Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಚಿಯಾ ಬೀಜ ತಿಂದ್ರೆ ತೂಕ ಕಡಿಮೆಯಾಗುವುದೇ? ಹೇಗೆ?
ತೂಕ ಕಡಿಮೆ ಮಾಡಬೇಕು, ಈ ಹೆಚ್ಚುತ್ತಿರುವ ಹೊಟ್ಟೆ ಬೊಜ್ಜು ಕಡಿಮೆ ಮಾಡಬೇಕು. ಆದರೆ ಹೇಗೆ ಎಂಬುವುದೇ ಬಹುತೇಕರ ಸಮಸ್ಯೆಯಾಗಿದೆ. ಕೆಲವರು ತೂಕ ಇಳಿಕೆಗೆ ನಾನಾ ಪ್ರಯತ್ನ ಮಾಡುತ್ತಾರೆ. ಕೆಲವರು ತೂಕ ಇಳಿಕೆ ಮಾಡಬೇಕೆಂದು ಸರಿಯಾಗಿ ಊಟ ಮಾಡುವುದಿಲ್ಲ, ಈ ತಪ್ಪು ಮಾಡಲೇಬಾರದು.
ಏಕೆಂದರೆ ಹೀಗೆ ಮಾಡವುದರಿಂದ ತೂಕ ಕಡಿಮೆಯಾಗುವುದಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ಆರೋಗ್ಯಕರ ವಿಧಾನ ಬಳಸುವುದು ಒಳ್ಳೆಯದು. ನಾವಿಲ್ಲಿ ಅಂಥದ್ದೊಂದು ವಿಧಾನದ ಬಗ್ಗೆ ಹೇಳಿದ್ದೇವೆ.

ನಿಮಗೆಲ್ಲಾ ಚಿಯಾ ಬೀಜ ಗೊತ್ತಿದೆ ಅಲ್ವಾ?
ಚಿಯಾ ಬೀಜ ಪೋಷಕಾಂಶಗಳ ಆಗರ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್‌ಗಳು, ಖನಿಜಾಂಶಗಳು, ಅತ್ಯಧಿಕ ನಾರಿನಂಶ, ಪ್ರೊಟೀನ್, ಒಮೆಗಾ 3 ಕೊಬ್ಬಿನಂಶವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದರಿಂದ ಚಯಾಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು. ತೂಕ ಇಳಿಕೆಗೆ ಬಹುಮುಖ್ಯವಾದ ಅಂಶವೆಂದರೆ ನಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಬೇಕು. ಅದಕ್ಕೆ ಈ ಚಿಯಾ ಬೀಜ ಸಹಕಾರಿಯಾಗಿದೆ.
ಚಿಯಾ ಬೀಜ ತೂಕ ಇಳಿಕೆಗೆ ಹೇಗೆ ಸಹಕರಿ?
ಇದನ್ನು ಸೇವಿಸುವುದರಿಂದ ಸಸ್ಯಮೂಲ ಪ್ರೊಟೀನ್ ದೊರೆಯುವುದು. ಇದರಿಂದ ಸ್ನಾಯುಗಳು ಬಲವಾಗುವುದು, ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ. ಇದು ಮೈ ಬೊಜ್ಜು ಕರಗಿಸುತ್ತದೆ. ಚಿಯಾ ಬೀಜ ಸೇವಿಸಿದರೆ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದಾಗಿ ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕಬಹುದು.
ಚಿಯಾ ಬೀಜ ಹೇಗೆ ಬಳಸಬೇಕು?
ಚಿಯಾ ಬೀಜವನ್ನು ಸಲಾಡ್ ಅಥವಾ ಮಿಲ್ಕ್ ಶೇಕ್ ಜೊತೆ ಬಳಸುತ್ತಾರೆ. ಇದರಿಂದ ನಿಜವಾದ ಪ್ರಯೋಜನ ಪಡೆಯಬೇಕೆಂದರೆ ಇದನ್ನು ಈ ರೀತಿ ಬಳಸಿ.
ಚಿಯಾ ಬೀಜ ರಾತ್ರಿ ನೆನೆಹಾಕಿ
ಚಿಯಾ ಬೀಜವನ್ನು ರಾತ್ರಿಯಲ್ಲಿ ನೆನೆ ಹಾಕಿ, ಹಾಲು ಅಥವಾ ನೀರಿನಲ್ಲಿ ನೆನೆಹಾಕಬಹುದು. ನಂತರ ಮಾರನೇಯ ದಿನ ಬ್ರೇಕ್‌ಫಾಸ್ಟ್‌ಗೆ ಮುನ್ನ ಬಳಸಿ. ನೀವು ರಾತ್ರಿ ನೆನೆ ಹಾಕಲು ಮರೆತ ದಿನ ಸೇವಿಸುವ 20 ನಿಮಿಷ ಮುನ್ನ ನೆನೆ ಹಾಕಿ ಬಳಸಬಹುದು.
ಚಿಯಾ ಬೀಜ ಹಾಗೆಯೇ ತಿನ್ನಬಾರದೇ?
ಹಾಗೇನು ಇಲ್ಲ, ನೀವು ನೆನೆ ಹಾಕದೆಯೂ ಸೇವಿಸಿಬಹುದು, ಆದರೆ ಹೀಗೆ ತಿನ್ನುವುದರಿಂದ ಇದು ದೇಹದಲ್ಲಿ ನೀರಿನಂಶ ಕಡಿಮೆ ಮಾಡುವುದರಿಂದ ನೀವು ನೆನೆಹಾಕಿ ಬಳಸುವುದು ಒಳ್ಳೆಯದು.
ಬರೀ ಚಿಯಾ ಬೀಜದಿಂದ ತೂಕ ಇಳಿಕೆ ಸಾಧ್ಯವಿಲ್ಲ?
ನೀವು ಚಿಯಾ ಅಂತಲ್ಲ, ಯಾವುದೇ ಆಹಾರವನ್ನು ಸೇವಿಸಿ ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಲು ಸಾಧ್ಯವಿಲ್ಲ. ಈ ಪೌಡರ್ ಮಾತ್ರ ಸೇವಿಸಿದರೆ ಸಾಕು ಮೈ ತೂಕ ಕಡಿಮೆಯಾಗುವುದು ಎಂಬುವುದೆಲ್ಲಾ ಸುಳ್ಳು. ನೀವು ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಬೇಕೆಂದಿದ್ದರೆ ವ್ಯಾಯಾಮ ಮಾಡಿ. ದಿನದಲ್ಲಿ ಅರ್ಧ ಗಂಟೆ ವರ್ಕೌಟ್ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
