Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಬೇಸರವೇ, ಖಿನ್ನತೆಯೇ, ತಿಳಿಯುವುದು ಹೇಗೆ? ಖಿನ್ನತೆ ಮಾತ್ರ ನಿರ್ಲಕ್ಷ್ಯ ಮಾಡಲೇಬೇಡಿ
ಮನಸ್ಸಿಗೆ ಬೇಸರ, ಯಾವುದಕ್ಕೂ ಆಸಕ್ತಿಯಿಲ್ಲ , ಯಾರ ಜೊತೆ ಬೆರೆಯಬೇಕೆಂದು ಅನಿಸುತ್ತಿಲ್ಲ, ಒಂಟಿಯಾಗಿ ಇದ್ದು ಬಿಡುವ ಅನಿಸುತ್ತೆ, ಹಾಗಾದರೆ ಈ ರೀತಿಯೆಲ್ಲಾ ಅನಿಸುತ್ತಿರುವುದು ಖಿನ್ನತೆಯ ಲಕ್ಷಣವೇ? ಅಥವಾ ಬೇಸರವೇ ಮತ್ತೆ ಹಚ್ಚುವುದು ಹೇಗೆ ಎಂದು ನೋಡೋಣ ಬನ್ನಿ?

ಬೇಸರ
ಮನಸ್ಸಿಗೆ ಬೇಸರ ಹಲವು ಕಾರಣಗಳಿಂದ ಉಂಟಾಗಬಹುದು. ನಾವು ಅಂದುಕೊಂಡಿದ್ದು ನಡೆಯದೇ ಇದ್ದಾಗ ಅಥವಾ ನಮ್ಮ ಆಪ್ತರು ನಮ್ಮನ್ನು ಬಿಟ್ಟು ಹೋದಾಗ (ದೈಹಿಕವಾಗಿ, ಮಾನಸಿಕವಾಗಿ), ಆರ್ಥಿಕ ಸಮಸ್ಯೆ, ಕುಟುಂಬದಲ್ಲಿ ತೊಂದರೆ ಈ ಎಲ್ಲಾ ಕಾರಣಗಳಿಂದ ಬೇಸರ ಉಂಟಾಗುವುದು. ಮನಸ್ಸಿಗೆ ಬೇಸರವಾದಾಗ ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಅನಿಸುವುದು.
ಮನಸ್ಸಿಗೆ ಬೇಸರವಾದಾಗ ಈ ಬಗೆಯ ಲಕ್ಷಣಗಳು ಕಂಡು ಬರುವುದು
* ಚಿಂತೆಯಾಗುವುದು
* ದುಃಖವಾಗುವುದು
* ಸುಸ್ತು ಅನಿಸುವುದು
* ಬೇಗನೆ ಕೋಪ ಬರುತ್ತದೆ
* ಒಂಥರಾ ಫ್ರಸ್ಟ್ರೇಷನ್ ಉಂಟಾಗುವುದು
* ಆತ್ಮ ವಿಶ್ವಾಸ ಕಡಿಮೆಯಾಗುವುದು
* ಮಾನಸಿಕ ಒತ್ತಡ ಅಧಿಕವಾಗುವುದು.
ಈ ಬಗೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಚಿಕ್ಕ ಕಾರಣಕ್ಕೆ ತುಂಬಾ ಸಮಯ ಬೇಸರ ಪಟ್ಟರೆ, ಇನ್ನು ಕೆಲವರು ಆ ಬೇಸರದಿಂದ ಬೇಗನೆ ಹೊರಬರಬಹುದು.
ಬೇಸರವಾಗಿದೆ ಎಂದಾಗ ಅದು ಶಾಶ್ವತವಲ್ಲ, ಅದರಿಂದ ಹೊರಬಂದೇ ಬರುತ್ತೇವೆ. ಜೋರಾಗಿ ಅತ್ತು ಬಿಟ್ಟರೆ ನಮ್ಮ ಮನಸ್ಸಿನ ನೋವು ಕಡಿಮೆಯಾಗುವುದು. ಇನ್ನು ನಮ್ಮ ಮನಸ್ಸಿಗೆ ಬೇಸರವಾದಾಗ ನಮ್ಮ ಆಪ್ತರಿಗೆ ನಮ್ಮ ಬೇಸರಕ್ಕೆ ಕಾರಣವೇನು ಎಂಬುವುದು ಕೂಡ ಗೊತ್ತಿರುತ್ತದೆ. ಅವರಿಂದ ಸಾಂತ್ವಾನ ಮಾತುಗಳು ಬಂದಾಗ ಮನಸ್ಸಿಗೆ ಸ್ವಲ್ಪ ಸಮಧಾನ ಅನಿಸುವುದು.
ಮನುಷ್ಯ ತುಂಬಾ ದುಃಖದಲ್ಲಿದ್ದಾಗ ಅವನಿಗೆ ಯಾವ ವಿಷಯಗಳಲ್ಲೂ ಹೆಚ್ಚು ಆಸಕ್ತಿ ಇರಲ್ಲ, ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಕಡೆ ಗಮನ ನೀಡುವುದಿಲ್ಲ. ಅವರನ್ನು ನೋಡಿದಾಗ ಅವರ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂದನಿಸಲಾರಂಭಿಸುವುದು.
ಖಿನ್ನತೆ ಎಂದರೇನು?
ವ್ಯಕ್ತಿಗೆ ಖಿನ್ನತೆವಿದ್ದಾಗ ಎಷ್ಟೋ ಬಾರಿ ಅವರ ಜೊತೆಗಿದ್ದವರಿಗೇ ತಿಳಿಯುವುದಿಲ್ಲ, ತಮ್ಮ ಪಾಡಿಗೆ ತಾವು ಇರುತ್ತಾರೆ, ನಗುತ್ತಾರೆ, ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ, ಅವರಲ್ಲಿ ಖಿನ್ನತೆಯ ಸುಳಿವು ಎಷ್ಟೋ ಬಾರಿ ಸಿಗುವುದೇ ಇಲ್ಲ, ಈ ಕಾರಣಕ್ಕೆ ಖಿನ್ನತೆ ಇರುವವರು ಸೂಕ್ತ ಚಿಕಿತ್ಸೆ ಪಡೆಯದೆ ತಮ್ಮ ಬದುಕಿಗೆ ಅಂತ್ಯವಾಡುತ್ತಾರೆ. ಮನೆಯವರಿಗೆ ಚಿಕ್ಕ ಕ್ಲೂ ಸಿಕ್ಕರೆ ಖಿನ್ನತೆಗೆ ಚಿಕಿತ್ಸೆ ಕೊಡಿಸಬಹುದು ಆದರೆ ಎಷ್ಟೋ ಬಾರಿ ಗೊತ್ತೇ ಆಗುವುದಿಲ್ಲ.
ಖಿನ್ನತೆ ಉಂಟಾದಾಗ ಈ ಬಗೆಯ ಲಕ್ಷಣಗಳು ಕಂಡು ಬರುವುದು
* ಮನಸ್ಸಿಗೆ ಒಂಥರಾ ಬೇಸರ
* ಯಾವುದೇ ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು
* ಅತಿಯಾದ ನಿದ್ದೆ ಅಥವಾ ಅತೀ ಕಡಿಮೆ ನಿದ್ದೆ
* ಯಾವುದೇ ಭರವಸೆ ಇಲ್ಲದಿರುವುದು
* ಒತ್ತಡ, ಕೋಪ, ಮನಸ್ಸಿಗೆ ತುಂಬಾ ಕಿರಿಕಿರಿ ಅನಿಸುವುದು
* ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಅನಿಸುವುದು
* ಹಸಿವು ಕಡಿಮೆಯಾಗುವುದು
* ಆತ್ಮಹತ್ಯೆಯ ಆಲೋಚನೆ ಬರುವುದು
ಖಿನ್ನತೆ ಬಂದರೆ ಅದು ತುಂಬಾ ಸಮಯದವರೆಗೆ ಕಾಡಬಹುದು, ಕೆಲವರಿಗೆ ವಾರಗಟ್ಟಲೆ ಇದ್ದರೆ ಇನ್ನು ಕೆಲವರಿಗೆ ವರ್ಷಗಟ್ಟಲೆ ಇರುತ್ತದೆ. ಖಿನ್ನತೆ ಇದೆ ಎಂದು ಅನಿಸಿದಾಗ ಅಥವಾ ಜೊತೆಯಲ್ಲೇ ಇದ್ದವರಿಗೆ ಈ ವ್ಯಕ್ತಿಗೆ ಖಿನ್ನತೆ ಇದೆ ಎಂದು ಅನಿಸಿದಾಗ ಸೂಕ್ತ ಚಿಕಿತ್ಸೆ ಕೊಡಿಸಿದರೆ ಖಿನ್ನತೆ ಕಡಿಮೆಯಾಗುವುದು, ಚಿಕಿತ್ಸೆ ಕೊಡಿಸದೇ ಹೋದರೆ ಅವರ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು.
ಬೇಸರಕ್ಕಿಂತ ಖಿನ್ನತೆ ತುಂಬಾನೇ ಅಪಾಯಕಾರಿ. ಕೆಲವರಿಗೆ ಖಿನ್ನತೆಗೆ ಕಾರಣವೇನು ಎಂಬುವುದು ಕೂಡ ತಿಳಿದಿರುವುದಿಲ್ಲ. ಚೆನ್ನಾಗಿಯೇ ಇರುತ್ತಾರೆ, ಆದರೆ ಯಾವುದೋ ಕಾರಣಕ್ಕೆ ಖಿನ್ನತೆ ಅವರನ್ನು ಆವರಿಸಿರುತ್ತದೆ. ಆದ್ದರಿಂದ ಖಿನ್ನತೆಯನ್ನುನ ನಿರ್ಲಕ್ಷ್ಯ ಮಾಡಲೇಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
