Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
ಕಾರ್ಬ್ಸ್ ಒಳ್ಳೆಯದಲ್ಲ, ಕಾರ್ಬ್ಸ್ ತಿಂದರೆ ಮೈ ತೂಕ ಹೆಚ್ಚಾಗುತ್ತದೆ ಎಂದು ತುಂಬಾ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ತುಂಬಾ ದೂರ ಇಡುತ್ತಾರೆ. ಯಾರು ಲೋ ಕಾರ್ಬ್ಸ್ ಡಯಟ್ ಕಡೆ ತುಂಬಾ ಗಮನ ಕೊಡುತ್ತಾರೋ ಅವರು ತಮ್ಮ ಆಹಾರದಲ್ಲಿ ಪ್ರೊಟೀನ್ ಹೆಚ್ಚಾಗಿ ಬಳಸುತ್ತಾರೆ.

ಯಾರು ಲೋ ಕಾರ್ಬ್ಸ್ ಡಯಟ್ ಮಾಡುತ್ತಾರೆ?
ಯಾರು ತೂಕ ಇಳಿಕೆಗೆ ಪ್ರಯತ್ನಿಸುತ್ತಾರೋ ಅವರಲ್ಲಿ ಹೆಚ್ಚಿನವರು ಲೋ ಕಾರ್ಬ್ಸ್ ಡಯಟ್ ಫಾಲೋ ಮಾಡುತ್ತಾರೆ. ಆದರೆ ಈ ಲೋ ಕಾರ್ಬ್ ಡಯಟ್ ಫಾಲೋ ಮಾಡಿದಾಗ ಏನಾಗುತ್ತೆ, ನಮ್ಮ ದೇಹಕ್ಕೆ ಅಗ್ಯತವಿರುವ ಕಾರ್ಬೋಹೈಡ್ರೇಟ್ಸ್ ದೊರೆಯದೆ ಹೋದಾಗ ಏನಾಗುತ್ತದೆ ಎಂದು ನೋಡೋಣ ಬನ್ನಿ:

ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ದೊರೆಯದಿದ್ದರೆ
ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಮೆದುಳು, ಸ್ನಾಯುಗಳು ಹಾಗೂ ದೇಹದ ಇತರ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಕಾರ್ಬೋಹೈಡ್ರೇಟ್ಸ್ ಅವಶ್ಯಕ, ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾಗಿ ಹೈಪೋಗ್ಲೈಸೆಮಿಯಾ ಉಂಟಾಗುವುದು.

ಹೈಪೋಗ್ಲೈಸೆಮಿಯಾ ಲಕ್ಷಣಗಳು
* ಹಸಿವು
* ಕೈ ಕಾಲುಗಳಲ್ಲಿ ನಡುಕ
* ಸುಸ್ತು
* ಗೊಂದಲ
* ಮಾತನಾಡಲು ಕಷ್ಟ
* ತುಂಬಾ ಒತ್ತಡ ಅಥವಾ ಸುಸ್ತಾಗುವುದು

ಕೀಟೋ ಡಯಟ್‌ನ ಅಡ್ಡಪರಿಣಾಮಗಳು
ಕೀಟೋ ಡಯಟ್‌ನಲ್ಲಿ ಕಾರ್ಬ್ಸ್ ತುಂಬಾ ಕಡಿಮೆ ಬಳಸಿ, ಕೊಬ್ಬು ಹಾಗೂ ಪ್ರೊಟೀನ್ ಅಧಿಕ ಬಳಸಲಾಗುವುದು.
ಕೀಟೋ ಡಯಟ್ ಅಡ್ಡಪರಿಣಾಮಗಳು
* ಮಾನಸಿಕ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುವುದು
* ಬಾಯಿ ದುರ್ವಾಸನೆ
* ತಲೆಸುತ್ತು
* ವಾಂತಿ
* ಸಂಧಿ ನೋವು ಮತ್ತು ಕಿಡ್ನಿ ಸ್ಟೋನ್ ಉಂಟಾಗುವುದು.

ಕಡಿಮೆ ಕಾರ್ಬ್ಸ್ ಬಳಸಿದರೆ ಈ ಬಗೆಯ ತೊಂದರೆಗಳು ಕಂಡು ಬರಬಹುದು:
* ಯಾವಾಗಲೂ ತುಂಬಾ ಸುಸ್ತು
ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಕಾರ್ಬ್ಸ್ ಕಡಿಮೆಯಾದರೆ ದೇಹದಲ್ಲಿ ಶಕ್ತಿ ಕಡಿಮೆಯಾಗುವುದು ತುಂಬಾ ಸುಸ್ತು ಅನಿಸಲಾರಂಭಿಸುತ್ತದೆ.
* ಹೊಟ್ಟೆ ಉಬ್ಬುವುದು
ಕಾರ್ಬೋಹೈಟ್ರೇಟ್ ಇರುವ ಆಹಾರಗಳಲ್ಲಿ ನಾರಿನಂಶ ಕೂಡ ಇರುತ್ತದೆ, ಈ ನಾರಿನಂಶ ಜೀರ್ಣಕ್ರಿಯೆಗೆ ಸಹಕಾರಿ. ಕಾರ್ಬ್ಸ್ ಕಡಿಮೆಯಾದರೆ ದೇಹದಲ್ಲಿ ನಾರಿನಂಶ ಕಡಿಮೆಯಾಗಿ ಹೊಟ್ಟೆ ಉಬ್ಬುವ ತೊಂದರೆ ಉಂಟಾಗುವುದು.

ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗಲ್ಲ
ಕಾರ್ಬೋಹೈಡ್ರೇಟ್ ಕಡಿಮೆಯಾದರೆ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ, ಇದರಿಂದ ತುಂಬಾ ಸುಸ್ತು ಉಂಟಾಗಿ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ.
ಕಾರ್ಬ್ಸ್ ಕಡಿಮೆಯಾದರೆ ಮೈ ತೂಕ ಹೆಚ್ಚಾಗಬಹುದು!
ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಲು ಜನರು ಕಾರ್ಬೋಹೈಡ್ರೇಟ್ ಆಹಾರ ತಿನ್ನುವುದಿಲ್ಲ, ಆದರೆ ನಿಮಗೆ ಗೊತ್ತೇ? ಹೀಗೆ ಮಾಡಿದರೆ ದೇಹದಲ್ಲಿ ಕಾರ್ಬೋಹೈಡ್ರೇಟ್ ಕಡಿಮೆಯಾದಾಗ ದೇಹ ಪ್ರೊಟೀನ್ ಹಾಗೂ ಕೊಬ್ಬಿನಂಶದಿಂದ ಗ್ಲುಕೋಸ್ ಬಳಸಲಾರಂಭಿಸುತ್ತದೆ, ಅಲ್ಲದೆ ಕಾರ್ಬೋಹೈಡ್ರೇಟ್ ಕಡಿಮೆಯಾದಾಗ ಹಸಿವು ಉಂಟಾಗುವುದು ಇದರಿಂದ ಇತರ ಆಹಾರ ಪದಾರ್ಥಗಳ ಸೇವನೆ ಹೆಚ್ಚುವುದು, ಹೀಗಾಗಿ ತೂಕ ಕಡಿಮೆ ಮಾಡಬೇಕೆಂದರೂ ಕಡಿಮೆ ಮಾಡುವುದು ಕಷ್ಟವಾಗುವುದು.

ಆಹಾರ ತಿಂದರೂ ತೃಪ್ತಿ ಸಿಗಲ್ಲ
ನಾವು ಆಹಾರ ತಿಂದಾಗ ತೃಪ್ತಿ ಸಿಗಬೇಕು, ಆದರೆ ಕಾರ್ಬೋಹೈಡ್ರೇಟ್ ಕಡಿಮೆಯಾದರೆ ತೃಪ್ತಿ ಸಿಗುವುದಿಲ್ಲ, ಅಲ್ಲದೆ ಪೋಷಕಾಂಶದ ಕೊರತೆ ಕೂಡ ಉಂಟಾಗುವುದು. ನಾರಿನಂಶದ ಕೊರತೆ ಉಂಟಾದರೆ ಹೊಟ್ಟೆಯ ಆರೋಗ್ಯ ಹಾಳಾಗುವುದು. ಇದರಿಂದ ಜೀರ್ಣಕ್ರಿಯೆ ತೊಂದರೆ ಉಂಟಾಗುವುದು.
ಬಾಯಿ ತುಂಬಾನೇ ಕೆಟ್ಟ ವಾಸನೆ ಬೀರುತ್ತದೆ
ಕಾರ್ಬೋಹೈಡ್ರೇಟ್ ಆಹಾರ ಕಡಿಮೆ ಸೇವಿಸಿದರೆ ಬಾಯಿ ತುಂಬಾನೇ ದುರ್ವಾಸನೆ ಬೀರಲಾರಂಭಿಸುವುದು, ಬಾಯಿ ಕೆಟ್ಟ ವಾಸನೆ ಬೀರಿದರೆ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಬೇಕೆನ್ನುವ ಸೂಚನೆಯಾಗಿದೆ.



Click it and Unblock the Notifications
