23 ದಿನಗಳಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡ ಧ್ರುವ ಸರ್ಜಾ: ಲಿಕ್ವಿಡ್ ಡಯಟ್‌ ಬೇಗನೆ ತೂಕ ಇಳಿಸುತ್ತಾ?

ಸಿನಿಮಾ ನಟ-ನಟಿಯರು ತಮ್ಮ ಪಾತ್ರಕ್ಕೆ ತಕ್ಕಂತೆ ದೇಹದ ತೂಕದಲ್ಲಿ ಬದಲಾವಣೆ ಮಾಡುವುದನ್ನು ನೋಡುತ್ತೇವೆ. ಇದೀಗ ಧ್ರುವ ಸರ್ಜಾ ಸರದಿ. ಧ್ರುವ ಮೈ ತೂಕವನ್ನು ಕಡಿಮೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಪೊಗರು ಚಿತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದರು.

Actor Dhruva Sarja

ಪೊಗರು ಚಿತ್ರದಲ್ಲಿ ಹದಿಹರೆಯದ ಹುಡುಗನ ಲುಕ್‌ಗಾಗಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಇದೀಗ KD ಚಿತ್ರಕ್ಕಾಗಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅದೂ 23 ದಿನಗಳಲ್ಲಿ.

ಧ್ರುವ ಸರ್ಜಾ 13 ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಂಡಿದ್ದು ಹೇಗೆ ಎಂದು ನೋಡೋಣ ಬನ್ನಿ:

 ಬರೀ ಲಿಕ್ವಿಡ್‌ ಡಯಟ್

ಬರೀ ಲಿಕ್ವಿಡ್‌ ಡಯಟ್

23 ದಿನಗಳಲ್ಲಿ 18 ಕೆಜಿ ಕಡಿಮೆಯಾಗುವುದು ಸುಲಭವಲ್ಲ. ಈಗ ಸೋಷಿಯಲ್‌ ಮೀಡಿಯಾದಲ್ಲಿ ಅವರು ಮತ್ತಷ್ಟು ತೆಳ್ಳಗಾಗಿ ಫಿಟ್‌ ಅಂಡ್‌ ಹ್ಯಾಂಡ್ಸಮ್‌ ಆಗಿರುವ ಫೋಟೋ ಗಮನ ಸೆಳೆಯುತ್ತಿದೆ. ಪೊಗರು ಚಿತ್ರದಲ್ಲಿ ಮೈ ತೂಕವನ್ನು ಕಡಿಮೆ ಮಾಡಲು ಲಿಕ್ವಿಡ್ ಡಯಟ್ ಮಾಡಿದ್ದರು. ಇದೀಗ ಮತ್ತೆ ಅದೇ ಡಯಟ್‌ ಫಾಲೋ ಮಾಡಿರಬಹುದು. ಅವರು ಈ ಡಯಟ್‌ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

 ಈ ಲಿಕ್ವಿಡ್‌ ಡಯಟ್‌ ತೂಕ ಇಳಿಕೆಗೆ ಸಹಕಾರಿಯೇ?

ಈ ಲಿಕ್ವಿಡ್‌ ಡಯಟ್‌ ತೂಕ ಇಳಿಕೆಗೆ ಸಹಕಾರಿಯೇ?

ತೂಕ ಇಳಿಕೆಗೆ ಲಿಕ್ವಿಡ್‌ ಡಯಟ್‌ ತುಂಬಾ ಸಹಕಾರಿ. ಲಿಕ್ವಿಡ್‌ ಡಯಟ್‌ನಲ್ಲಿ ಬೇಗನೆ ತೂಕ ಕಡಿಮೆಯಾಗುವುದು. ಆದರೆ ಯಾವುದೇ ತಜ್ಞರ ಸಲಹೆ ಪಡೆಯದೆ ನೀವು ಡಯಟ್‌ ಮಾಡಿದರೆ ತುಂಬಾನೇ ಅಪಾಯಕಾರಿ ಕೂಡ ಹೌದು.

ಏಕೆಂದರೆ ಈ ಡಯಟ್‌ನಲ್ಲಿ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಲ್ಲದೆ ಈ ಡಯಟ್‌ನಲ್ಲಿ ದೇಹದಲ್ಲಿರುವ ಬೊಜ್ಜು ಕರಗುವುದು, ಅಲ್ಲದೆ ಕೆಲವರಿಗೆ ನಿಶ್ಯಕ್ತಿ ಉಂಟಾಗುತ್ತದೆ.

 ಲಿಕ್ವಿಡ್‌ ಡಯಟ್‌ ಅಪಾಯಗಳೇನು?

ಲಿಕ್ವಿಡ್‌ ಡಯಟ್‌ ಅಪಾಯಗಳೇನು?

ಲಿಕ್ವಿಡ್‌ ಡಯಟ್‌ ಪಾಲಿಸುವುದರಿಂದ ಈ ಅಪಾಯಗಳಿವೆ:

ತಲೆಸುತ್ತು, ಸುಸ್ತು, ಕೂದಲು ಉದುರುವುದು, ಗಾಲಾ ಸ್ಟೋನ್, ಲಿವರ್‌ ಹಾನಿ, ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಡಯಟ್‌ ಅನ್ನು ತಜ್ಞರ ಸಲಹೆ ಪಡೆಯದೆ ಮಾಡಲೇಬಾರದು,

ಅಲ್ಲದೆ ಲಿಕ್ವಿಡ್‌ ಡಯಟ್‌ನಲ್ಲಿ ದೇಹಕ್ಕೆ ನಾರಿನಂಶ ದೊರೆಯುವುದಿಲ್ಲ. ಆದ್ದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದು.

ಈ ಡಯಟ್‌ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು

ನಿಮಗೆ ವೈದ್ಯರು ಲಿಕ್ವಿಡ್‌ ಡಯಟ್‌ ತೆಗೆದುಕೊಳ್ಳಲು ಹೇಳಿದರೆ ನೀವು ಲಿಕ್ವಿಡ್‌ ಡಯಟ್‌ ಪಾಲಿಸಬಹುದು. ನೀವೇ ಲಿಕ್ವಿಡ್‌ ಡಯಟ್‌ ಪಾಲಿಸಲು ಯೋಚಿಸುವುದಾದರೆ ನೀವು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ನೀವು ಲಿಕ್ವಿಡ್‌ ಡಯಟ್‌ ಪಾಲಿಸಬಹುದು. ಅಲ್ಲದೆ ಲಿಕ್ವಿಡ್‌ ಡಯಟ್‌ ಪಾಲಿಸುವಾಗ ಯಾವುದೇ ಕಮರ್ಷಿಯಲ್ ಡಯಟ್‌ ಪಾಲಿಸಬೇಡಿ. ನ್ಯೂಟ್ರಿಷಿಯನಿಸ್ಟ್‌ ಬಳಿ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಬೇಕು.

ಇನ್ನು ಇದ್ದಕ್ಕಿದ್ದಂತೆ ತೂಕ ಇಳಿಕೆ ಮಾಡುವುದರಿಂದ ಅಪಾಯಗಳೇನು?

ಇನ್ನು ಇದ್ದಕ್ಕಿದ್ದಂತೆ ತೂಕ ಇಳಿಕೆ ಮಾಡುವುದರಿಂದ ಅಪಾಯಗಳೇನು?

ತೂಕ ಇಳಿಕೆಗೆ ಹಲವಾರುವ ವಿಧಾನಗಳಿವೆ. ಕೆಲವೊಂದು ಡಯಟ್‌ನಲ್ಲಿ ಬೇಗನೆ ತೂಕ ಇಳಿಕೆಯಾಗುವುದು, ಆದರೆ ಇದರಲ್ಲಿ ಅಪಾಯ ಹೆಚ್ಚು. ಅಲ್ಲದೆ ಬೇಗನೆ ತೂಕ ಇಳಿಕೆ ಮಾಡಿದರೆ ಈ ಅಪಾಯಗಳಿವೆ:

* ಸ್ನಾಯುಗಳು ಬಲಹೀನವಾಗುವುದು: ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾದರೆ ಸ್ನಾಯುಗಳು ಬಲಹೀನವಾಗುವುದು. ಡಿಮೆ ಕ್ಯಾಲೋರಿ ಆಹಾರಗಳು ಮೈ ತೂಕವನ್ನು ಬೇಗನೆ ಇಳಿಸುವುದರಿಂದ ಸ್ನಾಯುಗಳಲ್ಲಿರುವ ಶಕ್ತಿ ಕುಂದುವುದು.

ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು: ತೂಕ ಇಳಿಕೆಗೆ ಚಯಪಚಯಕ್ರಿಯೆ ತುಂಬಾನೇ ಮುಖ್ಯ. ಇದು ನಾವು ತಿಂದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅದೇ ಕಡಿಮೆ ಕ್ಯಾಲೋರಿ ಆಹಾರ ಸೇರಿಸಲಾರಂಭಿಸಿದಾಗ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಇದರಿಂದ ಹಾರ್ಮೋನ್ ಬದಲಾವಣೆಯಾಗಬಹುದು.

ಪೋಷಕಾಂಶದ ಕೊರತೆ ಉಂಟಾಗುವುದು

ಕೆಲವರು ಬೇಗನೆ ಮೈ ತೂಕ ಕಡಿಮೆಯಾಗಲು ಕ್ಯಾಲೋರಿ ಕಡಿಮೆ ಇರುವ ಆಹಾರ ಸೇವಿಸುತ್ತಾರೆ. ಇನ್ನು ಕೆಲವರು ಒಂದು ಅಥವಾ ಎರಡು ಹೊತ್ತು ಊಟ ಬಿಡುವ ತಪ್ಪು ಮಾಡುತ್ತಾರೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ಕಾಯಿಲೆಗಳು ಬರುವುದು.

ಎಲೆಕ್ಟ್ರೋಲೈಟ್‌ ಅಸಮತೋಲನ ಉಂಟಾಗುವುದು'

ಮಾನವನ ದೇಹ ಸಣ್ಣ ಪುಟ್ಟ ಬದಲಾವಣೆ ತಡೆದುಕೊಳ್ಳುತ್ತದೆ, ಆದರೆ ದೊಡ್ಡ ಬದಲಾವಣೆ ತಡೆದುಕೊಳ್ಳುವುದಿಲ್ಲ, ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾದರೆ ಎಲೆಕ್ಟ್ರೋಲೈಟ್‌ ಬದಲಾವಣೆಯಾಗುವುದು. ಇದರಿಂದ ಅಂಗಾಂಗಗ ವೈಫಲ್ಯ ಕೂಡ ಉಂಟಾಗಬಹುದು.

ತಲೆಸುತ್ತು

ಬೇಗನೆ ಮೈ ತೂಕ ಕಡಿಮೆಯಾದರೆ ಸುಸ್ತು, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರುವುದು. ಆದ್ದರಿಂದ ಬೇಗನೆ ಮೈ ತೂಕ ಕಡಿಮೆಯಾಗಬೇಕೆಂಬ ದಾವಂತ ಬೇಡ.

ಸೆಲೆಬ್ರಿಟಿಗಳನ್ನು ನೋಡಿ ನೀವು ಮಾಡಬೇಡಿ

ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳು ಮೈ ತೂಕ ಬೇಗನೆ ಕಡಿಮೆ ಮಾಡಿದರು ಅಂತ ನೀವು ಪ್ರಯತ್ನಿಸಬೇಕು. ಅವರು ನ್ಯೂಟ್ರಿಷಿಯನಿಸ್ಟ್‌, ಡಾಕ್ಟರ್ ಎಲ್ಲರ ಸಲಹೆ ಪಡೆದು ಮೈ ತೂಕದಲ್ಲಿ ವ್ಯತ್ಯಾಸ ಮಾಡುತ್ತಾರೆ. ಆದ್ದರಿಂದ ನೀವು ಬೇಗನೆ ಮೈ ತೂಕ ಕಡಿಮೆಯಾಗಲು ಆಹಾರ ಬಿಡುವುದು ಅಥವಾ ಬರೀ ಲಿಕ್ವಿಡ್‌ ಡಯಟ್‌ ಈ ರಿತಿ ಮಾಡಿದರೆ ನಿಮ್ಮ ಆರೋಗ್ಯ ಜೋಪಾನ!

English summary

Actor Dhruva Sarja lost 18 kg in 23 days; Know his weight loss journey in kannada

Actor Dhruva Sarja lost 18 kg in 23 days; What is his diet plan, liquid diet good for body, Read on...
X
Desktop Bottom Promotion