Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ನಿಲ್ಲದ ಕರ್ಕಶ ಗೊರಕೆಗೆ ಕಡಿವಾಣ ಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..!
ನಿಮ್ಮ ಸಂಗಾತಿ, ಸ್ನೇಹಿತರು ಅಥವಾ ನಿಮ್ಮ ಮನೆಯವರೂ ನಿಮ್ಮ ಗೊರಕೆಯ ಬಗ್ಗೆ ಕಂಪ್ಲೇಟ್ ಮಾಡುತ್ತಿದ್ದಾರೆ, ಆದರೆ ನೀವು ಗೊರಕೆ ಹೊಡಿಯುತ್ತಿಲ್ಲವೆಂದು ವಾದಿಸುತ್ತೀರಿ.. ಕೊನೆಗೆ ನಿಮ್ಮ ಗೊರಕೆಯನ್ನು ರೆಕಾರ್ಡ್ ಮಾಡಿ ನಿಮಗೆ ಕೇಳಿಸಿದರೆ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಾಗುತ್ತದೆ. ಅಯ್ಯೋ ನಾನು ಗೊರಕೆ ಹೊಡೆಯುತ್ತೀನಾ ಎಂದು ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳುತ್ತೀರಿ. ಹೌದು.. ಗಾಢ ನಿದ್ದೆಯಲ್ಲಿರುವಾಗ ನಿಮ್ಮ ಗೊರಕೆ ಸದ್ದು ಕೇಳಿಸದೇ ಇರಬಹುದು. ತಮಾಷೆಯೆಂದರೆ ಕೆಲವರಿಗೆ ಅವರದೇ ಗೊರಕೆಯ ಸದ್ದಿಗೆ ಎಚ್ಚರವಾಗುವುದಿದೆ. ನಿಮ್ಮ ಗೊರಕೆಯಿಂದಾಗಿ ನೀವು ಮುಜುಗರಕ್ಕೊಳಗಾಗಿದ್ದರೆ, ಅದಕ್ಕೆ ಪರಿಹಾರ ಕೂಡಾ ನಿಮ್ಮಲ್ಲೇ ಇದೆ. ಅದೇನು ಎನ್ನುವುದಾದರೆ, ಈ ಲೇಖನ ಓದಿ..


೧. ತೂಕ ಇಳಿಸಿಕೊಳ್ಳಿ
ಕೆಲವರಿಗೆ ಅತಿಯಾದ ತೂಕ, ಬೊಜ್ಜು ಹೊಂದಿದ್ದರೆ ಸಾಕು ಗೊರಕೆ ಹೊಡೆಯುತ್ತೀರಿ ಎಂದು ಹೇಳಬಹುದು. ಕೆಲವರಿಗೆ ಗೊರಕೆಯ ಸಮಸ್ಯೆ ಇಲ್ಲದಿದ್ದರೂ, ತೂಕ ಹೆಚ್ಚಾದ ನಂತರ ಗೊರಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಿದ್ದಾಗ ನೀವು ತೂಕ ಇಳಿಸಿಕೊಳ್ಳಬಹುದು. ವ್ಯಾಯಾಮ, ಡಯಟ್ ಪಾಲಿಸುವ ಮೂಲಕ ದೇಹದ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಿ.ತೂಕ ಇಳಿಸುವುದರಿಂದ ಕೆಲವರಿಗೆ ಗೊರಕೆಯ ಸಮಸ್ಯೆ ಕಡಿಮೆಯಾಗಬಹುದು. ಆದರೆ ಕೆಲವರಿಗೆ ಇದು ವರ್ಕ್‌ಔಟ್ ಆಗದೆಯೂ ಇರಬಹುದು.

೨. ಮದ್ಯಸೇವನೆ ಬಿಡಿ
ಕೆಲವೊಂದು ಅಧ್ಯಯನಗಳು ಮದ್ಯಪಾನ ಸೇವಿಸಿದವರು ಗೊರಕೆಯನ್ನು ಹೊಡೆಯುತ್ತಾರೆ ಎಂದು ಕಂಡುಹಿಡಿದಿದೆ. ಮದ್ಯಪಾನವು ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ವಿಶ್ರಾಂತಿಯನ್ನು ಕಡಿಮೆ ಮಾಡುತ್ತದೆ. ಇದು ಗೊರಕೆಗೆ ಕಾರಣವಾಗುತ್ತದೆ.ಹಾಗಾಗಿ ಮಲಗುವ ಮುನ್ನ ಮದ್ಯಪಾನ ಮಾಡಬೇಡಿ. ಸಾಧ್ಯವಾದರೆ ಮದ್ಯಪಾನ ಸೇವನೆಯನ್ನು ಬಿಟ್ಟುಬಿಡಿ. ಇದು ದೇಹದ ಆರೋಗ್ಯಕ್ಕೂ ಒಳ್ಳೆಯದು.

೩. ನಿದ್ದೆಯ ಭಂಗಿಯನ್ನು ಬದಲಾಯಿಸಿ
ಕೆಲವೊಮ್ಮೆ ನಾವು ಮಲಗುವ ಭಂಗಿಯೂ ಗೊರಕೆಗೆ ಕಾರಣವಾಗಿ ನಮ್ಮ ಪಕ್ಕದಲ್ಲಿ ಮಲಗುವವರ ನಿದ್ದೆ ಕೆಡಿಸಬಹುದು. ಬೆನ್ನಿನ ಮೇಲೆ ಅಂಗಾತ ಮಲಗುವುದರಿಂದ ನಿಮ್ಮ ನಾಲಗೆಯ ತಳ ಮತ್ತು ಮೃದುವಾದ ಅಂಗುಳವು ಗಂಟಲಿನ ಹಿಂಭಾಗದ ಗೋಡೆಯನ್ನು ಒತ್ತಲ್ಪಡುವುದರಿಂದ ನಿದ್ದೆ ಸಮಯದಲ್ಲಿ ಕಂಪಿಸುವಂತಹ ಸದ್ದನ್ನು ಉಂಟುಮಾಡುತ್ತದೆ. ಅಂಗಾತ ಮಲಗಿ ನೀವು ಗೊರಕೆ ಹೊಡೆಯುತ್ತಿದ್ದಲ್ಲಿ, ನಿಮ್ಮ ಮಲಗುವ ಭಂಗಿ ಬದಲಾಯಿಸಿ, ನಿಮ್ಮ ಎಡ ಅಥವಾ ಬಲ ಬದಿಗೆ ತಿರುಗಿ ಮಲಗಿಕೊಳ್ಳಿ. ಇದರಿಂದಲೂ ಗೊರಕೆ ಬರದಂತೆ ಮಾಡಬಹುದು. ಮಲಗುವಾಗ ತಲೆಯ ಸ್ವಲ್ಪ ಎತ್ತರದಲ್ಲಿ ಅಂದರೆ ನಾಲ್ಲು ಇಂಚುಗಳಷ್ಟು ಮೇಲಕ್ಕಿಟ್ಟು ಮಲಗಿ.

೪. ಧೂಮಪಾನ ಬಿಟ್ಟು ಬಿಡಿ
ನಿಮಗೆ ಗೊತ್ತಾ ಬೀಡಿ, ಸಿಗರೇಟು ಸೇದುವುದೂ ಗೊರಕೆಗೆ ಕಾರಣವಾಗಬಹುದು. ಹಾಗಾಗಿ ನೀವೂ ಹಾಗೂ ಇತರರೂ ನೆಮ್ಮದಿಯಾಗಿ ಮಲಗಬೇಕೆಂದರೆ, ನಿಮ್ಮ ಗೊರಕೆಯ ಸದ್ದನ್ನು ನಿವಾರಿಸಬಹುದು.

೫. ಮೂಗಿನ ಹೊಳ್ಳೆಗಳನ್ನುತೆರೆಯುವಂತೆ ಮಾಡಿ
ಮೂಗು ಕಟ್ಟಿಕೊಂಡಿದ್ದರೆ ಗೊರಕೆಯ ಸಮಸ್ಯೆ ಹೆಚ್ಚು. ಹೆಚ್ಚಿನ ಸಮಸಯದಲ್ಲಿ ಅಂದರೆ ಶೀತವಾದ ಸಂದರ್ಭದಲ್ಲಿ ಮ್ಯೂಕಸ್ ನಿಮ್ಮ ಮೂಗಿನ ಹೊಳ್ಳೆಯಲ್ಲಿ ಕಟ್ಟಿಕೊಳ್ಳುವುದರಿಂದ ವೇಗವಾದ ಉಸಿರಾಟವು ಗೊರಕೆಯ ಸದ್ದನ್ನು ಉಂಟುಮಾಡುತ್ತದೆ. ಇದು ಕೆಲವೊಮ್ಮೆ ವಿಸಲ್ ಹಾಕಿದಂತೆ ಕೇಳಬಹುದು. ನಿಮ್ಮ ಮೂಗು ಕಟ್ಟಿಕೊಂಡಿದ್ದರೆ ಬೆಚ್ಚಗಿನ ನೀರಿನಿಂದ ಮೂಗನ್ನು ತೊಳೆದುಕೊಳ್ಳಿ ಅಥವಾ ನೇಸಲ್ ಡ್ರಾಪ್ ಹಾಕಿಕೊಳ್ಳಿ ಇದು ಕಟ್ಟಿರುವ ಮೂಗನ್ನು ತೆರೆಯುತ್ತದೆ. ಹೀಗಾಗಿ ಗೊರಕೆಯೂ ಬಾರದೇ ಇರಬಹುದು.

೬. ನಿದ್ದೆಯ ದಿನಚರಿ ಪಾಲಿಸಿ
ದಿನವಿಡೀ ಕೆಲಸ, ಒತ್ತಡ, ಓಡಾಟದಿಂದ ಬಳಲಿರುವ ದೇಹಕ್ಕೆ ನಿದ್ದೆ ಬೇಕೆ ಬೇಕು. ಆದರೆ ರಾತ್ರಿಯೂ ನಿದ್ದೆ ಕೆಡುತ್ತಿದ್ದರೆ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಹದಗೆಡುತ್ತದೆ. ಸರಿಯಾಗಿ ನಿದ್ದೆ ಮಾಡದೇ ಇರುವುದು ಮದ್ಯಪಾನ ಮಾಡಿದಷ್ಟೇ ಪರಿಣಾಮ ಬೀರುತ್ತೆ. ನೀವು ಕಷ್ಟಪಟ್ಟು ಮಲಗುತ್ತಿದ್ದಲ್ಲಿ ನಿಮ್ಮ ಸ್ನಾಯುಗಳೂ ದುರ್ಬಲವಾಗಲು ಆರಂಭಿಸುತ್ತದೆ. ಇದು ಗೊರಕೆಗೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯಕರ ದಿನಚರಿ ಪಾಲಿಸಿ, ಐದರಿಂದ ಆರು ಗಂಟೆಗಳ ನಿದ್ದೆಯಾದರೂ ಮಾಡಿ.

೮. ದಿಂಬುಗಳನ್ನು ಬದಲಾಯಿಸಿ
ನೀವು ಮಲಗುವಾಗುವಾಗ ಉಪಯೋಗಿಸುವ ದಿಂಬುಗಳೂ ಗೊರಕೆಗೆ ಕಾರಣವಾಗಬಹುದು. ನಿಮ್ಮ ರೂಂನಲ್ಲಿ ಸೀಲಿಂಗ್ ಫ್ಯಾನ್ ಬಳಸುತ್ತಿದ್ದರೆ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಅಲ್ಲದೇ ನಿಮ್ಮ ದಿಂಬುಗಳ ಮೇಲಿನ ಕವರ್‌ಗಳನ್ನೂ ಎರಡು ವಾರಕ್ಕೊಮ್ಮೆ ಬದಲಾಯಿಸಿ. ಯಾಕೆಂದರೆ ದಿಂಬುಗಳಲ್ಲಿ ಧೂಳಿನ ಕಣಗಳು ಸಂಗ್ರಹವಾಗುತ್ತದೆ, ಇದು ಅಲರ್ಜಿಯನ್ನು ಉಂಟುಮಾಡಬಹುದು. ಅಲ್ಲದೇ ನಿಮ್ಮ ಸಾಕುಪ್ರಾಣಿಗಳನ್ನು ನಿಮ್ಮ ಬೆಡ್‌ಮೇಲೆ ಬಿಡುವುದರಿಂದ ಅವುಗಳ ಸತ್ತಜೀವಕೋಶಗಳ ಕಣಗಳು ಉಸಿರಾಟದಲ್ಲಿ ಕಿರಿಕಿರಿಗೆ ಕಾರಣವಾಗುತ್ತದೆ.
ಆದಷ್ಟು ನಿಮ್ಮ ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಅಲ್ಲದೇ ದಿಂಬು, ಬೆಡ್‌ಶೀಟ್‌ಗಳನ್ನು ಎರಡುವಾರಕ್ಕೊಮ್ಮೆ ಬದಲಾಯಿಸಿ, ಸೀಲಿಂಗ್ ಫ್ಯಾನ್‌ನಲ್ಲಿ ಧೂಳು ಕುಳಿತುಕೊಳ್ಳಲು ಬಿಡಬೇಡಿ. ಸಾಕುಪ್ರಾಣಿಗಳನ್ನು ಮಲಗುವ ಕೋಣೆಗೆ ಬರಲು ಬಿಡಬೇಡಿ.

೯.ಹೆಚ್ಚು ನೀರು ಕುಡಿಯಿರಿ
ದೇಹವು ಡಿಹೈಡ್ರೇಟ್ ಆದಾಗ ಮೂಗು ಮತ್ತು ನಾಲಗೆಯ ಅಂಗುಳಿನ ಸ್ರವಿಸುವಿಕೆ ಅಂಟಿಕೊಳ್ಳುತ್ತದೆ. ಇದು ಗೊರಕೆಗೆ ಕಾರಣವಾಗುತ್ತದೆ ಹಾಗಾಗಿ ಹೆಚ್ಚು ನೀರು ಕುಡಿಯಿರಿ. ಆರೋಗ್ಯವಂತ ಮಹಿಳೆಯರು ದಿನಕ್ಕೆ ಸುಮಾರು ಹನ್ನೊಂದು ಕಪ್ ಹಾಗೂ ಪುರುಷರು ಹದಿನಾರು ಕಪ್‌ಗಳಷ್ಟು ನೀರು ಕುಡಿಯಬೇಕು.
ಒಟ್ಟಾರೆಯಾಗಿ ಗೊರಕೆಯಿಂದ ಮುಕ್ತಿ ಕಾಣಬೇಕೆಂದರೆ ಹೆಚ್ಚು ನಿದ್ದೆ ಮಾಡಿ. ನಿಮ್ಮ ಬದಿಗೆ ಮಲಗಿಕೊಳ್ಳಿ. ಮಲಗುವ ಮುನ್ನ ಮದ್ಯಪಾನ ಮಾಡಬೇಡಿ. ಸಾಧ್ಯವಾದರೆ ಮಲಗುವ ಮುನ್ನ ಸ್ನಾನ ಮಾಡಿ. ಈ ಸರಳ ಅಭ್ಯಾಸಗಳು ಗೊರಕೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇತರರೊಂದಿಗೆ ಜಗಳವಾಡುವುದೂ ತಪ್ಪುತ್ತದೆ, ನಿಮ್ಮ ಗೊರಕೆಯಿಂದ ನೀವೇ ಮುಜುಗರಗೊಳ್ಳುವುದೂ ತಪ್ಪುತ್ತದೆ.



Click it and Unblock the Notifications











