Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದ ನಿಫಾ ವೈರಸ್ ಆತಂಕ: ಮಂಗಳೂರು, ಬೆಂಗಳೂರಿನಲ್ಲಿಕಟ್ಟೆಚ್ಚರವಹಿಸಬೇಕಾಗಿದೆ, ಏಕೆ?
ನಿಫಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಕೊಯಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ಈ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಐದು ಜನರಲ್ಲಿ ನಿಫಾ ವೈರಸ್ ದೃಢಪಟ್ಟಿದೆ. ನಿಫಾ ಗಿಯನ್ನು ಆರೈಕೆ ಮಾಡಿದ ಹೆಲ್ತ್ ವರ್ಕರ್‌ಗೆ ಕೂಡ ನಿಫಾ ವೈರಸ್ ಪಾಸಿಟಿವ್ ಬಂದಿದ್ದು ಆತಂಕ ಹೆಚ್ಚಿಸಿದೆ.
ನಿಫಾ ವೈರಸ್ ರೋಗಿಗಳ ಕಾಂಟ್ಯಾಕ್ಟ್‌ಗೆ ಸುಮಾರು 700 ಜನರು ಬಂದಿದ್ದಾರೆ, ಅವರಲ್ಲಿ 77 ಜನರು ಹೈ ರಿಸ್ಕ್ ಕೆಟಗರಿಯಲ್ಲಿದ್ದಾರೆ. ಆದ್ದರಿಂದ ಇವರನ್ನು ಐಸೋಲೇಟ್ ಮಾಡಿ ಇವರ ಆರೋಗ್ಯದ ಬಗ್ಗೆ ತುಂಬಾ ಗಮನಹರಿಸಲಾಗುತ್ತಿದೆ. ಇವರಿಗೆ ಮನೆಯಿಂದ ಹೊರಗಡೆ ಬಾರದಂತೆ ಸೂಚಿಸಲಾಗಿದೆ.

ಕೇರಳದಲ್ಲಿ ಜನರು ಗುಂಪಾಗಿ ಸೇರುವುದು, ಹಬ್ಬ, ಫಂಕ್ಷನ್‌ಗಳನ್ನು ಮಾಡುವುದಕ್ಕೆ ನಿರ್ಬಂಧ ಹಾಕಲಾಗಿದೆ. ಆದಷ್ಟು ಸುರಕ್ಷತೆ ಕಡೆ ಗಮನಕೊಡುವಂತೆ ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದರೆ. ಕೊಯಿಕ್ಕೋಡ್‌ನ 9 ಪಂಚಾಯಿತಿಗಳ 58 ವಾರ್ಡ್‌ಗಳನ್ನು ನಿರ್ಬಂಧಿತ ಪ್ರದೇಶ ( ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಲಾಗಿದೆ. ಅವಶ್ಯಕ ಸೇವೆಗಳಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ದಿನಸಿ ಸಾಮಾನುಗಳ ಹಾಗೂ ಮತ್ತಿತರ ಅತ್ಯಗ್ಯತ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ 07ರಿಂದ ಸಂಜೆ 5ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಕೇರಳದಲ್ಲಿ ಕಂಡು ಬಂದಿರುವುದು ಬಾಂಗ್ಲಾದೇಶದ ರೂಪಾಂತರ. ಈ ಈ ಸೋಂಕು ಹರಡುವುದು ಕಡಿಮೆ ಆದರೆ ಸಾವಿನ ಸಂಖ್ಯೆ ಅಧಿಕ. ಇದು ಮತ್ತಷ್ಟು ಅಪಾಯಕಾರಿ ಏಕೆಂದರೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದೆ.
ನಿಫಾ ವೈರಸ್ ಲಕ್ಷಣಗಳೇನು?
ಜ್ವರ
ತಲೆನೋವು
ಕೆಮ್ಮು
ಉಸಿರಾಟದಲ್ಲಿ ತೊಂದರೆ
ವಾಂತಿ
ಮೆದುಳು ಊದಿಕೊಳ್ಳುವುದು
ಈ ಬಗೆಯ ಲಕ್ಷಣಗಳು ಕಂಡು ಬರುವುದು. ಮೆದುಳು ಊದಿಕೊಂಡರೆ ವ್ಯಕ್ತಿ ಸಾವನ್ನಪ್ಪುತ್ತಾರೆ.
ಕರ್ನಾಟಕದಲ್ಲಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ
ಪಕ್ಕದ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವಾಗ ಕರ್ನಾಟಕ ನಿರ್ಲಕ್ಷ್ಯ ತೋರಿಸುವಂತೆಯೇ ಇಲ್ಲ. ಕೇರಳದ ಗಡಿ ಜಿಲ್ಲೆ ದಕ್ಷಿಣ ಕನ್ನಡ, ಈ ಭಾಗದಲ್ಲಿ ತುಂಬಾನೇ ಎಚ್ಚರವಹಿಸಬೇಕಾಗಿದೆ. ಏಕೆಂದರೆ ಕೇರಳದಿಂದ ಈ ಭಾಗಕ್ಕೆ ಜನರ ಓಡಾಟ ಅಧಿಕವಿರುತ್ತದೆ. ಆಸ್ಪತ್ರೆಗೆ ಹಾಗೂ ವ್ಯವಹಾರದಿಂದ ಕೇರಳ-ಮಂಗಳೂರು ಅಂತ ಓಡಾಡುವವರು ತುಂಬಾ ಜನ ಇದ್ದಾರೆ. ಆದ್ದರಿಂದ ಈ ಭಾಗದಲ್ಲಿ ತುಂಬಾನೇ ಕಟ್ಟೆಚ್ಚರವಹಿಸಬೇಕಾಗಿದೆ.
ಇನ್ನು ಬೆಂಗಳೂರಿನಲ್ಲಿಯೂ ತುಂಬಾನೇ ಎಚ್ಚರವಹಿಸಬೇಕಾಗಿದೆ. ಕೇರಳದಿಂದ ಬಂದು ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿರುವವರು ತುಂಬಾ ಜನ ಇದ್ದಾರೆ. ಈ ನಿಫಾ ವೈರಸ್ ಅಧಿಕವಾಗಿರುವ ಈ ಸಮಯದಲ್ಲಿ ಊರಿಗೆ ಹೋಗಿ ಬರುವವರ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ.
ಕೋವಿಡ್ 19ನಿಂದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಇದೀಗ ನಿಫಾ ವೈರಸ್ ಕಾಣಿಸಿಕೊಂಡಿದೆ. ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವುದರಿಂದ ಇದು ತುಂಬಾನೇ ಅಪಾಯಕಾರಿಯಾಗಿದೆ. ನಿರ್ಲಕ್ಷ್ಯವಹಿಸಿದರೆ ಕೊರೊನಾದಂಥ ಪರಿಸ್ಥಿತಿ ಮರುಕಳಿಸಬಹುದು, ಆದ್ದರಿಂದ ಬರೀ ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬರು ಎಚ್ಚರವಹಿಸಬೇಕಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications