Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೃದಯ ಸಮಸ್ಯೆ ಇರುವವರಿಗೆ ವರದಾನವಾಗಿದೆ ಈ ಟಿಎವಿಐ ಚಿಕಿತ್ಸೆ, ಇದರ ಪ್ರಯೋಜನವೇನು?
ಸೆಪ್ಟೆಂಬರ್ 29ಕ್ಕೆ ವಿಶ್ವ ಹೃದಯ ದಿನವನ್ನು ಆಚರಿಸಲಾಗುವುದು. ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಯನ್ನು ತಡೆಗಟ್ಟಬಹುದು. ವಿಜ್ಞಾನ ಮುಂದುವರೆದಿದೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ಹೀಗಾಗಿ ಹೃದಯದ ಆರೋಗ್ಯ ಜೋಪಾನ ಇನ್ನಷ್ಟು ಸಲೀಸಾಗಿದೆ.

2024ರ ʻವಿಶ್ವ ಹೃದಯ ದಿನʼವನ್ನು - "ಕ್ರಿಯಾಶೀಲರಾಗಿ ಹೃದಯವನ್ನು ಬಳಸಿ" ಎಂಬ ವಿಷಯಾಧಾರಿತವಾಗಿ ಆಚರಿಸಲಾಗುವುದು. ʻನಾರಾಯಣ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ಇದೇ ಬಗ್ಗೆ ಓದುಗರಿಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.
ಎಷ್ಟೋ ಪ್ರಾಣಗಳನ್ನು ಉಳಿಸಲು ವರದಾನವಾಗಿರುವ ಟಿಎವಿಐ((Transcatheter aortic valve implantation)ಬಗ್ಗೆ ವಿವರಿಸಿದ್ದು ಹೀಗೆ
"ಇತ್ತೀಚೆಗೆ, ನಾನು ಅನಿಲ್ (ಹೆಸರು ಬದಲಾಯಿಸಲಾಗಿದೆ) ಎಂಬ ಹಿರಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದೆ. ಅವರು ಈ ಹಿಂದೆ ತುಂಬಾ ಸಕ್ರಿಯರಾಗಿದ್ದರು, ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದಾಗ್ಯೂ, ತೋಟಗಾರಿಕೆ ಮತ್ತು ಮನೆಯ ಸುತ್ತಲೂ ನಡೆಯುವಂತಹ ಸರಳ ಚಟುವಟಿಕೆಗಳ ಸಮಯದಲ್ಲೂ ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು.
ಮಲಗಿರುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ಮಾಡಲು ಹೆಣಗಾಡುವ ಮಟ್ಟಕ್ಕೆ ಅವರ ಸ್ಥಿತಿ ಹದಗೆಟ್ಟಿತು. ಒಂದು ದಿನ, ಅವರು ಮೆಟ್ಟಿಲುಗಳನ್ನು ಇಳಿಯುವಾಗ ಕುಸಿದುಬಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ, ಅನಿಲ್ ಅವರಿಗೆ ʻಅಯೋರ್ಟಿಕ್ ಸ್ಟೆನೋಸಿಸ್ʼ ಇರುವುದು ಪತ್ತೆಯಾಯಿತು. ಇದು ಹೃದಯದ ಕವಾಟಗಳ ಪೈಕಿ ಒಂದು ಕವಾಟವು ಕಿರಿದಾಗುವ ಸ್ಥಿತಿ.
ಹೃದಯದ ಕಾರ್ಯವನ್ನು ಪೂರ್ವ ಸ್ಥಿತಿಗೆ ಪುನಃಸ್ಥಾಪಿಸಲು, ಅನಿಲ್ ಅವರು ʻಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ʼ(ಟಿಎವಿಐ) ಎಂಬ ಕಾರ್ಯವಿಧಾನಕ್ಕೆ ಒಳಗಾದರು. ಗಮನಾರ್ಹ ವಿಷಯವೆಂದರೆ, ಮರುದಿನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಶೀಘ್ರದಲ್ಲೇ ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದರು," ಎಂದು ಡಾ.ಸಂಜಯ್ ಮೆಹ್ರೋತ್ರ ವಿವರಿಸಿದರು.
ಹೃದಯದ ಸಮಸ್ಯೆಗಳಿಗೆ ಸಮಯೋಚಿತ ರೋಗಪತ್ತೆ ಮತ್ತು ಚಿಕಿತ್ಸೆ ಅವಶ್ಯಕ
ಈ ಹೃದಯದ ಕಾಯಿಲೆ ಬಗ್ಗೆ ಇರಲಿ ಮುನ್ನೆಚ್ಚರಿಕೆ
ಹೃದಯ ವೈಫಲ್ಯ, ʻಕರೋನರಿ ಆರ್ಟಿಲರಿ ಡಿಸೀಜ್ʼ(ಹೃದಯದ ಧಮನಿಗಳಲ್ಲಿ ಕೊಬ್ಬು ಶೇಖರಣೆಯಿಂದ ಅಡಚಣೆ),
ʻಅರಿಥ್ಮಿಯಾಸ್ʼ (ಅನಿಯಮಿತ ಹೃದಯಬಡಿತ)
ʻಅಯೋರ್ಟಿಕ್ ಸ್ಟೆನೋಸಿಸ್ʼನಂತಹ ವೆ
ಹೃದಯ ಕವಾಟ ಕಾಯಿಲೆ ಹೀಗೆ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುವುದು.
ಈ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು
ಎದೆ ನೋವು, ಉಸಿರಾಟದ ತೊಂದರೆ, ಆಯಾಸ
ʻಟಿಎವಿಐ ಚಿಕಿತ್ಸಾ ವಿಧಾನದ ಗುಣಗಳು
ಈ ಚಿಕಿತ್ಸೆಯಿಂದ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಉಳಿಯಬೇಕಾಗಿಲ್ಲ
ನೋವು ಹೆಚ್ಚಿರಲ್ಲ
ಹೆಚ್ಚು ರಕ್ತಸ್ರಾವ ಇರಲ್ಲ
ಅಲ್ಲದೆ ರೋಗಿ ಬೇಗನೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ.
ವೈದ್ಯರು ಈ ಚಿಕಿತ್ಸೆಗೆ ಒಳಪಟ್ಟ ರೋಗಿ ಮರುದಿನವೇ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು ಎಂದು ಹೇಳಿದ್ದಾರೆ. ಈ ʻಟಿಎವಿಐʼ ತಂತ್ರಜ್ಞಾನ ಸಾಕಷ್ಟು ರೋಗಿಗಳ ಪಾಲಿಗೆ ವರದಾನವಾಗಿದೆ.
ನಿಯಮಿತ ಆರೋಗ್ಯ ತಪಾಸಣೆ ಅವಶ್ಯಕ
ವಯಸ್ಸು 30 ದಾಟಿದ ಮೇಲೆ ನಿಯಮಿತ ಆರೋಗ್ಯ ತಪಾಸಣೆ ತುಂಬಾ ಒಳ್ಳೆಯದು, ಅದರಲ್ಲಿಯೂ
ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಕಾಯಿಲೆ ಇದ್ದರೆ ತಪ್ಪಾದೆ ಆರೋಗ್ಯ ತಪಾಸಣೆ ಮಾಡುತ್ತಾ ಇರಬೇಕು, ಇದರಿಂದ ಹೃದಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಪತ್ತೆಹಚ್ಚಿ ಚಿಕಿತ್ಸೆ ಪಡೆಯಬಹುದು, ಆರಂಭದಲ್ಲಿಯೆ ಪತ್ತೆಯಾದರೆ ಬೇಗನೆ ಆರೋಗ್ಯ ಮರಳಿ ಪಡೆಯಬಹುದು.
ಸದಾ ಮಾಡಿ ಪುಟ್ಟ ಹೃದಯ ಜಾಗ್ರತೆ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


