Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮನೆಯಲ್ಲಿಯೇ ಮಾಡಿ ಕೆಮ್ಮು ಹೋಗಲಾಡಿಸುವ ಈರುಳ್ಳಿ ಸಿರಪ್
ಮೊದಲೆಲ್ಲಾ ಕೆಮ್ಮು, ಶೀತಕ್ಕೆ ಯಾರು ಅಷ್ಟೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಣ್ಣದಾಗಿ ಕೆಮ್ಮು ಬಂದರೂ ಭಯ ಶುರುವಾಗುತ್ತೆ. ಏಕೆಂದರೆ ಕೋವಿಡ್ 19 ಎಂಬ ಮಹಾಮಾರಿಯ ಲಕ್ಷಣವೂ ಕೆಮ್ಮು, ಜ್ವರವಾಗಿರುವುದರಿಂದ ಕೆಮ್ಮು ಬಂದಾಗ ಕೋವುಡ್ 19 ಇರಬಹುದೇ ಎಂಬ ಭಯ ಕಾಡುವುದು ಸಹಜ.

ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬರುವುದು ಸಹಜ. ವಾತಾವರಣ ಬದಲಾದಂತೆ ಕೆಮ್ಮು, ನೆಗಡಿ ಬರುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದ ಹೋಗಲಾಡಿಸಬಹುದು. ಇಲ್ಲಿ ಒಣ ಕೆಮ್ಮು ಹೋಗಲಾಡಿಸಲು ಈರುಳ್ಳಿ ಸಿರಪ್ ಬಗ್ಗೆ ಹೇಳಿದ್ದೇವೆ.ಇದನ್ನು ಮಾಡುವುದು ಸುಲಭವಾಗಿದ್ದು ಮನೆಯಲ್ಲಿ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟು ಕೆಮ್ಮು ಹೋಗಲಾಡಿಸಲು ಮದ್ದಾಗಿ ಬಳಸಬಹುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಮನೆಯಲ್ಲಿಯೇ ಈರುಳ್ಳಿ ಸಿರಪ್ ಮಾಡುವ ವಿಧಾನ
1. ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್‌ನಲ್ಲಿ ಹಾಕಿಡಿ.
2. ಅದರ ಮೇಲೆ 2 ಚಮಚ ಜೇನು ಹಾಕಿ.
3. ಈ ಮಿಶ್ರಣ ರಾತ್ರಿ ಮಾಡಿ ಜಾರ್‌ನ ಮುಚ್ಚಳ ಹಾಕಿಡಿ. ಮಿಶ್ರಣ 6-10 ಗಂಟೆ ಇಡಿ.
4. ಈಗ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಸುರಿದಿಡಿ. ಈ ರಸವನ್ನು ಒಂದು ಚಮಚದಂತೆ ದಿನದಲ್ಲಿ 2-3 ಬಾರಿ ತೆಗೆದುಕೊಳ್ಳಿ. ಹೀಗೆ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ಜೇನಿನ ಪ್ರಯೋಜನಗಳು:
- ಜೇನಿನಲ್ಲಿ ಖನಿಜಾಂಶಗಳು, ವಿಟಮಿನ್ ಬಿ, ಪ್ರೀಬಯೋಟಿಕ್, ಆ್ಯಂಟಿಬಾಡಿ ಅಂಸಗಳಿವೆ.
- ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ಅಂಶಗಳು ಮನುಷ್ಯನಿಗೆ ಆಹಾರವಾಗಿ ಹಾಗೂ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
- ಜೇನು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆಮಾಡುತ್ತೆ
- ಜೇನಿನಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ಕಾಪಾಡುತ್ತದೆ.
- ಜೇನಿನ ಗುಣಗಳು ಹಾಳಾಗದಿರಲು ಬಿಸಿ ಮಾಡಬಾರದು.
- ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿ ಖಾರ ಹಾಗೂ ಘಾಟು ಅದರಲ್ಲಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ.
- ದೇಹದಲ್ಲಿರುವ ಬ್ಯಾಕ್ಟರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿ.
- ಈರುಳ್ಳಿ ದೇಹದಲ್ಲಿ ರೋಗನಿರೋಧಕ ಕಣಗಳಾದ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.
- ಏಲ್ಲಿನ್ ಈರುಳ್ಳಿಯಲ್ಲಿರುವ ಮತ್ತೊಂದು ಪ್ರಮುಖ ಅಂಶ. ಇದು ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

ಈರುಳ್ಳಿಯ ಪ್ರಯೋಜನಗಳು

ಜೇನು, ಬೆಳ್ಳುಳ್ಳಿ, ಈರುಳ್ಳಿ ಸಿರಪ್
ಅರ್ಧ ಕಪ್ ಜೇನು, ಅರ್ಧ ಕಪ್ ನೀರು ಹಾಕಿ, ಅದಕ್ಕೆ ಈರುಳ್ಳಿ ಕತ್ತರಿಸಿ ಹಾಕಿ , 8-10 ಎಸಳು ಬೆಳ್ಳುಳ್ಳಿ ಹಾಕಿ, ದೊಡ್ಡಪತ್ರೆ ಅಥವಾ ಥೈಮೆ ಹಾಕಬಹುದು, ಇದನ್ನು ಒಂದು ರಾತ್ರಿ ಬಿಟ್ಟು ನಂತರ ನೀರು ಸೋಸಿ, ಆ ನೀರನ್ನು ಫ್ರಿಡ್ಜ್‌ನಲ್ಲಿಟ್ಟು ಸಿರಪ್ ಆಗಿ ಬಳಸಬಹುದು.
ಸೂಚನೆ: ಇಲ್ಲಿ ನೀಡಿರುವ ಎರಡೂ ಸಿರಪ್ ಅನ್ನು ದೊಡ್ಡವರು ಹಾಗೂ ಮಕ್ಕಳಿಗೆ ಕೊಡಬಹುದು. ಆದರೆ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಲು ಹೋಗಬೇಡಿ.



Click it and Unblock the Notifications
