Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳಲ್ಲಿ ನಿದ್ರಾಭಂಗ ಮಹಾದೊಡ್ಡ ಅಪಾಯಕ್ಕೆ ಕಾರಣ..! ಅಧ್ಯಯನದಲ್ಲಿ ಪತ್ತೆಯಾಗಿದ್ದೇನು?
ನಿದ್ರಾಹೀನತೆ ಎನ್ನುವುದು ಸಾಮಾನ್ಯ ಪಿಡುಗುಗಳಲ್ಲಿ ಒಂದಾಗಿ ಇಂದು ಕಾಡುತ್ತಿದೆ. ಹಿರಿಯರಿಂದ ಹಿಡಿದು ಮಕ್ಕಳಲ್ಲೂ ಕೂಡ ಈ ನಿದ್ರಾ ಹೀನತೆ ಸಮಸ್ಯೆ ನಾವು ನೋಡಬಹುದು. ಇದಕ್ಕೆ ನಮ್ಮ ಜೀವನ ಶೈಲಿಯೂ ಒಂದು ಪ್ರಮುಖ ಕಾರಣವಾಗಿದೆ. ನಮ್ಮಲ್ಲಿರುವ ಅತ್ಯಂತ ಅಪಸಾಮಾನ್ಯ ಚಟುವಟಿಕೆಗಳು ಕಾರಣವಾಗುತ್ತಿವೆ. ಅಂದರೆ ಹೆಚ್ಚುತ್ತಿರುವ ಸ್ಕ್ರೀನ್ ಟೈಮ್, ಮೊಬೈಲ್, ಗ್ಯಾಜೆಟ್ ಬಳಕೆ, ಆಹಾರ ಶೈಲಿ ಹೀಗೆ ಹಲವು ಕಾರಣವಾಗುತ್ತಿವೆ.
ಅದರಲ್ಲೂ ಇತ್ತೀಚಿಗೆ ಮಕ್ಕಳಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ ಅವರಲ್ಲಿ ನಿದ್ರಾಹೀನತೆಗೆ ಹಲವು ಕಾರಣಗಳಿವೆ. ಅದರಲ್ಲಿ ಕೆಲವೊಂದು ತಾವಾಗಿಯೇ ತಂದುಕೊಂಡಿರುವ ಕಾರಣಗಳು ಕೂಡ ಸೇರಿವೆ. ಮಕ್ಕಳ ಬೆಳವಣಿಗೆಗೆ ನಿದ್ರೆ ಬಹುಮುಖ್ಯ ಅಂಶವಾಗಿರುತ್ತದೆ. ಅಲ್ಲದೆ ಮಕ್ಕಳು ಬೆಳಗ್ಗಿನ ಹೊತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಕಾರಣ ರಾತ್ರಿ ಅತ್ಯುತ್ತಮ ನಿದ್ರೆಯ ಅವಶ್ಯಕತೆ ಇರುತ್ತದೆ.

ಬಹುತೇಕ ಅವರಿಗೆ 7ರಿಂದ 8 ಗಂಟೆ ನಿದ್ರೆಯ ಅವಶ್ಯಕತೆ ಇದೆ. ಆದರೆ ಇತ್ತೀಚಿಗೆ ಈ ಪ್ರಮಾಣದಲ್ಲಿ ಅವರು ನಿದ್ರೆ ಮಾಡುತ್ತಿಲ್ಲ. ಬದಲಿಗೆ ಹೆಚ್ಚಿನ ಸಮಯ ಎಚ್ಚರವಾಗಿರುವುದು, ಮಲಗಿದ ಕೆಲವು ಸಮಯದಲ್ಲಿ ಎಚ್ಚರಗೊಂಡು ಟಿವಿ, ಮೊಬೈಲ್ ವೀಕ್ಷಿಸುವುದು ಮಾಡುತ್ತಿರಬಹುದು. ಆದ್ರೆ ಈಗ ನಡೆದಿರುವ ಅಧ್ಯಯನವೊಂದರಲ್ಲಿ ಅಘಾತಕಾರಿ ಅಂಶವೊಂದು ಬಹಿರಂಗಗೊಂಡಿದೆ.
ಮಕ್ಕಳಲ್ಲಿನ ಕಡಿಮೆ ನಿದ್ರೆಯು ಅವರಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ಸುಸೈಡ್ ಪ್ರಿವೆನ್ಶನ್ ರಿಸರ್ಚ್ ಲ್ಯಾಬೋರೇಟರಿ ನಡೆಸಿದ ಅಧ್ಯಯನವು 10 ವರ್ಷ ವಯಸ್ಸಿನ ಮಕ್ಕಳು ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಎರಡು ವರ್ಷಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳ ಹೆಚ್ಚಳವಾಗಿರುವುದನ್ನು ತಜ್ಞರು ಕಂಡುಕೊಂಡಿದ್ದಾರೆ.
ಆತ್ಮಹತ್ಯೆ ತಡೆ ತಜ್ಞ ಡಾ ರೆಬೆಕ್ಕಾ ಬರ್ನರ್ಟ್ ನೇತೃತ್ವದ ಅಧ್ಯಯನವು ನಿದ್ರಾ ಭಂಗ ಹೊಂದಿರುವ ಮೂವರಲ್ಲಿ ಕನಿಷ್ಠ ಒಬ್ಬರು ನಂತರ ಆತ್ಮಹತ್ಯೆ ಕುರಿತ ಆಲೋಚನೆಯನ್ನು ಹೆಚ್ಚಾಗಿ ಹೊಂದುತ್ತಿದ್ದಾರೆ ಎಂಬ ವಿಚಾರ ಕಂಡುಕೊಂಡರು. ಅಂದರೆ ಯುವ ಸಮುದಾಯದ ಆತ್ಮಹತ್ಯಾ ಪ್ರಕರಣಗಳಲ್ಲಿ ಹೆಚ್ಚಿನ ಕಾರಣಗಳನ್ನು ವಿಶ್ಲೇಷಿಸಿದರೆ ಅದರಲ್ಲಿ ನಿದ್ರಾಹೀನತೆ ಕೂಡ ಸೇರಿರುತ್ತದೆ ಎಂಬುದು ಅವರ ವಾದವಾಗಿದೆ.
10 ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಆತ್ಮಹತ್ಯೆಯು ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬ ಆತಂಕಕಾರಿ ಅಂಶವನ್ನು ಅಧ್ಯಯನವು ಎತ್ತಿ ತೋರಿಸುತ್ತದೆ. ಅಧ್ಯಯನಕ್ಕಾಗಿ ಬರೋಬ್ಬರಿ 8 ಸಾವಿರ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ಗಮನಿಸಲಾದ ಅಂಶವೆಂದರೆ ನಿದ್ರಿಸಲು ಕಷ್ಟವಾಗುವುದು, ನಿದ್ರಾ ಹೀನತೆ, ಆಗಾಗ ಎಚ್ಚರವಾಗುವುದು, ಗಾಢವಲ್ಲದ ನಿದ್ರೆ, ನಿದ್ರೆಯಲ್ಲಿ ಅಸಮಾನ್ಯ ನಡುವಳಿಕೆ ಸೇರಿ ಹಲವು ಲಕ್ಷಣಗಳನ್ನು ಅವರು ಹೊಂದಿದ್ದಾರೆ ಎಂದಿದೆ.
ಈ ಅಧ್ಯಯನದಲ್ಲಿ ಭಾಗಿಯಾದ 91.3ರಷ್ಟು ಆತ್ಮಹತ್ಯೆ ಪ್ರವೃತ್ತಿ ಅನುಭವಿಸದಿದ್ದರೂ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದಿದೆ. ಅದರಲ್ಲಿ ಹೆಚ್ಚಿನ ಮಂದಿ ಖಿನ್ನತೆ, ಆತಂಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಕುಟುಂಬದ ಇತಿಹಾಸದಂತಹ ಇತರ ಕೊಡುಗೆ ಅಂಶಗಳನ್ನು ಸಹ ಅಧ್ಯಯನವು ಗುರುತಿಸಿದೆ. 20 ವರ್ಷದೊಳಗಿನ ಮಂದಿಯಲ್ಲಿ ಈ ಪ್ರಮಾಣ ಹೆಚ್ಚಾಗಿರುವುದು ಸಹ ಅಧ್ಯಯನದಲ್ಲಿ ತಿಳಿದುಬಂದಿದೆ.
ಇದಿಷ್ಟೇ ಅಲ್ಲ ಅವರ ನಿದ್ರಾ ಭಂಗಕ್ಕೆ ಪ್ರಮುಖ ಕಾರಣಗಳನ್ನು ಸಹ ಈ ಆಧ್ಯಯನದಲ್ಲಿ ಪಟ್ಟಿ ಮಾಡಲಾಗಿದೆ. ದುಸ್ವಪ್ನಗಳು, ಗ್ಯಾಜೆಟ್, ಖಿನ್ನತೆ, ಭಯ ಮತ್ತು ಆತಂಕ, ಒತ್ತಡ ಹೀಗೆ ಹಲವು ಕಾರಣಗಳ ನೀಡಲಾಗಿದೆ. ಪ್ರಮುಖ ಈ ಎಲ್ಲಾ ಪ್ರಕ್ರಿಯೆಯಲ್ಲಿ ವ್ಯಕ್ತಿ ನಿದ್ರಾಭಂಗಕ್ಕೆ ಒಳಗಾಗುವುದು ಒಂದಕ್ಕೊಂದು ಸಂಬಂಧ ಹೊಂದಿದೆ. ನಿದ್ರೆಯಿಲ್ಲದೆ ಒತ್ತಡ, ಖಿನ್ನತೆ ಅನಾರೋಗ್ಯ ಕಾಣಿಸಿಕೊಳ್ಳುವುದು ಒಂದೆಡೆಯಾದರೆ ನಿದ್ರೆ ಬಾರದ ಸ್ಥಿತಿಗೆ ಈ ಅಂಶಗಳು ಕಾರಣವಾಗುತ್ತಿರುವುದು ಮತ್ತೊಂದು ಕಡೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications