Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೆಜೆಟೇರಿಯನ್ ಹಾಗೂ ವೇಗನ್ ಆಗಿದ್ದರೆ ಈ ಆಹಾರಗಳಲ್ಲಿ ಪ್ರೊಟೀನ್ ಹೆಚ್ಚು ಸಿಗುತ್ತೆ ನೋಡಿ
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಯ್ದುಕೊಳ್ಳುವುದು ಪ್ಯಾಶನ್ ಆಗಿ ಬದಲಾಗಿದೆ. ಬಹುತೇಕರು ಆರೋಗ್ಯಕರ ಜೀವನಶೈಲಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಜಿಮ್ಗೆ ತೆರಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಬಂದಾಗ ಕೇವಲ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಮಾತ್ರ ಇದಕ್ಕೆ ಪರಿಹಾರವಲ್ಲ.

ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಿ ಆ ಜಾಗಕ್ಕೆ ಪ್ರೊಟೀನ್ ಹಾಗೂ ಫೈಬರ್ ಮೂಲಗಳನ್ನು ಸೇರಿಸುವುದಾಗಿದೆ. ಮಾಂಸಾಹಾರಿಗಳಲ್ಲಿ ಮಾಂಸ, ಮೊಟ್ಟೆ , ಮೀನುಗಳಲ್ಲಿ ಅಗಾಧ ಪ್ರಮಾಣದ ಪ್ರೊಟೀನ್ ದೊರಕಿಬಿಡುತ್ತದೆ.
ಆದರೆ ಸಸ್ಯಾಹಾರಿಗಳು ದೇಹಕ್ಕೆ ಅವಶ್ಯಕವಾದ ಪ್ರಮಾಣದಲ್ಲಿ ಪ್ರೊಟೀನ್ ಸಂಗ್ರಹ ಮಾಡಲು ಹೆಣಗಾಡುತ್ತಾರೆ. ಹೀಗಾಗಿ ಸಸ್ಯಾಹಾರಿಗಳು ಸೂಕ್ತ ಪ್ರಮಾಣದಲ್ಲಿ ಪ್ರೊಟೀನ್ನ್ನು ದೇಹಕ್ಕೆ ಸೇರಿಸಿಕೊಳ್ಳಲು ಯಾವೆಲ್ಲ ಪದಾರ್ಥಗಳು ಸಹಾಯ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಆರೋಗ್ಯವಂತ ಮನುಷ್ಯನಿಗೆ ಎಷ್ಟು ಪ್ರೊಟೀನ್ ಅಗತ್ಯವಿರುತ್ತದೆ..?
ಪ್ರೊಟೀನ್ ಮೂಲಗಳನ್ನು ಪತ್ತೆ ಮಾಡುವ ಮೊದಲು ಒಬ್ಬ ಆರೋಗ್ಯವಂತ ಮನುಷ್ಯನಿಗೆ ಎಷ್ಟು ಪ್ರೊಟೀನ್ ಅವಶ್ಯಕತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಬ್ಬ ಆರೋಗ್ಯವಂತ ಮನುಷ್ಯನು ಆತನ ದೇಹದ ತೂಕದ ಪ್ರತಿ ಕೆಜಿಗೆ 1 ಗ್ರಾಂನಂತೆ ಪ್ರೊಟೀನ್ ಸೇವನೆ ಮಾಡಬೇಕು ಎಂದು ಆರೋಗ್ಯ ವಿಜ್ಞಾನ ಹೇಳುತ್ತದೆ. ಉದಾಹರಣೆಗೆ ನಿಮ್ಮ ತೂಕವು 50 ಕೆಜಿ ಇದ್ದರೆ ನೀವು ಪ್ರತಿ ದಿನ 45 ರಿಂದ 50 ಗ್ರಾಂ ಪ್ರೊಟೀನ್ ಸೇವನೆ ಮಾಡಬೇಕು. ಆದರೆ ಎಲ್ಲರಿಗೂ ಈ ಲೆಕ್ಕಾಚಾರ ಅನ್ವಯಿಸುವುದಿಲ್ಲ. ದೇಹ ದಂಡನೆ ಮಾಡುವವರು, ಗರ್ಭಿಣಿಯರು, ಹಾಲುಣಿಸುತ್ತಿರುವ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ವಿಚಾರದಲ್ಲಿ ಈ ಲೆಕ್ಕಾಚಾರ ಬದಲಾಗುತ್ತಾ ಹೋಗುತ್ತದೆ.
ಸಸ್ಯಾಹಾರಿಗಳಿಗೆ ಪ್ರೊಟೀನ್ ಒದಗಿಸುವ ಉತ್ತಮ ಆಹಾರ ಮೂಲಗಳಿವು :
ಚಿಯಾ ಬೀಜಗಳು : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ. ನೋಡಲು ಪುಟಾಣಿ ಕಾಳುಗಳಂತೆ ಇದ್ದರೂ ಸಹ ಪ್ರತಿ ಚಮಚ ಚಿಯಾ ಬೀಜಗಳು ನಿಮಗೆ 4 ಗ್ರಾಂಗಳಷ್ಟು ಪ್ರೊಟೀನ್ ಒದಗಿಸುವ ಸಾಮರ್ಥ್ಯ ಹೊಂದಿರುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಚಿಯಾ ಬೀಜವನ್ನು ಸೇರಿಸಿ ಕೆಲವು ನಿಮಿಷಗಳ ಬಳಿಕ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಪ್ರೊಟೀನ್ ಪಡೆದುಕೊಳ್ಳಲು ಸಾಧ್ಯವಿದೆ.
ಬಾದಾಮಿ : ಬಾದಾಮಿ ಕೂಡ ಪ್ರೊಟೀನ್ನ ಉತ್ತಮ ಮೂಲವಾಗಿದೆ. ಇವುಗಳಲ್ಲಿ ಪ್ರೊಟೀನ್ನ ಜೊತೆಯಲ್ಲಿ ವಿಟಮಿನ್ ಬಿ,ಇ,ಫೈಬರ್, ಮೆಗ್ನಿಷಿಯಂ ಹಾಗೂ ಮ್ಯಾಂಗನೀಸ್ ಸೇರಿದಂತೆ ಸಾಕಷ್ಟು ಖನಿಜಾಂಶಗಳು ಅಡಗಿವೆ. ಇವುಗಳಲ್ಲಿ ಫಾಲಿಕ್ ಆಮ್ಲ ಕೂಡ ಇರುವುದರಿಂದ ಗರ್ಭಿಣಿಯರಲ್ಲಿ ಭ್ರೂಣದ ಮೆದುಳಿನ ಬೆಳವಣಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತವೆ. ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವ ಮೂಲಕ ಉತ್ತಮ ಪ್ರೊಟೀನ್ನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಹಸಿರು ಬಟಾಣಿ : ಇವುಗಳು ಆಯ್ದ ಋತುಮಾನಗಳಲ್ಲಿ ಲಭ್ಯವಿರುವ ಕಾಳುಗಳಾಗಿದ್ದರೂ ಸಹ ವರ್ಷಗಳ ಕಾಲ ಇವುಗಳನ್ನು ಫ್ರೀಜರ್ನಲ್ಲಿ ಶೇಖರಿಸಿಟ್ಟು ಬಳಕೆ ಮಾಡಬಹುದಾಗಿದೆ. ಒಂದು ಕಪ್ ಹಸಿರು ಬಟಾಣಿಯು 10 ಗ್ರಾಂ ಪ್ರೊಟೀನ್ನ್ನು ದೇಹಕ್ಕೆ ಒದಗಿಸುತ್ತದೆ. ಹಸಿರು ಬಟಾಣಿಯಿಂದ ನಾನಾ ಬಗೆಯ ಆಹಾರ ಭಕ್ಷ್ಯಗಳನ್ನು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಸಸ್ಯಾಹಾರಿಗಳ ಪ್ರೊಟೀನ್ ಮೂಲಕಕ್ಕೆ ಇದು ಬೆಸ್ಟ್ ಆಯ್ಕೆಯಾಗಿದೆ.
ಪೀನಟ್ ಬಟರ್ : ನೀವು ಜಿಮ್ಗೆ ತೆರಳುವವರಾಗಿದ್ದರೆ ನಿಮ್ಮತರಬೇತಿದಾರರು ಇದನ್ನು ಸೇವನೆ ಮಾಡಲು ನಿಮಗೆ ಸಲಹೆ ನೀಡಿದ್ದಿರಬಹುದು. ಪ್ರತಿನಿತ್ಯ 1 ಚಮಚ ಪೀನಟ್ ಬಟರ್ ಸೇವನೆ ಮಾಡಿದರೆ ನಿಮಗೆ ಏನಿಲ್ಲವೆಂದರೂ 4 ಗ್ರಾಂ ಪ್ರೊಟೀನ್ ಸಿಗುತ್ತದೆ. ಮಾರುಕಟ್ಟೆಗಳಲ್ಲಿ ಸಾಕಷ್ಟು ಕಂಪನಿಯ ಪೀನಟ್ ಬಟರ್ ಲಭ್ಯವಿದೆ. ಆದರೆ ಬಹುತೇಕ ಪೀನಟ್ ಬಟರ್ಗೆ ಸಕ್ಕರೆ ಸೇರಿಸುವುದರಿಂದ ನೀವು ಮನೆಯಲ್ಲಿಯೇ ಇದನ್ನು ತಯಾರಿಸಿ ಬಳಸುವುದು ಆರೋಗ್ಯಕ್ಕೆ ಇನ್ನಷ್ಟು ಹೆಚ್ಚಿನ ಲಾಭವನ್ನು ನೀಡುವುದರ ಜೊತೆಯಲ್ಲಿ ಯಾವುದೇ ಅಡ್ಡಪರಿಣಾಮವನ್ನುಂಟು ಮಾಡುವುದಿಲ್ಲ.
ಡೈರಿ ಪದಾರ್ಥಗಳು : ಹಾಲು, ಮೊಸರು, ಬೆಣ್ಣೆ, ತುಪ್ಪ ಇವುಗಳಲ್ಲಿಯೂ ಪ್ರೊಟೀನ್ ಅಗಾಧ ಪ್ರಮಾಣದಲ್ಲಿ ಅಡಕವಾಗಿದೆ. ತೂಕ ಇಳಿಕೆಯ ಹಾದಿಯಲ್ಲಿ ಇರುವವರು ಇವುಗಳನ್ನು ಸೇವಿಸಬಾರದು ಎಂದು ಹೇಳುವವರಿದ್ದಾರೆ. ಆದರೆ ನೀವು ಪನ್ನೀರ್ನಂತಹ ಪದಾರ್ಥಗಳನ್ನು ಸೇವನೆ ಮಾಡಿ ಬಳಿಕ ದೇಹ ದಂಡನೆ ಮಾಡಿದರೆ ಖಂಡಿತ ನೀವು ಹೆಚ್ಚಿನ ಪ್ರೊಟೀನ್ನ್ನು ನಿಮ್ಮ ದೇಹದಲ್ಲಿ ಶೇಖರಿಸಿಕೊಳ್ಳಲು ಸಾಧ್ಯವಿದೆ. ಡೈರಿ ಪದಾರ್ಥಗಳಿಂದ ದೇಹಕ್ಕೆ ಸೇರುವ ಕೊಬ್ಬಿನ ಪ್ರಮಾಣವನ್ನು ನೀವು ದೇಹ ದಂಡನೆ ಮೂಲಕ ಕರಗಿಸಿಕೊಳ್ಳುತ್ತೀರಿ ಎಂದರೆ ಪ್ರೊಟೀನ್ ಮೂಲಕ ಡೈರಿ ಉತ್ಪನ್ನಗಳು ಕೂಡ ಉತ್ತಮ ಆಯ್ಕೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications