Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಅಂಗಾಂಗ ದಾನ ಹೆಚ್ಚಾಗಿ ಆಗದೇ ಇರುವುದಕ್ಕೆ ಈ ತಪ್ಪು ಕಲ್ಪನೆಗಳು ಕಾರಣ
ಅಂಗಾಂಗ ದಾನ ಮಾಡುವುದರಿಂದ ಸಾವಿನಲ್ಲೂ ಸಾರ್ಥಕತೆ ಕಂಡುಕೊಳ್ಳಬಹುದು, ಆದರೆ ಸತ್ತ ಮೇಲೆ ಅಂಗಾಂಗ ದಾನ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಕಡಿಮೆ ಇದೆ ಈ ಕಾರಣಕ್ಕೆ ಅಂಗಾಂಗ ದಾನ ಮಾಡುವವರ ಸಂಖ್ಯೆ ತುಂಬಾನೇ ವಿರಳ.

ಮೆದುಲು ನಿಷ್ಕ್ರಿಯವಾದ ವ್ಯಕ್ತಿಯ ಅಂಗಾಂಗ ದಾನ ಮಾಡಿದರೆ ಅವರಿಂದ 4-5 ಜನರು ಬದುಕುಳಿಯುವ ಸಾಧ್ಯತೆ ಇರುತ್ತದೆ, ಈ ಮೂಲಕ ವ್ಯಕ್ತಿ ಸತ್ತ ಮೇಲೂ ಜೀವಿಸಬಹುದು. ಭಾರತದಲ್ಲಿ 500000ಕ್ಕೂ ಅಧಿಕ ರೋಗಿಗಳು ಅಂಗಾಂಗ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಅಂಗಗಳು ದಾನ ಸಿಗದೇ ಇರುವುದರಿಂದ ವರ್ಷದಲ್ಲಿ ಸುಮಾರು 7000ಕ್ಕೂ ಅಧಿಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.
ಡಾ. ಅಜಯ್ ಎಸ್ ಶೆಟ್ಟಿ ( Urology Renal Transplantation & Robotics Surgeon, Manipal Hospital Yeshwanthpur) ಅಂಗಾಂಗ ದಾನದ ಮಹತ್ವ ಹಾಗೂ ಅದಕ್ಕಿರುವ ಅಡಚಣೆ ಏನು ಎಂಬುವುದರ ಕುರಿತು ಈ ರೀತಿ ಹೇಳಿದ್ದಾರೆ...
ಅಂಗಾಂಗ ದಾನದ ಬಗ್ಗೆ ಇರುವ ನಿರ್ಲಕ್ಷ್ಯ ಹಾಗೂ ತಪ್ಪು ಕಲ್ಪನೆ: ಜನರಿಗೆ ಇದರ ಕುರಿತು ಸರಿಯಾಗಿ ಮಾಹಿತಿ ಕಡಿಮೆ, ಅಂಗಾಂಗ ದಾನದ ಬಗ್ಗೆ ತಪ್ಪು ಕಲ್ಪನೆ ಇದೆ ಈ ಕಾರಣಕ್ಕೆ ಜನರು ಅಂಗಾಂಗ ದಾನಕ್ಕೆ ಹಿಂದೇಟು ಹಾಕುತ್ತಾರೆ.
* ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರಣ: ಈ ಕಾರಣದಿಂದಲೂ ಜನರು ಅಂಗಾಂಗ ದಾನ ಮಾಡಲು ಹಿಂಜರಿಯುತ್ತಾರೆ. ಉದಾಹರಣೆ ದೇಹವನ್ನು ಪೂರ್ತಿಯಾಗಿ ದಹನ ಮಾಡದಿದ್ದರೆ ಆತ್ಮಕ್ಕೆ ಶಾಂತಿ ಸಿಗಲ್ಲ ಈ ಬಗೆಯ ನಂಬಿಕೆಗಳಿಂದಲೂ ಜನರು ಮೆದುಳು ನಿಷ್ಕ್ರಿಯವಾದ ವ್ಯಕ್ತಿಗಳ ದೇಹದ ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಾರೆ.
* ತುಂಬಾ ವಯಸ್ಸಾಗಿದೆ ಹೀಗಾಗಿ ಅಂಗಾಂಗ ದಾನ ಮಾಡಲು ಸಾಧ್ಯವಿಲ್ಲ ಮಧುಮೇಹವಿದೆ ಹೀಗಾಗಿ ಅಂಗಾಂಗ ದಾನ ಮಾಡಲು ಸಾಧ್ಯವಿಲ್ಲ ಈ ಬಗೆಯ ತಪ್ಪು ಕಲ್ಪನೆಯಿಂದಲೂ ಜನರು ಅಂಗಾಂಗ ದಾನ ಮಾಡುತ್ತಿಲ್ಲ.
* ಅಲ್ಲದೆ ಪರಿಣಿತ ಟ್ರಾನ್ಸ್‌ಪ್ಲ್ಯಾಂಟ್ ಕೋಆರ್ಡಿನೇಟರ್ ಕೊರತೆ ಇದೆ ಅಲ್ಲದೆ ಸಾಯಲಿರುವ ರೋಗಿಯ ಮನೆಯವರ ಮನವೊಲಿಸಿ ಅಂಗಾಂಗ ದಾನಕ್ಕೆ ಒಪ್ಪಿಸಲು ಕೌನ್ಸಿಲಿಂಗ್ ಅಗ್ಯತವಿರುತ್ತದೆ, ಅದ್ಯಾವುದು ಸರಿಯಾಗಿ ಆಗದೆ ಇರುವುದು ಕೂಡ ಅಂಗಾಂಗ ದಾನ ಹೆಚ್ಚಾಗಿ ಆಗದೇ ಇರುವುದಕ್ಕೆ ಒಂದು ಕಾರಣವಾಗಿದೆ.
ಯಾವೆಲ್ಲಾ ಅಂಗಾಂಗಗಳ ದಾನ ಮಾಡಬಹುದು
ಅಂಗಾಂಗ ದಾನ ಮಾಡಿದರೆ 8 ಜನರ ಪ್ರಾಣ ಉಳಿಸಬಹುದು. ದೇಹದ ಈ ಅಂಗಗಳನ್ನು ದಾನ ಮಾಡಿದರೆ ಇದರಿಂದ ಇತರ ವ್ಯಕ್ತಿಯ ಪ್ರಾಣ ಉಳಿಯುತ್ತದೆ
ಹೃದಯ: ಹೃದಯ ದಾನ ಮಾಡಿದರೆ ಹೃದಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಜೀವದಾನ ಮಾಡಿದಂತಾಗುವುದು
ಕಿಡ್ನಿ: ಎಷ್ಟೊ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂಥವರಿಗೆ ಕಿಡ್ನಿ ದಾನವಾಗಿ ಸಿಕ್ಕರೆ ಮತ್ತೊಂದಿಷ್ಟು ವರ್ಷ ಬಾಳುತ್ತಾರೆ, ಕೆಲವು ಮನೆಗಳಲ್ಲಿ ಮನೆಗೆ ಆಸರೆಯಾಗಿರುವ ವ್ಯಕ್ತಿಗೆ ಕಿಡ್ನಿ ಸಮಸ್ಯೆ ಇರುತ್ತದೆ, ಆ ವ್ಯಕ್ತಿ ಬದುಕಿದರೆ ಮನೆ ಚೆನ್ನಾಗಿರುತ್ತದೆ.
ಲಿವರ್: ಲಿವರ್ ಅನ್ನು ಸತ್ತ ಮೇಲೆ ಮಾತ್ರವಲ್ಲ ಬದುಕಿದ್ದಾಗಲೂ ದಾನ ಮಾಡಬಹುದು. ಲಿವರ್ ದಾನ ಮಾಡಿದರೆ ಕೆಲವೇ ತಿಂಗಳಿನಲ್ಲಿ ಲಿವರ್ ಮೊದಲಿನ ಗಾತ್ರಕ್ಕೆ ಬೆಳೆಯುತ್ತದೆ.
ಪ್ಯಾಂಕ್ರಿಯಾಸ್: ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿರಲು ಪ್ಯಾಂಕ್ರಿಯಸ್ ಕಾರ್ಯ ತುಂಬಾನೇ ಅವಶ್ಯಕ. ಇದರಲ್ಲಿ ವ್ಯತ್ಯಾಸವಾದರೆ ಕಿಡ್ನಿಗೆ ಹಾನಿಯುಂಟಾಗುವುದು
ಕಣ್ಣುಗಳು: ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂದರ ಬದುಕಿಗೆ ಬೆಳಕಾಗಬಹುದು.
ಕರುಳುಗಳು: ಕರುಳುಗಳನ್ನು ಕೂಡ ದಾನ ಮಾಡಬಹುದು.
ಅಂಗಾಂಗ ದಾನದ ಪ್ರಯೋಜನವೇನು?
ಸತ್ತ ಮೇಲೆ ವ್ಯಕ್ತಿಯ ದೇಹವನ್ನು ಮಣ್ಣು ಮಾಡುತ್ತೇವೆ ಅಥವಾ ಸುಡುತ್ತೇವೆ, ಅದರ ಬದಲಿಗೆ ಅಂಗಾಂಗ ದಾನ ಮಾಡಿದರೆ ಅದರಿಂದ ಸಾಯುವ ಹಂತದಲ್ಲಿರುವ ವ್ಯಕ್ತಿಗಳು ಮತ್ತೊಂದಿಷ್ಟು ವರ್ಷ ಬದುಕಬಹುದಾಗಿದೆ. ಇದರ ಕುರಿತು ಜಾಗೃತಿ ಮೂಡಿಸಿದರೆ ಅಂಗಾಂಗ ದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications