಮಾಡಿಸಿಕೊಳ್ಳಬೇಕು. ನಿಮಗೊತ್ತಾ ನಾವು ಮಾಡುವ ಕೆಲವೊಂದು ಚಟುವಟಿಕೆಗಳು ಹಲ್ಲಿಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿದೆ. ಹಾಗಾದ್ರೆ ಯಾವ ಚಟುವಟಿಕೆಗಳು ಹಲ್ಲನ್ನು ಹಾಳು ಮಾಡುತ್ತದೆ ಅನ್ನೋದನ್ನು ತಿಳಿಯೋಣ.

1. ಕಲ್ಲುಜ್ಜುವಾಗ ಹಲ್ಲು, ಒಸಡಿನ ಮೇಲೆ ಒತ್ತಡ ಹಾಕುವುದು
ಹಲ್ಲುಜ್ಜುವಾಗ ತುಂಬಾನೇ ಜಾಗರೂಕರಾಗಿ ಇರಬೇಕು. ಹಲ್ಲುಜ್ಜುವ ಸಂದರ್ಭದಲ್ಲಿ ಹಲ್ಲು ಹಾಗೂ ಒಸಡಿನ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಕಠಿಣವಾದ ಬ್ರಷ್ ನಿಮ್ಮ ಹಲ್ಲು ಹಾಗೂ ವಸಡಿಗೆ ಹಾನಿಯುಂಟು ಮಾಡಬಹುದು. ಹೀಗಾಗಿ ಹಲ್ಲುಜ್ಜಲು ಮೃದುವಾದ ಬ್ರಷ್ ಅನ್ನು ಬಳಸಬೇಕು.
2. ಉಗುರು ಕಚ್ಚುವುದು
ಹೆಚ್ಚಿನವರಿಗೆ ಉಗುರು ಕಚ್ಚುವ ಅಭ್ಯಾಸವಿದೆ. ಮನೆಯವರು ಎಷ್ಟು ಬುದ್ಧಿ ಹೇಳಿದ್ರು ಕೂಡ ಈ ಅಭ್ಯಾಸವನ್ನು ಬಿಡೋದಕ್ಕೆ ಅವರಿಂದ ಸಾಧ್ಯವಾಗೋದಿಲ್ಲ. ಉಗುರು ಕಚ್ಚುವುದು ನಿಮ್ಮ ದವಡೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಇದು ನಿಮ್ಮ ದವಡೆಯನ್ನು ದೀರ್ಘಕಾಲದವರೆಗೆ ಚಾಚಿಕೊಂಡಿರುವ ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಹೀಗಾಗಿ ಉಗುರು ಕಚ್ಚುವ ಅಭ್ಯಾಸವನ್ನು ಬಿಡಲು ಉಗುರುಗಳಿಗೆ ಬಣ್ಣ ಹಚ್ಚಿರಿ.
3. ಹಲ್ಲು ಕಡಿಯುವುದು
ಅನೇಕರಿಗೆ ಹಲ್ಲು ಕಡಿಯುವ ಅಭ್ಯಾಸ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇದರಿಂದ ನಿಮ್ಮ ಹಲ್ಲುಗಳು ಹಾನಿಗೊಳಗಾಗುತ್ತದೆ. ಸ್ನಾಯು ನೋವು ಮತ್ತು ನಿರ್ಬಂಧಿತ ದವಡೆಯ ಚಲನೆಗೆ ಕಾರಣವಾಗಬಹುದು. ಈ ಅಭ್ಯಾಸವನ್ನು ತಡೆಗಟ್ಟಲು ಪರಿಹಾರ ಕ್ರಮಗಳನ್ನು ಕೈಗೊಳ್ಳಿ. ಇಲ್ಲದಿದ್ದರೆ ಇದರಿಂದ ಸಮಸ್ಯೆ ಉಂಟಾಗುತ್ತದೆ.
4. ತಂಬಾಕು ಬಳಕೆ
ಅತಿ ಹೆಚ್ಚಿನ ಜನರು ತಂಬಾಕು ಸೇವಿಸುತ್ತಾರೆ. ತಂಬಾಕು ಜಗಿಯುವುದು, ಅಥವಾ ಸಿಗರೇಟ್ ಸೇವನೆ ಇದು ಖಂಡಿತ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲಾ ತಂಬಾಕು ಉತ್ಪನ್ನಗಳು ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ಹಾನಿಕಾರಕವಾಗಿದೆ. ತಂಬಾಕು ಸೇವನೆಯು ನಿಮಗೆ ಒಸಡು ಕಾಯಿಲೆ, ದುರ್ವಾಸನೆ, ಒಣ ಬಾಯಿ, ದಂತಕ್ಷಯ ಮತ್ತು ಬಾಯಿಯ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಿ.
5. ಟೂತ್ ಪಿಕ್ ಬಳಕೆ
ಊಟದ ನಂತರ ನಿಮ್ಮ ಹಲ್ಲುಗಳ ಎಡೆಯಲ್ಲಿ ಸಿಲುಕಿರುವ ಆಹಾರವನ್ನು ಹೊರತೆಗೆಯಲು ಸಾಮಾನ್ಯವಾಗಿ ಟೂತ್ ಪಿಕ್ ಬಳಕೆ ಮಾಡುತ್ತೇವೆ. ಇದರಿಂದ ನಮ್ಮ ಹಲ್ಲು ಸಂಪೂರ್ಣವಾಗಿ ಸ್ವಚ್ಛವಾಯ್ತು ಅಂತ ಅಂದುಕೊಳ್ಳುತ್ತೇವೆ. ಆದರೆ ನಿಮಗೊತ್ತಾ ಟೂತ್ ಪಿಕ್ ಬಳಸೋದ್ರಿಂದ ಕೆಲವೊಂದು ಸಲ ನಮ್ಮ ಒಸಡಿನಲ್ಲಿ ರಕ್ತ ಸುರಿಯುತ್ತದೆ. ಇದು ಒಸಡಿನ ಸೋಂಕಿಗೆ ಕಾರಣವಾಗುತ್ತಂತೆ. ಹೀಗಾಗಿ ಟೂತ್ ಪಿಕ್ ಬಳಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ.
6. ಸೋಡಾ ಸೇವನೆ ಅಪಾಯಕಾರಿ
ಅಧ್ಯಯನವೊಂದರ ಪ್ರಕಾರ ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ನಿಯಮಿತವಾಗಿ ಕುಡಿಯುವುದು ಹಲ್ಲಿನ ದಂತಕವಚವನ್ನು ಸವೆತಕ್ಕೆ ಕಾರಣವಾಗಬಹುದು. ಇದರ ಬದಲಾಗಿ ನೀರು, ಹಾಲು, ಗ್ರೀನ್ ಮತ್ತು ಬ್ಲಾಕ್ ಟೀ ಸೇವಿಸಿ. ಇದು ನಿಮ್ಮ ದಂತಕವಚವನ್ನು ಬಲಪಡಿಸಲು ಮತ್ತು ಬಾಯಿಯ ಬ್ಯಾಕ್ಟೀರಿಯಾದಿಂದ ನಿಮ್ಮ ಹಲ್ಲುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಹಲ್ಲಿನ ಮೇಲೆ ಹೆಚ್ಚು ಒತ್ತಡ ಹಾಕಿ ಗಟ್ಟಿಯಾಗಿರುವ ವಸ್ತುಗಳ ಮುಚ್ಚಳ ತೆಗೆಯುವುದು, ಜಗಿಯುವುದನ್ನು ಮಾಡಬೇಡಿ.
7. ಹೆಚ್ಚಿನ ಸಕ್ಕರೆಯುಕ್ತ ಆಹಾರ ಸೇವಿಸಬೇಡಿ
ಊಟದ ನಡುವೆ ಹೆಚ್ಚು ಸಕ್ಕರೆಯುಕ್ತ ತಿಂಡಿಗಳನ್ನು ತಿನ್ನುವುದರಿಂದ ಇದು ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದರಿಂದ ನಿಮ್ಮ ಹಲ್ಲು ಹುಳುಕಾಗುತ್ತದೆ. ಸಮತೋಲಿತ ಊಟವನ್ನು ಸೇವಿಸಿ ಇದರಿಂದ ನೀವು ಊಟದ ನಡುವೆ ಹಸಿವು ಅನುಭವಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ನೀವು ಸಕ್ಕರೆಯುಕ್ತ ಆಹಾರ ಸೇವಿಸಿದರೆ ಸಾಕಷ್ಟು ನೀರು ಕುಡಿಯಿರಿ.
ಹಲ್ಲಿನ ಆರೋಗ್ಯ ಒಂಚೂರು ಹದ ಗೆಟ್ಟರೂ ಕೂಡ ಜೀವವೇ ಹೋದ ಅನುಭವ ಆಗುತ್ತದೆ. ಯಾಕಂದ್ರೆ ಹಲ್ಲಿನಲ್ಲಿ ಆ ಮಟ್ಟಿಗೆ ನೋವಿರುತ್ತದೆ. ಹೀಗಾಗಿ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
