Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬು ಪಾನೀಯ ತುಂಬಾ ಒಳ್ಳೆಯದು, ಆದರೆ ಇವರಿಗಲ್ಲ!
ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬು ಹಿಂಡಿ ಕುಡಿದರೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅಲ್ಲದೆ ಹೊಟ್ಟೆ ಬೊಜ್ಜು ಕರಗಿಸು, ಮೈ ತೂಕ ಕರಗಿಸಲು ಕೂಡ ನಿಂಬು ಪಾನೀಯ ತುಂಬಾನೇ ಒಳ್ಳೆಯದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬು ಪಾನೀಯ ಹಾಕಿ ಕುಡಿಯುವುದು ತುಂಬಾನೇ ಒಳ್ಳೆಯದು ಎಂದು ಮಾತ್ರ ಹಲವರಿಗೆ ಗೊತ್ತಿರುತ್ತದೆ, ಆದರೆ ಇದರ ಅಡ್ಡಪರಿಣಾಮಗಳ ಬಗ್ಗೆ ಕೂಡ ತಿಳಿದಿರಬೇಕು, ಆವಾಗ ಮಾತ್ರ ಯಾರು ಈ ಪಾನೀಯ ಕುಡಿಯಬಹುದು, ಯಾರು ಕುಡಿಯಬಾರದು ಎಂದು ತಿಳಿಯಬಹುದು.

ದಿನಾ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು
ಆಸಿಡ್ ರಿಫ್ಲೆಕ್ಸ್, ಎದೆಯುರಿ ಈ ಬಗೆಯ ಸಮಸ್ಯೆಯಿದ್ದರೆ ನಿಂಬೆರಸ ಹಾಕಿ ಕುಡಿಯುವುದು ಒಳ್ಳೆಯದಲ್ಲ. ಈಗಾಗಲೇ ಎದೆಯುರಿ ಇರುವವರು ನಿಂಬು ಪಾನೀಯ ಕುಡಿಯುವುದರಿಂದ ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ, ತಲೆಸುತ್ತು ಈ ಬಗೆಯ ಸಮಸ್ಯೆ ಉಂಟಾಗುವುದು.
ಆಗಾಗ ಮೂತ್ರ ವಿಸರ್ಜನೆಯಾಗುವುದು
ಆಗಾಗ ಮೂತ್ರ ವಿಸರ್ಜನೆಯಾಗುತ್ತಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ನಿಂಬು ಪಾನೀಯ ಕುಡಿದಾಗ ಅದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಹಾಗಾಗಿ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಾದರೆ ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ 2 ಲೀಟರ್ ನೀರು ತಪ್ಪದೆ ಕುಡಿಯಿರಿ.
ಕೆಲವರಿಗೆ ಅಲರ್ಜಿ ಉಂಟಾಗುವುದು
ಇದು ತುಂಬಾ ಅಪರೂಪ, ನೀವು ನಿಂಬೆರಸ ಪಾನೀಯ ಕುಡಿಯುವಾಗ ಅಲರ್ಜಿ ರಿಯಾಕ್ಷನ್ ಕಂಡು ಬರುವುದಾದರೆ ನೀವು ನಿಂಬೆಪಾನೀಯ ಕುಡಿದಾಗ ಈ ರೀತಿ ಏನಾದರು ರಿಯಾಕ್ಷನ್ ಕಂಡು ಬಂದರೆ ನೀವು ನಿಂಬು ಪಾನೀಯ ಕುಡಿಯದಿದ್ದರೆ ಒಳ್ಳೆಯದು. ನೀವು ನಿಂಬು ಪಾನೀಯ ಕುಡಿದಾಗ ಶರೀರದಲ್ಲಿ ಏನಾದರು ಅಲರ್ಜಿ ರಿಯಾಕ್ಷನ್ ಉಂಟಾದರೆ ನೀವು ನಿಂಬು ಪಾನೀಯ ಕುಡಿಯಲು ಹೋಗಬೇಡಿ.
ದೇಹ ಪೋಷಕಾಂಶ ಹೀರಿಕೊಳ್ಳುವಲ್ಲಿ ಸಮಸ್ಯೆ ಉಂಟಾಗುತ್ತದೆ
ದಿನದಲ್ಲಿ ಒಂದು ಲೋಟ ನಿಂಬು ಪಾನೀಯ ಕುಡಿದರೆ ಒಳ್ಳೆಯದು, ಅದೇ ಒಂದು ಲೋಟಕ್ಕಿಂತ ಹೆಚ್ಚು ಕುಡಿಯಲು ಹೋಗಬೇಡಿ, ನೀವು ಹೆಚ್ಚು ನಿಂಬು ಪಾನೀಯ ಕುಡಿದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಂಬು ಪಾನೀಯ ಹೆಚ್ಚು ಕುಡಿದಾಗ ಕ್ಯಾಲ್ಸಿಯಂ, ಖನಿಜಾಂಶ ಹೀರಿಕೊಳ್ಳಲು ತೊಂದರೆಯಾಗುವುದು. ಹಾಗಾಗಿ ನಿಂಬು ಪಾನೀಯ ಹೆಚ್ಚಾಗಿ ಕುಡಿಯಬೇಡಿ.
ಹಲ್ಲು ಮತ್ತಷ್ಟು ಸೆನ್ಸಿಟಿವ್ ಆಗುವುದು
ನಿಮ್ಮ ಹಲ್ಲು ತುಂಬಾ ಸೆನ್ಸಿಟಿವ್ ಆಗಿದ್ದರೆ ನಿಂಬು ಪಾನೀಯ ಪ್ರತಿದಿನ ಕುಡಿಯುವುದರಿಂದ ಅದರಲ್ಲಿರುವ ಸಿಟ್ರಿಕ್ ಆಮ್ಲದಿಂದಾಗಿ ಹಲ್ಲು ಮತ್ತಷ್ಟು ಸೆನ್ಸಿಟವ್ ಆಗುವುದು. ಸೆನ್ಸಿಟಿವ್ ಹಲ್ಲಿನವರು ನಿಂಬು ಪಾನೀಯ ಕುಡಿಯುವಾಗ ಸ್ಟ್ರಾ ಬಳಸಿದರೆ ಹಲ್ಲು ಮತ್ತಷ್ಟು ಸೆನ್ಸಿಟಿವ್ ಆಗುವುದನ್ನು ತಡೆಗಟ್ಟಬಹುದು. ಅಲ್ಲದೆ ನಿಂಬು ಪಾನೀಯ ಕುಡಿದ ಬಳಿಕ ಬಾಯಿ ಮುಕ್ಕಳಿಸಿ, ಇಲ್ಲದಿದ್ದರೆ ಹಲ್ಲಿಗೆ ಹಾನಿಯುಂಟಾಗುವುದನ್ನು ತಡೆಗಟ್ಟಬಹುದು.
ಇದಷ್ಟೂ ಅಡ್ಡಪರಿಣಾಮವಾದರೆ ಇದರಿಂದ ಪ್ರಯೋಜನವೂ ಇದೆ
ತೂಕ ಇಳಿಕೆಗೆ ಸಹಕಾರಿ: ನಿಂಬೆಹಣ್ಣು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ. ಆಹಾರ ಸೇವಿಸುವ ಮುನ್ನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಈ ಪಾನೀಯ ಸೇವಿಸಿ ವರ್ಕೌಟ್ ಮಾಡಿದರೆ ಮತ್ತಷ್ಟು ಒಳ್ಳೆಯದು.
ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟುತ್ತದೆ
ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಕಿಡ್ನಿ ಸ್ಟೋನ್ಸ್(ಮೂತ್ರ ಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು) ತಡೆಗಟ್ಟುತ್ತದೆ. ನಿಂಬು ಪಾನೀಯ ಕುಡಿದಾಗ ಮೂತ್ರದ ಮೂಲಕ ಚಿಕ್ಕ ಕಲ್ಲುಗಳನ್ನು ಹೊರ ಹಾಕುವುದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಬಹುದು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
2022ರಲ್ಲಿ ನಡೆಸಿದ ಅಧ್ಯಯನವು ನಿಂಬು ಪಾನೀಯ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು ಊಟದ ಮೊದಲು ನಿಂಬು ಪಾನೀಯ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
