Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಭಾರತದಲ್ಲಿ ಪತ್ತೆಯಾದ ಕಪ್ಪಾ ವೈರಸ್: ಇದರ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು
ಉತ್ತರ ಪ್ರದೇಶದಲ್ಲಿ 2 ಕಪ್ಪಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್‌ನಲ್ಲಿ 109 ಜನರ ಸ್ಯಾಂಪಲ್ ತೆಗೆಯಲಾಗಿತ್ತು, ಅದರಲ್ಲಿ 107 ಜನರಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಕಂಡು ಬಂದಿದೆ, ಎರಡು ಕಪ್ಪಾ ರೂಪಾಂತರ ವೈರಸ್ ಕೇಸ್ ಕೂಡ ಪತ್ತೆಯಾಗಿದೆ. ಅದರಲ್ಲಿ 66 ವರ್ಷದ ಸಂತ ಕಬೀರ್ ನಗರದ ವ್ಯಕ್ತಿ ಈ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯ ಜೂನ್ ಡೇಟಾ ಪ್ರಕಾರ 3,969 ಆಲ್ಫಾ, 149 ಬೇಟಾ, 1 ಗಾಮಾ, 16, 238 ಡೆಲ್ಟಾ ಮತ್ತು ಕಪ್ಪಾ ರೂಪಾಂತರ ವೈರಸ್ ಕಂಡು ಬಂದಿದೆ. B.1.617 ತಳಿ ಮೊದಲಿಗೆ ಮಹಾರಾಷ್ಟ್ರದಲ್ಲಿ ಕಂಡು ಬಂತು. ಆದರೆ ಅದು ಕಪ್ಪಾ ಅಥವಾ ಡೆಲ್ಟಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಪ್ಪಾ ರೂಪಾಂತರ ಎಂದರೇನು? ಇದು ಹೊಸ ವೈರಸ್ ?
ಇದು ಹೊಸ ರೂಪಾಂತರ ತಳಿಯಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ SARS-Cov-2 ಕಪ್ಪಾ ರೂಪಾಂತರ ಭಾರತದಲ್ಲಿ 2020 ಅಕ್ಟೋಬರ್‌ನಲ್ಲಿ ಪತ್ತೆಯಾಯಿತು, ಇದನ್ನು B.1.617.1 ಎಂದು ಗುರುತಿಸಲಾಯಿತು, ಡೆಲ್ಟಾವನ್ನು B.1.617.2 ಎಂದು ಗುರುತಿಸಲಾಗಿದೆ

ಕಪ್ಪಾ ವೈರಸ್ ಅಪಾಯಕಾರಿಯೇ?
ಈ ಕಪ್ಪಾ ವೈರಸ್ ಅಷ್ಟೇನು ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ, ಲಂಬ್ಡಾ ವೈರಸ್‌ನಂತೆಯೇ ಕಪ್ಪಾ ಕೂಡ, ಲಂಬ್ಡಾ ಈಗಾಗಲೇ 30 ರಾಷ್ಟ್ರಗಳಿಗೆ ಹರಡಿದೆ.

ಕಪ್ಪಾ ಡಬಲ್ ಮ್ಯೂಟೆಂಟ್ ವೈರಸ್ ಆಗಿದೆಯೇ?
ಡೆಲ್ಟಾ ರೀತಿಯಲ್ಲಿ ಕಪ್ಪಾ ಡಬಲ್ ಮ್ಯೂಟೆಂಟ್ ವೈರಸ್ ಆಗಿದ್ದು EE484Q ಮತ್ತು L452R ನಿಂದ ಉಂಟಾಗಿದೆ

ಕಪ್ಪಾ ಮತ್ತು ಡೆಲ್ಟಾ ನಡುವಿನ ವ್ಯತ್ಯಾಸವೇನು?
ಎರಡೂ ರೂಪಾಂತರ ಭಾರತದಲ್ಲಿ 2020 ಅಕ್ಟೋಬರ್‌ನಲ್ಲಿ ಕಂಡು ಬಂದ B.1.617 ತಳಿಯಾಗಿದೆ. ಡೆಲ್ಟಾ ರೂಪಾಂತರ 2021 ಏಪ್ರಿಲ್‌ನಲ್ಲಿ ಪತ್ತೆಯಾಗಿದೆ, ಇದರಿಂದಾಗಿ ಮೇ ತಿಂಗಳಿನಲ್ಲಿ ಆತಂಕ ಹೆಚ್ಚಿಸಿದೆ. ಭಾರತದಲ್ಲಿ 2ನೇ ಅಲೆಗೆ ಡೆಲ್ಟಾ ವೈರಸ್ ಕಾರಣವಾಗಿತ್ತು, ಇದೀಗ ಡೆಲ್ಟಾ ಪ್ಲಸ್ ವೈರಸ್ 3ನೇ ಅಲೆಗೆ ಕಾರಣವಾಗುವುದೇ ಎಂಬ ಆತಂಕ ಕಾಡುತ್ತಿದೆ.



Click it and Unblock the Notifications