Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೂತ್ರ ವಿಸರ್ಜನೆ ಮಾಡುವಾಗ ಉರಿ ಹಾಗೂ ಅಸಹಜ ಬಿಳುಪು ಹೋಗುತ್ತಿದೆಯೇ?
ಕೆಲವು ಮಹಿಳೆಯರು ನನಗೆ ಬಿಳುಪು ಹೋಗುವ ಸಮಸ್ಯೆಯಿದೆ ಅಂತಾರೆ, ಬಿಳುಪು ಹೋಗುವುದು ಸಮಸ್ಯೆ ಅಲ್ಲ ಅದು ಸಹಜ ಪ್ರಕ್ರಿಯೆ, ಆದರೆ ಬಿಳುಪು ಹೋಗುವುದರಲ್ಲಿ ವ್ಯತ್ಯಾಸವಾದರೆ ಅದು ಸಹಜ ಅಲ್ವೇ ಅಲ್ಲ. ಇನ್ನು ಇತ್ತೀಚೆಗೆ ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.
ಅಲ್ಲದೆ ಮೂತ್ರ ವಿಸರ್ಜನೆಗೆ ಹೋಗುವಾಗ ಉರಿ ಉಂಟಾಗುತ್ತಿದೆ ಎಂದರೆ ನಿರ್ಲಕ್ಷ್ಯ ಮಾಡಲೇಬೇಡಿ. ನಿಮ್ಮ ಸಂತಾನೋತ್ಪತ್ತಿ ಅಂಗದ ಕಡೆಗೆ ನೀವು ಗಮನಹರಿಸಬೇಕಾಗಿದೆ. ಈ ರೀತಿ ಏಕೆ ಉಂಟಾಗುತ್ತದೆ ಎಂದು ನೋಡುವುದಾದರೆ ಈ ಕೆಳಗಿನ ಪ್ರಮುಖ ಕಾರಣಗಳಿಂದಿರಬಹುದು:

1. ಯೀಸ್ಟ್ ಸೋಂಕು
ಸಾಮಾನ್ಯವಾಗಿ ಯೀಸ್ಟ್ ಸೋಂಕು ಉಂಟಾದಾಗ ಈ ರೀತಿ ಉಂಟಾಗುವುದು. ಜನನೇಂದ್ರೀಯದಲ್ಲಿ ಬ್ಯಾಕ್ಟಿರಿಯಾ ಹಾಗೂ ಯೀಸ್ಟ್ ಸಮತೋಲನದಲ್ಲಿರಬೇಕು, ಅದರಲ್ಲಿ ವ್ಯತ್ಯಾಸ ಉಂಟಾದರೆ ಯೀಸ್ಟ್ ಸೋಂಕು ಉಂಟಾಗುವುದು. ಈ ರೀತಿಯಾದಾಗ ಬಿಳಿ ಬಣ್ಣದಲ್ಲಿ ಮಂದವಾಗಿ ಬಿಳುಪು ಹೋಗುವುದು, ಅಲ್ಲದೆ ಇದು ದುರ್ವಾಸನೆಯಿಂದ ಕೂಡಿರುತ್ತದೆ. ನಿಮ್ಮ ಬಿಳುಪು ಗಟ್ಟಿ-ಗಟ್ಟಿಯಾಗಿ ಹೋಗುತ್ತಿದ್ದರೆ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ.
2. ಬ್ಯಾಕ್ಟಿರಿಯಾ ಸೋಂಕು ಉಂಟಾದಾಗ
ಜನನೇಂದ್ರೀಯದಲ್ಲಿ ಬ್ಯಾಕ್ಟಿರಿಯಾ ಇರುತ್ತದೆ, ಒಳ್ಳೆಯ ಬ್ಯಾಕ್ಟಿರಿಯಾಗಳು ಜನನೇಂದ್ರೀಯದ ಆರೋಗ್ಯಕ್ಕೆ ಅವಶ್ಯ. ಆದರೆ ಕೆಟ್ಟ ಬ್ಯಾಕ್ಟಿರಿಯಾ ದಾಳಿ ಮಾಡಿದಾಗ ಬ್ಯಾಕ್ಟಿರಿಯಾ ಸೋಂಕು ಉಂಟಾಗುವುದು. ಹೀಗಾದಾಗ ಬಿಳುಪು ಹೋಗುವುದು ಹೆಚ್ಚಾಗುವುದು, ಕೆಟ್ಟ ವಾಸನೆ ಬೀರಲಾರಂಭಿಸುವುದು. ಇದನ್ನು ಆಂಟಿಬಯೋಟಿಕ್ಸ್ ಬಳಸಿದರೆ ಕಡಿಮೆಯಾಗುವುದು.
3. ಲೈಂಗಿಕ ಸೋಂಕು ಹರಡಿದಾಗ
chlamydiaಮತ್ತು gonorrhea ಎಂಬ ಲೈಂಗಿಕ ಸೋಂಕು ಹರಡಿದಾಗ ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಕಂಡುಬರುವುದು ಅಲ್ಲದೆ ಮೂತ್ರ ವಿಸರ್ಜನೆಗೆ ಹೋಗುವಾಗ ಉರಿ ಅನಿಸುವುದು. ಈ ರೀತಿ ಕಂಡು ಬಂದಾಗ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆಯಬೇಕು. ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸುವುದರಿಂದ ಈ ಬಗೆಯ ಸೋಂಕು ತಡೆಗಟ್ಟಬಹುದು.
4. ಮೂತ್ರ ಸೋಂಕು
ಮೂತ್ರ ಸೋಂಕು ಮಹಿಳೆಯರಿಗೆ ಆಗಾಗ ಕಾಡುತ್ತಿರುತ್ತದೆ. ಈ ರೀತಿಯಾದಾಗ ಕಿಬ್ಬೊಟ್ಟೆಯಲ್ಲಿ ನೋವು ಉಂಟಾಗುವುದು, ಮೂತ್ರ ವಿಸರ್ಜನೆಗೆ ಹೋಗುವಾಗ ನೋವಾಗುವುದು. ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿರುವವರಲ್ಲಿ ಹೆಚ್ಚಾಗಿ ಕಂಡು ಬರುವುದು. ಆದರೆ ಮೂತ್ರ ಸೋಂಕು ಅವಾಹಿತ ಮಹಿಳೆರಲ್ಲೂ ಕಂಡು ಬರುವುದು, ಅನೇಕ ಕಾರಣಗಳಿಂದಾಗಿ ಮೂತ್ರ ಸೋಂಕು ಉಂಟಾಗುವುದು.
5. ಗರ್ಭ ಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಬಾಯಿ ಹಾಗೂ ಗರ್ಭಕಂಠದ ಮೇಲೆ ಪರಿಣಾಮ ಬೀರುವುದು. ಅಸಹಜ ಬಿಳುಪು ಹೋಗುತ್ತಿದೆ, ಕಿಬ್ಬೊಟ್ಟೆ ನೋವು ಆಗಾಗ ರಕ್ತಸ್ರಾವ ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತ ಸಲಹೆ ಸೂಚನೆ ಪಡೆಯಿರಿ. ಗರ್ಭಕಂಠದ ಕ್ಯಾನ್ಸರ್ 35-45 ವರ್ಷದ ಮಹಿಳೆರಲ್ಲಿ ಹೆಚ್ಚಾಗಿ ಕಂಡು ಬರುವುದು.
ನೀವು ಬಿಳುಪು ಸ್ವಲ್ಪ ಅಧಿಕ ಹೋದಾಗ ಅಥವಾ ಮೊಟ್ಟೆಯ ಬಿಳಿಯಂತೆ ಹೋದಾಗ ಆತಂಕ ಪಡಬೇಕಾಗಿಲ್ಲ ಆದರೆ ಬಿಳುಪಿನಲ್ಲಿ ತುಂಬಾನೇ ವ್ಯತ್ಯಾಸ ಕಂಡು ಬರುತ್ತಿದೆ, ಪ್ಯಾಂಟೀಸ್ ಧರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಅದು ಒದ್ದೆಯಾಗುತ್ತಿದೆ, ಅಲ್ಲದೆ ಬಿಳುಪು ತುಂಬಾನೇ ದುರ್ವಾಸನೆ ಬೀರುತ್ತಿದೆ ಎಂದಾದರೆ ನೀವು ನಿರ್ಲಕ್ಷ್ಯ ಮಾಡಬೇಡಿ, ಸೂಕ್ತ ವೈದ್ಯರನ್ನು ಭೇಟಿಯಾಗಿ.
ಸಾಮಾನ್ಯವಾಗಿ ಮಹಿಳೆಯರು ಪ್ರಾರಂಭದಲ್ಲಿ ನಾಚಿಕೆಯಹಿಂದ ಈ ಸಮಸ್ಯೆ ಹೇಳದೆ ಆರೋಗ್ಯ ಸಮಸ್ಯೆ ಗಂಭೀರವಾದ ಮೇಲೆ ವೈದ್ಯರನ್ನು ಭೇಟಿ ಮಾಡಲು ಬರುತ್ತಾರೆ. ಯಾವುದೇ ಸಮಸ್ಯೆಯಾಗಿರಲಿ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
