Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಿಮ್ಮ ಪ್ಲೇಟ್‌ನಿಂದ ತೆಗೆಯಿರಿ! ಮಳೆಗಾಲದಲ್ಲಿ ಈ ತರಕಾರಿ ತಿನ್ನಬೇಡಿ.. ತಿಂದ್ರೆ ಹೆಲ್ತ್‌ಗೆ ಡೇಂಜರ್
ಮಳೆಗಾಲ ಬಂದರೆ ಅನೇಕರಿಗೆ ಒಂದು ರೀತಿಯ ಹಬ್ಬ. ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದವರಿಗೆ ತಂಪಾದ ಗಾಳಿ ಮತ್ತು ಮಳೆ ಹಿತಕರ ಅನುಭವ ನೀಡುತ್ತದೆ. ಆದರೆ, ಮಳೆಗಾಲವು ಆರೋಗ್ಯದ ದೃಷ್ಟಿಯಿಂದ ಕೆಲವು ಸವಾಲುಗಳನ್ನು ತರುತ್ತದೆ. ಹೌದು, ಈ ಸಮಯದಲ್ಲಿ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಕೆಲವು ತರಕಾರಿಗಳನ್ನು ಮಳೆಗಾಲದಲ್ಲಿ ತಿನ್ನಬಾರದು. ಕಾರಣ, ಮಳೆಗಾಲದಲ್ಲಿ ಕೆಲವು ತರಕಾರಿಗಳು (Monsoon Vegetables) ಕೀಟಾಣುಗಳ ತಾಣವಾಗುತ್ತವೆ. ಇವುಗಳನ್ನು ತಿನ್ನುವುದರಿಂದ ದೊಡ್ಡ ಸಮಸ್ಯೆ ಉಂಟಾಗಬಹುದು. ಅವು ಯಾವುವು ಎಂದು ನೋಡೋಣ ಬನ್ನಿ.
ಸಾಮಾನ್ಯವಾಗಿ ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಕೆಲವು ತಿಂಗಳುಗಳಲ್ಲಿ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಷಯ ನಿಮಗೆ ತಿಳಿದಿದೆಯೇ? ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ. ಮಳೆಗಾಲದಲ್ಲಿ ಕೆಲವು ಹಸಿರು ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಮಳೆಗಾಲದಲ್ಲಿ ಕೆಲವು ನಿರ್ದಿಷ್ಟ ತರಕಾರಿಗಳನ್ನು ತಿನ್ನಬಾರದು ಎನ್ನುವುದಕ್ಕೆ ಕಾರಣಗಳಿವೆ. ಈ ಸಮಯದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬ್ಯಾಕ್ಟೀರಿಯಾಗಳು ಮತ್ತು ಇತರೆ ಹಾನಿಕಾರಕ ಸೂಕ್ಷ್ಮಾಣುಗಳು ಬೆಳೆಯಲು ಅನುಕೂಲಕರ ವಾತಾವರಣ ಇರುತ್ತದೆ. ಹೀಗಾಗಿ, ಈ ಕೆಳಗಿನ ತರಕಾರಿಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ.

ಮಳೆಗಾಲದಲ್ಲಿ ಈ ತರಕಾರಿಗಳಿಂದ ದೂರವಿರಿ
ಹೂಕೋಸು ಮತ್ತು ಎಲೆಕೋಸು
ಬ್ರೊಕೊಲಿ, ಹೂಕೋಸು, ಬದನೆಕಾಯಿ, ಮಶ್ರೂಮ್ ಮತ್ತು ಪಾಲಕ್ ಸೊಪ್ಪನ್ನು ಮಳೆಗಾಲದಲ್ಲಿ ತಿನ್ನದಿರುವುದು ಒಳ್ಳೆಯದು. ಬ್ರೊಕೊಲಿ ಮತ್ತು ಹೂಕೋಸಿನಲ್ಲಿ ದಟ್ಟವಾದ ಹೂವುಗಳಿರುತ್ತವೆ. ಅವುಗಳಲ್ಲಿ ಯಾವಾಗಲೂ ತೇವಾಂಶ ಇರುತ್ತದೆ. ಅವುಗಳಲ್ಲಿ ಕೀಟಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಡುಗೆ ಮಾಡುವಾಗ ಇವು ಸ್ವಲ್ಪ ಹಸಿಯಾಗಿದ್ದರೂ, ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾದ ಸೋಂಕು ಉಂಟಾಗಬಹುದು. ಅನೇಕ ಪ್ರಕರಣಗಳಲ್ಲಿ, ಇದು ಫುಡ್ ಪಾಯಿಸನಿಂಗ್‌ಗೆ (ವಿಷಾಹಾರ) ಕಾರಣವಾಗಬಹುದು. ಹೀಗಾಗಿ, ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಲು ಸೂಕ್ತವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.
ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆ
ಹೂಕೋಸು ಮತ್ತು ಎಲೆಕೋಸುಗಳಲ್ಲಿ ಹುಳುಗಳು ಮತ್ತು ಕೀಟಾಣುಗಳು ಹೆಚ್ಚಾಗಿ ಕಂಡುಬರುತ್ತವೆ. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಆದ್ದರಿಂದ, ಈ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಆಯುರ್ವೇದ ವೈದ್ಯರಾದ ಭುವನೇಶ್ ಪಾಂಡೆ ಅವರ ಪ್ರಕಾರ, ಬ್ರೊಕೊಲಿ ಮತ್ತು ಹೂಕೋಸುಗಳಲ್ಲಿ ತೇವಾಂಶ ಹೆಚ್ಚಾಗಿ ಇರುವುದರಿಂದ ಅವುಗಳಲ್ಲಿ ಕೀಟಾಣುಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ನೀವು ಚೆನ್ನಾಗಿ ಬೇಯಿಸದೆ ತಿಂದರೆ, ಫುಡ್ ಪಾಯಿಸನಿಂಗ್ ಆಗುವ ಸಂಭವವಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಳೆಗಾಲದಲ್ಲಿ ಬದನೆಕಾಯಿ ಬೇಡ
ಮಳೆಗಾಲದಲ್ಲಿ ಬದನೆಕಾಯಿಗೆ ಕೀಟಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ತರಕಾರಿಯ ಬಣ್ಣದೊಂದಿಗೆ ಬೆರೆಯುವುದರಿಂದ ಅವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಇವುಗಳನ್ನು ತಿನ್ನುವುದರಿಂದ ಬ್ಯಾಕ್ಟೀರಿಯಾದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಅದರಂತೆಯೇ, ಮಳೆಗಾಲದಲ್ಲಿ ಹಸಿರು ಎಲೆಗಳ ತರಕಾರಿಗಳಲ್ಲಿ ಇ-ಕೋಲಿ ರೀತಿಯ ಬ್ಯಾಕ್ಟೀರಿಯಾಗಳು, ಜಿಯಾರ್ಡಿಯಾ ಮತ್ತು ಕ್ರಿಪ್ಟೋಸ್ಪೊರಿಡಿಯಮ್ ನಂತಹ ಪರಾವಲಂಬಿಗಳು ವಾಸಿಸುತ್ತವೆ. ಬದನೆಕಾಯಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ, ಅದು ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಬದನೆಕಾಯಿಯನ್ನು ತಿನ್ನುವುದರಿಂದ ಚರ್ಮದ ಅಲರ್ಜಿ ಮತ್ತು ಹೊಟ್ಟೆನೋವು ಉಂಟಾಗಬಹುದು.
ಹಸಿರು ಸೊಪ್ಪು ತರಕಾರಿಗಳು
ಪಾಲಕ್, ಮೆಂತ್ಯ, ಸಬ್ಬಸಿಗೆ ಸೊಪ್ಪು ಮುಂತಾದ ಹಸಿರು ಸೊಪ್ಪು ತರಕಾರಿಗಳನ್ನು ಮಳೆಗಾಲದಲ್ಲಿ ತಿನ್ನಬಾರದು. ಏಕೆಂದರೆ, ಅವುಗಳಲ್ಲಿ ತೇವಾಂಶ ಹೆಚ್ಚಿರುತ್ತದೆ. ಅವುಗಳ ಎಲೆಗಳ ಮೇಲೆ ಕೊಳೆ ಮತ್ತು ಕ್ರಿಮಿಗಳು ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ. ಅವುಗಳನ್ನು ಎಷ್ಟೇ ತೊಳೆದರೂ, ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಿರಬಹುದು. ಇದು ಹೊಟ್ಟೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಕ್ಯಾಪ್ಸಿಕಂ ಮತ್ತು ಮೂಲಂಗಿ
ಕ್ಯಾಪ್ಸಿಕಂನಲ್ಲಿಯೂ (ದೊಣ್ಣೆ ಮೆಣಸಿನಕಾಯಿ) ತೇವಾಂಶ ಹೆಚ್ಚಿರುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ, ಮಳೆಗಾಲದಲ್ಲಿ ಇದನ್ನು ತಿನ್ನದಿರುವುದು ಉತ್ತಮ. ಮೂಲಂಗಿಯಲ್ಲಿ ಮಣ್ಣಿನ ಅಂಶ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಇದು ಇನ್ನಷ್ಟು ಹೆಚ್ಚಾಗಬಹುದು. ಇದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಒಟ್ಟಾರೆ ಮಳೆಗಾಲದಲ್ಲಿ ಬ್ರೊಕೊಲಿ, ಹೂಕೋಸು, ಬದನೆಕಾಯಿ, ಮಶ್ರೂಮ್ ಮತ್ತು ಪಾಲಕ್ ಸೊಪ್ಪಿನಂತಹ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಏಕೆಂದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಬೆಳೆಯುವ ಸಾಧ್ಯತೆಯಿದೆ. ಒಂದು ವೇಳೆ ತಿಂದರೂ ಸಹ ಚೆನ್ನಾಗಿ ತೊಳೆದು ಬೇಯಿಸಿ ತಿನ್ನಬೇಕು. ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಜಾ ಮತ್ತು ಸ್ವಚ್ಛವಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ತರಕಾರಿಗಳನ್ನು ಚೆನ್ನಾಗಿ ತೊಳೆದು ಬೇಯಿಸಿ ತಿನ್ನುವುದು ಉತ್ತಮ. ಇದರಿಂದ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













