Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೋವಿಡ್ 19 ಸಾಂಕ್ರಾಮಿಕ ಬಳಿಕ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆಯೇ?
ಕೊರೊನಾ ಬಂದಾಗಿನಿಂದ ನಮ್ಮೆಲ್ಲರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಓಡುತ್ತಿದ್ದ ಜಗತ್ತು ಒಂದು ಕ್ಷಣ ನಿಂತಂಥ ಅನುಭವ... ಕೊರೊನಾ ಎಂಬುವುದು ಮನುಷ್ಯರ ದೈಹಿಕ ಆರೋಗ್ಯದ ಮೇಲೆ ಮಾತ್ರ ಮಾನಸಿಕ ಆರೋಗ್ಯದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರಿದೆ.

ಆರ್ಥಿಕ ಸಮಸ್ಯೆ, ಇರುವ ಕೆಲಸ ಹೋಗಿರುವುದು ಇವೆಲ್ಲಾ ಮನಸ್ಸಿನ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ. ಇನ್ನು ಕೆಲ ಸಂಸಾರಗಳಲ್ಲಿ ಗಂಡ-ಹೆಂಡತಿ ನಡುವೆ ದೈಹಿಕ ಅಂತರ ಹೆಚ್ಚಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಸಂಸಾರದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತಿವೆಯೇ? ಇದ್ದರೆ ಅದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಕೊರೊನಾ ಸಾಂಕ್ರಾಮಿಕ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಿದೆಯೇ?
ಕೊರೊನಾಗೆ ಹಾಗೂ ಲೈಂಗಿಕ ಆಸಕ್ತಿ ಕುಂದಲು ನೇರವಾದ ಯಾವುದೇ ಸಂಬಂಧವಿಲ್ಲ. ಆದರೆ ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ, ಕುಗ್ಗಿದ ಆತ್ಮವಿಶ್ವಾಸ, ಆರ್ಥಿಕ ಸಮಸ್ಯೆ ಇವೆಲ್ಲಾ ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕುಗ್ಗಿಸುತ್ತಿದೆ.

ಲಾಕ್‌ಡೌನ್, ಕ್ವಾರಂಟೈನ್ ಬದುಕು ಕೂಡ ಒಂದು ಕಾರಣ
ಕಳೆದ ಒಂದು ವರ್ಷದಿಂದ ಜನರ ಬದುಕಿನ ರೀತಿಯೇ ಬದಲಾಗಿಸಿದೆ. ಒಂದು ಔಟಿಂಗ್ ಇಲ್ಲ, ರಿಫ್ರೆಷ್ ಇಲ್ಲ ಲಾಕ್‌ಡೌನ್ ಬದುಕು ಇವೆಲ್ಲಾ ಕೆಲವರಲ್ಲಿ ಖಿನ್ನತೆಯನ್ನು ಉಂಟು ಮಾಡಿದೆ ಎಂದು ಸಿಡಿಸಿ ಹೇಳಿದೆ. ಈ ಕಾರಣದಿಂದಾಗಿ ಕೆಲ ದಾಂಪತ್ಯದಲ್ಲಿ ಲೈಂಗಿಕ ಆಸಕ್ತಿ ಕುಗ್ಗಿದೆ.

ಕಳೆದು ಹೋದ ಆಸಕ್ತಿ ಮರಳಿ ಪಡೆಯುವುದು ಹೇಗೆ?
ಈಗ ಕೊರೊನಾ ಅಲೆ ಸ್ವಲ್ಪ ತಗ್ಗಿದೆ. ಸೂಕ್ತ ಕೊರೊನಾ ಮುನ್ನೆಚ್ಚರಿಕೆಗಳನ್ನು ಒಂದು ಔಟಿಂಗ್ ಹೋಗಿ ಇದು ನಿಮ್ಮನ್ನು ರಿಫ್ರೆಷ್ ಮಾಡುತ್ತದೆ. ಸದಾ ಮನೆಯಲ್ಲಿ ಒಬ್ಬರನ್ನೊಬ್ಬರು ನೋಡಿ ಕೊಂಡು ಮಾತನಾಡೋಕೆ ಏನಿದೆ ಎಂದು ಮೌನದ ಮೊರೆಗೆ ಜಾರುತ್ತಿದ್ದರೆ ಅದಕ್ಕೆ ಬ್ರೇಕ್ ಹಾಕಲು ನೀವು ನಿಮ್ಮ ಸ್ನೇಹಿತರ ಭೇಟಿ ಮಾಡಿ. ಇದು ನಿಮಗೂ ಖುಷಿ ನೀಡುವುದು, ಇಬ್ಬರಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯವೂ ಸಿಗುವುದು.

ಮುಕ್ತವಾಗಿ ಮಾತನಾಡಿ, ಆರೋಗ್ಯಕರ ಆಹಾರ ಸೇವಿಸಿ
ಸಮಸ್ಯೆಗಳು ನೂರೆಂಟು ಇರಬಹುದು, ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ. ಅದರ ಬಗ್ಗೆ ಚಿಂತಿಸಿ ನಿಮ್ಮಿಬ್ಬರ ಸಂಬಂಧದಲ್ಲಿ ಅಂತರ ಬೆಳೆಸಬೇಡಿ. ಅದಕ್ಕಾಗಿ ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿ. ಆರೋಗ್ಯಕರ ಆಹಾರ ಸೇವಿಸಿ. ಉತ್ತಮ ಆಹಾರ ನಿಮ್ಮ ಆರೋಗ್ಯ ವೃದ್ಧಿಸುವುದು, ಸುಸ್ತು ದೂರ ಮಾಡುವುದು.

ಯೋಗ, ವ್ಯಾಯಾಮ ಅಭ್ಯಾಸ ಮಾಡಿ
ಜೊತೆಯಾಗಿ ಯೋಗ, ವ್ಯಾಯಾಮ ಅಭ್ಯಾಸ ಮಾಡಿ. ಇದರಿಂದ ದೈಹಿಕ ಫಿಟ್ನೆಸ್ ಕಾಪಾಡುವುದು ಮಾತ್ರವಲ್ಲಿ ನಿಮ್ಮಿಬ್ಬರ ನಡುವಿನ ರೊಮ್ಯಾಂಟಿಕ್ ಫೀಲ್ ಹೆಚ್ಚಿಸುತ್ತೆ. ಮನಸ್ಸು ಶಾಂತವಾಗುವುದು, ದೇಹ ಚುರು-ಚುರುಕಾಗಿ ಇರುತ್ತದೆ. ಇದರಿಂದ ಬೆಡ್‌ಗೆ ಹೋದಾಗ ತಟಸ್ಥ ಮನೋಭಾವ ದೂರವಾಗಿ ನಿಮ್ಮ ಮನಸ್ಸು-ದೇಹಗಳು ಒಂದಾಗುತ್ತವೆ.

ಅಗ್ಯತ ಬಿದ್ದರೆ ತಜ್ಞರನ್ನು ಭೇಟಿಯಾಗಿ
ದಾಂಪತ್ಯದಲ್ಲಿ ಲೈಂಗಿಕ ಅತೃಪ್ತಿ ಅನೇಕ ಸಮಸ್ಯೆ ಉಂಟು ಮಾಡುವುದು. ಆದ್ದರಿಂದ ನಾನಾ ಕಾರಣಗಳಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕುಂದಿದೆ ಅಥವಾ ನಿಮ್ಮ ಸಂಗಾತಿಯಲ್ಲಿ ಕುಂದಿದೆ ಎಂದು ಅನಿಸಲಾರಂಭಿಸಿದರೆ ಮೊದಲಿಗೆ ಮುಕ್ತವಾಗಿ ಸಂವಹನ ಮಾಡಿ ಪರಿಹಾರ ಕಂಡು ಕೊಳ್ಳಿ, ಇಲ್ಲದಿದ್ದರೆ ಸೂಕ್ತ ಲೈಂಗಿಕ ತಜ್ಞರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಹಿಂಜರಿಗೆ ತೋರಬೇಡಿ.



Click it and Unblock the Notifications
