Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದಲ್ಲಿ ಉಷ್ಣವಾದರೆ ಈ 5 ಮನೆಮದ್ದು ಬಳಸಿ..! ಯಾವುದೆಲ್ಲಾ ಗೊತ್ತಾ?
ವ್ಯಕ್ತಿಯೊಬ್ಬನಿಗೆ ದೇಹದ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತೆ. ಅಂದ್ರೆ ಕೆಲವರ ದೇಹ ಉಷ್ಣಕಾರಕ ಹಾಗೂ ಮತ್ತೆ ಕೆಲವರ ದೇಹ ತಂಪಾಗಿರುತ್ತದೆ. ದೇಹದಲ್ಲಿ ಉಷ್ಣ ಹೆಚ್ಚಾದಾಗ ಹಲವು ಸಮಸ್ಯೆ ಎದುರಾಗುತ್ತವೆ ಅವರು ದೇಹ ತಂಪಗಾಗಿಸಲು ಹರಸಾಹಸ ಮಾಡುತ್ತಾರೆ. ಮತ್ತೆ ಕೆಲವರು ತಂಪು ದೇಹ ಹೊಂದಿರುತ್ತಾರೆ, ಅವರು ದೇಹದ ಉಷ್ಣ ಹೆಚ್ಚಿಸಲು ಮುಂದಾಗುತ್ತಾರೆ.
ಭೂಮಿ ಮೇಲಿರುವ ಒಬ್ಬೊಬ್ಬ ವ್ಯಕ್ತಿಯ ದೇಹವು ಒಂದೊಂದು ರೀತಿಯಲ್ಲಿರುವುದು. ಆಯುರ್ವೇದದಲ್ಲಿ ಉಷ್ಣಕ್ಕೆ ಪಿತ್ತವೆಂದು ಕರೆಯಲಾಗುವುದು. ಪಿತ್ತವು ಪ್ರತಿಯೊಬ್ಬರ ದೇಹದಲ್ಲೂ ಇರುವುದು. ಪಿತ್ತ ದೇಹದ ಚಯಾಪಚಯ ಕ್ರಿಯೆಯು ಸಾಮಾನ್ಯವಾಗಿರುವಂತೆ ಮಾಡುವುದು. ಅದರೆ ಪಿತ್ತ ದೋಷವು ಕಾಣಿಸಿಕೊಂಡರೆ ದೇಹದ ಉಷ್ಣತೆಯು ಅಧಿಕವಾಗಿರುವುದು.

ಇದು ದೇಹದ ಉಷ್ಣವನ್ನು ಹಠಾತ್ ಹಾಗೂ ಅಗತ್ಯಕ್ಕಿಂತ ಹೆಚ್ಚು ವೃದ್ಧಿಸುವುದು. ಇದರ ಪರಿಣಾಮವಾಗಿ ಸಾಮಾನ್ಯ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿ, ದೇಹದಲ್ಲಿ ರಾಸಾಯನಿಕಗಳ ಅಸಮತೋಲನ ಉಂಟಾಗುತ್ತದೆ. ಆದ್ರೆ ಈ ಉಷ್ಣ ಹೆಚ್ಚಾದರೆ ಎಷ್ಟೆಲ್ಲಾ ಸಮಸ್ಯೆ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಾ?
ದೇಹದಲ್ಲಿ ಉಷ್ಣ ಹೆಚ್ಚಾದರೆ ತಲೆ ಕೂದಲು ಉದುರುವುದರಿಂದ ಹಿಡಿದು ನಾನಾ ರೀತಿಯ ಸಮಸ್ಯೆ ಉಂಟಾಗುತ್ತದೆ. ಅದರಲ್ಲು ಬಾಯಿಯಲ್ಲಿ ಹುಣ್ಣಾಗುವುದು, ಕೂದಲು ಉದುರುವುದು, ಉರಿಮೂತ್ರ, ಚರ್ಮ ಹಾನಿ, ಕಣ್ಣು ಉರಿ ಸೇರಿದಂತೆ ಹಲವು ರೀತಿಯ ಸಮಸ್ಯೆಗೆ ಒಳಗಾಗುತ್ತಾರೆ.
ಈ ರೀತಿ ದೇಹದಲ್ಲಿ ಉಷ್ಣ ಹೆಚ್ಚಾಗುವುದು ಕೇವಲ ಬೇಸಿಗೆ ಸಮಯದಲ್ಲಿ ಮಾತ್ರವಲ್ಲ. ಚಳಿಗಾಲ, ಮಳೆಗಾದಲ್ಲೂ ದೇಹದಲ್ಲಿ ಉಷ್ಣ ಹೆಚ್ಚಾಗುತ್ತದೆ, ಹಾಗಾದ್ರೆ ನಾವಿಂದು ದೇಹದ ಉಷ್ಣವನ್ನ ಕಡಿಮೆ ಮಾಡುವ ನಿವಾರಿಸುವ ಮನೆಮದ್ದುಗಳು ಯಾವುದು ಅನ್ನೋದನ್ನ ನೋಡೋಣ.
ಎಳನೀರು
ದೇಹದಲ್ಲಿ ಉಷ್ಣ ಹೆಚ್ಚಾದಾಗ ನೀರು ಕುಡಿಯುವುದನ್ನು ಹೆಚ್ಚು ಮಾಡಬೇಕು. ಅದರಲ್ಲೂ ಎಳನೀರು ಕುಡಿದರೆ ತುಂಬಾ ಒಳ್ಳೆಯದು, ವಾರದಲ್ಲಿ ಎರಡು ಬಾರಿಯಾದರು ಎಳನೀರು ಕುಡಿದರೆ ಉತ್ತಮ. ಎಳನೀರಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಕರಸಗಿಸಿ ಕುಡಿದರೆ ದೇಹದ ಉಷ್ಣ ನಿವಾರಣೆಯಾಗುತ್ತದೆ.
ಚಂದನದ ನೀರು
ಚಂದನದ ಪುಡಿಯನ್ನು ತೆಗೆದುಕೊಂಡು ಎರಡು ಗ್ಲಾಸ್ ನೀರಿಗೆ ಹಾಕಿಕೊಂಡು ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ಬಳಿಕ ಸೋಸಿಕೊಂಡು ತಣ್ಣಗಾದ ಬಳಿಕ ಪಿತ್ತ ನಿವಾರಣೆಯಾಗುತ್ತದೆ.
ಖಾಲಿ ಹೊಟ್ಟೆಗೆ ಟೀ-ಕಾಫಿ ಬಿಟ್ಟುಬಿಡಿ
ಟಿ ಮತ್ತು ಕಾಫಿ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲೂ ಕಾಫಿ ದೇಹದ ಉಷ್ಣ ಹೆಚ್ಚಾಗಲು ಕಾರಣವಾಗುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಟೀ ಕಾಫೀ ಕುಡಿಯಬಾರದು. ಟೀ ಕಾಫಿ ಬದಲು, ಕೊತ್ತಂಬರಿ ಬೀಜಗಳ ಹಾಕಿ ನೆನೆಸಿಟ್ಟ ನೀರನ್ನು ಬೆಳಗ್ಗೆ ಎಂದು ಕುಡಿಯಬೇಕು. ರಾತ್ರಿ ನೀರಿನಲ್ಲಿ ಒಂದು ಅರ್ಧ ಟೀ ಸ್ಪೂನ್ ಕೊತ್ತಂಬರಿ ಬೀಜ ಹಾಕಿ ಬೆಳಗ್ಗೆ ಎಂದು ಚೆನ್ನಾಗಿ ಸೋಸಿಕೊಂಡು ಆ ನೀರನ್ನು ಖಾಲಿ ಹೊಟ್ಟೆಗೆ ಕುಎಇಯಬೇಕು. ಹೀಗೆ ಮಡುವುದರಿಂದ 15 ದಿನದಲ್ಲಿ ನಿಮ್ಮ ದೇಹದ ಉಷ್ಣ ಕಡಿಮೆಯಾಗುತ್ತದೆ.
ಮೆಂತ್ಯ ಗಂಜಿ
ಮೆಂತ್ಯ ಅತ್ಯಂತ ತಂಪು ಪದಾರ್ಥವಾಗಿದ್ದು, ಫೈಬರ್ ಯುಕ್ತ ಆಹಾರವಾಗಿದೆ. ಈ ಮೆಂತ್ಯವನ್ನು ಅನ್ನದ ಗಂಜಿಯೊಂದಿಗೆ ಬೆರೆಸಿಕೊಂಡು ಸವಿಯಬಹುದು. ಹಿಂದಿನ ದಿನ ನೆನೆಸಿಟ್ಟ ಮೆಂತ್ಯವನ್ನು ಗಂಜಿ ರೀತಿ ಮಾಡಿಕೊಂಡು ಸವಿದರೆ ಒಂದೇ ದಿನದಲ್ಲಿ ದೇಹದ ಉಷ್ಣಾಂಶ ಸಮತೋಲನಕ್ಕೆ ಬರಲಿದೆ.
ಮೂಲಂಗಿ ಮತ್ತು ದಾಳಿಂಬೆ ಜ್ಯೂಸ್
ದೇಹದ ಉಷ್ಣಾಂಶ ಹೆಚ್ಚಾದಾಗ ಅಥವಾ ಪಿತ್ತ ಕಾಣಿಸಿಕೊಂಡದಾಗ ಸಾಕಷ್ಟು ಹಣ್ಣು, ಜ್ಯೂಸ್ ಕುಡಿಯಬೇಕು. ಅದ್ರಲ್ಲೂ ಒಂದು ಮೂಲಗಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಸೋಸಿಕೊಂಡು ಕುಡಿಯಬೇಕು. ಅಲ್ಲದೆ ದಾಳಿಂಬೆ ಹಣ್ಣಿನ ಜ್ಯೂಸ್ ಸಹ ಮಾಡಿ ಕುಡಿದರೆ ಉಷ್ಣ ನಿವಾರಣೆಯಾಗುವುದು ಖಚಿತ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
