Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಭಾರತದಲ್ಲಿ ಹೆಚ್ಚಾಗುತ್ತಿದೆ ರಿಟೈರ್‌ಮೆಂಟ್ ಡಿಪ್ರೆಷನ್: ನಿವೃತ್ತಿ ಜೀವದ ಸುಂದರವಾಗಿಸಲು 5 ಸೂತ್ರಗಳು
ಕೆಲಸ ಮಾಡುವಾಗ ಒಂದು ಸಲ ನಿವೃತ್ತಿ ಪಡೆದು ಆರಾಮವಾಗಿ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಿವೃತ್ತಿ ದಿನ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ, ಅಯ್ಯೋ ಇನ್ನು ನಾನು ಕೆಲಸಕ್ಕೆ ಬರುವಂತಿಲ್ಲ, ಮುಂದೆ ಏನು ಮಾಡ್ಲಿ ಎಂಬ ಚಿಂತೆ ಬಹುತೇಕರನ್ನು ಕಾಡುತ್ತದೆ.

ಕೆಲವರು ನಿವೃತ್ತಿ ಸಮಯ ಚೆನ್ನಾಗಿ ಕಳೆಯಬೇಕು ಎಂಬ ಕಾರಣ ಹಣ ಉಳಿತಾಯ ಮಾಡಿರುತ್ತಾರೆ, ನಂತರ ಏನು ಮಾಡಬೇಕೆಂಬ ಕೆಲವೊಂದು ಪ್ಲ್ಯಾನ್ಸ್ ಇರುತ್ತದೆ, ಆದರೂ ನಿವೃತ್ತಿ ಸಮಯ ಎಂದರೆ ಏನೋ ಒಂದು ರೀತಿಯ ಭಯ ಕಾಡುವುದು, ಇನ್ನು ಕೆಲವರಿಗೆ ದುಡಿದ್ದೆಲ್ಲಾ ಖರ್ಚು ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಹೀಗಾಗಿ ದೊಡ್ಡದಾಗಿ ಹಣ ಉಳಿತಾಯ ಮಾಡಲು ಸಾಧ್ಯವಾಗಿರುವುದಿಲ್ಲ, ನಿವೃತ್ತಿ ಹಣದಲ್ಲಿಯೂ ಮನೆ ಸಾಲ, ಮಕ್ಕಳ ಮದುವೆಗೆ ಮಾಡಿದ ಸಾಲ ಅಂತ ತೀರಿಸಲು ಇರುತ್ತದೆ ಅದಾದ ಬಳಿಕ ಕೈ ಖಾಲಿ, ನಿವೃತ್ತಿ ಬಳಿಕ ದುಡಿಮೆಯೂ ಇಲ್ಲ, ಹಣವೂ ಇಲ್ಲ, ಈ ಪರಿಸ್ಥಿತಿ ಬಹುತೇಕರನ್ನು ಖಿನ್ನತೆಗೆ ದೂಡುತ್ತಿದೆ, ಅಲ್ಲದೆ ಭಾರತದಲ್ಲಿ ರಿಟೈರ್ಮೆಂಟ್ ಡಿಪ್ರೆಷನ್ ಹೆಚ್ಚಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ನಿವೃತ್ತಿ ಬಳಿಕ ಕಾಡುವ ಖಿನ್ನತೆ
ನಿವೃತ್ತಿ ಬಬಳಿಕ ಬಹುತೇಕರಿಗೆ ಒಂಟಿತನ ಕಾಡಲಾರಂಭಿಸುತ್ತದೆ, ಹಣವಿಲ್ಲ ಎಂಬ ಚಿಂತೆ, ನಾನೂ ಏನಕ್ಕೂ ಪ್ರಯೋಜನವಿಲ್ಲ ಎಂಬ ಚಿಂತೆ ಇವೆಲ್ಲಾ ಖಿನ್ನತೆಗೆ ದೂಡುವುದು. ಹೀಗಾಗಿ ನಿವೃತ್ತಿ ಬಳಿಕ ಬೇಸರ ಕಾಡಲಾರಂಭಿಸುವುದು. ಆರ್ಥಿಕ ದುರ್ಬಲತೆ, ಆರೋಗ್ಯ ಸಮಸ್ಯೆಗಳು ಇವೆಲ್ಲಾ ಖಿನ್ನತೆ ಸಮಸ್ಯೆ ಹೆಚ್ಚಿಸುತ್ತದೆ.
ಈಗೀನ ಕುಟುಂಬ ವ್ಯವಸ್ಥೆಯೂ ಕೂಡ ಖಿನ್ನತೆಗೆ ಕಾರಣವಾಗಿದೆ
ಈಗ ನ್ಯೂಕ್ಲಿಯರ್ ಕುಟುಂಬ, ಮಕ್ಕಳು ಉದ್ಯೋಗದ ಕಾರಣದಿಂದ ಅವರ ಕುಟುಂಬದ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾರೆ, ಕೆಲಸಕ್ಕೆ ಹೋಗುವಾಗ ಬ್ಯುಸಿ ಇರುತ್ತಾರೆ, ನಿವೃತ್ತಿ ಬಳಿಕ ಒಂಟಿತನ ಕಾಡಲಾರಂಭಿಸುವುದು, ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಡಲಾಂಭಿಸುವುದು, ಇವೆಲ್ಲಾ ನನ್ನಿಂದ ಏನೂ ಪ್ರಯೋಜನವಿಲ್ಲ ಎಂಬ ಭಾವನೆ ಮೂಡಿಸುತ್ತದೆ, ಇದರಿಂದ ಮನಸ್ಸಿನಲ್ಲಿ ಬೇಸರ ಉಂಟಾಗುವುದು, ಖಿನ್ನತೆಗೆ ಜಾರಲಾರಂಭಿಸುತ್ತಾರೆ.
ನಿವೃತ್ತಿ ಬಳಿಕ ಖಿನ್ನತೆ ಹೋಗಲಾಡಿಸುವುದು ಹೇಗೆ?
ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆ : ಇದು ತುಂಬಾನೇ ಮುಖ್ಯವಾಗುತ್ತದೆ, ಆರ್ಥಿಕ ಭದ್ರತೆ ಇಲ್ಲದಿದ್ದರೆ ಮುಂದೇನು ಎಂಬ ಚಿಂತೆ ದೊಡ್ಡದಾಗಿ ಕಾಡುವುದು, ಆರ್ಥಿಕ ಭದ್ರತೆ ತುಂಬಾನೇ ಮುಖ್ಯ, ಈ ಬಗ್ಗೆ ಕೆಲಸ ಮಾಡುತ್ತಿರುವಾಗಲೇ ಗಮನಹರಿಸಬೇಕಾಗುತ್ತದೆ.
ಬದಲಾವಣೆಗೆ ಹೊಂದಿಕೊಳ್ಳಬೇಕು: ನಿವೃತ್ತಿ ಹತ್ತಿರ ಬರುತ್ತಿದ್ದಂತೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು, ಅಲ್ಲದೆ ನಿವೃತ್ತಿ ಜೀವನ ಹೇಗೆ ಕಳೆಯಬೇಕು ಎಂಬುವುದರ ಬಗ್ಗೆ ಕೆಲವೊಂದು ಪ್ಲ್ಯಾನ್ ಮಾಡಿಕೊಳ್ಳಬೇಕು. ಕೆಲವೊಂದು ಬದಲಾಯಿಸಲು ಸಾಧ್ಯವಿಲ್ಲ, ಈ ಸತ್ಯ ಅರಿತುಕೊಂಡು ನಾವು ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು.
ಹೊಸ ಗುರಿ ಹಾಕಿಕೊಳ್ಳಿ
ನಿವೃತ್ತಿ ಬಳಿಕ ಸುಮ್ಮನೆ ಮನೆಯಲ್ಲಿ ಕೂರಬೇಕಾಗಿಲ್ಲ, ನಿವೃತ್ತಿ ಬಳಿಕ ನಿಮ್ಮಿಂದ ಏನು ಆಗಬಹುದು ಎಂದು ಯೋಚಿಸಿ ಅದರತ್ತ ಗಮನಹರಿಸಿ, ನಿಮ್ಮನ್ನು ನೀವು ಎಂಗೇಜ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು, ಹೀಗಿದ್ದೆರೆ ಮನಸ್ಸಿಗೆ ಬೇಸರವಾಗುವುದಿಲ್ಲ, ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
