Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಆದಷ್ಟು ಇಂತಹ ಆಹಾರಗಳನ್ನು ಸೇವಿಸಿ-ಹೃದಯ ಕಾಯಿಲೆ ಎಂದೂ ಬಾರದು...
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇಲಿನ ಭಾರವನ್ನು ಹೆಚ್ಚಿಸುತ್ತೇವೆ.
ವಿಶೇಷವಾಗಿ ಕೊಬ್ಬು ಹೆಚ್ಚಿರುವ ಆಹಾರಗಳ ಸೇವನೆಯಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಎಂಬ ಜಿಡ್ಡಿನ ಪ್ರಮಾಣ ಹೆಚ್ಚುತ್ತಾ ಕವಲು ಮತ್ತು ತಿರುವುಗಳಿರುವಲ್ಲೆಲ್ಲಾ ಒಳಭಾಗದಲ್ಲಿ ಅಂಟಿಕೊಂಡು ಇಲ್ಲಿನ ವ್ಯಾಸವನ್ನು ಕಿರಿದಾಗಿಸಿ ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತವೆ. ಈ ರಕ್ತವನ್ನು ಈ ಕಿರಿದಾದ ದಾರಿಯಲ್ಲಿ ಮುಂದೆ ಸಾಗಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಇದೇ ಅಧಿಕ ಹೃದಯದೊತ್ತಡ.
ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು. ಚಿಕ್ಕ ವಯಸ್ಸಿನಿಂದಲೇ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮವಾದ ಆರೋಗ್ಯ ಪಡೆಯಬಹುದು ಹಾಗೂ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು. ಈ ಆಹಾರಗಳು ಯಾವುದೆಂದು ನೋಡೋಣ...

ವಾರದಲ್ಲಿ ಮೂರು ಬಾರಿಯಾದರೂ ಸಾಲ್ಮನ್, ಬಂಗಡೆ ಮೀನು ಸೇವಿಸಿ...
ಸಾಲ್ಮನ್, ಬಂಗಡೆ, ಹೆರಿಂಗ್ ಮೊದಲಾದ ಮೀನುಗಳಲ್ಲಿರುವ ಪೋಷಕಾಂಶಗಳು ಹೃದಯ ಸಂಬಂಧಿ ತೊಂದರೆಗಳಾದ arrhythmia ಹಾಗೂ atherosclerosis ನಂತಹ ತೊಂದರೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಈ ಮೀನುಗಳನ್ನು ಸೇವಿಸುವ ಮೂಲಕ ದೇಹ ಹೃದಯಾಘಾತದ ವಿರುದ್ಧ ಅತ್ಯುತ್ತಮ ರಕ್ಷಣೆ ಪಡೆಯುತ್ತದೆ.

ಓಟ್ಸ್ ರವೆ
ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲೂ ಉಪಯುಕ್ತವಾಗಿದೆ ಹಾಗೂ ಜೀರ್ಣಕ್ರಿಯೆಯಲ್ಲಿಯೂ ಸಹಕರಿಸುತ್ತದೆ. ಓಟ್ಸ್ ರವೆ ದೊರಗಾಗಿದ್ದಷ್ಟೂ ಹೃದಯಕ್ಕೆ ಉತ್ತಮ. ಹೃದಯದ ಆರೋಗ್ಯದ ಕಾಳಜಿ ವಹಿಸುವಲ್ಲಿ ಓಟ್ಸ್ ಪ್ರಮುಖ ಆಹಾರವಾಗಿದೆ.

ಕಪ್ಪು ಚಾಕಲೇಟು
ಸುಮಾರು 60-70% ರಷ್ಟು ಕೋಕೋ ಇರುವ ಕಪ್ಪು ಚಾಕಲೇಟು ಅಧಿಕ ರಕ್ತದೊತ್ತಡವನ್ನು ಸೂಕ್ತ ಮಿತಿಗಳಲ್ಲಿರಿಸಲು ನೆರವಾಗುತ್ತದೆ. ವಿಶೇಷವಾಗಿ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟದೇ ಇರಲು ಹಾಗೂ ಉರಿಯೂತವಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಮೂಲಕ ಕಪ್ಪು ಚಾಕಲೇಟು ಹೃದಯದ ಸ್ನೇಹಿತನಾಗಿದೆ.

ತಣ್ಣನೆಯ ವಿಧಾನದಿಂದ ಸಂಸ್ಕರಿಸಿದ ಆಲಿವ್ ಎಣ್ಣೆ
ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್ ಎಂಬ ಹೆಸರಿನಿಂದ ಸಿಗುವ ಆಲಿವ್ ಎಣ್ಣೆಯನ್ನು ತಣ್ಣಗಿದ್ದಂತೆಯೇ ಹಿಂಡಿ ತೆಗೆದಿರುವ ಕಾರಣ ಕೊಂಚ ದುಬಾರಿಯಾಗಿದ್ದರೂ ಅತ್ಯಂತ ಆರೋಗ್ಯಕರವಾಗಿದೆ. ದಿನಕ್ಕೆ ಕೆಲವು ತೊಟ್ಟುಗಳಷ್ಟು ಎಣ್ಣೆಯನ್ನು ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಿ ಸಕ್ಕರೆಯ ಪ್ರಮಾಣವನ್ನು ಸಂತುಲಿತವಾಗಿರಿಸಲು ನೆರವಾಗುತ್ತದೆ.

ಕೆಂಪು ವೈನ್
ರಕ್ತನಾಳಗಳ ಒಳಗೆ ಅಂಟಿಕೊಂಡಿರುವ ಕೊಬ್ಬಿನ ಕಣಗಳನ್ನು ಸಡಿಲಿಸಿ ರಕ್ತಸಂಚಾರವನ್ನುಸುಗಮಗೊಳಿಸಲು ಕೆಂಪು ವೈನ್ ಸಹಾ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ, ತೂಕ ಇಳಿಸಲು ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುವ ಮೂಲಕ ಹೃದಯಕ್ಕೆ ಪರೋಕ್ಷ ನೆರವು ನೀಡುತ್ತದೆ. ಆದರೆ ಕೆಂಪು ವೈನ್ ಮಾದಕ ಪಾನೀಯವೂ ಆಗಿರುವ ಕಾರಣ ಇದರ ಪ್ರಮಾಣ ಅತ್ಯಂತ ಕಡಿಮೆ ಇರಬೇಕು. ಈ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಗರಿಷ್ಟ 147.8 ಮಿಲೀ ಸೇವಿಸಬಹುದು. ಇದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ.

ಹಸಿರು ಟೀ
ದಿನಕ್ಕೊಂದು ಕಪ್ ಹಸಿರು ಟೀ ಕುಡಿಯುವ ಮೂಲಕ ದೊರಕುವ ಅಪಾರ ಪ್ರಯೋಜನಗಳಲ್ಲಿ ಕೊಲೆಸ್ಟ್ರಾಲ್ ನಿವಾರಣೆಯೂ ಒಂದಾಗಿದೆ. ಹಸಿರು ಟೀ ಜೀವರಾಸಾಯನಿಕ ಕ್ರಿಯೆಯನ್ನು ಚುಕುಕುಗೊಳಿಸುತ್ತದೆ ಹಾಗೂ ಅಧಿಕ ತೂಕ ಪಡೆಯುವ ವಿರುದ್ದ ಹೋರಾಡುತ್ತದೆ.

ಸೋಯಾ ಪ್ರೋಟೀನ್
ಸೋಯಾ ಪ್ರೋಟೀನ್ ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶವನ್ನು ಹೊಂದಿರುವಂತಹ ಸೋಯಾ ಪ್ರೋಟೀನ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ ಮತ್ತು ಇದು ಹೃದಯದ ಹಲವಾರು ಕಾಯಿಲೆಗಳನ್ನು ಗುಣಪಡಿಸುವುದು. ಇದರಲ್ಲಿ ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬು ಉನ್ನತ ಮಟ್ಟದಲ್ಲಿದೆ.

ಊಟದ ಬಳಿಕ ಸಿಹಿ ತಿನ್ನಬೇಡಿ!
ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು.

ಅಡುಗೆ ಎಣ್ಣೆ ವಿಷಯದಲ್ಲಿ ಎಚ್ಚರಿಕೆ!
ಕರಿದ ಪದಾರ್ಥಗಳೇ ಹೆಚ್ಚಿನವರಿಗೆ ಇಷ್ಟವಾಗುವ ಕಾರಣದಿಂದ ಎಣ್ಣೆಯು ಅತಿಯಾಗಿ ನಮ್ಮ ದೇಹವನ್ನು ಸೇರಿಕೊಳ್ಳುವುದು. ಇದರಿಂದ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗಿರುತ್ತದೆ. ದೈನಂದಿನ ಆಹಾರ ಕ್ರಮದಲ್ಲಿ ಮೂರರಿಂದ ನಾಲ್ಕು ಚಮಚಕ್ಕಿಂತ ಹೆಚ್ಚಿನ ಎಣ್ಣೆ ಬಳಸಬೇಡಿ. ಅಲ್ಲದೆ 3-4 ತಿಂಗಳಿಗೊಮ್ಮೆ ಎಣ್ಣೆ ಬದಲಾಯಿಸುತ್ತಾ ಇರಿ. ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಬದಲಾಯಿಸುತ್ತಾ ಇದ್ದರೆ ವಿವಿಧ ರೀತಿಯ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.



Click it and Unblock the Notifications