Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಲೋವೆರಾ ಸೌಂದರ್ಯ ಸ್ನೇಹಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು
ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಅಲೋವೆರಾ ಅಥವಾ ಲೋಳೆರಸವು ಸೌಂದರ್ಯ ಸ್ನೇಹಿ ಎಂಬುದು ಸಹಜವಾಗಿ ಎಲ್ಲರಿಗೂ ತಿಳಿದಿದೆ. ಆದರೆ, ಇದು ಆರೋಗ್ಯ ವೃದ್ಧಿಸುವುದು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಹೌದು, ಅಲೋವೆರಾದಲ್ಲಿರುವ ತಂಪಾಗಿಸುವ ಗುಣಲಕ್ಷಣಗಳು ಚರ್ಮದ ಸಮಸ್ಯೆಗಳು, ದೋಶಗಳಲ್ಲಿನ ಅಸಮತೋಲನ, ಯಕೃತ್ತು ಮತ್ತು ಕರುಳಿನಲ್ಲಿನ ಅಸ್ವಸ್ಥತೆಗಳಂತಹ ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಸಾಮಾನ್ಯ ಘಟಕಾಂಶವಾಗಿದೆ. ಇದರ ಜೊತೆಗೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.
ಇಂತಹ ಅಲೋವೆರಾವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಲು ಬಯಸಿದರೆ, ಅಲೋವೆರಾ ಜ್ಯೂಸ್ ಪ್ರತಿದಿನ ಸೇವಿಸುವ ಮೂಲಕ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಅಲೋವೆರಾ ಜ್ಯೂಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರೂ, ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು.
ಅಲೋವೆರಾ ಜ್ಯೂಸ್ ಮಾಡುವುದು ಹೇಗೆ?:

ಬೇಕಾಗಿರುವ ಪದಾರ್ಥಗಳು:
ಅಲೋವೆರಾ ಗಿಡ
ನೀರು
ಜೇನುತುಪ್ಪ
ನಿಂಬೆ ರಸ

ತಯಾರಿಸುವ ವಿಧಾನ:
- ಒಂದು ಚಮಚವನ್ನು ತೆಗೆದುಕೊಂಡು ತಾಜಾ ಅಲೋವೆರಾ ಜೆಲ್ ತೆಗೆದು, ಅದನ್ನು ಒಮ್ಮೆ ಹರಿಯುವ ನೀರಿನ ಅಡಿಯಲ್ಲಿ ಹಿಡಿಯಿರಿ. ಇದು ಅಲೋವೆರಾ ಗಿಡದ ಕಹಿಯನ್ನು ದೂರ ಮಾಡುತ್ತದೆ.
- ನಂತರ ಗ್ರೈಂಡರ್‌ಗೆ ಅಲೋವೆರಾ ಜೆಲ್ ಮತ್ತು ನೀರನ್ನು ಸೇರಿಸಿ, ಮಿಶ್ರಣ ಮಾಡಿ.
- ಅದನ್ನು ಒಂದು ಲೋಟಕ್ಕೆ ಹಾಕಿ, ಅದಕ್ಕೆ ರುಚಿಗೆ ತಕ್ಕಂತೆ ಜೇನುತುಪ್ಪ ಸೇರಿಸಿ.
- ಸ್ವಲ್ಪ ನಿಂಬೆ ರಸ ಸೇರಿಸುವುದರಿಂದ, ಅಲೋವೆರಾ ರಸದ ಪರಿಮಳವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಈ ಅಲೋವೆರಾ ಜ್ಯೂಸ್ ಅನ್ನು ಹಾಗೆಯೇ ಸೇವಿಸಬಹುದು ಅಥವಾ ಅದನ್ನುಸಾಮಾನ್ಯ ಸ್ಮೂಥಿಗಳೊಂದಿಗೆ ಬೆರೆಸಬಹುದು.

ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:
ರೋಗ ನಿರೋಧಕ ಶಕ್ತಿ ವೃದ್ಧಿ:
ಅಲೋವೆರಾ ಜ್ಯೂಸ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಜೊತೆಗೆ ಉರಿಯೂತದ ವಿರುದ್ಧ ಹೋರಾಡುತ್ತದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಲು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಅಷ್ಟೆ ಅಲ್ಲ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆ ನಿವಾರಣೆ:
ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲೋವೆರಾ ರಸವು ಕರುಳಿನಲ್ಲಿ ನೀರಿನ ಅಂಶವನ್ನು ಹೆಚ್ಚಿಸಸುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ.

ದೇಹಕ್ಕೆ ಶಕ್ತಿ ನೀಡುವುದು:
ಅಲೋವೆರಾವು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ಸೋಡಿಯಂ ಮುಂತಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಆದ್ದರಿಂದ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಈ ಎಲ್ಲಾ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರುವ ಮೂಲಕ ದೇಹಕ್ಕೆ ಶಕ್ತಿ ನೀಡುತ್ತದೆ.

ತ್ವಚೆಗೆ ಸಹಕಾರಿ:
ಅಲೋವೆರಾ ಜ್ಯೂಸ್‌ನಲ್ಲಿ ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಿಮ್ಮ ಚರ್ಮಕ್ಕೆ ಉತ್ತಮವಾಗಿದೆ. ಅಲೋವೆರಾ ಜ್ಯೂಸ್ ತೇವಾಂಶವನ್ನು ನೀಡುತ್ತದೆ, ಜೊತೆಗೆ ನಿಮ್ಮ ಚರ್ಮಕ್ಕೆ ಒಳಗಿನಿಂದ ಸುಂದರವಾದ ಹೊಳಪನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಮೊಡವೆಗಳು ಮತ್ತು ಬಿರುಕುಗಳನ್ನು ಕಡಿಮೆ ಮಾಡುವುದು.



Click it and Unblock the Notifications
