Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿತ್ಯ 15 ನಿಮಿಷ ನೃತ್ಯ ಮಾಡೋದ್ರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತೆ!
ಮಧುಮೇಹವು ವೇಗವಾಗಿ ಬೆಳೆಯುತ್ತಿರುವ ರೋಗವಾಗಿದೆ. ಮತ್ತು ಭಾರತದಲ್ಲಿ ಹೆಚ್ಚಿನ ಜನರು ಮಧುಮೇಹ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ ರೋಗವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ರೋಗವು ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸುವುದರಿಂದ ದೇಹದ ಅನೇಕ ಅಂಗಗಳನ್ನು ಕ್ರಮೇಣ ಹಾನಿಗೊಳಿಸುತ್ತದೆ.
ಒಂದು ಸಾರಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಮನುಷ್ಯನಿಗೆ ವಕ್ಕರಿಸಿಕೊಂಡು ಬಿಟ್ಟರೆ ದೀರ್ಘಕಾಲದವರೆಗೂ ಬೆಳೆಯುತ್ತಲೇ ಸಾಗುತ್ತದೆ. ಇದರಿಂದಾಗಿ ರೋಗಿಯು ಅತಿಯಾದ ಬಾಯಾರಿಕೆ, ಒಣ ಬಾಯಿ, ಆಗಾಗ್ಗೆ ಮೂತ್ರ ವಿಸರ್ಜನೆ, ಆಯಾಸ-ದೌರ್ಬಲ್ಯ, ಮಸುಕಾದ ದೃಷ್ಟಿ, ಅನಗತ್ಯ ತೂಕ ನಷ್ಟ, ಗಾಯ ವಾಸಿಯಾಗದಿರುವುದು ಮತ್ತು ಮೂತ್ರಪಿಂಡ ವೈಫಲ್ಯದಂತಹ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ದೇಹದ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗುತ್ತದೆ!
ವ್ಯಕ್ತಿಯೊಬ್ಬನಿಗೆ ಮಧುಮೇಹ ಸಮಸ್ಯೆ ಇದ್ದರೆ ಆತ ತುಂಬಾನೇ ಜಾಗರೂಕತೆ ವಹಿಸಬೇಕಾಗುತ್ತದೆ.ಯಾಕಂದ್ರೆ ಆತನ ಮೈ ಮೇಲೆ ಯಾವುದಾದರೂ ಗಾಯಗಳಾದಾಗ ಅದು ವಾಸಿಯಾಗೋದೇ ಇಲ್ಲ. ದಿನೇ ದಿನೇ ಕೊಳೆಯುತ್ತಾ ಹೋಗುತ್ತದೆ. ಎಲ್ಲಿಯವರೆಗೂ ಅಂದ್ರೆ ಒಂದು ದಿನ ಕಾಲನ್ನೇ ಕತ್ತರಿಸಿ ತೆಗೆಯಬೇಕಾದ ಪರಿಸ್ಥಿತಿ ಎದುರಾದ್ರು ಅಚ್ಚರಿಯಿಲ್ಲ.
ಸಕ್ಕರೆ ಕಾಯಿಲೆ ಇರುವವರು ಎಂದ ಮೇಲೆ ಜೀವನಪೂರ್ತಿ ಸಕ್ಕರೆ ಇಲ್ಲದಿರೋ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಆಘಾತಕಾರಿ ಸಂಗತಿ ಅಂದ್ರೆ ಸಕ್ಕರೆ ಕಾಯಿಲೆಯನ್ನು ಗುಣ ಪಡಿಸೋದಕ್ಕೆ ಸಾಧ್ಯವಿಲ್ಲ. ಆದರೆ ಕೆಲವೊಂದು ಮಾರ್ಗಗಳನ್ನು ಅನುಸರಿಸುವುದರ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು.
ಅಷ್ಟಕ್ಕು ಮಧುಮೇಹದ ಎಂದರೇನು? ಮಧುಮೇಹ ಉಂಟಾಗೋದಕ್ಕೆ ಕಾರಣಗಳೇನು? ಇದನ್ನು ಗುಣ ಪಡಿಸೋದಕ್ಕೆ ಯಾವೆಲ್ಲಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ? ದಿನ ನಿತ್ಯ ನೃತ್ಯ ಮಾಡೋದ್ರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತಾ ಅನ್ನೋದನ್ನು ತಿಳಿಯೋಣ.
ನೃತ್ಯ ಮಾಡೋದ್ರಿಂದ ಮಧುಮೇಹ ದೂರವಾಗುತ್ತಾ?
ಮಧುಮೇಹಿಗಳು ತೂಕವನ್ನು ಕಳೆದುಕೊಳ್ಳುವುದು ಬಹಳ ಮುಖ್ಯ. ನೃತ್ಯವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಮುಖ್ಯವಾದ ಚಟುವಟಿಕೆಗಳಲ್ಲಿ ಒಂದಾಗಿದೆ. ನೃತ್ಯ ಮಾಡೋದ್ರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು. ನೃತ್ಯವು ನಿಮ್ಮ ಸ್ನಾಯುಗಳಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ದೇಹಕ್ಕೆ ಈ ಶಕ್ತಿಯನ್ನು ಬಳಸಲು ಸಹಾಯ ಮಾಡುತ್ತದೆ.
ನೃತ್ಯವು ಒತ್ತಡವನ್ನು ಕಡಿಮೆ ಮಾಡುತ್ತದೆ
ನೃತ್ಯವು ನಿಮ್ಮ ದೇಹದಲ್ಲಿ ಎಂಡಾರ್ಫಿನ್‌ಗಳಂತಹ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮನ್ನು ಸಂತೋಷದಿಂದ ಇರುವಂತೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಒತ್ತಡದಿಂದ ಮುಕ್ತಗೊಳಿಸುತ್ತದೆ. ಅತಿಯಾದ ಒತ್ತಡದಿಂದ ಮನುಷ್ಯ ಖಿನ್ನತೆಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ ದಿನ ನಿತ್ಯ ನೃತ್ಯ ಮಾಡೋದ್ರಿಂದ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಮಧುಮೇಹ ರೋಗಿಗಳಿಗೆ ಅವಶ್ಯಕವಾಗಿದೆ.
ನೃತ್ಯವು ಜೀವಕೋಶದ ಶಕ್ತಿಯನ್ನು ಹೆಚ್ಚಿಸುತ್ತದೆ
ನೃತ್ಯವು ದೇಹದಲ್ಲಿ ಸೆಲ್ಯುಲಾರ್ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ರೋಗಿಗಳ ದೇಹದಲ್ಲಿ ಗ್ಲೂಕೋಸ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಅವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ನೃತ್ಯ ಮಾಡೋದ್ರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳೋದಕ್ಕೆ ಸಾಧ್ಯವಾಗುತ್ತದೆ. ಮತ್ತು ರೋಗಿಯ ತೂಕವೂ ಕಡಿಮೆಯಾಗುತ್ತದೆ. ಇದರಿಂದಾಗಿ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
ಯಾವಾಗ ಮತ್ತು ಎಷ್ಟು ಸಮಯ ನೃತ್ಯ ಮಾಡಬೇಕು?
ವೈದ್ಯರು ಹೇಳುವ ಪ್ರಕಾರ ನೀವು ಮಧುಮೇಹವನ್ನು ಹೊಂದಿದ್ದರೆ ದಿನ ನಿತ್ಯ ನೃತ್ಯ ಮಾಡೋದು ತುಂಬಾನೇ ಒಳ್ಳೆಯದು. ನೃತ್ಯ ಮಾಡೋದಕ್ಕೆ ಬೆಳಗ್ಗಿನ ಸಮಯ ತುಂಬಾನೇ ಒಳ್ಳೆಯದು. ಬೆಳಿಗ್ಗೆ 15 ರಿಂದ 20 ನಿಮಿಷಗಳ ಕಾಲ ನೃತ್ಯ ಮಾಡುವುದರಿಂದ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆದರೆ ಅನೇಕರಿಗೆ ಬೆಳಗ್ಗೆ ನೃತ್ಯ ಮಾಡೋದಕ್ಕೆ ಸಮಯ ಸಿಗದೇ ಹೋದರೆ ಅಂತವರು ರಾತ್ರಿ ನೃತ್ಯ ಮಾಡೋದಕ್ಕೆ ಬಯಸುತ್ತಾರೆ. ಅಂತವರು ವೈದ್ಯರನ್ನು ಸಂಪರ್ಕಿಸಿ. ನೃತ್ಯ ಮಾಡುವಾಗ ನಿಮ್ಮ ದೇಹದ ಸೂಚನೆಗಳ ಕಡೆಗೆ ಗಮನ ಕೊಡಿ ಮತ್ತು ತುಂಬಾ ದಣಿದಂತೆ ತೋರುತ್ತಿದ್ದರೆ ತಕ್ಷಣ ವಿರಾಮ ತೆಗೆದುಕೊಳ್ಳಿ.
ಒಟ್ಟಿನಲ್ಲಿ ಮಧುಮೇಹ ನಿಯಂತ್ರಣದಲ್ಲಿಡಲು ನೃತ್ಯವು ಕೂಡ ಒಂದು ರೀತಿಯಲ್ಲಿ ಸಹಾಯ ಮಾಡುತ್ತೆ ಅಂದ್ರೆ ತಪ್ಪಾಗೋದಿಲ್ಲ. ಜೊತೆಗೆ ಇದು ಆರೋಗ್ಯ ದೃಷ್ಟಿಯಿಂದಲೂ ಕೂಡ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
