Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಕಲ್ಲಂಗಡಿ ಹಣ್ಣಿನಲ್ಲಿ ಈ 4 ಬದಲಾವಣೆ ಕಂಡರೆ ಅವು ಕೆಮಿಕಲ್ ಹಾಕಿದ ಹಣ್ಣುಗಳು
ಕೆಂಪಾದ ಕಲ್ಲಂಗಡಿ ಹಣ್ಣು ನೋಡುವಾಗ ಬಾಯಲ್ಲಿ ನೀರೂರುತ್ತದೆ, ಅಲ್ಲದೆ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಕಣ್ಣುಗಳಿಗೆ ಒಳ್ಳೆಯದು, ಹೀಗೆ ಇವುಗಳನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ಒಂದಾ.. ಎರಡಾ, ಆದರೆ ಇಷ್ಟೆಲ್ಲಾ ಗುಣಗಳು ಸಿಗಬೇಕೆಂದರೆ ಅವುಗಳಿಗೆ ರಾಸಾಯನಿಕ ಬಳಸಬಾರದಷ್ಟೇ...

ಮಾರುಕಟ್ಟೆಗೆ ಬರುವ ಎಲ್ಲಾ ಕಲ್ಲಗಡಿ ಹಣ್ಣುಗಳು ರಾಸಾಯನಿಕ ಮುಕ್ತ ಎಂದು ಹೇಳಲು ಸಾಧ್ಯವಿಲ್ಲ. ಬೇಗನೆ ಹಾಳಾಗಬಾರದು, ಒಳಭಾಗ ಕೆಂಪು ಬಣ್ಣದಲ್ಲಿ ಇರಬೇಕು ಹೀಗೆ ನಾನಾ ಕಾರಣಗಳಿಗಾಗಿ ಕಲ್ಲಂಗಡಿಗೆ ರಾಸಾಯನಿಕ ಹಾಕುತ್ತಾರೆ. ಇಂಥ ಹಣ್ಣುಗಳು ನೋಡಿದರೆ ತುಂಬಾ ಕೆಂಪಾಗಿ ಇರುತ್ತದೆ, ಆದರೆ ಕಲ್ಲಂಗಡಿ ಹಣ್ಣಿನ ಯಾವುದೇ ರುಚಿ ಇರಲ್ಲ, ಇನ್ನು ಹಣ್ಣು ಸಿಹಿಯಾಗಲಿ ಎಂದು ಕೂಡ ರಾಸಾಯನಿಕ ಬಳಸುತ್ತಾರೆ. ಇಂಥ ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಕೆಟ್ಟದ್ದು...
ಕಲ್ಲಂಗಡಿ ಹಣ್ಣಿಗೆ ರಾಸಾಯನಿಕ ಬಳಸಿದೆ ಎಂದು ಹೇಗೆ ಹೇಳಬಹುದು?
ಬೀಜ ನೋಡಿ ಹೇಳಬಹುದು
ಕಲ್ಲಂಗಡಿ ಹಣ್ಣು ಚೆನ್ನಾಗಿ ಬಲಿತಿರಬೇಕು, ಆದರೆ ಎಳೆಯ ಕಲ್ಲಂಗಡಿ ಹಣ್ಣು ತಂದು ಅದಕ್ಕೆ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ, ಹೀಗೆ ಹಣ್ಣಾದ ಕಲ್ಲಂಗಡಿ ಬೀಜಗಳು ತುಂಬಾ ಎಳೆಯದಾಗಿರುತ್ತದೆ, ಚೆನ್ನಾಗಿ ಬಲಿತಿರುವ ಕಲ್ಲಂಗಡಿ ಹಣ್ಣಿನ ಬೀಜ ಕಪ್ಪಿರುತ್ತದೆ.
ಕತ್ತರಿಸಿದಾಗ ತಿಳಿಯುವುದು
ಕಲ್ಲಂಗಡಿ ಆಯ್ಕೆ ಮಾಡುವಾಗ ತುಂಬಾ ಜನರಿಗೆ ಗೊತ್ತಾಗುವುದಿಲ್ಲ, ಆದರೆ ಅವುಗಳನ್ನು ಕತ್ತರಿಸಿ ನೋಡಿದರೆ ಗೊತ್ತಾಗುವುದು. ಹಣ್ಣುಗಳಿಗೆ ರಾಸಾಯನಿಕ ಇಂಜೆಕ್ಷನ್ ನೀಡಿದ್ದರೆ ಅದರ ತಿರುಳು ಬಿರುಕು ಬಿಟ್ಟಿರುತ್ತದೆ, ಬಣ್ಣದಲ್ಲಿ ವ್ಯತ್ಯಾಸ ಉಂಟಾಗಿರುತ್ತದೆ. ಕತ್ತರಿಸಿದಾಗ ಒಡೆದ ರೀತಿಯಲ್ಲಿದ್ದರೆ ಆ ಕಲ್ಲಂಗಡಿಯಲ್ಲಿ ರಾಸಾಯನಿಕ ಅಂಶವಿದೆ ಎಂದು ಹೇಳಬಹುದು.
ಹಣ್ಣುಗಳ ಮೇಲೆ ಬಿಳಿ ಹುಡಿ
ಕಲ್ಲಂಗಡಿ ಹಣ್ಣುಗಳ ಮೇಲೆ ಬಿಳಿ ರೀತಿಯ ಹುಡಿಗಳು ಕಂಡು ಬಂದರೆ ಅಂಥ ಹಣ್ಣುಗಳ ಮೇಲೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಊಹಿಸಬಹುದು. ಅವುಗಳನ್ನು ಕೈಯಿಂದ ಮುಟ್ಟಿದಾಗ ಆ ಹುಡಿ ನಿಮ್ಮ ಕೈಗೆ ಅಂಟುತ್ತದೆ, ಅಂಥ ಹಣ್ಣುಗಳನ್ನು ಕೊಳ್ಳಬೇಡಿ.
ಸೂಜಿ ಚುಚ್ಚಿದಂಥ ರಂಧ್ರ
ಸಾಮಾನ್ಯವಾಗಿ ಹಣ್ಣುಗಳನ್ನು ನೋಡುವಾಗ ಗೊತ್ತಾಗುವುದಿಲ್ಲ. ಆದರೆ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ. ಕಲ್ಲಂಗಡಿ ಹಣ್ಣಿನ ಮೇಲೆ ಸೂಜಿಯಿಂದ ಚುಚ್ಚಿದ ರಂಧ್ರವಿರುತ್ತದೆ. ಅದನ್ನು ನೀವು ಮಾರಾಟಗಾರರಲ್ಲಿ ಕೇಳಿದರೆ ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲ.ಅಂಥ ಹಣ್ಣುಗಳನ್ನು ಖರೀದಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಕಲ್ಲಂಗಡಿ ಹಣ್ಣಿಗೆ ಯಾವ ರಾಸಾಯನಿಕ ಬಳಸಲಾಗುವುದು
ಹಣ್ಣುಗಳು ಬೇಗನೆ ಹಣ್ಣಾಗಲು ಕಾರ್ಬೈಡ್ ಹಾಕುತ್ತಾರೆ, ಇದನ್ನು ಹಾಕಿದಾಗ ಈಥೆನಾಲ್ ಗ್ಯಾಸ್ ಉತ್ಪತ್ತಿಯಾಗುವುದು, ಇದರಿಂದ ಹಣ್ಣುಗಳು ಬೇಗನೆ ಹಣ್ಣಾಗುವುದು ಎಂದು FDA ಮೂಲಗಳು ಹೇಳುತ್ತವೆ. ಆಹಾರ ತಜ್ಜರ ಪ್ರಕಾರ ಆಹಾರಗಳು ಬೇಗನೆ ಹಣ್ಣಾಗಲು, ಬಣ್ಣದಿಂದ ಕೂಡಿರಲು ಸುಡನ್ ರೆಡ್, ಮೆಥೆನಾಲ್ ಯೆಲ್ಲೋ, ಪಾದರಸ ಕ್ರೊಮೇಟ್ ಇಂಥ ರಾಸಾಯನಿಕ ಕೂಡ ಬಳಸುತ್ತಾರೆ.
ದೇಹದ ಮೇಲೆ ಬೀರುವ ಅಡ್ಡ ಪರಿಣಾಮಗಳು
ಕಾರ್ಬೈಡ್: ಕಾರ್ಬೈಡ್ ಹಾಕಿ ಹಣ್ಣು ಮಾಡಿರುವ ಹಣ್ಣುಗಳನ್ನು ತಿನ್ನುವುದರಿಂದ ಲಿವರ್ ಹಾಗೂ ಕಿಡ್ನಿ ಆರೋಗ್ಯ ಹಾಳಾಗುವುದು.
ಮೆಥೆನಾಲ್ ಯೆಲ್ಲೋ ಕೂಡ ಲಿವರ್, ಕಿಡ್ನಿ ಆರೋಗ್ಯ ಹಾಳು ಮಾಡುವುದು.
ಕ್ರೊಮೇಟ್: ಕ್ರೊಮೇಟ್‌ನಿಂದಾಗಿ ಹೊಟ್ಟೆ ಸಮಸ್ಯೆ, ರಕ್ತ ಹೀನತೆ, ಮೆದುಳಿಗೆ ಹಾನಿ, ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗುವುದು ಮುಂತಾದ ಸಮಸ್ಯೆ ಕಂಡು ಬರುವುದು.
ನಾವು ಆರೋಗ್ಯಕರವಾಗಿರಲು ಹಣ್ಣುಗಳನ್ನು ಸೇವಿಸುತ್ತೇವೆ, ಆದರೆ ನಾವು ಸೇವಿಸುವ ಹಣ್ಣುಗಳಿಂದಲೇ ದೇಹಕ್ಕೆ ಅಪಾಯ ಉಂಟಾಗುವ ಸಾಧ್ಯತೆ ತುಂಬಾನೇ ಇದೆ, ಏಕೆಂದರೆ ವ್ಯಾಪಾರ ಲಾಭಕ್ಕಾಗಿ ಹಣ್ಣುಗಳಿಗೆ ರಾಸಾಯನಿಕ ಬಳಸುತ್ತಿದ್ದಾರೆ, ಈ ಸತ್ಯಾಂಸ ತಳ್ಳಿ ಹಾಕುವಂತೆ ಇಲ್ಲ, ರಾಸಾಯನಿಕ ಮುಕ್ತ ಹಣ್ಣುಗಳನ್ನು ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
