Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೆಚ್ಚಿನವರಿಗೆ ಈ ಆಹಾರಗಳು ಕೂಡ ಗ್ಯಾಸ್ಟ್ರಿಕ್ ಹೆಚ್ಚಿಸುತ್ತೆ ಎಂದು ಗೊತ್ತೇ ಇರಲ್ಲ
ಈ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೆಲ್ಲಾ ಅದನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ,ಇದರಿಂದ ತುಂಬಾನೇ ಹಿಂಸೆ ಅನುಭವಿಸುವಂತಾಗುವುದು, ಅಜೀರ್ಣದಿಂದ ಈ ಸಮಸ್ಯೆ ಉಂಟಾಗುವುದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕೆಲವೊಂದು ಆಹಾರವನ್ನು ತಿನ್ನಲೇಬಾರದು.
ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಕಡಲೆ, ಕಾಳುಗಳು, ಆಲೂಗಡ್ಡೆ ಇವುಗಳನ್ನು ತಿಂದರೆ ಜಾಸ್ತಿಯಾಗುತ್ತದೆ ಎಂದು ಕೆಲವರು ಇದನ್ನು ಮುಟ್ಟುವುದಿಲ್ಲ, ಆದರೆ ಕೆಲವೊಂದು ಆಹಾರಗಳನ್ನುತಿನ್ನುತ್ತಾರೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವುದು.

ಪಾಪ್‌ಕಾರ್ನ್
ಪಾಪ್‌ಕಾರ್ನ್ ತುಂಬಾ ಜನರ ನೆಚ್ಚಿನ ಸ್ನ್ಯಾಕ್ಸ್, ಅದರಲ್ಲೂ ಮೂವ್ ನೋಡಲು ಹೋದಾಗ ಪಾಪ್‌ಕಾರ್ನ್ ಸವಿಯುತ್ತಾ ಮೂವಿ ಎಂಜಾಯ್ ಮಾಡುತ್ತಾರೆ, ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಇದನ್ನು ತಿನ್ನಲೇಬೇಡಿ, ಇದರಿಂದ ಗ್ಯಾಸ್ ಹೆಚ್ಚಾಗಿ ಹೊಟ್ಟೆ ಉಬ್ಬುವುದು.
ಪಾಪ್ ಕಾರ್ನ್ ತಿನ್ನಲು ತುಂಬಾ ಆಸೆಯಾದರೆ ಈ ಟಿಪ್ಸ್ ಪಾಲಿಸಿದರೆ ಗ್ಯಾಸ್ಟ್ರಿಕ್ ಉಂಟಾಗುವುದನ್ನು ತಡೆಗಟ್ಟಬಹುದು
ಪಾಪ್‌ಕಾರ್ನ್‌ಗೆ ಆಲೀವ್ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ ಬಳಸಿದರೆ ಒಳ್ಳೆಯದು, ಅದರ ಮೇಲೆ ಸ್ವಲ್ಪ ಅರಿಶಿಣ, ಜೀರಿಗೆ ಪುಡಿ ಹಾಕಿ ತಿಂದರೆ ಒಳ್ಳೆಯದು.
ಹಸಿ ಸಲಾಡ್
ಸಲಾಡ್ ತುಂಬಾನೇ ಆರೋಗ್ಯಕರ, ಆದರೆ ಹಸಿ ತರಕಾರಿ ತಿಂದರೆ ಜೀರ್ಣಕ್ರಿಯೆಗೆ ಕಷ್ಟವಾಗುವುದು, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಹಸಿ ತರಕಾರಿಯಲ್ಲಿ ರಂಜಕದ ಅಂಶವಿರುತ್ತದೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
ಸಲಾಡ್ ತಿನ್ನುವುದಾದರೆ ಏನು ಮಾಡಬೇಕು?
ನೀವು ಹಸಿ ತರಕಾರಿ ತಿನ್ನುವ ಬದಲಿಗೆ ಸ್ವಲ್ಪ ಬೇಯಿಸಿ ತಿಂದರೆ ಒಳ್ಳೆಯದು, ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುವುದು, ಅದರ ಜೊತೆಗೆ ಸ್ವಲ್ಪ ಕಾಳು ಮೆಣಸಿನ ಪುಡಿ, ಶುಂಠಿ ಸೇರಿಸಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಚ್ಯುಯಿಂಗ್ ಗಮ್: ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಚುಯ್ಯಿಂಗ್ ಗಮ್ ಅಗೆಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಹೆಚ್ಚಾಗಿ ಗ್ಯಾಸ್ಟ್ರಿಕ್ ಹೆಚ್ಚಾಗುವುದು. ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಚುಯ್ಯಿಂಗ್ ಗಮ್ ಅಗೆಯದೇ ಇದ್ದರೆ ಒಳ್ಳೆಯದು.
ಸೇಬು, ಪಿಯರ್ಸ್, ಪೀಚ್
ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಸೇಬು, ಪೀಚ್, ಪಿಯರ್ಸ್ ಇವುಗಳನ್ನು ತಿಂದಾಗ ಅದರಲ್ಲಿರುವ ಫ್ರಕ್ಟೋಸ್ ಅಂಶದಿಂದಾಗಿ ಗ್ಯಾಸ್ ಉತ್ಪತ್ತಿ ಹೆಚ್ಚಾಗಿ ಗ್ಯಾಸ್ಟ್ರಿಕ್ ಹೆಚ್ಚಾಗುವುದು.
ಪರಿಹಾರ: ನೀವು ಸೇಬು, ಪೀಚ್ ಈ ಬಗೆಯ ಹಣ್ಣುಗಳನ್ನು ಬೇಯಿಸಿ ತಿಂದರೆ ಒಳ್ಳೆಯದು.
ಈರುಳ್ಳಿ
ಈರುಳ್ಳಿ ಇಲ್ಲ ಎಂದರೆ ಕೆಲವರಿಗೆ ಅಡುಗೆ ಮಾಡುವುದೇ ತಿಳಿಯಲ್ಲ, ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹಸಿ ಈರುಳ್ಳಿ ತಿನ್ನದೇ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ತುಂಬಾನೇ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಅಡುಗೆಯಲ್ಲಿ ಬೇಯಿಸಿದ ಈರುಳ್ಳಿ ಬಳಸಿದರೆ ತೊಮದರೆ ಉಂಟಾಗುವುದಿಲ್ಲ, ಹಸಿ ಈರುಳ್ಳಿ ತಿನ್ನಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
