Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವುದೇಕೆ..? ಏನಿದರ ವಿಶೇಷ ಗೊತ್ತಾ?
ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಸಂಪತ್ತಿನ ಪ್ರತೀಕವಾಗಿ ಆಚರಿಸಲಾಗುವ ಈ ಹಬ್ಬವು ರೈತರು ಬೆಳೆದ ಪೈರನ್ನು ಮನೆಗೆ ಕೊಂಡೊಯ್ಯುವ ಸಂದರ್ಭವನ್ನು ಅದರ ಮಹತ್ವ ಸಾರುತ್ತದೆ. ಈ ಪವಿತ್ರವಾದ ಧಾರ್ಮಿಕ ಹಿನ್ನೆಲೆ ಹಾಗೂ ತತ್ವವನ್ನು ಒಳಗೊಂಡಿದೆ. ಖಗೋಳದಲ್ಲಿ ಸೂರ್ಯನು ದಕ್ಷಿಣಾಭಿಮುಖದಿಂದ ಉತ್ತರಾಯಣದ ಕಡೆ ಚಲಿಸುತ್ತಾನೆ. ಇಲ್ಲಿಗೆ ಚಳಿಗಾಲ ಅಂತ್ಯವಾಗಿ ಬೇಸಿಗೆ ಆರಂಭವಾಗಲಿದೆ ಎಂಬ ಮಹತ್ವವೂ ಇದೆ.
ಆದರೆ ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ ಹಂಚಿ ಒಳ್ಳೆಯ ಮಾತನಾಡಿ ಈ ವರ್ಷ ಒಳ್ಳೆಯ ಶುಭ, ಸಂಪತ್ತು ತರಲಿ ಎಂದು ಹರಸುವುದಾಗಿದೆ. ಈ ವೇಳೆ ರೈತರು ತಾವು ಬೆಳೆದ ಬೆಳೆಯನ್ನು ಪಡೆದು, ಪೂಜೆಯನ್ನು ಸಲ್ಲಿಸುತ್ತಾರೆ. ಉತ್ತಮ ಪೈರು ಬೆಳೆಯಲು ಸಹಾಯ ಮಾಡಿದ ಎತ್ತುಗಳಿಗೆ ಬಣ್ಣಗಳನ್ನು ಬಡಿದು ಪೂಜಿಸುತ್ತಾರೆ. ಜೊತೆಗೆ ಮನೆಯಲ್ಲಿ ಸಿಹಿ ತಿಂಡಿಯನ್ನು ಮಾಡಿ ದೇವರಿಗೆ ಹಾಗೂ ಹಸುಗಳಿಗೆ ನೈವೇದ್ಯವನ್ನು ಸಲ್ಲಿಸುವರು. ಮನೆಯ ಬಾಗಿಲಿಗೆ ಪೈರುಗಳ ಸಿಂಗಾರ ಮಾಡಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.

ಈ ರೀತಿ ಪ್ರತಿಯೊಂದು ಆಚರಣೆಯು ವಿಶೇಷವಾದ ನಂಬಿಕೆ ಹಾಗೂ ಹಿನ್ನೆಲೆಯನ್ನು ಪಡೆದುಕೊಂಡಿದೆ. ಹಲವು ಕಡೆ ತಮ್ಮ ಜಮೀನುಗಳಲ್ಲೇ ಈ ಹಬ್ಬ ಆಚರಿಸುತ್ತಾರೆ. ಇದು ಹೊಸತನದ ಸಂಕೇತವಾಗಿದೆ. ಇನ್ನೂ ಕೆಲವು ಕಡೆ ಸಿಹಿ ತಿಂದು ಊರಿನಲ್ಲೆಲ್ಲಾ ಜಾನಪದ ಕ್ರೀಡೆಗಳು, ಹಾಡುಗಳ ಹಾಡುತ್ತಾರೆ. ಮತ್ತೆ ಕೆಲವೆಡೆ ಆಕಾಶದೆತ್ತರಕ್ಕೆ ಗಾಳಿಪಟ ಹಾಸಿರಿ ಈ ಹಬ್ಬವನ್ನು ಅರ್ಥಪೂರ್ಣವಾಗಿಸುತ್ತಾರೆ.
ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದೇಕೆ?
ಬಣ್ಣ ಬಣ್ಣದ ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದು ಸಂಕ್ರಾಂತಿಯ ಆಚರಣೆಯಲ್ಲಿ ಒಂದು ವಿಶೇಷವಾದ ಭಾಗವಾಗಿದೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೈಟ್ ಫ್ಲೈಯಿಂಗ್ ಉತ್ಸವವನ್ನು ಪ್ರತಿವರ್ಷ ಗುಜರಾತ್‌ನಲ್ಲಿ ಆಯೋಜಿಸುತ್ತಾರೆ. ಅತ್ಯಂತ ಪ್ರಾಚೀನ ಹಿಂದೂ ಉತ್ಸವಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಹಬ್ಬವು ಸೂರ್ಯ ದೇವನಿಗೆ ಮೀಸಲಾದ ಹಬ್ಬ ಎಂದು ಕರೆಯಲಾಗುವುದು. ಅಲ್ಲದೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.
ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುವ ಹಬ್ಬವು ಚಳಿಗಾಲದ ಅಂತ್ಯವನ್ನು ಸಹ ಸಂಕೇತಿಸುವುದು. ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸಾಕಷ್ಟು ಅನಾರೋಗ್ಯ ಹಾಗೂ ಜ್ವರಗಳು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಪ್ರಕಾಶಮಾನವಾದ ಸೂರ್ಯನ ಕಿರಣಗಳನ್ನು ಪಡೆಯುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿಯೇ ನಾಶವಾಗುತ್ತವೆ. ಈ ಕಾರಣದಿಂದಲೇ ಸಂತೋಷಗೊಂಡ ಜನರು ಗಾಳಿಪಟವನ್ನು ಹಾರಿಸುವರು.
ಇನ್ನೊಂದು ನಂಬಿಕೆಯ ಪ್ರಕಾರ
ಅಲ್ಲದೆ ಇನ್ನೊಂದು ಅರ್ಥದಲ್ಲಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಸಂತೋಷವನ್ನು ನೀಡಿರುವುದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಗಾಳಿಪಟವನ್ನು ಹಾರಿಸಲಾಗುವುದು ಎಂದು ಹೇಳಲಾಗುವುದು. ಇನ್ನೊಂದು ನಂಬಿಕೆಯ ಪ್ರಕಾರ ದೇವರು ಆರು ತಿಂಗಳುಗಳ ಕಾಲ ನಿದ್ರಿಸುತ್ತಿದ್ದರು. ಇದೀಗ ಎದ್ದೇಳುವ ಸಮಯ. ಅದಕ್ಕಾಗಿ ಜಾಗ್ರತಿ ಮೂಡಿಸುವುದರ ಸಂಕೇತವಾಗಿರುತ್ತದೆ. ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಆಕಾಶವು ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅಲ್ಲದೆ ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯ ಮತ್ತು ಸುಂದರ ದೃಶ್ಯವನ್ನು ನೀಡುವುದು ಎಂದು ಹೇಳಲಾಗುವುದು.
ವರ್ಷದ ಬಹುತೇಕ ಸಂದರ್ಭದಲ್ಲಿ ಗಾಳಿಪಟವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಹಾರಿಸಲಾಗುವುದು. ಆ ಸಂಪ್ರದಾಯ ಹಾಗೂ ರೂಢಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಗುಜರಾತ್‍ಅಲ್ಲಿ ಗಾಳಿಪಟ ಹಾರಿಸುವ ಒಂದು ದೊಡ್ಡ ಸ್ಪರ್ಧೆಯನ್ನು ಸಹ ಕೈಗೊಳ್ಳಲಾಗುವುದು. ಈ ಸಮಯದಲ್ಲಿ ಪ್ರಪಂಚದಾದ್ಯಂತದ ಜನರು ಗಾಳಿಪಟ ಹಾರಿಸುವ ಪ್ರರ್ಧೆಗೆ ಭಾಗವಹಿಸಲು ಹಾಗೂ ವೀಕ್ಷಿಸಲು ಆಗಮಿಸುತ್ತಾರೆ ಎನ್ನುವುದು ವಿಶೇಷ. ಇದಕ್ಕಾಗಿ ಬಹಳ ಮುಂಚಿತವಾಗಿ ತಯಾರಿಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳುತ್ತಾರೆ.
ಸೂರ್ಯ ದೇವನ ಆರಾಧನೆ ಮಾಡುವ ಹಬ್ಬ
ಸೂರ್ಯ ದೇವನಿಗೆ ಆರಾಧನೆ ಮಾಡುವ ಈ ಹಬ್ಬದ ಆರಂಭವು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ವಿಭಿನ್ನ ಸಂಪ್ರದಾಯ ಹಾಗೂ ಆಚರಣೆಗಳನ್ನು ಒಳಗೊಂಡಿರುವ ಈ ಪವಿತ್ರವಾದ ಹಬ್ಬ ಎಲ್ಲರ ಮನಸ್ಸಿನಲ್ಲಿ ಹಾಗೂ ಮನೆಯಲ್ಲಿ ಹೊಸದಿನ ಹಾಗೂ ಹೊಸ ತನದ ಅನುಭವವನ್ನು ನೀಡುತ್ತದೆ. ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನು ಮನೆಯಲ್ಲಿ ತಯಾರಿಸಿ ಆತ್ಮೀಯರಿಗೆ ಹಾಗೂ ನೆರೆಹೊರೆಯವರಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಸೂರ್ಯನ ಚಲನೆಯು ಕರ್ಕ ರಾಶಿಗೆ ಪ್ರವೇಶಿಸುವುದು ಎಂದು ಗುರುತಿಸಲಾಗುವುದು. ಇತರ ಸಂಪ್ರದಾಯದಂತೆ ಮಕರ ಸಂಕ್ರಾಂತಿಯಂದು ಉತ್ಸವ ಹಾಗೂ ಗಾಳಿಪಟವನ್ನು ಹಾರಿಸುತ್ತಾರೆ. ಗಾಳಿ ಪಟವನ್ನು ಹಾರಿಸುವುದು ಒಂದು ವಿಶೇಷ ಹಿನ್ನೆಲೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
