Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನೀವು ಜಿಮ್ ಬಿಟ್ಟ ಮೇಲೆ ಮೈ ತೂಕ ಹೆಚ್ಚಾಗುವುದು ತಡೆಯಲು ಹೀಗೆ ಮಾಡಿ
ಜಿಮ್‌ಗೆ ಹೋಗುವುದು ಮಧ್ಯದಲ್ಲಿ ಬಿಡುವುದು ಈ ಅಭ್ಯಾಸ ತುಂಬ ಮಂದಿಗಿದೆ. ಜಿಮ್‌ಗೆ ಹೋಗುವಾಗ ತುಂಬಾ ಚೆನ್ನಾಗಿ ಮೈಕಟ್ಟು ಹೊಂದುತ್ತಾರೆ, ಆದರೆ ಜಿಮ್‌ನಿಂದ ಬ್ರೇಕ್ ತೆಗೆದುಕೊಂಡ ತಕ್ಷಣ ಮೈ ತೂಕ ಹೆಚ್ಚಾಗುವುದು. ಈ ರೀತಿ ಮೈ ತೂಕ ಹೆಚ್ಚಾಗುವುದೇಕೆ, ಕಳೆದುಕೊಂಡ ಮೈ ತೂಕವನ್ನು ಹಾಗೇ ಮೈಂಟೇನ್ ಮಾಡಲು ಸಾಧ್ಯವಾಗಲ್ಲ ಏಕೆ ಎಂದು ನೋಡೋಣ ಬನ್ನಿ:
ಜಿಮ್ ಬಿಟ್ಟ ಬಳಿಕ ಮೈ ತೂಕ ಹೆಚ್ಚಾಗುವುದು
ದಿನಾ ವರ್ಕೌಟ್ ಮಾಡುತ್ತಿದ್ದಾಗ ಕ್ಯಾಲೋರಿ ಕರಗುವುದು. ಅಲ್ಲದೆ ವರ್ಕೌಟ್ ಮಾಡುವುದರಿಂದ ಚಯಪಚಯಕ್ರಿಯೆ ಉತ್ತಮವಾಗುವುದು. ಮೈ ತೂಕ ಕಡಿಮೆಯಾಗಬೇಕೆಂದರೆ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಬೇಕು. ಜಿಮ್‌ಗೆ ಹೋಗಿ ವರ್ಕೌಟ್ ಮಾಡುವಾಗ ದೇಹಕ್ಕೆ ದೈಹಿಕ ವ್ಯಾಯಾಮವಿರುತ್ತದೆ, ಚಯಪಚಯ ಕ್ರಿಯೆ ಕೂಡ ಉತ್ತಮವಾಗಿ ನಡೆಯುವುದು, ಈ ಕಾರಣದಿಂದ ಕ್ಯಾಲೋರಿ ಕರಗುವುದು, ಅದೇ ಜಿಮ್ ವರ್ಕೌಟ್ ನಿಲ್ಲಿಸಿದಾಗ ಅದಕ್ಕೆ ತಕ್ಕದಾದ ದೈಹಿಕ ವ್ಯಾಯಾಮ ಮಾಡುವುದಿಲ್ಲ, ಅಲ್ಲದೆ ತಿನ್ನುವುದು ಮಾತ್ರ ಮೊದಲಿನಂತೆಯೇ ತಿನ್ನುತ್ತೇವೆ, ಈ ಕಾರಣದಿಂದ ಮೈ ತೂಕ ಬೇಗನೆ ಹೆಚ್ಚಾಗುವುದು.

ಜಿಮ್ ವರ್ಕೌಟ್ ಮಾಡದಿದ್ದಾಗ ಮೈ ತೂಕ ಕಾಪಾಡಿಕೊಳ್ಳಲು ಏನು ಮಾಡಬೇಕು?
ಜಿಮ್ ವರ್ಕೌಟ್ ಮಾಡದಿದ್ದಾಗ ನೀವು ಆಹಾರಕ್ರಮದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಜಿಮ್‌ಗೆ ಹೋಗುವಾಗ ಪ್ರೊಟೀನ್ ಶೇಕ್, ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಕೊಟ್ಟಿರುತ್ತೀರಿ, ಅದೇ ರೀತಿ ಜಿಮ್ ವರ್ಕೌಟ್ ಮಾಡದಿದ್ದಾಗ ಕೂಡ ಆಹಾರಕ್ರಮದಲ್ಲಿ ಬದಲಾವವಣೆ ಮಾಡಿ. ನೀವು ಕಾರ್ಬ್ಸ್ ಕಡಿಮೆ ಇರುವ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ, ಜೊತೆಗೆ ಆಹಾರವನ್ನು ಸ್ವಲ್ಪ-ಸ್ವಲ್ಪವೆಂಬಂತೆ ಡಿವೈಡ್ ಮಾಡಿ ಸೇವಿಸಿ. ಈ ರೀತಿಯ ಊಟದ ಅಭ್ಯಾಸ ಮೈ ತೂಕ ನಿಯಂತ್ರಣದಲ್ಲಿಡಲು ನಿಮಗೆ ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡದೆ ಇರಬೇಡಿ
ಜಿಮ್‌ಗೆ ಹೋಗದಿದ್ದರೂ ವ್ಯಾಯಾಮ ಮಾತ್ರ ಮಾಡದೆ ಇರಬೇಡಿ. ವರ್ಕೌಟ್ ಮನೆಯಲ್ಲಿಯೇ ಮಾಡಿ, ವರ್ಕೌಟ್ ಮಾಡಲು ಸಾಧ್ಯವಾಗದಿದ್ದರೆ ವಾಕ್ ಆದರೂ ಮಾಡಿ. ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ.
ಸಾಕಷ್ಟು ನೀರು ಕುಡಿಯಿರಿ
ಕೆಲವರು ದಾಹವಾದರೆ ಮಾತ್ರ ನೀರು ಕುಡಿಯುತ್ತಾರೆ. ಆದರೆ ದಾಹವಾಗಲಿ, ಇಲ್ಲದಿದ್ದರೆ ಸಾಕಷ್ಟು ನೀರು ಕುಡಿಯಿರಿ, ಇದರಿಂದ ತುಂಬಾ ತಿನ್ನುವುದಕ್ಕೆ ಕಡಿವಾಣ ಹಾಕಬಹುದು, ಅಲ್ಲದೆ ಜೀರು ಕುಡಿಯುವುದರಿಂದ ಚಯಪಚಯ ಕ್ರಿಯೆ ಚೆನ್ನಾಗಿ ನಡೆಯಲು ಸಹಕಾರಿ.
ನಿದ್ದೆ ಚೆನ್ನಾಗಿ ಮಾಡಿ
ಮೈ ತೂಕ ನಿಯಂತ್ರಣದಲ್ಲಿಡಲು ಇದು ತುಂಬಾ ಮುಖ್ಯ. ಕೆಲವರು ನಿದ್ದೆ ಕಡಿಮೆ ಮಾಡುತ್ತಾರೆ, ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು ಅಥವಾ ತುಂಬಾನೇ ಕಡಿಮೆಯಾಗುವುದು. ಆದ್ದರಿಂದ ಆರೋಗ್ಯಕರ ಮೈ ತೂಕಕ್ಕೆ 8 ಗಂಟೆ ನಿದ್ದೆ ತುಂಬಾನೇ ಅವಶ್ಯಕ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
