Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಉಪ್ಪು ಜಾಸ್ತಿಯಾದರೆ ಮಾತ್ರವಲ್ಲ ಉಪ್ಪಿನಂಶ ಕಡಿಮೆಯಾದರೂ ಈ ಅಪಾಯಗಳಿವೆ
ವಯಸ್ಸಾಗುತ್ತಿದ್ದಂತೆ ಕೆಲವರಿಗೆ ಸೋಡಿಯಂ ಕೊರತೆ ಉಂಟಾಗುವುದು, ದೇಹದಲ್ಲಿ ಸೋಡಿಯಂ ಕೊರತೆ ಉಂಟಾದರೆ ಅನೇಕ ಬಗೆಯ ಸಮಸ್ಯೆ ಉಂಟಾಗುವುದು. ಇದರಿಂದ ಹೃದಯ ಸಂಬಂಧಿತ ಕಾಯಿಲೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಮತ್ತಿತರ ಅಪಾಯಗಳಿವೆ.
ಅತಿ ಹೆಚ್ಚಿನ ಸೋಡಿಯಂ ಸೇವನೆ ದೇಹಕ್ಕೆ ಅಪಾಯಕಾರಿ, ಅದೇ ರೀತಿ ದೇಹದಲ್ಲಿ ಸೋಡಿಯಂ ಕಡಿಮೆಯಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ, ದೇಹದಲ್ಲಿ ಸೋಡಿಯಂ ಕಡಿಮೆಯಾದರೆ ಈ ಬಗೆಯ ಅಪಾಯಗಳು ಹೆಚ್ಚಾಗುವುದು:

ಮಧುಮೇಹದ ಅಪಾಯ ಹೆಚ್ಚಿ
ಉಪ್ಪಿನಂಶ ತುಂಬಾ ಕಡಿಮೆಯಾದರೆ ಕೂಡ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು, ಯಾರು ಪ್ರತಿದಿನ 0.92 ಗ್ರಾಂ ಉಪ್ಪಿನಂಶಕ್ಕಿಂತ ಕಡಿಮೆ ಸೇವನೆ ಮಾಡಿದರೆ ಮಧುಮೇಹ, ಹೃದಯಾಘಾತದ ಅಪಾಯ ಹೆಚ್ಚು. ದೇಹದಲ್ಲಿ ಉಪ್ಪಿನಂಶ ಕಡಿಮೆಯಾದಾಗ ವಾಂತಿ, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ಒಂದು ರೀತಿಯ ಗೊಂದಲ, ಪಿಡ್ಸ್ , ಕೆಲವರು ಕೋಮಾಗೆ ಜಾರಿ ಸಾವು ಕೂಡ ಸಂಭವಿಸಬಹುದು.
ಸೋಡಿಯಂ ಕಡಿಮೆಯಾದರೆ ಹೃದಯಕ್ಕೆ ಒಳ್ಳೆಯದಲ್ಲ
ಹೇಗೆ ಸೋಡಿಯಂ ಹೆಚ್ಚಾದರೆ ಹೃದಯಕ್ಕೆ ಒಳ್ಳೆಯದಲ್ಲವೋ ಅದೇ ರೀತಿ ಸೋಡಿಯಂ ಕಡಿಮೆಯಾದರೂ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾರು ಪ್ರತಿದಿನ 3000 ಮಿಗ್ರಾಂಗಿಂತ ಕಡಿಮೆ ಉಪ್ಪಿನಂಶ ಸೇವಿಸುತ್ತಾರೋ ಅವರಿಗೆ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚು.
ಹೃದಯ ವೈಫಲ್ಯ ಉಂಟಾಗುವುದು
ಹೃದಯಾಘಾತ ತಕ್ಷಣ ಆದರೆ ಹೃದಯ ವೈಫಲ್ಯ ನಿಧಾನಕ್ಕೆ ಹೃದಯ ತನ್ನ ಕಾರ್ಯವನ್ನ ನಿರ್ವಹಿಸಲು ಅಸಮರ್ಥವಾಗುವುದು. ದೇಹದಲ್ಲಿ ಸೋಡಿಯಂ ಕಡಿಮೆಯಾದರೆ ದೇಹದ ಇತರ ಭಾಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ, ಅಲ್ಲದೆ ದೇಹದಲ್ಲು ಆಕ್ಸಿಜನ್ ಪ್ರಮಾಣ ಕಡಿಮೆಯಾಗುವುದು.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು
ಕಡಿಮೆ ಪ್ರಮಾಣದ ಉಪ್ಪಿನಂಶದ ಆಹಾರ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಇದರಿಂದ ದೇಹದಲ್ಲಿ ಟ್ರಗ್ಲಿಸಿರಾಯ್ಡ್ ಪ್ರಮಾಣ ಹೆಚ್ಚಾಗುವುದು.
ಮಧುಮೇಹದಿಂದ ಅಪಾಯ ಹೆಚ್ಚಾಗುವುದು
ಸೋಡಿಯಂ ಪ್ರಮಾಣ ಕಡಿಮೆಯಾಗಿ ಹೃದಯಾಘಾತ, ಮಧುಮೇಹ ಪಾರ್ಶ್ವವಾಯು ಅಪಾಯ ಹೆಚ್ಚಾಗುವುದರಿಂದ ಸಾವಿನ ಅಪಾಯ ಕೂಡ ಹೆಚ್ಚು, ಹೀಗಾಗಿ ನೀವು ಉಪ್ಪಿನಂಶ ಸೇವಿಸದೇ ಇರಬೇಡಿ, ಮಿತಿಯಲ್ಲಿ ಸೇವಿಸಿ.
ಯಾವ ಬಗೆಯ ಆಹಾರ ಒಳ್ಳೆಯದು
ನಟ್ಸ್, ಬೀಜಗಳು, ಪೀನಟ್ ಬಟರ್
ಈ ಬಗೆಯ ಆಹಾರ ಸೇವಿಸಿ, ದಿನಾ ಒಂದು ಮುಷ್ಠಿ ನಟ್ಸ್ ಸೇವನೆ ಮಾಡಿ, ಹೀಗೆ ಮಾಡುವುದರಿಂದ ದೇಹಕ್ಕೆ ಅವಶ್ಯಕವಾದ ಸೋಡಿಯಂ ದೊರೆಯುವುದು.
ಹುದುಗು ಬರಿಸಿದ ಆಹಾರ
ಹುದುಗು ಬರಿಸಿದ ಆಹಾರದಲ್ಲಿ ಸೋಡಿಯಂ ಇರುತ್ತದೆ, ಅಲ್ಲದೆ ಈ ಬಗೆಯ ಆಹಾರ ಆರೋಗ್ಯಕ್ಕೆ ಅದರಲ್ಲೂ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಆಲೀವ್
ಪ್ರತಿದಿನ ಆಲೀವ್ ಸೇವಿಸಿ, ಆದ್ದರಿಂದ ಪ್ರತಿದಿನ ಸ್ವಲ್ಪ ಆಲೀವ್ ಸೇವನೆ ತುಂಬಾನೇ ಒಳ್ಳೆಯದು.
ಕಾಟೇಜ್ ಚೀಸ್
ಕಾಟೇಜ್ ಚೀಸ್‌ನಲ್ಲಿ ಕೂಡ ಸೋಡಿಯಂ ಇದೆ, ಆದ್ದರಿಂದ ದೇಹದಲ್ಲಿ ಸೋಡಿಯಂ ಕಡಿಮೆಯಾಗದಂತೆ ತಡೆಗಟ್ಟಲು ಕಾಟೇಜ್ ಚೀಸ್ ಕೂಡ ಒಳ್ಳೆಯದು.
ಲಕ್ಷಣಗಳು
ದೇಹದಲ್ಲಿ ಸೋಡಿಯಂ ಕಡಿಮೆಯಾದರೆ ಕಂಡು ಬರುವ ಲಕ್ಷಣಗಳು
- ವಾಂತಿ
- ತಲೆನೋವು
- ಸ್ನಾಯು ಸೆಳೆತ'
- ತಲೆಸುತ್ತು
- ಹೊಟ್ಟೆ ಹಸಿವು ಇಲ್ಲದಿರುವುದು
- ಕೋಪ ಹೆಚ್ಚಾಗುವುದು
- ಸೋಡಿಯಂ ತುಂಬಾನೇ ಕಡಿಮೆಯಾದರೆ
- ಮಾನಸಿಕ ಅಸ್ವಸ್ಥತೆ
- ಒಂದು ಬಗೆಯ ಗೊಂದಲ
- ಪಿಡ್ಸ್
- ಕೋಮಾಗೆ ಜಾರುವುದು
ಆದ್ದರಿಂದ ಉಪ್ಪಿನಂಶ ಒಳ್ಳೆಯದಲ್ಲ ಎಂದು ಕೆಲವರು ಉಪ್ಪಿನಂಶ ತುಂಬಾನೇ ಕಡಿಮೆ ಮಾಡುತ್ತಾರೆ, ಆದರೆ ನಮ್ಮ ಆರೋಗ್ಯಕ್ಕೆ ಉಪ್ಪಿನಂಶ ಹೆಚ್ಚಾದರೂ ಒಳ್ಳೆಯದಲ್ಲ, ಕಡಿಮೆಯಾದರೂ ಒಳ್ಳೆಯದಲ್ಲ, ಆದ್ದರಿಂದ ಉಪ್ಪಿನಂಶ ಮಿತಿಯಲ್ಲಿ ಸೇವಿಸಿ. ದೇಹದಲ್ಲಿ ಸೋಡಿಯಂ ಹೆಚ್ಚಾಗಲು ಆರೋಗ್ಯಕರ ಆಹಾರ ಸೇವಿಸಿ, ಕೆಲವು ಜಂಕ್ ಹಾಗೂ ಸಂಸ್ಕರಿಸಿದ ಆಹಾರದಲ್ಲಿ ಉಪ್ಪಿನಂಶ ಅಧಿಕವಿರುತ್ತದೆ, ಆದರೆ ಇಮಥ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
