Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದಿಂದ ಕರ್ನಾಟಕಕ್ಕೆ ಬರುವ ಸ್ನ್ಯಾಕ್ಸ್‌ಗಳಲ್ಲಿದೆ ಕ್ಯಾನ್ಸರ್ ತರುವ ರಾಸಾಯನಿಕ, ಜಾಗ್ರತೆ
ಜನರ ಆರೋಗ್ಯಕ್ಕಾಗಿ ಆಹಾರದ ಬಗ್ಗೆ ಕರ್ನಾಟಕ ಸರ್ಕಾರ ತುಂಬಾನೇ ಕಾಳಜಿವಹಿಸುತ್ತಿರುವುದು ಸಂತೋಷದ ವಿಷಯ, ಈಗಾಗಲೇ ಆಹಾರಗಳನ್ನು ಬ್ಯಾನ್ ಮಾಡಲಾಗಿದೆ. ಗೋಬಿಗೆ ಹಾನಿಕಾರಕ ಬಣ್ಣ ಹಾಕುವುದು, ಕಬಾಬ್‌ಗೆ ಕಲರ್ ಪುಡಿ ಹಾಕುವುದು ಇವುಗಳನ್ನು ಬ್ಯಾನ್ ಮಾಡಲಾಯ್ತು. ಇತ್ತೀಚೆಗೆ ಬೇಕರಿಗಳಿಗೆ ಕೇಕ್‌ಗೆ ಬಣ್ಣದ ರಾಸಾಯನಿಕ ಬಳಸದಂತೆ ಎಚ್ಚರಿಕೆ ನೀಡಿದೆ.
ಇದೀಗ ಪಕ್ಕದ ರಾಜ್ಯ ಕೇರಳದಿಂದ ಬರುತ್ತಿರುವ ಹಲವಾರು ತಿಂಡಿಗಳನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಬ್ಯಾನ್ ಮಾಡಲಾಗಿದೆ. FSSAI(Food Safety and Standards Authority of India) ಕೇರಳದಲ್ಲಿ ತಯಾರಿಸಿ ಗಡಿ ಭಾಗದ ಕರ್ನಾಟಕದ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಸುಮಾರು 31 ತಿಂಡಿಗಳನ್ನು ಅಸುರಕ್ಷಿತ ಎಂದು ಪಟ್ಟಿ ಮಾಡಿದೆ. ಅದರಲ್ಲಿಯೂ ಕೊಡಗಿನ ಜನತೆ ಹೆಚ್ಚು ಜಾಗ್ರತೆವಹಿಸಬೇಕು.

ಸುಮಾರು 90 ಬಗೆಯ ಸ್ನ್ಯಾಕ್ಸ್ ಪರಿಶೀಲನೆ ಮಾಡಲಾಯ್ತು
ಮಿಕ್ಸರ್, ಚಿಪ್ಸ್, ಹಲ್ವಾ, ಚಕ್ಕೂಲಿ, ಡ್ರೈ ಫ್ರೂಟ್ಸ್ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಪರಿಶೀಲನೆ ಮಾಡಲಾಯ್ತು. ಆಹಾರ ವಸ್ತುಗಳು ಆಕರ್ಷಕವಾಗಿ ಕಾಣಲು ಹಾನಿಕಾರಕ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಕಂಡು ಬರುವ ಬಣ್ಣ, ಕೆಂಪು, Azorubine ಮತ್ತು Tartrazine ಈ ಬಗೆಯ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಗಿದೆ.
ಈ ರಾಸಾಯನಿಕ ಇರುವ ಆಹಾರಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿದೆ. ಹಾಗಾಗಿ ಈ ಆಹಾರಗಳನ್ನು ಕರ್ನಾಟಕಕ್ಕೆ ಬತಂದು ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಕೇರಳದಿಂದ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಈ ಕಡೆಗೆ ಕೇರಳದಿಂದ ಆಹಾರ ಪದಾರ್ಥಗಳು ಬರುತ್ತಿವೆ, FSSAI ಪ್ರಕಾರ ಕೇರಳದಿಂದ ಬರುವ ಆಹಾರಗಳು ಸುರಕ್ಷಿತವಲ್ಲ ಎಂದು ಹೇಳಿದೆ.
ಈ ಕುರಿತು ಗಮನಹರಿಸುವಂತೆ ಕೇರಳ ಸರ್ಕಾರಕ್ಕೆ ಮನವಿ ಮಾಡದ ಕರ್ನಾಟಕ ಸರ್ಕಾರ
ಕೇರಳದಿಂದ ಬರುವ ಆಹಾರ ವಸ್ತುಗಳು ಜನರ ಆರೋಗ್ಯದ ಮೇಲೆ ತುಂಬಾನೇ ದುಷ್ಪಾರಿಣಾಮ ಬೀರುತ್ತಿದೆ, ಈ ರೀತಿ ರಾಸಾಯನಿಕವಿರುವ ಆಹಾರ ವಸ್ತುಗಳನ್ನು ತಯಾರಸಿಉತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಮಂಗಳೂರು ಈ ಭಾಗಗಳಲ್ಲಿ ಕರ್ನಾಟಕದ ಆಹಾರ ಹೆಚ್ಚು ಮಾರಾಟವಾಗುತ್ತಿದೆ.
ಇಂಥ ಆಹಾರಗಳನ್ನು ತಿನ್ನುವುದರಿಂದ ಮಕ್ಕಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತಿದೆ
ಈ ಬಗೆಯ ಆಹಾರ ಸೇಚಿಸುತ್ತಾ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮಕ್ಕಳಲ್ಲಿ ಹೈಪರ್ ಆಕ್ಟಿವ್,ಅಲರ್ಜಿ ಮುಂತಾದ ಸಮಸ್ಯೆ ಕಂಡು ಬರುವುದು. ಈ ಬಗೆಯ ಆಹಾರ ಸೇವಿಸುತ್ತಾ ಇದ್ದರೆ ಕ್ಯಾನ್ಸರ್ ಕೂಡ ಉಂಟಾಗಬಹುದು.
ಆದಷ್ಟು ಮಕ್ಕಳಿಗೆ ಹೊರಗಿನ ಆಹಾರ ತೆಗೆದುಕೊಡಬೇಡಿ
ಬಣ್ಣ-ಬಣ್ಣದ ಆಹಾರಗಳನ್ನು ನೋಡುವಾಗ ಮಕ್ಕಳು ತುಂಬಾನೇ ಇಷ್ಟಪಟ್ಟು ಸೇವಿಸುತ್ತಾರೆ. ಅಲ್ಲದೆ ಅದೇ ಬೇಕೆಂದು ಹಠ ಹಿಡಿಯುತ್ತಾರೆ, ಆದರೆ ಆ ಆಕರ್ಷಕ ಬಣ್ಣದ ಹಿಂದೆ ಕ್ಯಾನ್ಸರ್ ಎಂಬ ಭೂತವಿರುತ್ತದೆ, ಈ ಬಗೆಯ ಆಹಾರಗಳನ್ನು ಮಕ್ಕಳಿಗೆ ನೀಡುವುದು ಕಡಿಮೆ ಮಾಡಬೇಕು.
ಮನೆಯ ಆಹಾರ ಹೆಚ್ಚಾಗಿ ನೀಡಿ
ಮಕ್ಕಳಿಗೆ ಮನೆಯಲ್ಲಿಯೇ ಬಗೆ ಬಗೆಯ ಆಹಾರ ನೀಡಿದರೆ ತುಂಬಾನೇ ಇಷ್ಟಪಡುತ್ತಾರೆ, ಮನೆಯ ಆಹಾರ ಮಾಡಿ ಕೊಡಿ. ಅವರ ಆಹಾರದಲ್ಲಿ ಪೋಷಕಾಂಶವಿದೆಯೇ ಎಂದು ಗಮನಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications