Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಸುದ್ದಿಗೋಷ್ಠಿಯಲ್ಲೇ ಕುಮಾರಸ್ವಾಮಿ ಮೂಗಿನಿಂದ ರಕ್ತ..! ಹೀಗೆ ಆಗಿದ್ಯಾಕೆ..?
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಘಟನೆ ವರದಿಯಾಗಿತ್ತು. ಮುಡಾ ಹಾಗೂ ವಾಲ್ಮೀಕಿ ಹಗರಣ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡುವಾಗ ಅವರ ಮೂಗಿನಿಂದ ರಕ್ತಸ್ರಾವವಾದ ಘಟನೆ ನಡೆದಿದೆ.
ಮಾಧ್ಯಮಗಳ ಮುಂದೆ ಮಾತನಾಡುತ್ತಿರುವಾಗಲೇ ಮೂಗಿನಿಂದ ರಕ್ತ ಬಂದಿದೆ. ಒಂದೆರಡು ಬಾರಿ ಅವರು ಬಟ್ಟೆಯಿಂದ ಒರೆಸಿಕೊಂಡರು ರಕ್ತ ಬರುವುದು ಮುಂದುವರೆದಿದೆ. ನೋಡ ನೋಡುತ್ತಲೇ ಬಟ್ಟೆಯ ಮೇಲೆ ಹನಿಗಳು ಬೀಳಲು ಆರಂಭವಾದಾಗ ಅಲ್ಲಿಯೇ ಮಾತು ಮೊಟಕುಗೊಳಿಸಿದರು.

ಕುಮಾರಸ್ವಾಮಿ ಪಕ್ಕದಲ್ಲೇ ಇದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ತಕ್ಷಣ ಅವನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು. ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ಏರ್ಪಟ್ಟಿದ್ದಲ್ಲದೆ ಕುಮಾರಸ್ವಾಮಿ ಅವರಿಗೆ ಏನಾಯಿತು ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಜೊತೆಗಿದ್ದ ಯಡಿಯೂರಪ್ಪ ಸಹ ಗೊಂದಲಕ್ಕೊಳಗಾಗಿದ್ದರು.
ಹಾಗಾದ್ರೆ ಮೂಗಿನಿಂದ ರಕ್ತ ಬರುವುದು ಏಕೆ? ಏನಿದು ಕಾಯಿಲೆ? ಯಾಕಾಗಿ ಮೂಗಿನಿಂದ ರಕ್ತ ಬರುತ್ತದೆ ಎಂಬುದನ್ನು ತಿಳಿಯೋಣ.
ಸೈನಟಿಸ್
ಸೈನಸ್ ಅಥವಾ ಸೈನಟಿಸ್ ಎಂದು ಕರೆಯಲ್ಪಡುವ ಮೂಗಿನ ಹೊಳೆಗಳಡಿ ಉಂಟಾಗುವ ಒಂದು ರೀತಿಯ ಕುಳಿ ಇದಾಗಿದೆ. ಊದಿದ ಮತ್ತು ಉರಿಯೂತದ ಮೂಗು ಎಂದು ಕರೆಯಬಹುದು. ಇಲ್ಲಿ ತಡೆಯಾಗಿರುವ ಕಾರಣದಿಂದ ಕಫ ಜಮೆಯಾಗುವುದು. ಸೈನಟಿಸ್ ತೀವ್ರವಾಗಿದ್ದರೆ ಆಗ ಉಸಿರಾಡಲು ತುಂಬಾ ಕಷ್ಟಪಡಬೇಕಾಗಬಹುದು. ಕಣ್ಣುಗಳು ಮತ್ತು ಮೂಖ ಊದಿಕೊಳ್ಳಬಹುದು. ಮುಖ ಮತ್ತು ತಲೆಯಲ್ಲಿ ತೀವ್ರವಾಗಿ ನೋವು ಕಾಣಿಸಬಹುದು. ಇದಕ್ಕೆ ಮೂಲ ಕಾರಣ ಶೀತ. ಮೂಗು ಕಟ್ಟುವಿಕೆಯಿಂದಾಗಿ ರಕ್ತಸ್ರಾವವಾಗಬಹುದು.
ನಸಲ್ ಪಾಲಿಪ್ಸ್
ಮೂಗಿನ ಪದರದಲ್ಲಿ ಕ್ಯಾನ್ಸರ್ ಅಲ್ಲದೆ ಇರುವ, ಮೃಧುವಾಗಿ ಬೆಳೆದಿರುವುದನ್ನು ಮೂಗಿನ ಸಂಯುಕ್ತಗಳು ಎಂದು ಕರೆಯಲಾಗುವುದು. ಅಸ್ತಮಾ, ಔಷಧಿಯ ಸೂಕ್ಷ್ಮತೆ ಅಥವಾ ಅಲರ್ಜಿಯಿಂದಾಗಿರುವ ಉರಿಯೂತದ ಕಾರಣದಿಂದಾಗಿ ಮೂಗಿನಿಂದ ರಕ್ತ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಶುಷ್ಕ ವಾತಾವರಣವೂ ಕಾರಣ
ಚಳಿಗಾಲ ಅಥವಾ ತಂಪಾಗಿರುವ ವಾತಾವರಣವು ಇದ್ದಾಗ ಈ ರೀತಿ ಆಗಬಹುದು. ಚಳಿ ಹಾಗೂ ಶುಷ್ಕ ಗಾಳಿ ನಿಮ್ಮ ಮೂಗಿನ ಹೊಳ್ಳೆಯ ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಅಲ್ಲದೆ ತುಂಬಾ ಚಳಿಯಲ್ಲಿ ಚಳಿಕಾಯಲು ಬೆಂಕಿ ಹಾಕಿ ಕೂರುವುದು ಅಥವಾ ಹೀಟರ್ ಬಳಸುವುದು ಮಾಡುತ್ತಾರೆ. ಆಗ ಶುಷ್ಕತೆಯಿಂದಾಗಿ ಮೂಗಿನ ಹೊಳ್ಳೆಯ ರಕ್ತ ನಾಳಗಳಿಗೆ ಹಾನಿಯುಂಟಾಗಿ ರಕ್ತ ಸೋರುವುದು. ಕೆಲವೊಂದು ಅಲರ್ಜಿಯಿಂದಾಗಿ ತೀವ್ರ ಜ್ವರ ಅಥವಾ ಅಲರ್ಜಿಯಿಂದ ಮೂಗು ಸೋರುವಿಕೆ ಉಂಟಾಗಬಹುದು. ಇದಕ್ಕೆ ಮುಖ್ಯ ಕಾರಣ ಪರಾಗ. ಮೂಗು ಸೋರುವಿಕೆಯು ಅಲರ್ಜಿ ಅಥವಾ ಅಲರ್ಜಿಯಿಲ್ಲದೆ ಆದರೂ ಮೂಗಿನ ಪದರದ ಮೇಲೆ ಉರಿಯೂತ ಉಂಟಾಗಿ ರಕ್ತಸ್ರಾವವಾಗಬಹುದು.
ಔಷಧಗಳು
ಆಸ್ಪ್ರಿನ್, warfarin ಮುಂತಾದ ಔಷಧಿಗಳು ಕೂಡ ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟು ಮಾಡುತ್ತದೆ. ಇದರ ಜೊತೆಗೆ ಅಧಿಕ ರಕ್ತದೊತ್ತಡ ಇರುವ ಮಂದಿಗೂ ಮೂಗಿನಿಂದ ರಕ್ತ ಬರುವ ಸಾಧ್ಯತೆ ಇರುತ್ತದೆ. ಮೂಗಿನಲ್ಲಿ ಶೀತದ ಗಡ್ಡೆಯಾಗಿದ್ದರೂ ಕೂಡ ಕೆಲವೊಮ್ಮೆ ರಕ್ತ ಬರುವ ಸಾಧ್ಯತೆ ಇರುತ್ತದೆ.
ಮೂಗಿನಲ್ಲಿ ರಕ್ತಸ್ರಾವ ತಡೆಗಟ್ಟುವುದು ಹೇಗೆ?
ಮೂಗಿನಲ್ಲಿ ರಕ್ತಸ್ರಾವವಾಗುವಾಗ ತಲೆಯನ್ನು ಮೇಲಕ್ಕೆ ಎತ್ತಬೇಕು. ಕೆಳಗೆ ನೋಡುವುದರಿಂದ ರಕ್ತಸ್ರಾವ ಹೆಚ್ಚಾಗುತ್ತದೆ. ಈ ವೇಳೆ ಬಾಯಿಯ ಮೂಲಕ ಉಸಿರಾಟ ಮಾಡಬೇಕು. ಅಂಗಾತವಾಗಿ ಮಲಗಿಕೊಂಡು ಮೇಲೆ ನೀಡಬೇಕು. ಇದರಿಂದ ಮೂಗಿನಿಂದ ರಕ್ತಸ್ರಾವ ಕಡಿಮೆಯಾಗುತ್ತದೆ. ಇದಾದ ಬಳಿಕ ವೈದ್ಯರ ಭೇಟಿಯಾಗುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications