Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅಂತರರಾಷ್ಟ್ರೀಯ ಕ್ಯಾರೆಟ್ ದಿನ: ಹಸಿ ಕ್ಯಾರೆಟ್ ಒಳ್ಳೆಯದಾ? ಬೇಯಿಸಿದ ಕ್ಯಾರೆಟ್ ಒಳ್ಳೆಯದಾ?
ಇಂದು ಅಂತರರಾಷ್ಟ್ರೀಯ ಕ್ಯಾರೆಟ್ ದಿನ. ಕ್ಯಾರೆಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕ್ಯಾರೆಟ್ ಹಸಿ ತಿನ್ನುತ್ತೇವೆ, ಬೇಯಿಸಿ ತಿನ್ನುತ್ತೇವೆ, ಆದರೆ ಕ್ಯಾರೆಟ್ ಹೇಗೆ ತಿಂದರೆ ತುಂಬಾ ಒಳ್ಳೆಯದು ಎಂದು ನೋಡೋಣ ಬನ್ನಿ:
ಕ್ಯಾರೆಟ್ ಬಗ್ಗೆ ಹೇಳುವುದಾದರೆ ಇದು ಪೋಷಕಾಂಶಗಳ ಆಗರ
ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಸಿ ಮತ್ತು ಕೆ, ಕ್ಯಾಲ್ಸಿಯಂ, ಕಬ್ಬಿಣದಂಶ, ಪೊಟಾಷ್ಯಿಯಂ ಹಾಗೂ ನಾರಿನಂಶವಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಇದು ಕಣ್ಣಿನ ದೃಷ್ಟಿಗೆ ತುಂಬಾನೇ ಒಳ್ಳೆಯದು.
ಕೆಲವೊಂದು ತರಕಾರಿಗಳನ್ನು ಹಸಿಯಲ್ಲಿ ತಿಂದರೆ ಒಳ್ಳೆಯದು, ಬೇಯಿಸಿದಾಗ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುವುದು. ಕ್ಯಾರೆಟ್ ಕೂಡ ಬೇಯಿಸಿದಾಗ ಅದರಲ್ಲಿ ಪೋಷಕಾಂಶಗಳು ಕಡಿಮೆಯಾಗುವುದೇ ಎಂದು ನೋಡೋಣ ಬನ್ನಿ:
ಕ್ಯಾರೆಟ್ ಬೇಯಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುವುದೇ?
ಕ್ಯಾರೆಟ್ ಅನ್ನು ಬೇಯಿಸುವಾಗ ನಾವು ತರಕಾರಿಯನ್ನು ಕತ್ತರಿಸಿ ಬೇಯಿಸುತ್ತೇವೆ, ಕ್ಯಾರೆಟ್ ಕೂಡ ಕತ್ತರಿಸಿ ಬೇಯಿಸುತ್ತೇವೆ. ಇದರಿಂದ ಇದರಲ್ಲಿರುವ ಪೋಷಕಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ಕ್ಯಾರೆಟ್ ಅನ್ನು ಬೇಯಿಸಿದಾಗ ಅಥವಾ ಸ್ಟೀಮ್ ಮಾಡಿದಾಗ ಕ್ಯಾರೊಟೊನೈಯ್ಡ್ ಎಂಬ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಕ್ಯಾರೆಟ್ ಅನ್ನು ಬೇಯಿಸಿದಾಗ ದೇಹವು ಬೀಟಾ ಕೆರೊಟಿನ್ ಅನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ, ಹಸಿ ಕ್ಯಾರೆಟ್‌ನಲ್ಲಿ ಬೀಟಾ ಕೆರೊಟಿನ್‌ಗಿಂತ ಬೇಯಿಸಿದ ಕ್ಯಾರೆಟ್‌ನಲ್ಲಿರುವ ಬೀಟಾ ಕೆರೊಟಿನ್ ಅನ್ನು ನಮ್ಮ ದೇಹವು ಚೆನ್ನಾಗಿ ಹೀರಿಕೊಳ್ಳುತ್ತದೆ.
ಕಣ್ಣಿನ ಆರೋಗ್ಯಕ್ಕೆ ತಿನ್ನುವುದಾದರೆ ಹಸಿಯೇ ತಿನ್ನಿ
ನೀವು ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ತಿನ್ನುವುದಾದರೆ ನೀವು ಬೇಯಿಸಿದ ಕ್ಯಾರೆಟ್ ಬದಲಿಗೆ ಹಸಿ ಕ್ಯಾರೆಟ್ ತಿನ್ನುವುದು ಒಳ್ಳೆಯದು. ಏಕೆಂದರೆ ಕ್ಯಾರೆಟ್ ಅನ್ನು ಬೇಯಿಸಿದಾಗ ವಿಟಮಿನ್ ಎ, ಸಿ ಕಡಿಮೆಯಾಗುವುದು. ಆದ್ದರಿಂದ ನೀವು ಕಣ್ಣಿನ ಆರೋಗ್ಯಕ್ಕಾಗಿ ಕ್ಯಾರೆಟ್ ಸೇವಿಸುವುದಾದರೆ ಹಸಿಯೇ ತಿನ್ನಿ.
ಕ್ಯಾರೆಟ್ ಹೀಗೆ ಬಳಸಿದರೆ ಒಳ್ಳೆಯದು?
ನಿಮಗೆ ಕ್ಯಾರೆಟ್ ನ ಸಂಪೂರ್ಣ ಪ್ರಯೋಜನ ದೊರೆಯಲು ಬೇಯಿಸಿದ ಹಾಗೂ ಹಸಿ ಕ್ಯಾರೆಟ್ ಮಿಕ್ಸ್ ಬಳಸಬಹುದು. ಸಾರು, ಪಲ್ಯದಲ್ಲಿ ಬಳಸಿದಾಗ ಬೇಯಿಸಿದ ಕ್ಯಾರೆಟ್ ದೇಹವನ್ನು ಸೇರುತ್ತದೆ, ಸಲಾಡ್‌ನಲ್ಲಿ ಹಸಿ ಕ್ಯಾರೆಟ್ ಸೇರಿಸಿ. ಇದರಿಂದ ಬೇಯಿಸಿದಾಗ ಸಿಗುವ ಪ್ರಯೋಜನ ಹಾಗೂ ಹಸಿ ತಿಂದಾಗ ಸಿಗುವ ಪ್ರಯೋಜನ ಸಿಗುವುದು.ಈ ಬಗೆಯ ಆರೋಗ್ಯ ಸಮಸ್ಯೆಯಿದ್ದರೆ
ಹಾರ್ಮೋನ್ ಸಮಸ್ಯೆಯಿದ್ದರೆ
ಹಾರ್ಮೋನ್‌ಗಳ ಅಸಮತೋಲನವಿದ್ದರೆ ಹಸಿ ಕ್ಯಾರೆಟ್ ತಿನ್ನುವುದು ಒಳ್ಳೆಯದು. ಹಸಿ ಕ್ಯಾರೆಟ್ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟಿರಿಯಾ ಕಡಿಮೆ ಮಾಡಲು ಸಹಕಾರಿ. ಇದಇಂದ ಮೊಡವೆ, ಪಿಎಂಎಸ್, ಮೂಡ್ ಸ್ವಿಂಗ್ ಈ ಬಗೆಯ ಸಮಸ್ಯೆ ತಡೆಗಟ್ಟಲು ಕೂಡ ಸಹಕಾರಿ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ
ಹಸಿ ಕ್ಯಾರೆಟ್ ಪ್ರತಿದಿನ ತಿನ್ನುತ್ತಿದ್ದರೆ ಕ್ಯಾರೆಟ್ ದೇಹವನ್ನು ಡಿಟಾಕ್ಸ್ ಮಾಡುವುದು ಅಂದರೆ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ.
ಅತ್ಯಧಿಕ ಈಸ್ಟ್ರೋಜನ್ ಇದ್ದರೆ ಕಡಿಮೆ ಮಾಡುತ್ತದೆ
ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗಿದ್ದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು. ಹಸಿ ಕ್ಯಾರೆಟ್ ತಿನ್ನುವುದರಿಂದ ಅತ್ಯಧಿಕ ಈಸ್ಟ್ರೋಜನ್ ಕಡಿಮೆ ಮಾಡುತ್ತದೆ, ಇದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು.
ತ್ವಚೆಯ ಹೊಳಪು ಹೆಚ್ಚುವುದು
ಕ್ಯಾರೆಟ್‌ನಲ್ಲಿ ವಿಟಮಿಬ್ ಎ ಮತ್ತು ಬೀಟಾ ಕೆರೋಟಿನ್ ಇದೆ, ಇದರಿಂದ ತ್ವಚೆ ಹೊಳಪು ಹೆಚ್ಚಾಗುವುದು.
ಕ್ಯಾರೆಟ್ ಅಡ್ಡಪರಿಣಾಮಗಳು
* ಅಲರ್ಜಿ
ಕೆಲವರಿಗೆ ಕ್ಯಾರೆಟ್ ತಿಂದಾಗ ಅಲರ್ಜಿ ಉಂಟಾಗುವುದು, ನಿಮಗೆ ಕ್ಯಾರೆಟ್‌ನಿಂದ ಅಲರ್ಜಿ ಉಂಟಾಗುತ್ತಿದ್ದರೆ ತಿನ್ನಬೇಡಿ.
ಕ್ಯಾರೆಟ್ ತಿಂದಾಗ ಅಲರ್ಜಿ ಉಂಟಾಗುತ್ತದೆ ಎಂದು ತಿಳಿಯುವುದು ಹೇಗೆ?
ಕ್ಯಾರೆಟ್ ತಿಂದಾಗ ತ್ವಚೆಯಲ್ಲಿ ಗುಳ್ಳೆಗಳು ಏಳುವುದು, ಬೇಧಿ ಉಂಟಾಗಬಹುದು, ತುರಿಕೆ, ಊತ ಈ ಬಗೆಯ ಸಮಸ್ಯೆ ಕಂಡು ಬರುವುದು.
ಮಧುಮೇಹಿಗಳಿಗೆ ಒಳ್ಳೆಯದಲ್ಲ
ಮಧುಮೇಹಿಗಳು ಕ್ಯಾರೆಟ್ ತಿಂದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆದ್ದರಿಂದ ಮಧುಮೇಹಿಗಳು ಕ್ಯಾರೆಟ್ ತಿನ್ನಬೇಡಿ, ತಿನ್ನವುದಾದರೆ ಹಬೆಯಲ್ಲಿ ಬೇಯಿಸಿದ ಕ್ಯಾರೆಟ್ ಅಲ್ಪ ಪ್ರಮಾಣದಲ್ಲಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
