Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಗುಡ್‌ನ್ಯೂಸ್: ಫಾವಿಫಿರಾವಿರ್ ಮಾತ್ರೆ ಸೇವಿಸಿದ ನಾಲ್ಕೇ ದಿನದಲ್ಲಿ ಚೇತರಿಸಿಕೊಳ್ಳುತ್ತಿರುವ ಕೋವಿಡ್ 19 ರೋಗಿಗಳು
ಭಾರತದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಪರಿಸ್ಥಿತಿ ಹೀಗೆ ಹೋದರೆ ಜೂನ್ ಅಂತ್ಯದಲ್ಲಿ ಅಥವಾ ಜುಲೈ ತಿಂಗಳಿನಲ್ಲಿ ಕೊರೊನಾ ಮಹಾಸ್ಪೋಟವೇ ಸಂಭವಿಸಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇವೆಲ್ಲದರ ನಡುವೆ ಒಂದು ಆಶಾಕಿರಣ ಮೂಡಿದೆ. ಅದುವೇ ಫಾವಿಫಿರಾವಿರ್ ಮಾತ್ರೆ. ಭಾರತದಲ್ಲಿ ಕೋವಿಡ್-19 ರೋಗಿಗಳಿಗೆ ಈ ಮಾತ್ರೆ ನೀಡಲು ಅನುಮತಿ ದೊರೆತಿದ್ದು ಈ ಮಾತ್ರೆ ಸೇವಿಸಿದ ರೋಗಿಗಳು ಚೇತರಿಸಿಕೊಳ್ಳುತ್ತಿರುವುದು ಸಮಾಧಾನಕರವಾದ ವಿಷಯವಾಗಿದೆ.
ಇಲ್ಲಿ ಫಾವಿಫಿರಾವಿರ್ ಮಾತ್ರೆ ಎಂದರೇನು, ಇದು ಕೋವಿಡ್-19 ರೋಗವನ್ನು ತಡೆಗಟ್ಟುವಲ್ಲಿ ಎಷ್ಟು ಪರಿಣಾಮಕಾರಿ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮಾತ್ರೆ ಬಳಕೆಗೆ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಅನುಮತಿ
ಮುಂಬಯಿ ಮೂಲದ ಗ್ಲೆನ್ಮಾರ್ಕ್ ಔಷಧಿ ಕಂಪನಿ ಈ ಮಾತ್ರೆಗಳನ್ನು ಉತ್ಪಾದಿಸುತ್ತಿದ್ದು ಇದನ್ನು ಬಳಸಲು ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಇದನ್ನು Fabiflu ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು ಇದರ ಬೆಲೆ ಒಂದು ಮಾತ್ರೆಗೆ ರೂ. 103 ನಿಗದಿ ಮಾಡಿದೆ.
200ಮಿಗ್ರಾಂ ಇರುವ ಈ ಮಾತ್ರೆಗಳ ಡಬ್ಬಕ್ಕೆ ದರ ರೂ. 3, 500 ನಿಗದಿ ಮಾಡಲಾಗಿದ್ದು, ಇದರಲ್ಲಿ 34 ಮಾತ್ರೆಗಳಿರುತ್ತವೆ. ಭಾರತದಲ್ಲಿ ಕೋವಿಡ್-19 ರೋಗಿಗಳಿಗೆ ಮೌಖಿಕವಾಗಿ ನೀಡುತ್ತಿರುವ ಮೊದಲ ಕೊರೊನಾವೈರಸ್ ನಾಶದ ಮಾತ್ರೆ ಇದಾಗಿದ್ದು ರೋಗಿಗಳಿಗೆ ಮೊದಲ ದಿನ 1,800ಮಿಗ್ರಾಂ ಎರಡು ಬಾರಿ ನೀಡಬೇಕು, ನಂತರ 800 ಮಿಗ್ರಾಂನಂತೆ 14 ದಿನಗಳವರೆಗೆ ನೀಡಿದರೆ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಎಂದು ಕಂಪನಿ ಹೇಳಿದೆ.
ಈ ಕಂಪನಿ ಮೊದಲ ತಿಂಗಳಿನಲ್ಲಿ ಸುಮಾರು 82, 500 ರೋಗಿಗಳಿಗೆ ನೀಡುವಷ್ಟು ಔಷಧವನ್ನು ಹೊಂದಿದೆ. ಪರಿಸ್ಥಿತಿಯನ್ನು ಪರಿಶೀಲಿಸಿ ಉತ್ಪಾದನೆ ಮಟ್ಟವನ್ನು ಹೆಚ್ಚಿಸಲಾಗುವುದು ಎಮದು ಗ್ಲೆನ್ಮಾರ್ಕ್ ಹೇಳಿದೆ.

ಫಾವಿಫಿರಾವರ್ ಎಂದರೇನು?
ಇದನ್ನು ಜಪಾನ್‌ನಲ್ಲಿ ಇನ್‌ಫ್ಲುಂಜಾ ಚಿಕಿತ್ಸೆಯಲ್ಲಿ ಬಳಸಲಾಗುವುದು. ಇದನ್ನು ಕೋವಿಡ್ ರೋಗಿಗಳಿಗೆ ನೀಡುತ್ತಿದ್ದು ಪರೀಕ್ಷಾ ಹಂತದಲ್ಲಿದ್ದರೂ ಉತ್ತಮ ಫಲಿತಾಂಶ ಕಂಡು ಬಂದಿದೆ. ಈ ಮಾತ್ರೆ ಇತರ ಸಮಸ್ಯೆಗಳಿಂದ ಬಳಲುತ್ತಿರುವ ಕೋವಿಡ್-19 ರೋಗಿಗೆ ಕೊಡಬಹುದೇ ಎಂಬುವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.

ಕೋವಿಡ್-19 ರೋಗಿಗಳ ಮೇಲೆ ಫಾವಿಫಿರಾವಿರ್ ಪರಿಣಾಮ
ಫಾವಿಫಿರಾವಿರ್ ನೀಡಿದ ಬಳಿಕ ರೋಗಿಗಳಲ್ಲಿ ಶೇ. 88ರಷ್ಟು ಚೇತರಿಕೆ ಕಂಡು ಬಂದಿದೆ. ಮಾತ್ರೆ ನೀಡಿದ ನಾಲ್ಕು ದಿನಗಳಲ್ಲಿಯೇ ರೋಗಿಗಳು ಚೇರಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಈ ಮಾತ್ರೆಯನ್ನು 150 ರೋಗಿಗಳಿಗೆ ನೀಡಲಾಗಿತ್ತು. ಅವರಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಉದರ ಕುರಿತ ವಿವರವಾದ ವರದಿ ಇನ್ನಷ್ಟೇ ಬರಬೇಕಾಗಿದೆ.
ಈ ಮಾತ್ರೆಯನ್ನು ಚೀನಾದಲ್ಲಿ 80 ರೋಗಿಗಳಿಗೆ ನೀಡಿ ಪರೀಕ್ಷಿಸಲಾಗಿತ್ತು, ಇದರ ಶೀಘ್ರದ ಫಲಿತಾಂಶ ನೋಡಿ ಎರಡನೇ ಹಂತದ ಪರೀಕ್ಷೆಗೆ ಒಳಪಡಲು 236 ರೋಗಿಗಳು ತಮ್ಮ ಹೆಸರನ್ನು ನಮೂದಿಸಲಾಗಿದೆ ಎಂದು ಕಂಪನಿ ಹೇಳಿದೆ.

ಜ್ವರ-ಕೆಮ್ಮು ಶೀಘ್ರ ಕಡಿಮೆಯಾಗುವುದು
ಇತರ ಔಷಧಗಳಿಗೆ ಹೋಲಿಸಿದರೆ ಈ ಮಾತ್ರೆ ಕೆಮ್ಮು, ಜ್ವರ ಶೀಘ್ರ ಕಡಿಮೆ ಮಾಡುತ್ತದೆ. ಜಪಾನ್‌ನಲ್ಲಿ 2, 141 ರೋಗಿಗಳಿಗೆ ಈ ಔಷಧ ನೀಡಲಾಗಿತ್ತು ಅವರೆಲ್ಲಾ ಬೇಗನೆ ಗುಣಮುಖರಾಗಿದ್ದಾರೆ ಎಂದು ಕಂಪನಿ ಹೇಳಿದೆ.

ಇನ್ನಷ್ಟು ಸಂಶೋಧನೆ ನಡೆಯುತ್ತಿದೆ
ಫಾವಿಫಿರಾವಿರ್ ಸ್ವಲ್ಪ ಕೋವಿಡ್ -19 ಲಕ್ಷಣ ಇರುವವರನ್ನು ಬೇಗನೆ ಗುಣಮುಖರನ್ನಾಗಿ ಮಾಡುತ್ತಿದ್ದು ಇನ್ನು ಗಂಭೀರ ಸ್ವರೂಪದ ರೋಗಿಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಅಲ್ಲದೆ ಮಧುಮೇಹ, ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆ ಇರುವ ರೋಗಿಗಳಲ್ಲಿ ಈ ಮಾತ್ರೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ.



Click it and Unblock the Notifications