Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿದ್ಯಾರ್ಥಿಗಳ ಪರೀಕ್ಷಾ ಆತಂಕ ದೂರಾಗಿಸೋದು ಹೇಗೆ? ಕ್ಲೀನಿಕಲ್ ಸೈಕಾಲಜಿಸ್ಟ್ ಸಲಹೆ ಇಲ್ಲಿದೆ..!!
ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಯಾವಾಗಲು ಈ ಪರೀಕ್ಷಾ ಭಯ ಇದ್ದೇ ಇರುತ್ತೆ. ಅದ್ರಲ್ಲೂ ಈಗ ಪಬ್ಲೀಕ್ ಪರೀಕ್ಷೆಗಳು ಆರಂಭಗೊಳ್ಳಲಿದೆ. 5,8,9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಎದುರಾಗಲಿದೆ. ಇದು ಬರಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪೋಷಕರಿಗೆ, ಶಿಕ್ಷಕರಿಗೂ ಒತ್ತಡದ ಸಮಯವೇ ಸರಿ.
ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಕಷ್ಟಕರವಾಗಲಿದೆ. ಅಲ್ಲದೆ ಪರೀಕ್ಷೆ ಎಂಬ ಭಯದಿಂದಲೇ ಅವರು ಓದಿನತ್ತ ಗಮನ ಕೊಡುವುದು ಕಷ್ಟವಾಗಲಿದೆ. ಹಾಗಾದ್ರೆ ಈ ಪರೀಕ್ಷಾ ಭಯ ಹೋಗಲಾಡಿಸಲು ಏನು ಮಾಡಬೇಕು. ಈ ಕುರಿತು ನಮ್ಮ ಮನಸ್ಸನ್ನು ಪರೀಕ್ಷೆಗೆ ತಯಾರು ಮಾಡುವುದು ಹೇಗೆ? ಈ ಕುರಿತಂತೆ ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್.ಆರ್ ನೀಡಿರುವ ವಿವರಣೆ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ಮಾನಸಿಕ ಸಮಸ್ಯೆಗಳಲ್ಲಿ ಈ ಪರಿಕ್ಷಾ ಆತಂಕ ಸಹ ಒಂದಾಗಿದೆ. ಈ ಪರೀಕ್ಷಾ ಆತಂಕ್ಕೆ ನಿಖರ ಕಾರಣ ಹೇಳುವುದು ಕಷ್ಟ. ಆದರೆ ಒಂದಿಷ್ಟು ಕಾರಣಗಳನ್ನು ನಾವು ಪಟ್ಟಿ ಮಾಡಬಹುದು ಎಂದು ಅರುಣ್ ಎನ್.ಆರ್ ಹೇಳಿದ್ದಾರೆ.
ನಿರ್ದಿಷ್ಟ ಗುರಿ ಹಾಗೂ ಪೂರ್ವ ತಯಾರಿ ಇಲ್ಲದಿರುವುದು
ಮಕ್ಕಳಲ್ಲಿ ಯಾವಾಗ ಪೂರ್ವ ತಯಾರಿ ಹಾಗೂ ನಿರ್ದಿಷ್ಟ ಗುರಿ ಇರುವುದಿಲ್ಲವೋ ಆಗ ಪರೀಕ್ಷಾ ಆತಂಕ ಹೆಚ್ಚಾಗಿರುತ್ತದೆ. ನಾನು ಪರೀಕ್ಷೆಗೆ ಹೇಗೆ ತಯಾರಾಗಬೇಕು? ಯಾವ ಪ್ರಶ್ನೆಗೆ ಉತ್ತರ ಬರೆಯಬೇಕು? ಯಾವ ಪ್ರಶ್ನೆ ಕೇಳಬಹುದು? ಎಷ್ಟು ಓದಿಕೊಳ್ಳಬೇಕು? ಎಂಬ ನಿರ್ದಿಷ್ಟ ಗುರಿ ಮತ್ತು ತಯಾರಿ ಇಲ್ಲದಿದ್ದರೆ ಸಹಜವಾಗಿಯೇ ಮಕ್ಕಳಲ್ಲಿ ಆತಂಕದ ಸ್ವಭಾವ ಕಾಣಬಹುದು ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್.ಆರ್ ವಿವರಿಸಿದ್ದಾರೆ.
ಸ್ಪರ್ಧಾತ್ಮಕ ಮನೋಭಾವ
ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಈಗ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯಕರ ಸ್ಪರ್ಧೆಯಲ್ಲಿ ಮಕ್ಕಳು ಕಲಿಕೆಯಲ್ಲಿ ಗಮನವಿಟ್ಟರೆ ಅನರೋಗ್ಯಕರ ಸ್ಪರ್ಧೆಯಲ್ಲಿ ಯಾವಾಗಲೂ ಒತ್ತಡ ಹಾಗೂ ಆತಂಕ ಎದುರಾಗುತ್ತದೆ. ಅವನಿಗಿಂತ ಅಥವಾ ಅವಳಿಗಿಂತ ನಾನು ಹೆಚ್ಚು ಅಂಕ ಪಡೆಯಲೇಬೇಕು ಎಂದು ತನ್ನ ಬುದ್ದಿ ಸಾಮರ್ಥ್ಯ ಮೀರಿ ಪ್ರಯತ್ನಿಸಿದಾಗ ಮಕ್ಕಳಲ್ಲಿ ನಿರೀಕ್ಷಿತ ಫಲ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಆತಂಕ್ಕೆ ಕಾರಣವಾಗಲಿದೆ. ಈ ಆತಂಕ ಪರೀಕ್ಷೆ ಹತ್ತಿರ ಬಂದಾಗಲೆಲ್ಲ ಜಾಗೃತವಾಗಲಿದೆ.
ಪಾಲಕರು, ಪೋಷಕರು, ಶಿಕ್ಷಕರ ಆತಂಕ
ವಿದ್ಯಾರ್ಥಿಗಳಲ್ಲಿ ಪರಿಕ್ಷಾ ಆತಂಕ ಎದುರಾಗಲು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಪೋಷಕರು, ಶಿಕ್ಷಕರು, ಪಾಲಕರು ದಂಡಿಸುತ್ತಾರೆ ಎಂಬ ಆತಂಕಕ್ಕೆ ಒಳಗಾಗಿರುತ್ತದೆ. ಇದು ಪರೀಕ್ಷೆ ಕುರಿತು ಮಕ್ಕಳಲ್ಲಿ ಭಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ ಎಂದು ಅರುಣ್ ಎನ್ ಆರ್ ಸಲಹೆ ನೀಡುತ್ತಾರೆ.
ಹಾಗಾದ್ರೆ ಮಕ್ಕಳಲ್ಲಿ ಈ ಪರೀಕ್ಷಾ ಭಯ ಹೋಗಲಾಡಿಸುವುದು ಹೇಗೆ?
ಮಕ್ಕಳಿಗೆ ಸರಿಯಾದ ಗುರಿ ಮತ್ತು ತಯಾರಿ ಮಾಡಿಸುವುದು
ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಪೋಷಕರು ಮುಖ್ಯವಾಗಿ ಈ ಕೆಲಸ ಮಾಡಬೇಕಾಗುತ್ತದೆ. ಅವರನ್ನು ಮೊದಲಿನಿಂದಲೇ ಪರೀಕ್ಷೆಗೆ ತಯಾರು ಮಾಡುವುದು. ಜೊತೆಗೆ ಅವರ ಗುರಿಯನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸುವುದು. ಎಲ್ಲಾ ಮಕ್ಕಳಿಗೂ ಶೇ.90ರಷ್ಟು ಅಂಕ ಗಳಿಸುವುದು ಕಷ್ಟದ ಕೆಲಸ. ಹೀಗಾಗಿ ಅವರ ಸಾಮರ್ಥ್ಯ ಏನು ಎಂಬುದನ್ನು ನೀವೇ ನಿರ್ಧರಿಸಿ ಅವರಿಗೂ ಆ ಕುರಿತ ತಿಳುವಳಿಕೆ ಮೂಡಿಸಿ.
ಜೊತೆಗೆ ಯಾವ ರೀತಿ ಓದಿಕೊಳ್ಳಬೇಕು? ಯಾವ ವಿಚಾರವನ್ನ ಓದಿಕೊಳ್ಳಬೇಕು? ಹೇಗೆ ಓದಿಕೊಂಡರೆ ಉತ್ತರ ಬರೆಯಬಹುದು ಎಂಬ ತಯಾರಿಯನ್ನ ಮಾಡಬೇಕಾಗುತ್ತದೆ. ಯುದ್ಧಕಾಲಕ್ಕೆ ಶಸ್ತ್ರಭ್ಯಾಸ ಮಾಡಿಸದೆ ಪರೀಕ್ಷೆಗೂ ಮೊದಲೇ ಇದನ್ನು ಅವರಿಗೆ ತಯಾರಿ ನಡೆಸಬೇಕು ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್.ಆರ್ ವಿವರಿಸುತ್ತಾರೆ.
ಸಮಯ ನಿರ್ವಹಣೆ
ಪರೀಕ್ಷೆಯನ್ನು ಬರೆಯುವ ಬದಲು ಪರೀಕ್ಷೆಯನ್ನು ಹೇಗೆ ಬರೆಯಬೇಕು ಎಂಬುದನ್ನು ತಿಳಿ ಹೇಳಬೇಕು. ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಲು ಸಲಹೆ ನೀಡುವುದು. ಸೇರಿ ಅವರು ಒದಿಕೊಂಡಿರುವ ವಿಷಯಗಳನ್ನು ನೀವು ಸಹ ಒಮ್ಮೆ ಪರಿಶೀಲಿಸುವುದು ಅವರಲ್ಲಿ ಸಮಯ ನಿರ್ವಹಣೆ ಕುರಿತಂತೆ ವಿವರಿಸುವುದು, ಯಾವ ಪ್ರಶ್ನೆಗೆ ಎಷ್ಟು ಸಮಯ ಮೀಸಲಿಟ್ಟು ಉತ್ತರ ಬರೆಯಬೇಕು ಎಂಬುದನ್ನು ಸಹ ಅವರಿಗೆ ತಿಳಿ ಹೇಳಬೇಕು. ಇದರಿಂದ ಪರೀಕ್ಷೆ ಕುರಿತ ಅವರ ಆತಂಕ ದೂರಾಗಲಿದೆ ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್.ಆರ್ ವಿವರಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
