ಈ ಸರಳ ವಿಧಾನಗಳಿಂದ ಹಳದಿ ಹಾಗೂ ವಾಸನೆಯುಕ್ತ ಮೂತ್ರದ ಸಮಸ್ಯೆಯನ್ನು ನಿವಾರಿಸಬಹುದು

ಸಾಮಾನ್ಯವಾಗಿ ಮೂತ್ರವು ಸೌಮ್ಯವಾದ ವಾಸನೆಯನ್ನು ಹೊಂದಿರುತ್ತದೆ, ಆದರೆ ಕೆಲವರ ಮೂತ್ರ ಗಾಢ, ದುರ್ವಾಸನೆಯಿಂದ ಕೂಡಿರುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರ ಹಳದಿ ಮತ್ತು ದುರ್ವಾಸನೆ ಬೀರುವುದು ಎನ್ನಲಾಗುತ್ತದೆ. ಆದಾಗ್ಯೂ, ಮೂತ್ರದ ಬಣ್ಣ ಮತ್ತು ವಾಸನೆಯ ಮೇಲೆ ಪರಿಣಾಮ ಬೀರುವ ಅನೇಕ ಆಹಾರಗಳು ಮತ್ತು ಪಾನೀಯಗಳಿವೆ. ಜೊತೆಗೆ ಮೂತ್ರಪಿಂಡದ ತೊಂದರೆಗಳು, ಸೋಂಕುಗಳು, ಯಕೃತ್ತಿನ ಕಾಯಿಲೆ ಅಥವಾ ಅಧಿಕ ರಕ್ತದೊತ್ತಡದಂತಹ ಕಾರಣಗಳೂ ಸೇರಿಕೊಂಡಿವೆ.

ಮೂತ್ರದ ಬಣ್ಣ ಅಥವಾ ವಾಸನೆಯಲ್ಲಿ ಸಾಂದರ್ಭಿಕ ಬದಲಾವಣೆಯು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಆಗಾಗ್ಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದು ಗಂಭೀರವಾದ ಆರೋಗ್ಯ ಸಮಸ್ಯೆಯ ಸಂಕೇತವಾಗಿದೆ, ಅದಕ್ಕೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಆದರೆ, ಮೂತ್ರದ ವಾಸನೆಯ ಸಾಮಾನ್ಯ ಬದಲಾವಣೆಯನ್ನು ಕೆಲವು ಮನೆಮದ್ದುಗಳಿಂದ ಗುಣಪಡಿಸಬಹುದು. ಅವುಗಳಾವುವು ನೋಡೋಣ.

ಮೂತ್ರದ ವಾಸನೆ ಕಡಿಮೆ ಮಾಡಲು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಸಾಕಷ್ಟು ನೀರು ಮತ್ತ ನೀರಿನಾಂಶವಿರುವ ಆಹಾರ ಸೇವಿಸಿ:

ಸಾಕಷ್ಟು ನೀರು ಮತ್ತ ನೀರಿನಾಂಶವಿರುವ ಆಹಾರ ಸೇವಿಸಿ:

ಕೆಟ್ಟ ವಾಸನೆ ಅಥವಾ ಮೂತ್ರದ ಬಣ್ಣದಲ್ಲಿ ಬದಲಾವಣೆಯು ಯುಟಿಐ ಚಿಹ್ನೆಯಾಗಿರಬಹುದು ಆದ್ದರಿಂದ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸಾಕಷ್ಟು ನೀರು ಕುಡಿಯುವುದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ (NIDDK) ಪ್ರಕಾರ , ಕುಡಿಯುವ ನೀರಿನ ಪ್ರಮಾಣ ನಿಮ್ಮ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ.

ವಿಟಮಿನ್ ಸಿ ಆಹಾರಗಳ ಸೇವನೆ ಹೆಚ್ಚಿಸಿ:

ವಿಟಮಿನ್ ಸಿ ಆಹಾರಗಳ ಸೇವನೆ ಹೆಚ್ಚಿಸಿ:

ಈ ಸಮಸ್ಯೆಯನ್ನು ತಪ್ಪಿಸಲು, ನೀವು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ವಿಟಮಿನ್ ಸಿ ಮೂತ್ರವನ್ನು ಹೆಚ್ಚು ಆಮ್ಲೀಯವಾಗಿಸುತ್ತದೆ. ಇದು ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಆದಾಗ್ಯೂ, ಮೂತ್ರದ ಸೋಂಕಿನ ತೀವ್ರತರವಾದ ಪ್ರಕರಣಗಳಲ್ಲಿ, ಹುಳಿ ಅಥವಾ ಇತರ ಆಮ್ಲೀಯ ಆಹಾರವನ್ನು ತಪ್ಪಿಸಬೇಕು. ಇದಕ್ಕಾಗಿ, ನೀವು ಕಿತ್ತಳೆ, ಸೀಸನಲ್ ಹಣ್ಣು, ಸೇಬು ಇತ್ಯಾದಿಗಳ ಸೇವನೆಯನ್ನು ಹೆಚ್ಚಿಸಬೇಕು.

ಕ್ರ್ಯಾನ್‌ಬೆರಿ ರಸವನ್ನು ಕುಡಿಯಿರಿ:

ಕ್ರ್ಯಾನ್‌ಬೆರಿ ರಸವನ್ನು ಕುಡಿಯಿರಿ:

ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಕ್ರ್ಯಾನ್ಬೆರಿ ಜ್ಯೂಸ್ ಪ್ರಯೋಜನಕಾರಿಯಾಗಿದೆ. ಇದನ್ನು ಮೂತ್ರನಾಳದ ಸೋಂಕಿಗೆ ಮನೆಮದ್ದಾಗಿ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ , ಕ್ರ್ಯಾನ್‌ಬೆರಿಗಳು ಪ್ರೋಆಂಥೋಸಯಾನಿಡಿನ್‌ಗಳನ್ನು ಹೊಂದಿದ್ದು, ಇದು ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಆಪಲ್ ಸೈಡರ್ ವಿನೇಗರ್:

ಆಪಲ್ ಸೈಡರ್ ವಿನೇಗರ್:

2018 ರಲ್ಲಿ ವೈಜ್ಞಾನಿಕ ವರದಿಗಳಲ್ಲಿ ಪ್ರಕಟವಾದ ಅಧ್ಯಯನವು ಆಪಲ್ ಸೈಡರ್ ವಿನೆಗರ್ ಕೆಲವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ತೋರಿಸಿದೆ, ಇದು ಮೂತ್ರದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದು ಮೂತ್ರನಾಳದ ಸೋಂಕನ್ನ ಗುಣಪಡಿಸಬಹುದಾದರೂ, ಯಾವುದೇ ದೃಢವಾದ ಪುರಾವೆಗಳಿಲ್ಲ.

ಪ್ರೋಬಯಾಟಿಕ್ ಆಹಾರ ಸೇವನೆ:

ಪ್ರೋಬಯಾಟಿಕ್ ಆಹಾರ ಸೇವನೆ:

ಪ್ರೋಬಯಾಟಿಕ್‌ಗಳು ಮೂತ್ರದ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರೋಬಯಾಟಿಕ್‌ಗಳು ಕೆಲವು ಆಹಾರಗಳಲ್ಲಿ ಕಂಡುಬರುವ ನೇರ ಸೂಕ್ಷ್ಮಜೀವಿಗಳಾಗಿವೆ. ಪ್ರೋಬಯಾಟಿಕ್‌ಗಳು ದೇಹ ಮತ್ತು ಮೆದುಳು ಎರಡರ ಕಾರ್ಯನಿರ್ವಹಣೆಗೆ ಸಹಾಯ ಮಾಡುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಾಗಿವೆ. ಅದಕ್ಕಾಗಿಯೇ ನೀವು ಮೊಸರು ಮತ್ತು ಪನ್ನೀರ್‌ಗಳಂತಹ ಪ್ರೋಬಯಾಟಿಕ್ ಆಹಾರಗಳ ಸೇವನೆಯನ್ನು ಹೆಚ್ಚಿಸಬೇಕು.

English summary

Food And Drinks To Get Rid of Yellow And Smelly Urine Or Urine Odor in Kannada

Here we talking about Food And Drinks To Get Rid of Yellow And Smelly Urine Or Urine Odor in Kannada, read on
Story first published: Friday, March 11, 2022, 11:12 [IST]
X
Desktop Bottom Promotion