Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಮುಟ್ಟಿನ ಕಪ್VSಸ್ಯಾನಿಟರಿ ಪ್ಯಾಡ್: ಇದರಲ್ಲಿ ಯಾವುದು ಒಳ್ಳೆಯದು
ತಿಂಗಳಿನಲ್ಲಿ ಆ ನಾಲ್ಕು ದಿನ ಸಾಕಷ್ಟು ಮಹಿಳೆಯರು ಇನ್ನಿಲ್ಲದಷ್ಟು ನೋವನ್ನು ಅನುಭವಿಸುತ್ತಾರೆ. ಇದು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ ಆಗಿದ್ದರೂ ಕೂಡ ಕೆಲವರಿಗೆ ಮಾತ್ರ ಹೆಚ್ಚು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪ್ರತಿ ತಿಂಗಳು ಉಂಟಾಗುವ ಪೀರಿಯಡ್ಸ್ ಹಲವು ಹೆಣ್ಣು ಮಕ್ಕಳಿಗೆ ಸಾಕಷ್ಟು ನೋವನ್ನು ನೀಡುತ್ತದೆ. ಹೊಟ್ಟೆ ನೋವು, ಅಧಿಕ ರಕ್ತಸ್ರಾವ, ತಲೆ ತಿರುಗಿದಂತೆ ಆಗುವುದು ಹೇಗೆ ಹಲವಾರು ಸಮಸ್ಯೆಗಳು ಈ ಸಮಯದಲ್ಲಿ ಕಾಡುತ್ತವೆ.
ಇನ್ನು ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಪೀರಿಯಡ್ಸ್ ಆದಾಗ ರಕ್ತಸ್ರಾವ ಹೊರ ಚೆಲ್ಲದಂತೆ ತಡೆಹಿಡಿಯಲು ಬಳಸುವಂತಹ ವಸ್ತು ಅಂದರೆ ಸ್ಯಾನಿಟರಿ ನಾಪ್ಕಿನ್ ಗಳು. ಟ್ಯಾಂಪೋನ್ ಗಳು ಅಥವಾ ಮುಟ್ಟಿನ ಕಪ್ ಗಳು ಇದರಲ್ಲಿ ಯಾವುದು ಉತ್ತಮ? ಯಾವುದು ಬಳಸುವುದು ಒಳ್ಳೆಯದಲ್ಲ ಎನ್ನುವುದು ಹಲವರಿಗೆ ಈಗಲೂ ಅರಿವಿಲ್ಲ.

ಈ ಲೇಖನದಲ್ಲಿ ತಜ್ಞರ ಸಲಹೆ ಪ್ರಕಾರ ನೀವು ಯಾವುದನ್ನು ಮುಟ್ಟಿನ ಸಮಯದಲ್ಲಿ ಬಳಸಬಹುದು ಎಂಬುದಕ್ಕೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಸ್ಯಾನಿಟರಿ ಪ್ಯಾಡ್ ಗಳು:
ಸಾಕಷ್ಟು ಮಹಿಳೆಯರು ಇದನ್ನೇ ಬಹಳ ವರ್ಷಗಳಿಂದ ಬಳಸಿಕೊಂಡು ಬಂದಿದ್ದಾರೆ. ಬೇರೆ ಬೇರೆ ಶೇಪ್, ಡ್ಯುರೆಬಲಿಟಿ, ಬೇರೆ ಬೇರೆ ಪ್ರೈಸ್ ನಲ್ಲಿ ಲಭ್ಯವಾಗುತ್ತದೆ. ಸ್ಯಾನಿಟರಿ ಪ್ಯಾಡ್ ಬಳಸುವಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಕಂಫರ್ಟ್ ಆಗಿರುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಎಷ್ಟು ಪ್ರಯೋಜನಕಾರಿ ಹಾಗೂ ಆರ್ಥಿಕವಾಗಿಯೂ ಇದು ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ತಿಳಿದುಕೊಳ್ಳಬೇಕು.
ಮೊಟ್ಟಮೊದಲನೆಯದಾಗಿ ಪ್ಯಾಡ್ ಗಳು ಪರಿಸರಕ್ಕೂ ಹಾನಿ ಉಂಟುಮಾಡುತ್ತವೆ. ಯಾಕೆಂದರೆ ಇದು ಮಣ್ಣಿನಲ್ಲಿ ಸುಲಭವಾಗಿ ಕರಗುವುದಿಲ್ಲ ಹಾಗಾಗಿ ಪರಿಸರ ಸ್ನೇಹಿ ಅಲ್ಲ ಜೊತೆಗೆ ಇದರಲ್ಲಿ ಬಳಸುವ ರಾಸಾಯನಿಕಗಳು ಕೂಡ ಹೆಣ್ಣು ಮಕ್ಕಳ ಗುಪ್ತಾಂಗದಲ್ಲಿ ತುರಿಕೆ ಮೊದಲಾದ ಸಮಸ್ಯೆಗಳನ್ನು ಉಂಟುಮಾಡಬಹುದು ದೀರ್ಘಾವಧಿಗೆ ಸ್ಯಾನಿಟರಿ ಪ್ಯಾಡ್ ಬಳಸುವುದು ಒಳ್ಳೆಯದಲ್ಲ. ಇನ್ನು ಬಜೆಟ್ ವಿಷಯಕ್ಕೆ ಬಂದರೆ ಸ್ಯಾನಿಟರಿ ಪ್ಯಾಡ್ ಗಳು ದುಬಾರಿ ಕೂಡ ಆಗಿರುತ್ತದೆ. ಇದರಿಂದ ತಿಂಗಳಿಗೆ ಸಾಕಷ್ಟು ಹಣ ವೆಚ್ಚವಾಗುತ್ತದೆ.
ಟ್ಯಾಂಪೋನ್ ಗಳು:
ಇದನ್ನು ಕೂಡ ಸಾಕಷ್ಟು ಮಹಿಳೆಯರು ಬಳಸುತ್ತಾರೆ. ಇದು ಮುಟ್ಟಿನ ರಕ್ತವನ್ನು ಅಧಿಕವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತೆ ಸುಲಭವಾಗಿ ಯೋನಿ ಒಳಗೆ ಸೇರಿಸಬಹುದು ಹಾಗೂ ಸುಲಭವಾಗಿ ಹೊರತೆಗೆಯಬಹುದು ಇದು ಹತ್ತಿಯಿಂದ ಮಾಡಿರುವ ಪ್ಲಗ್ ಗಳಾಗಿದ್ದು ಸಾಕಷ್ಟು ಮಹಿಳೆಯರಿಗೆ ಈ ಟ್ಯಾಂಪೋನ್ ಗಳನ್ನು ಬಳಸುವುದು ರೂಢಿಯಾಗಿರುತ್ತೆ.
ಆದರೆ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಇದು ಕೂಡ ಅಷ್ಟು ಸೇಫ್ ಅಲ್ಲ ಜೊತೆಗೆ ಪರಿಸರ ಸ್ನೇಹಿ ಅಲ್ಲ. ನೀವೇನಾದ್ರೂ ಟ್ಯಾಂಪೋನ್ ಗಳನ್ನು ಜಾಸ್ತಿ ಸಮಯ ಯೋನಿಯಲ್ಲಿ ಇರಿಸಿದರೆ ಅದು ವಿಷಕಾರಿ ಸಿಂಡ್ರೋಮ್ಗಳಿಗೆ ಕಾರಣವಾಗಬಹುದು. ಹಾಗಾಗಿ ಇವತ್ತಿನ ದಿನಗಳಲ್ಲಿ ಟ್ಯಾಂಪೋನ್ ಗಳನ್ನು ಬಳಸುವುದು ಕೂಡ ಅಷ್ಟು ಸುರಕ್ಷಿತವಲ್ಲ.
ಮೆನ್ಟ್ರುವಲ್ ಕಪ್:
ಭಾರತೀಯರಿಗೆ ಇತ್ತೀಚಿಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತದೆ. ಮೊದಮೊದಲು ಕೇವಲ ಸ್ಪೋರ್ಟ್ಸ್ ನಲ್ಲಿ ಇರುವವರು ಮಾತ್ರ ಬಳಸುತ್ತಿದ್ದರು. ಈಗ ಭಾರತದ ಬಹುತೇಕ ಮಹಿಳೆಯರು ಮೆನ್ಸ್ಟ್ರುವಲ್ ಬಳಸುವ ರೂಢಿ ಮಾಡಿಕೊಳ್ಳುತ್ತಿದ್ದಾರೆ. ಇದು ಕೂಡ ಪಶ್ಚಿಮಾತ್ಯರಿಂದ ನಮಗೆ ಕೊಡುಗೆಯಾಗಿ ಸಿಕ್ಕಿದ್ದು ಎಂದು ಹೇಳಬಹುದು.
ಇದು ಹೆಚ್ಚು ಸೇಫ್ ಆಗಿಯೂ ಹಾಗೂ ರಿ-ಯೂಸೆಬಲ್ ಆಗಿಯೂ ಕೂಡ ಇರುವಂತದ್ದು. ಇದು ಹಲವು ವೈದ್ಯರು ಕೂಡ ಮೆನ್ಟ್ರುವಲ್ ಕಪ್ ಬಳಸಲು ಸಲಹೆ ನೀಡುತ್ತಾರೆ. ಇನ್ನು ಮೆನ್ಟ್ರುವಲ್ ಕಪ್ ಬಳಕೆ ಇಂದು ನಿನ್ನೆಯದಲ್ಲ. 1935 ರಲ್ಲಿ ಇದನ್ನ ಕಂಡುಹಿಡಿಯಲಾಗಿತ್ತು ಆದರೆ ಹೆಚ್ಚು ಪ್ರಚಲಿತದಲ್ಲಿ ಬಂದಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲಿ.
ಮೆನ್ಸ್ಟ್ರುವಲ್ ಕಪ್ ನ ಪ್ರಯೋಜನಗಳು;
ಮುಖ್ಯವಾಗಿ ಮೆನ್ಟ್ರುವಲ್ ಕಪ್ ಅನ್ನು ಮಹಿಳೆಯರು ಯೋನಿಯ ಒಳಗೆ ಹಾಕುವುದು ಹೊರತೆಗೆಯುವುದು ಎರಡು ಸುಲಭ. ಇದು ಅರ್ಧ ಸಿಲೆಂಡರ್ ಶೇಪ್ ನಲ್ಲಿ ಇದ್ದು, ಸುಲಭವಾಗಿ ರಕ್ತಸ್ರವಿಸುವಿಕೆ ಅದರಲ್ಲಿಯೇ ಶೇಖರಣೆಯಾಗುವಂತೆ ಯೋನಿಯ ಒಳಗೆ ತೂರಿಸಬಹುದು.
ನೀವು ನಾಲ್ಕರಿಂದ 12 ಗಂಟೆಗಳಲ್ಲಿ ಇದನ್ನ ಬದಲಾಯಿಸಿಕೊಳ್ಳಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಪ್ರತಿ ಮೂರು ಗಂಟೆಗಳಿಗೊಮ್ಮೆ ಆದರೂ ತೆಗೆದು ನೈರ್ಮಲ್ಯಗೊಳಿಸಿ ಮತ್ತೆ ಯೋನಿಯ ಒಳಗೆ ಹಾಕಿಕೊಳ್ಳಬಹುದು.
ಮೆನ್ಟ್ರುವಲ್ ಕಪ್ ಅನ್ನು ನೀವು ಸ್ವಚ್ಛವಾಗಿ ಇಟ್ಟುಕೊಂಡರೆ ಐದರಿಂದ 10 ವರ್ಷಗಳವರೆಗೆ ಒಂದೇ ಕಪ್ ಅನ್ನು ಬಳಸಬಹುದು ಎಂಬುದು ನಿಮಗೆ ಗೊತ್ತೇ? ಹೌದು ಇದು ರಿ-ಯುಸೆಬಲ್ ಅಂದರೆ ಮರು ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುವಂತಹ ಒಂದು ಅತ್ಯುತ್ತಮವಾದ ಉತ್ಪನ್ನ. ಇದರಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಸಿಲಿಕಾನ್ ನಿಂದ ಅಥವಾ ವೈದ್ಯಕೀಯ ಪ್ರಮಾಣಿಕೃತ ವಸ್ತುಗಳಿಂದ ಇದನ್ನು ತಯಾರಿಸಲಾಗುತ್ತದೆ .ಹಾಗಾಗಿ ಹೆಣ್ಣು ಮಕ್ಕಳಿಗೆ ದದ್ದು, ತುರಿಕೆ ಉಂಟಾಗುವಂತಹ ಯಾವ ಸಮಸ್ಯೆಯೂ ಇರುವುದಿಲ್ಲ.
ಬಜೆಟ್ ಫ್ರೆಂಡ್ಲಿ, ಪರಿಸರ ಸ್ನೇಹಿ:
ಮೆನ್ಸ್ಟ್ರುವಲ್ ಕಪ್ ಪರಿಸರ ಸ್ನೇಹಿಯೂ ಹೌದು. ನೀವು ಒಮ್ಮೆ ಇದನ್ನ ಬಿಸಾಡಿದರೆ ಅದು ಮಣ್ಣಿನಲ್ಲಿ ಲೀನವಾಗಿ ಹೋಗುತ್ತದೆ. ಇನ್ನು ಬಜೆಟ್ ವಿಷಯಕ್ಕೆ ಬರೋಣ.
ಸ್ಯಾನಿಟರಿ ಪ್ಯಾಡ್ ಗಳು ಸರ್ಕಾರದ ಜನ ಔಷಧಿ ಮಹಿಳೆ ಮಳಿಗೆಗಳಲ್ಲಿ ಕೊಂಡುಕೊಂಡರೆ, ಸ್ವಲ್ಪ ಕಡಿಮೆ ಎನಿಸಿದರು 50 ಪ್ಯಾಡ್ ಗಳು ಇರುವ ಪ್ಯಾಕ್‌ಗೆ ಕನಿಷ್ಠ 600ರೂ. ಬೆಲೆ ಇರುತ್ತದೆ. ಇನ್ನು ಬೆಲೆ ಬ್ರಾಂಡ್ ಮೇಲೆ ಅವಲಂಬಿತವಾಗಿರುತ್ತದೆ.
ಇನ್ನು ಟ್ಯಾಂಪೋನ್ ಗಳು 20 ತುಂಡು ಪ್ಯಾಕ್ ಬೆಲೆ ಸುಮಾರು 250 ರಿಂದ 350 ರೂಪಾಯಿಗಳು ಇರಬಹುದು. ಅದೇ ನೀವು ಮೆನ್ಟ್ರುವಲ್ ಕಪ್ ಅನ್ನು ತೆಗೆದುಕೊಂಡರೆ ಇತ್ತೀಚಿನ ದಿನಗಳಲ್ಲಿ ಇದರ ಬೆಲೆಯೂ ಕಡಿಮೆಯಾಗಿದ್ದು 350 ರೂಪಾಯಿ ಒಳಗಡೆ ಖರೀದಿ ಮಾಡಬಹುದು ಆದರೆ ಇದು ಒಮ್ಮೆ ಖರೀದಿಸಿದ ಮೇಲೆ 10 ವರ್ಷಗಳವರೆಗೂ ಬಳಸಿಕೊಳ್ಳಬಹುದು. ಅಂದರೆ ನೀವು ತಿಂಗಳಿಗೆ ಎಷ್ಟು ಹಣ ಉಳಿತಾಯ ಮಾಡಬಹುದು ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಿ.
ಹಾಗಾಗಿ ಸ್ಯಾನಿಟರಿ ಪ್ಯಾಡ್, ಟ್ಯಾಂಪೋನ್ ಅಥವಾ ಹತ್ತಿ ಬಟ್ಟೆಗಳು ಈ ಎಲ್ಲಾ ಉತ್ಪನ್ನಗಳಿಗಿಂತಲೂ ಹೆಚ್ಚು ಉತ್ತಮವಾಗಿರುವಂತಹ ಮೆನ್ಸ್ಟ್ರುವಲ್ ಕಪ್ ಅನ್ನು ಬಳಸುವುದನ್ನು ರೂಢಿ ಮಾಡಿಕೊಳ್ಳುವುದು ಒಳ್ಳೆಯದು ಇದು ಆರೋಗ್ಯಕ್ಕೂ ಕೂಡ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಜೊತೆಗೆ ಯಾವುದೇ ಸಮಸ್ಯೆ ಇಲ್ಲದೆ ಮಹಿಳೆಯರು ತಮ್ಮ ಮುಟ್ಟಿನ ದಿನಗಳನ್ನು ಆರಾಮವಾಗಿ ಚಿಂತೆ ಇಲ್ಲದೆ ಕಳೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












