Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
Yearender: 2022ರಲ್ಲಿ ಭಾರತೀಯರನ್ನು ಕಾಡಿದ 6 ಅಪಾಯಕಾರಿ ಆರೋಗ್ಯ ಸಮಸ್ಯೆಗಳಿವು, ಹೃದಯಾಘಾತ ಟಾಪ್ 1 ರಲ್ಲಿದೆ
2022ರಲ್ಲಿ ಕೊರೊನಾ ಕಾಟ ಸ್ವಲ್ಪ ಕಡಿಮೆ ಇತ್ತು, ಆದರೆ ಇತರ ಕೆಲವು ಕಾಯಿಲೆಗಳು ಭೀಕರವಾಗಿ ಕಾಡಿತ್ತು. ಈ ಕಾಯಿಲೆಗಳು ಹಲವಾರು ಜನರ ಪ್ರಾಣಕ್ಕೆ ಕುತ್ತು ತಂದಿದೆ, 2022ರಲ್ಲಿ ಮನುಷ್ಯರಲ್ಲಿ ಭೀಕರವಾಗಿ ಕಾಡಿದ ಕಾಯಿಲೆಗಳಲ್ಲಿ ಇವು ಟಾಪ್ ಲಿಸ್ಟ್‌ನಲ್ಲಿದೆ:
2022ರಲ್ಲಿ ಜನರನ್ನು ಭೀಕರವಾಗಿ ಕಾಡಿದ ಕಾಯಿಲೆಗಳೆಂದರೆ

1. ಹೃದಯಾಘಾತ
ಭಾರತೀಯರನ್ನು ಅತೀ ಹೆಚ್ಚಾಗಿ ಕಾಡಿದ ಕಾಯಿಲೆಯಲ್ಲಿ ಹೃದಯಾಘಾತ ಮೊದಲ ಸ್ಥಾನದಲ್ಲಿದೆ.
ಹೃದಯಾಘಾತದ ಲಕ್ಷಣಗಳು
* ಎದೆನೋವು
* ಉಸಿರಾಟದ ತೊಂದರೆ
* ಕೈ, ಕಾಲುಗಳು ಮರಗಟ್ಟಿದಂತಾಗುವುದು
* ಎದೆ ಬಿಗಿಯಾಗುವುದು
* ಭುಜ ನೋವು, ಕೈ, ತೋಳುಗಳಲ್ಲಿ ನೋವು
ಹೃದಯಾಘಾತಕ್ಕೆ ಪ್ರಮುಖ ಕಾರಣಗಳು
* ದೈಹಿಕ ವ್ಯಾಯಾಮ ಮಾಡದೇ ಇರುವುದು
* ಅತಿಯಾದ ಧೂಮಪಾನ
* ಅನಾರೋಗ್ಯಕರ ಆಹಾರಕ್ರಮ
* ವಂಶವಾಹಿಯಾಗಿ ಬರುವುದು
* ಅತ್ಯಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಇದ್ದರೆ
* ಒಬೆಸಿಟಿ
ಹೃದಯಾಘಾತ ತಡೆಗಟ್ಟುವುದು ಹೇಗೆ?
* ದೈಹಿಕವಾಗಿ ಚಟುವಟಿಕೆಯಿಂದ ಇರುವುದು
* ದಿನಾ ವ್ಯಾಯಾಮ ಮಾಡುವುದು
* ಧೂಮಪಾನ ಬಿಡಬೇಕು
* ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಿ
* ನಾರಿನಂಶ, ಪೊಟಾಷ್ಯೊಯಂ, ಮೆಗ್ನಿಷ್ಯಿಯಂ ಇರುವ ಆಹಾರ ಸೆವಿಸಿ.

2. ಸ್ಟ್ರೋಕ್
ಈ ವರ್ಷ ತುಂಬಾ ಜನರಿಗೆ ಸ್ಟ್ರೋಕ್ ಬಂದಿದೆ
* ಕೈಕಾಲಗಳು ಚಲಿಸಿದಂತಾಗುವುದು
* ತುಂಬಾ ತಲೆನೋವು
* ಕಣ್ಣುಗಳು ಮಂಜಾಗುವುದು
* ನಡೆದಾಡಲು ಕಷ್ಟವಾಗುವುದು
* ಮಾತನಾಡಲು ಕಷ್ಟವಾಗುವುದು
ಸ್ಟ್ರೋಕ್‌ಗೆ ಕಾರಣಗಳು
* ಅತ್ಯಧಿಕ ಬಿಪಿ ಹಾಗೂ ಕೊಲೆಸ್ಟ್ರಾಲ್
* ಮಧುಮೇಹ
* ಅತ್ಯಧಿಕ ಧೂಮಪಾನ ಮಾಡುವುದು
* ಮೆದುಳಿಗೆ ಹಾನಿಯಾಗುವುದು
* ಹೃದಯದ ಸಮಸ್ಯೆ ಇರುವವರಲ್ಲಿಯೂ ಸ್ಟ್ರೋಕ್ ಕಂಡು ಬರುವುದು.

3. ಉಸಿರಾಟದ ತೊಂದರೆ
ಲಕ್ಷಣಗಳು
ಜ್ವರ
ಕೆಮ್ಮು
ಮೂಗು ಕಟ್ಟುವುದು
ಶೀತ
ಧ್ವನಿ ಕಟ್ಟುವುದು
ಉಸಿರಾಟದ ತೊಂದರೆ
ಉಸಿರಾಟದ ತೊಂದರೆಗೆ ಕಾರಣಗಳು
* ಅತ್ಯಧಿಕ ಪರಿಸರ ಮಾಲಿನ್ಯ
* ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು
* ಧೂಮಪಾನ
* ಧೂಳು
ತಡೆಗಟ್ಟುವುದು ಹೇಗೆ?
ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ
ಉಸಿರಾಟದ ವ್ಯಾಯಾಮ ಮಾಡಿ
ಪೋಷಕಾಂಶವಿರುವ ಆಹಾರ ಸೇವಿಸಿ
ದಿನದಲ್ಲಿ ಕನಿಷ್ಠ 3-4 ಬಗೆಯ ಹಣ್ಣುಗಳನ್ನು ಸೇವಿಸಿ.

4. ಟಿಬಿ (ಕ್ಷಯರೋಗ)
ಈ ವರ್ಷ ಈ ಕಾಯಿಲೆ ಕೂಡ ಅತೀ ಹೆಚ್ಚು ಜನರಿಗೆ ಕಾಡಿದೆ, ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಡಿಸಬಹುದು
ಟಿಬಿ ಕಾಯಿಲೆಯ ಲಕ್ಷಣಗಳು
* ಸುಸ್ತು
* ಕೆಮ್ಮುವಾಗ ರಕ್ತ ಬರುವುದು
* ಜ್ವರ
* ರಾತ್ರಿಯಲ್ಲಿ ಮೈ ಬೆವರುವುದು
* ಹಸಿವು ಇಲ್ಲದಿರುವುದು
* ಕಾರಣವಿಲ್ಲದೆ ಮೈ ತೂಕ ಕಡಿಮೆಯಾಗುವುದು
ಟಿಬಿ ಕಾಯಿಲೆಗೆ ಕಾರಣಗಳು
* ರೋಗ ನಿರೋಧಕ ಶಕ್ತಿ ಕಡಿಮ ಇರುವುದು
* ಟಿಬಿ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು

5. COPD (ವಿಪರೀತ ಉಸಿರಾಟದ ತೊಂದರೆ)
ಲಕ್ಷಣಗಳು
* ದಮ್ಮು
* ಎದೆ ಬಿಗಿಯಾಗುವುದು
* ಆಗಾಗ ಕಾಯಿಲೆ ಬೀಳಿವುದು
* ಶ್ವಾಸಕೋಶದಲ್ಲಿ ಊತ
* ಉಸಿರಾಟಕ್ಕೆ ತೊಂದರೆ
ಕಾರಣಗಳು ಹಾಗೂ ತಡೆಗಟ್ಟುವುದು ಹೇಗೆ
* ಧೂಮಪಾನ
* ರಾಸಾಯನಿಕಗಳು
* ವಂಶವಾಹಿ
* ಮಗುವಾಗಿದ್ದಾಗ ಶ್ವಾಸಕೋಶದ ಸೋಂಕು ಇದ್ದರೆ
ತಡೆಗಟ್ಟುವುದು ಹೇಗೆ
* ಧೂಮಪಾನ ಬಿಡಿ
* ದೂಳು ಹೆಚ್ಚಿರುವ ಕಡೆ ಓಡಾಡುವಾಗ ಮಾಸ್ಕ್ ಧರಿಸಿ

6. ಮಧುಮೇಹ
ಲಕ್ಷಣಗಳು
ತುಂಬಾ ಹಸಿವು
ಕಾರಣವಿಲ್ಲದೆ ತೂಕ ಇಳಿಕೆ
ಸುಸ್ತು
ತುಂಬಾ ಬಾಯಾರಿಕೆ
ಆಗಾಗ ಮೂತ್ರವಿಸರ್ಜನೆಗೆ ಹೋಗುವುದು
ಮಧುಮೇಹಕ್ಕೆ ಕಾರಣಗಳು
* ದೈಹಿಕ ವ್ಯಾಯಾಮ ಮಾಡದೇ ಇರುವುದು
* ಅತ್ಯಧಿಕ ರಕ್ತದೊತ್ತಡ
* ಒಬೆಸಿಟಿ
* ಅನಾರೋಗ್ಯಕರ ಆಹಾರಶೈಲಿ
ತಡೆಗಟ್ಟುವುದು ಹೇಗೆ
* ದಿನಾ ವ್ಯಾಯಾಮ ಮಾಡಿ
* ಆರೋಗ್ಯಕರ ಜೀವನಶೈಲಿ, ಆಹಾರಶೈಲಿ ಪಾಲಿಸಿ
* ಮಾನಸಿಕ ಒತ್ತಡ ಕಡಿಮೆ ಮಾಡಿ
* ಸಕ್ಕರೆ ಹಾಗೂ ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಕಡಿಮೆ ಸೇವಿಸಿ.



Click it and Unblock the Notifications
