Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಸಾರಾ ಅಲಿಖಾನ್ ರೀತಿ ತೂಕ ಇಳಿಸಿಕೊಳ್ಬೇಕು ಎನ್ನುವವರು ಹೀಗೆ ಮಾಡಿ!
ಸಣ್ಣಗಿರುವವರಿಗೆ ದಪ್ಪಗಾಗುವ ಚಿಂತೆ. ಅದೇ ರೀತಿ ದಪ್ಪ ಇರುವವರಿಗೆ ಸಣ್ಣ ಆಗುವ ಚಿಂತೆ. ಆದರೆ ಯಾವುದೂ ಕೂಡ ನಾವು ಅಂದುಕೊಂಡಷ್ಟು ಸುಲಭ ಅಂತೂ ಇಲ್ಲ. ಆದರೆ ಬಾಲಿವುಡ್ ನಟಿಯೊಬ್ಬರೂ ಯಾವುದು ಅಸಾಧ್ಯ ಅಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಅವರೇ ಬಾಲಿವುಡ್ ನಟಿ ಸಾರಾ ಅಲಿಖಾನ್. ಇವರಿಗೆ ಸಿನಿಮಾ ಹಿನ್ನೆಲೆಯಿದೆ. ಅವರ ಅಜ್ಜಿ ಸೇರಿದಂತೆ, ಅಪ್ಪಾ ಹಾಗೂ ಅಮ್ಮಾ ಕೂಡ ಸಿನಿಮಾದಲ್ಲಿ ಸ್ಟಾರ್ ಆಗಿ ಮಿಂಚಿದವರು.
ಸಾರಾ ಅಲಿಖಾನ್ ಅವರಿಗೂ ಕೂಡ ಚಿಕ್ಕಂದಿನಿಂದಲೇ ಸ್ಟಾರ್ ಆಗಿ ಮೆರೆಯಬೇಕು ಎಂಬ ಆಸೆಯಂತೂ ಖಂಡಿತ ಇತ್ತು. ಆದ್ರೆ ಅವರು ಅತಿಯಾಗಿ ದಪ್ಪ ಇದ್ದಿದ್ರಿಂದ ಈ ಕನಸು ಕನಸಾಗಿಯೇ ಉಳಿಯುತ್ತಾ ಅನ್ನೋ ಭಯವಿತ್ತು. ಆದ್ರೆ ಹಠ ಬಿಡದ ಸಾರಾ ಅಲಿಖಾನ್ ಹೇಗಾದ್ರು ಮಾಡಿ ಸಣ್ಣ ಆಗಲೇಬೇಕೆಂದು ಪಣ ತೊಡುತ್ತಾರೆ. ತಮ್ಮ ಮಾತಿನಂತೆ ಸಣ್ಣ ಆಗ್ತಾರೆ. ಹಾಗೂ ಹಿರೋಯಿನ್ ಆಗುವ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಅಷ್ಟಕ್ಕು ಸಾರಾ ಅಲಿಖಾನ್ ವರ್ಕ್ ಔಟ್ ದಿನಚರಿ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ.

ಸಣ್ಣ ಆಗೋದಕ್ಕೆ ಸಾರಾ ಏನು ಮಾಡುತ್ತಾರೆ?
ಛಲವೊಂದಿದ್ದರೆ ಯಾವ ಗುರಿಯನ್ನಾದರೂ ಸಾಧಿಸಬಹುದು ಎಂಬುವುದನ್ನು ತೋರಿಸಿದವರು ನಟಿ ಸಾರಾ ಅಲಿ ಖಾನ್. ಪಿಜ್ಜಾ ತಿಂದು ಹೊಟ್ಟೆ ತುಂಬಿಸಿಕೊಳ್ತಿದ್ದ ಸಾರಾ ಸಣ್ಣ ಆಗಬೇಕೆಂಬ ಹಠಕ್ಕೆ ಬಿದ್ದು ಸಲಾಡ್ ತಿನ್ನೋದಕ್ಕೆ ಶುರ ಮಾಡ್ತಾರೆ. ಇದ್ರ ಜೊತೆಗೆ ಅವರು ಮಾಡುತ್ತಿದ್ದ ವರ್ಕ್ಔಟ್ ಗಳು ದೇಹದಲ್ಲಿನ ಕೊಬ್ಬು ಕರಗೋದಕ್ಕೆ ಸಹಾಯವಾಯ್ತು ಅಂತಾರೆ.
ವಿವಿಧ ರೀತಿಯ ವರ್ಕ್ಔಟ್ ಮಾಡಿದರೆ ಉತ್ತಮ
ಸಣ್ಣ ಆಗಬೇಕೆಂದರೆ ಕೇವಲ ಒಂದು ರೀತಿ ವರ್ಕ್ಔಟ್ ಮಾಡೋದ್ರಿಂದ ತೂಕ ಇಳಿಸಿಕೊಳ್ಳುವು ತುಂಬಾನೇ ಕಷ್ಟ. ಹೀಗಾಗಿ ಸಾರಾ ಪೈಲೆಟ್ ಸ್ಟ್ರೆಂತ್ ಟ್ರೈನಿಂಗ್, ಬೂಟ್ ಕ್ಯಾಂಪ್ ವರ್ಕ್ಔಟ್ ಮತ್ತು ಕಾರ್ಡಿಯೋ ಹೀಗೆ ಸಾರಾ ವಿಧ ವಿಧದ ವರ್ಕ್ಔಟ್ ಮಾಡುತ್ತಾರೆ.
ಸಾರಾ ಅಲಿಖಾನ್ ರೀತಿ ತೂಕ ಇಳಿಸಿಕೊಳ್ಳೋದು ಹೇಗೆ?
ಸಾರಾ ಅಲಿಖಾನ್ ಹೇಳೋ ಪ್ರಕಾರ ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ನೂರಾರು ದಾರಿಗಳಿದೆ. ಆದ್ರೆ ಆರಂಭದಲ್ಲಿ ಸಾರಾ ಅತಿಯಾದ ತೂಕ ಹೊಂದಿದ್ದ ಕಾರಣ ವಾಕಿಂಗ್, ಟ್ರೆಡ್ಮಿಲ್, ಸೈಕ್ಲಿಂಗ್, ಕಿಕ್ ಮಾಡೋದು ಇಂತ ಹೆವಿ ವರ್ಕ್ಔಟ್ ನತ್ತ ಗಮನ ಹರಿಸುತ್ತಾರಂತೆ. ಇದ್ರಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳೋದಕ್ಕೆ ಸಾಧ್ಯವಾಯ್ತಂತೆ. ಇದಾದ ಬಳಿಕ ದಿನನಿತ್ಯ ಇಂತಿಷ್ಟು ಸಮಯ ವರ್ಕ್ಔಟ್ ಪ್ಲಾನ್ ಮಾಡಿ ಮತ್ತೆ ಪುನಃ ಜಿಮ್ನಲ್ಲಿ ಬೆವರಿಳಿಸೋದಕ್ಕೆ ಶುರುಮಾಡ್ತಾರೆ.
ಸಾರಾಗೆ ತೂಕ ಇಳಿಸೋದಕ್ಕೆ ಸಹಾಯವಾದ 3 ವರ್ಕ್ಔಟ್
1. ಪೈಲೆಟ್
ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ಸೆಲೆಬ್ರಿಟಿಗಳು ಕೂಡ ಪೈಲೆಟ್ ಎಕ್ಸೈಸ್ ಖಂಡಿತ ಮಾಡ್ತಾರೆ. ಇದು ಕಡಿಮೆ ಪ್ರಭಾವದ ವ್ಯಾಯಾಮವಾಗಿದೆ. ಸೋಶಿಷಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಾರಾ ತಮ್ಮ ವರ್ಕ್ಔಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇನ್ನೂ ಪೈಲೆಟ್ ವ್ಯಾಯಾಮ ಉತ್ತಮ ತೂಕ ನಷ್ಟದ ಕ್ರಮ ಮಾತ್ರವಲ್ಲದೇ ಇದು ಸ್ನಾಯುವಿನ ನಮ್ಯತೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇನ್ನೂ ಇದು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡೋದು ಮಾತ್ರವಲ್ಲೇ, ದೇಹದ ಮೈ ಕಟ್ಟನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
2. ನೃತ್ಯ
ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ನೃತ್ಯವನ್ನು ವರ್ಕ್ಔಟ್ ನ ಭಾಗವಾಗಿ ಆಯ್ದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾರಾ ಕೂಡ ದೇಹಕ್ಕೆ ವ್ಯಾಯಾಮ ಸಿಗಲೆಂದು ಡಾನ್ಸ್ ವರ್ಕ್ಔಟ್ ಮಾಡ್ತಾರಂತೆ. ಸಾರಾ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಒಡಿಸ್ಸಿಯಲ್ಲಿ ತರಬೇತಿ ಪಡೆದಿದ್ದಾರೆ. ಒಡಿಸ್ಸಿ ಅಥವಾ ಅಂತಹ ಯಾವುದೇ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಸಾಕಷ್ಟು ಸಹಿಷ್ಣುತೆ, ಚುರುಕುತನ ಮತ್ತು ಸಮತೋಲನವನ್ನು ಉತ್ತೇಜಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತಂತೆ.
3. ಕ್ರಿಯಾತ್ಮಕ ತರಬೇತಿ
ಕ್ರಿಯಾತ್ಮಕ ತರಬೇತಿಯು ಕ್ರೀಡಾಪಟುಗಳು ಮತ್ತು ಹಾರ್ಡ್‌ಕೋರ್ ಫಿಟ್‌ನೆಸ್ ಪ್ರೀಕ್ಸ್‌ಗಾಗಿ ಮಾತ್ರ ಎಂದು ನೀವು ಭಾವಿಸಿರಬಹುದು. ಆದರೆ ಕ್ರಿಯಾತ್ಮಕ ತರಬೇತಿಯು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಸಾರಾ ಅಲಿಖಾನ್ ಕೂಡ ಕ್ರಿಯಾತ್ಮಕ ತರಬೇತಿಯನ್ನು ಮಾಡುತ್ತಾರೆ. ಇದು ಪೂರ್ಣ-ದೇಹದ ತಾಲೀಮು ಆಗಿದ್ದು, ಇದು ಶಕ್ತಿ ತರಬೇತಿಯನ್ನು ಸುಧಾರಿಸುತ್ತದೆ ಮತ್ತು ಏರೋಬಿಕ್ಸ್‌ನ ದ್ರವತೆಯನ್ನು ಒದಗಿಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಾಲ್ಕು ದಿನ ವ್ಯಾಯಾಮ ಮಾಡಿ ತೂಕ ಇಳಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ ಎಂದು ಬೇಸರ ಪಟ್ಟುಕೊಳ್ಳಬೇಡಿ. ಫಿಟ್ ಆಗಿರೋದಕ್ಕೆ ನಿತ್ಯವು ಶ್ರಮ ವಹಿಸಿ ವ್ಯಾಯಾಮ ಮಾಡಲೇಬೇಕು ಆಗ ಮಾತ್ರ ಸಾರಾ ಅಲಿಖಾನ್ ತರಹ ಫಿಟ್ ಆಗಿರೋದಕ್ಕೆ ಸಾಧ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
