For Quick Alerts
ALLOW NOTIFICATIONS  
For Daily Alerts

Yearender 2022: 2022ರಲ್ಲಿ ಟಾಪ್‌ 10 ಸರ್ಚ್‌ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ

|

ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ತುಂಬಾನೇ ಮಹತ್ವವಿದೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಆಯುರ್ವೇದ ಮದ್ದುಗಳನ್ನು ಬಳಸುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗೆ ಆಯುರ್ವೇದ ಮದ್ದು ಏನಿದೆ ಎಂದು ತಿಳಿಯ ಬಯಸುತ್ತೇವೆ. 2022ರಲ್ಲಿ ಜನರು ಈ 10 ಆಯುರ್ವೇದ ಹರ್ಬ್ಸ್‌ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ತೋರಿದ್ದಾರೆ.

1. ಚಕ್ಕೆ

1. ಚಕ್ಕೆ

ಚಕ್ಕೆ ಬಗ್ಗೆ ಗೂಗಲ್‌ ಬಗ್ಗೆ ತುಂಬಾನೇ ಸರ್ಚ್‌ ಮಾಡಲಾಗಿದೆ. ಚಕ್ಕೆಯನ್ನು ತೂಕ ಇಳಿಕೆಗೆ ಬಳಸಬಹುದು. ಬೆಳಗ್ಗೆ ಎದ್ದು ಬಿಸಿ ನೀರಿಗೆ ಸ್ವಲ್ಪ ಚಕ್ಕೆ ಹಾಕಿ ಕುಡಿದರೆ ಬೇಗನೆ ತೂಕ ಇಳಿಕೆಯಾಗುವುದು. ಆದರೆ ಇದನ್ನು ಮಿತಿಯಲ್ಲಿ ಕುಡಿಯಬೇಕು. ಚಕ್ಕೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.

2. ಕಹಿಬೇವು

2. ಕಹಿಬೇವು

ಅನೇಕ ಸಮಸ್ಯೆಗಳಿಗೆ ಕಹಿಬೇವನ್ನು ಮನೆಮದ್ದಾಗಿ ಬಳಸಲಾಗುವುದು. ಇವುಗಳನ್ನು ತಿಂದರೂ ಒಳ್ಳೆಯದು, ತ್ವಚೆ ಅಲರ್ಜಿ ಹೋಗಲಾಡಿಸಲು ಬಳಸಲಾಗುವುದು. ಸ್ನಾನದ ನೀರಿಗೆ ಸ್ವಲ್ಪ ಕಹಿಬೇವು ಹಾಕಿ ಸ್ನಾನ ಮಾಡಿದರೆ ಬ್ಯಾಕ್ಟಿರಿಯಾಗಳನ್ನು ಹೋಗಲಾಡಿಸಬಹುದು. ದಿನಾ ಎರಡು ಎಲೆ ತಿಂದರೆ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

3. ಗ್ರೀನ್‌ ಟೀ ಎಲೆ

3. ಗ್ರೀನ್‌ ಟೀ ಎಲೆ

ಗ್ರೀನ್‌ ಟೀಯನ್ನು ತೂಕ ಇಳಿಕೆಗೆ ಹಾಗೂ ಸೌಂದರ್ಯವರ್ಧನೆಗೆ ಬಳಸಬಹುದು. ವ್ಯಾಯಾಮದ ಜೊತೆಗೆ ದಿನಾ ಒಂದು ಲೋಟ ಗ್ರೀನ್‌ ಟೀ ಕುಡಿಯುವುದರಿಂದ ಮೈ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇನ್ನು ಇದರ ಎಲೆ ಹಾಕಿ ಕುದಿಸಿ ಆ ನೀರು ತಣ್ಣಗಾದ ಮೇಲೆ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು. ಆ ನೀರನ್ನು ಕೂದಲಿಗೆ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು.

4. ಅರಿಶಿಣ:

4. ಅರಿಶಿಣ:

ಅರಿಶಿಣವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಅರಿಶಿಣ ಬಳಸುವುದರಿಂದ ಕ್ಯಾನ್ಸರ್‌ ತಡೆಗಟ್ಟಬಹುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲರ್ಜಿ ಸಮಸ್ಯೆ ತಡೆಗಟ್ಟುತ್ತದೆ, ಗಾಯವನ್ನುಬೇಗನೆ ಒಣಗಿಸಲು ಸಹಕಾರಿ.

 5. ಸೋಂಪು

5. ಸೋಂಪು

ಊಟದ ಬಳಿಕ ಸ್ವಲ್ಪ ಸೋಂಪು ತಿಂದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ಬಾಯಿಯ ದುರ್ವಾಸನೆ ತಡೆಗಟ್ಟಲು ತುಂಬಾನೇ ಸಹಕಾರಿ. ದೇಹದ ಉಷ್ಣಾಂಶ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

6. ಅಮೃತಬಳ್ಳಿ

6. ಅಮೃತಬಳ್ಳಿ

ಅಮೃತಬಳ್ಳಿಯಿಂದ ಅನೇಕ ಆರೋಗ್ಯ ಸಮಸ್ಯೆ ಬಗೆಹರಿಸಬಹುದು. ಇದನ್ನು ಬಳಸಿ ಮಧುಮೇಹ ನಿಯಂತ್ರಣದಲ್ಲಿಡಬಹುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಕೆಮ್ಮು-ಶೀತ ಹೋಗಲಾಡಿಸಲು ಅತ್ಯುತ್ತಮವಾದ ಮನೆಮದ್ದು. ಅಮೃತಬಳ್ಳಿ ಬಳಸುವ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆದ ಬಳಿಕ ಮಾಡಿ.

7. ಕ್ಯಾಮೊಮೈಲ್

7. ಕ್ಯಾಮೊಮೈಲ್

ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿದೆ. ಇದನ್ನು ಬಳಸಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

8. ತುಳಸಿ

8. ತುಳಸಿ

ತುಳಸಿಯನ್ನು ಕೂಡ ಮನೆಮದ್ದಾಗಿ ಬಳಸಬಹುದು. ಇದನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಕುಡಿಯುವ ನೀರಿಗೆ 2 ಎಲೆ ತುಳಸಿ ಹಾಕಿ ಕುದಿಸಿ ಆ ನೀರು ಕುಡಿಯಿರಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

9. ಜೇನು

9. ಜೇನು

ಜೇನನ್ನು ಕೂಡ ಅನೇಕ ರೀತಿಯಲ್ಲಿ ಮನೆಮದ್ದಾಗಿ ಬಳಸಲಾಗುವುದು. ಜೇನನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಮೈ ಬೊಜ್ಜು ಕರಗುವುದು. ಜೇನನ್ನು ಕೆಮ್ಮು-ಶೀತ ಹೋಗಲಾಡಿಸಲು ಮನೆಮದ್ದಾಗಿ ಕೂಡ ಬಳಸಬಹುದು.

10. ನುಗ್ಗೆಸೊಪ್ಪು

10. ನುಗ್ಗೆಸೊಪ್ಪು

ನುಗ್ಗೆಸೊಪ್ಪಿನಲ್ಲಿ ಹತ್ತಾರು ಔ‍ಷಧೀಯ ಗುಣವಿದೆ. ನುಗ್ಗೆ ಸೊಪ್ಪು ಅಧಿಕ ರಕ್ತದೊತ್ತಡ ನಿಯಂತ್ರಿಸಲು ತುಂಬಾನೇ ಸಹಕಾರಿ. ಇದರ ಸೊಪ್ಪಿನ ಟೀ ತೂಕ ಇಳಿಕೆಗೆ ಒಳ್ಳೆಯದು,

English summary

Yearender 2022: 10 Most Searched Ayurvedic Herbs of The Year

Yearender 2022: Here are the list of top 10 Ayurvedic Herbs, read on list...
X
Desktop Bottom Promotion