Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನರ ದೌರ್ಬಲ್ಯ, ಜ್ವರ, ಖಿನ್ನತೆಗೆ ಸರ್ಪಗಂಧಿ ಗಿಡ ಪರಿಹಾರ..! ಇದರ ವಿಶೇಷ ಗುಣವೇನು ಗೊತ್ತಾ?
ಭಾರತದಲ್ಲಿ ಪೂರ್ವದಿಂದಲೂ ಗಿಡಮೂಲಿಕೆಗಳಿಗೆ ಅತ್ಯಂತ ಮಹತ್ವ ನೀಡಲಾಗಿದೆ. ಹಿಂದೆ ಗಿಡಮೂಲಿಕೆಗಳಿಂದ ಹಲವು ರೀತಿಯ ಕಾಯಿಲೆಗಳಿಗೆ, ಸಮಸ್ಯೆಗಳಿಗೆ ಪರಿಹಾರ ನೀಡಲಾಗಿತ್ತಿತ್ತು. ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಔಷಧಿ ಗುಣವುಳ್ಳ ಗಿಡಗಳು ಅಂದ್ರೆ ಹತ್ತಾರು ಗಿಡಗಳ ಹೆಸರು ಹೇಳಬಹುದಿತ್ತು. ಅಷ್ಟೊಂದು ಗಿಡಗಳನ್ನು ಬಳಕೆ ಮಾಡುತ್ತಿದ್ದರು.
ಕೆಲವೊಂದನ್ನು ಮನೆಯಲ್ಲಿ ಬೆಳೆದರೆ ಮತ್ತೆ ಕೆಲವೊಂದನ್ನು ಕಾಡಿನಲ್ಲಿ ಹುಡುಕಿ ತರುತ್ತಿದ್ದರು. ಈಗಲು ಕೂಡ ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳಲ್ಲಿ ಇಂತಹ ಔಷಧಿ ಗುಣವುಳ್ಳ ಹಲವು ಗಿಡಮೂಲಿಕೆಯನ್ನು ಬಳಸಲಾಗುತ್ತಿದೆ. ಇಂತಹ ಗಿಡ ಮೂಲಿಕೆಗಳಲ್ಲಿ ನಾವಿಂದು ಸರ್ಪಗಂಧಿ ಗಿಡದ ಕುರಿತು ತಿಳಿದುಕೊಳ್ಳೋಣ. ನೀವು ಕೂಡ ಈ ಸರ್ಪಗಂಧಿ ಗಿಡದ ಪ್ರಯೋಜನಗಳ ಕುರಿತು ತಿಳಿದಿರಬಹುದು. ನಾವು ಈ ಕುರಿತ ಮತ್ತಷ್ಟು ಕುತೂಹಲಕಾರಿ ಮಾಹಿತಿ ತಿಳಿದುಕೊಳ್ಳೋಣ.

ಸರ್ಪಗಂಧಿ ಅಥವಾ ಸರ್ಪಗಂಧ ಗಿಡವು ಹೆಚ್ಚಾಗಿ ತೇವಾಂಶ ಭರಿತ ಪ್ರದೇಶದಲ್ಲಿ ನೋಡಬಹುದು. ಇವುಗಳ ಹೂವು, ಬೇರು, ಎಲೆಗಳು ಔಷಧಿ ಗುಣಗಳಿಂದ ತುಂಬಿಕೊಂಡಿದೆ. ಸರ್ಪಗಂಧದ ಬೇರನ್ನು ಮಾನಸಿಕ ಖಿನ್ನತೆಯಂತಹ ಗಂಭೀರ ಸಮಸ್ಯೆಗಳಿಂದ ಹಿಡಿದು ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನ, ಮೂಳೆ-ಕೀಲು ನೋವು, ತಲೆ ನೋವು ಹೀಗೆ ಹತ್ತಾರು ಸಮಸ್ಯೆಗಳ ನಿವಾರಣೆಗೆ ಬಳಕೆಯಾಗುತ್ತಿದೆ.
ಈ ಸಸ್ಯ ಮಳೆ ಬೀಳುವ ಕಡೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರಾವಲ್ಫಿಯ ಸರ್ಪೆಂಟೀನಾ ಎಂಬ ಜಾತಿಗೆ ಸೇರಿರುವ ಸಸ್ಯ ಇದಾಗಿದೆ. ಇದು ಕೆಂಪು, ಬಿಳಿ ಅಥವಾ ಕಂದು ಬಣ್ಣದ ಹೂವನ್ನು ಬಿಡುತ್ತದೆ. ಕೆಲವೇ ಅಡಿಗಳಷ್ಟು ದೊಡ್ಡದಾಗಿ ಈ ಗಿಡ ಬೆಳೆಯುತ್ತೆ. ಹೆಚ್ಚೆಂದರೆ 4 ಅಡಿ ಉದ್ದ ಬೆಳೆಯಬಹುದು. ಇದು ಗೊಂಚಲ ಗೊಂಚಲಾಗಿ ಹೂಗಳ ಬಿಡುತ್ತದೆ, ಇದರಿಂದ ಈ ಗಿಡವನ್ನು ಗುರುತಿಸುವುದು ಸುಲಭವಾಗುತ್ತದೆ.
ಈ ಗಿಡದಲ್ಲಿ ಬಿಡುವ ಕಾಯಿ ಕೂಡ ಬಟಾಣಿ ಗಾತ್ರದಲ್ಲಿರುತ್ತದೆ. ಹಣ್ಣಾದಾಗ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಈ ಗಿಡದ ಬೇರನ್ನು ಕಲ್ಲಿನಲ್ಲಿ ತೇದಿ ಅದರ ಪೇಸ್ಟ್ ಅನ್ನು ಮಾಡಿ ಹಾಲಿನ ಜೊತೆಗೆ ಬೆರೆಸಿಕೊಂಡು ಕುಡಿಯುವುದರಿಂದ ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ತಲೆನೋವು ಸೇರಿ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು.
ಹಾಗೆ ಇದರ ಬೇರನ್ನು ಬಿಸಿಲಿನಲ್ಲಿ ಒಣಗಿಸಿ ಬಳಿಕ ಅದನ್ನು ಚೆನ್ನಾಗಿ ಪುಡಿ ಮಾಡಿ ಅನಂತರ ನೀರು, ಹಾಲು, ಜೇನು ತುಪ್ಪು, ಬಿಸಿ ಮಾಡಲಾದ ದೇಸಿ ತುಪ್ಪ ಬೆರೆಸಿ ತಿನ್ನುವುದರಿಂದ ಮೂಳೆ ಹಾಗೂ ಕೀಲು ನೋವು, ರಕ್ತದ ಒತ್ತಡ, ಮಾನಸಿಕ ಖಿನ್ನತೆ, ಭ್ರಮಣೆ, ಕೋಪ, ಮೂರ್ಛೆ ರೋಗ ಸೇರಿ ಹಲವು ಗಂಭೀರ ಸಮಸ್ಯೆಗಳಿಗೂ ಸೂಕ್ತ ನಿಯಂತ್ರಣ ಮಾಡಬಹುದು.
ಈ ಗಿಡದಲ್ಲಿರುವ ಕಹಿಯ ಅಂಶವು ಕಜ್ಜಿ, ತುರಿಕೆ, ಅಲರ್ಜಿ, ಸರ್ಪಸುತ್ತು ಹಾಗೆ ಹಲವು ವಿಧವಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಆಯುರ್ವೇದದಲ್ಲೂ ಈ ಗಿಡ ಬಳಕೆಯಾಗಿರುವುದು ಇದೇ ಕಾರಣದಿಂದಾಗಿಯೇ. ಇದಿಷ್ಟೇ ಅಲ್ಲ ವಿಷಕಾರಿ ಚಂತುಗಳಾದ ಚೇಳು, ಹಾವು ಕಚ್ಚಿದರೂ ಕೂಡ ಇದರ ಬೇರಿನಿಂದ ಔಷಧಿ ತಯಾರಿಸುತ್ತಾರೆ. ಇನ್ನು ಇಲಿ ಕಡಿತದಂತಹ ಪ್ರಕರಣದಲ್ಲೂ ಕೂಡ ಇದೇ ಗಿಡದಿಂದ ಮಾಡಿರುವ ಔಷಧಿಯನ್ನು ನೀಡಲಾಗುತ್ತದೆ. ಸದ್ಯ ಈ ಗಿಡವನ್ನು ವಿನಾಶದ ಅಂಚಿಗೆ ಸೇರಿರುವ ಗಿಡಗಳ ಪಟ್ಟಿಗೆ ಸೇರಿಸಲಾಗಿದೆ. ಏಕೆಂದರೆ ಈ ಸಸ್ಯವನ್ನು ವಿಪರೀತವಾಗಿ ಔಷಧಿಗಳಿಗೆ ಬಳಸಿದ ಕಾರಣ ಈಗ ಎಲ್ಲಿಯೂ ಸಿಗದಂತಾಗಿದೆ. ಹಿಮಾಲಯ ಅಂಚಿನಿಂದ ಹಿಡಿದು ನಮ್ಮ ರಾಜ್ಯದ ಮಳೆ ಬೀಳುವ ಪ್ರದೇಶದಲ್ಲಿ ಹೇರಳವಾಗಿ ಈ ಗಿಡಗಳು ಕಂಡುಬರುತ್ತಿದ್ದವು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










