Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ನಿದ್ರೆಯ ಸಮಸ್ಯೆ ನಿವಾರಿಸಲು ಬೆಡ್ ಕೆಳಗೆ ಲ್ಯಾವೆಂಡರ್ ಸೋಪ್ ಇಡಿ
ಮನುಷ್ಯ ಎಂದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಕೆಲವು ಸಮಸ್ಯೆಗಳು ತಾತ್ಕಾಲಿಕವಾದರೆ ಕೆಲವು ದೀರ್ಘಕಾಲೀನ. ಆದರೆ ಕೆಲವು ದೀರ್ಘಕಾಲೀನ ಸಮಸ್ಯೆಗಳಿಂದ ಸಣ್ಣ ಸಮಸ್ಯೆಗಳು ಅರಂಭವಾಗುತ್ತದೆ. ಅಂಥಾ ಸಮಸ್ಯೆಗಳಲ್ಲಿ ಒಂದು ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ (RLS).

ಏನಿದು ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ ಎಂದರೆ, ರಾತ್ರಿಯ ಹೊತ್ತು ನಿದ್ರೆ ಬರದಂತೆ ಕಾಡುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕಾರಣವೇನೇ ಇರಲಿ, ನಿದ್ರಿಸದಿರುವುದು ತುಂಬಾ ಕಿರಿಕಿರಿಯುಂಟು ಮಾಡುತ್ತದೆ ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ತಜ್ಞರು ಬಹಳ ಸರಳ ಪರಿಹಾರವನ್ನು ನೀಡಿದ್ದಾರೆ. ಈ ಪರಿಹಾರ ತಿಳಿದರೆ ನೀವು ಅಚ್ಚರಿಪಡಬಹುದು. ಪರಿಹಾರವೇನೆಂದರೆ ನೀವು ಮಲಗುವ ಹಾಸಿಗೆಯ ಕೆಳಗೆ ಸೋಪ್ ಇಟ್ಟು ಮಲಗುವುದು.
ಏನಿದು ಸೋಪ್ ಪರಿಹಾರ, ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್‌ನ ಲಕ್ಷಣಗಳೇನು, ಇದು ಏಕೆ ಕಾಡುತ್ತದೆ ಮುಂದೆ ನೋಡೋಣ:

ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ ಎಂದರೇನು?
ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ ಅಥವಾ ಆರ್ಎಲ್ಎಸ್ ಎಂಬುದು ನಿದ್ರಾಹೀನತೆಯ ಸಮಸ್ಯೆಯಾಗಿದ್ದು, ಇದು ಕೆಳ ಕಾಲುಗಳನ್ನು ಸರಿಯಾಗಿ ಅಲುಗಾಡಿಲು ಅಗುವುದಿಲ್ಲ, ಕಾಲುಗಳ ಪ್ರಚೋದನೆಯು ಬಹಳ ಕಡಿಮೆ ಇರುವಂಥ ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಹೆಚ್ಚು ಕಾಡುತ್ತದೆ. ಎಲ್ಲರು ಸಂಜೆಯ ಮೇಲೆ ವಿಶ್ರಾಂತಿ ಪಡೆಯಲು ಬಯಸುತ್ತಾರೆ, ಈ ಸಮಯದಲ್ಲೇ ಈ ದೂರುಗಳು ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು. ನಾವು ಹೆಚ್ಚು ನಡೆಯುತ್ತಿದ್ದರೆ ಚಲಿಸುವಾಗ ಈ ಸಮಸ್ಯೆ ಹೆಚ್ಚು ಇರುವುದಿಲ್ಲ, ಆದರೆ ಚಲನೆಯನ್ನು ನಿಲ್ಲಿಸಿದ ತಕ್ಷಣ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಿದ್ರಿಸುವುದು ಬಹುತೇಕ ಅಸಾಧ್ಯವಾಗುತ್ತದೆ.

ರೋಗಲಕ್ಷಣಗಳು
ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್‌ನ ಲಕ್ಷಣಗಳು ಹೀಗಿವೆ:
* ಕಾಲುಗಳಲ್ಲಿ ನಡುಗುವಿಕೆ: ಕಾಲುಗಳನ್ನು ಸರಿಸಲು ಆಗುವುದೆ ಇಲ್ಲ, ತಡೆಯಲಾಗದ ಪ್ರಚೋದನೆ ರಹಿತ ಸವೇದನೆ ಇರುತ್ತದೆ.
* ಹಗಲಿಗಿಂತ ರಾತ್ರಿಯಲ್ಲೇ ಈ ರೋಗಲಕ್ಷಣಗಳು ಅತಿಯಾಗಿ ಕಾಡುತ್ತದೆ.
* ನೀವು ಅನವಶ್ಯಕವಾಗಿ ದಣಿಯುವುದು
* ನಿಮಗೆ ಏಕಾಗ್ರತೆ ಕೊರತೆ ಹೆಚ್ಚು ಕಾಡುತ್ತದೆ
* RLS ಹೊಂದಿರುವ ಜನರು ಸಾಮಾನ್ಯವಾಗಿ ನಿರ್ಬಂಧಿತ ಭಾವನೆಯನ್ನು ಅನುಭವಿಸುತ್ತಾರೆ: ಏಕೆಂದರೆ ಅವರು ಇನ್ನು ಮುಂದೆ ಸಿನೆಮಾಕ್ಕೆ ಹೋಗಲು ಅಥವಾ ರೈಲು ಅಥವಾ ವಿಮಾನದಲ್ಲಿ ದೂರದ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂಬ ಭಯ ಕಾಡುತ್ತದೆ.

RLS ಸಮಸ್ಯೆಗೆ ಕಾರಣಗಳು
* RLS ನ ಸಮಸ್ಯೆ ಸೂಕ್ತ ಕಾರಣ ಹೇಳಲಾಗುವುದಿಲ್ಲ, ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.
* ಇದು ಬಹುಶಃ ಮೆದುಳಿನಲ್ಲಿನ ನರ ಕೋಶಗಳ ಅಡಚಣೆಯಿಂದಾಗಿ ಚಲನೆ ಮತ್ತು ಪ್ರತಿವರ್ತನವನ್ನು ನಿಯಂತ್ರಿಸುತ್ತದೆ. ಈ ಸ್ಥಿತಿಯು ಆನುವಂಶಿಕವಾಗಿ ಸಹ ಕಂಡುಬರಬಹುದು.
* ಕೆಲವೊಮ್ಮೆ, ಇದು ಕಡಿಮೆ ಮಟ್ಟದ ಕಬ್ಬಿಣಾಂಶದ ಕೊರತೆ
* ಮೂತ್ರಪಿಂಡ ವೈಫಲ್ಯ
* ಮಧುಮೇಹದಂತಹ ಇತರ ದೀರ್ಘಕಾಲದ ಕಾಯಿಲೆಗಳ ಅಡ್ಡ ಪರಿಣಾಮವೂ ಆಗಿರಬಹುದು.

ಇದಕ್ಕೆ ಸರಳ ಪರಿಹಾರ ಲ್ಯಾವೆಂಡರ್ ಸೋಪ್
ವೈದ್ಯರು ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್‌ಗೆ (RLS ) ವಿಚಿತ್ರವಾದ ಚಿಕಿತ್ಸೆಯ ಬಗ್ಗೆ ಸಲಹೆ ನೀಡಿದ್ದಾರೆ, ಅದು ನಿಜವಾಗಿಯೂ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು. * ನಿಮ್ಮ ಹಾಸಿಗೆಯ ಕೆಳಗೆ ಸೋಪ್ ಅನ್ನು ಇಡುವುದರಿಂದ ಅದರಲ್ಲೂ ನಿರ್ದಿಷ್ಟವಾಗಿ ಲ್ಯಾವೆಂಡರ್ ಸೋಪ್ ಇಡುವುದು ಹೆಚ್ಚು ಅನುಕೂಲಕರ.
* ಲ್ಯಾವೆಂಡರ್ ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ. ಪ್ರತಿದಿನ ಸಂಜೆ ನಿಮ್ಮ ಹಾಸಿಗೆಯ ನಡುವೆ ಲ್ಯಾವೆಂಡರ್ ಸೋಪಿನ ತುಂಡನ್ನು ನಿಮ್ಮ ಪಾದ ಇರುವ ಸ್ಥಳಗಳಿಗೆ ಸಮೀಪ ಇಡಿ.
* ಸೆಳೆತಗಳು ಕಡಿಮೆಯಾಗುತ್ತವೆ ಮತ್ತು ನಿಮ್ಮ ಕಾಲುಗಳು ಹೆಚ್ಚು ಶಾಂತವಾಗಿರುತ್ತವೆ ಎಂದು ಅನುಭವದ ಮೂಲಕ ನೀವು ಗಮನಿಸಬಹುದು.
* ಇದರಿಂದ ಯಾವುದೇ ಅಡ್ಡಪರಿಣಾಮ ಸಹ ಇರುವುದಿಲ್ಲ.

ವೈಜ್ಞಾನಿಕವಾಗಿ ಇದು ಸಾಧ್ಯವೇ?
ಲ್ಯಾವೆಂಡರ್ ಸೋಪ್ ತಂತ್ರವನ್ನು ವೈಜ್ಞಾನಿಕವಾಗಿ ಇನ್ನೂ ಸಾಬೀತುಪಡಿಸಲಾಗಿಲ್ಲ, ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತದೆ ಎಂದು ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಲವರು ತಾವು ಇದನ್ನು ಪ್ರಾಯೋಗಿಕವಾಗಿ ಬಳಸಿರುವುದಾಗಿಯೂ ಇದು ನಿಜವಾಗಲೂ ಸತ್ಯವಾಗಿದೆ ಎಂಬುದಾಗಿಯೂ, ತಮ್ಮ ಸಮಸ್ಯೆಗಳು ನಿವಾರಣೆ ಅಗಿರುವುದಾಗಿ ಹೇಳಿಕೊಂಡಿದ್ದಾರೆ. ಒಬ್ಬ ಮಹಿಳೆ ತನ್ನ ಗಂಡನಿಗೆ ತಿಳಿಯದೆ ಹಾಸಿಗೆಯ ಕೆಳಗೆ ಸೋಪ್ ಇಟ್ಟಿದ್ದು, ಆ ದಿನ ಅವರು ಚೆನ್ನಾಗಿ ಮಲಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಇದು ನಿಜವಾಗಿಯೂ ಕೆಲಸ ಮಾಡುತ್ತದೆ. ಆದರೆ ನೆನಪಿರಲಿ ನೀವು ಬಳಸುವ ಸೋಪ್ ಲ್ಯಾವೆಂಡರ್ ಸೋಪ್ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಸಾಮಾನ್ಯ ಸೋಪ್ ಬಾರ್ ಕೆಲಸ ಮಾಡುವುದಿಲ್ಲ.



Click it and Unblock the Notifications