Latest Updates
-
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು!
ದಾಸವಾಳ ಎಂಬ ಅಮೃತಬಳ್ಳಿ..! ಎಷ್ಟೆಲ್ಲಾ ಲಾಭವಿದೆ ಇದರಲ್ಲಿ ಗೊತ್ತಾ?
ಕೆಲವೊಂದು ಹೂವುಗಳು ನೋಡಲು ಎಷ್ಟು ಸುಂದರವಾಗಿರುತ್ತವೆಯೋ ಆರೋಗ್ಯದ ದೃಷ್ಟಿಯಿಂದಲೂ ಅಷ್ಟೇ ಗುಣಗಳನ್ನು ತನ್ನಲ್ಲಿಟ್ಟುಕೊಂಡಿರುತ್ತದೆ. ಅದರಲ್ಲೂ ದಾಸವಾಳ ಹೂವಿನಲ್ಲಿ ಹತ್ತಾರು ಆರೋಗ್ಯ ಅಂಶಗಳಿವೆ. ಆರ್ಯುವೇದದಲ್ಲಿ ದಾಸವಾಳಕ್ಕೆ ಮುಖ್ಯ ಸ್ಥಾನವಿದೆ.
ದಾಸವಾಳ ಹೂವು ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ತನ್ನ ಪಾಲಿನ ಸಹಾಯ ಮಾಡುತ್ತದೆ. ಹೌದು, ದಾಸವಾಳ, ಹೈಬಿಸ್ಕಸ್, ಶೂಫ್ಲವರ್ ಎಂದು ಕರೆಯಲ್ಪಡುವ ಈ ಹೂವು ನಿಮ್ಮ ಕೂದಲಿಗೆ ರಕ್ಷಣೆಯನ್ನು ನೀಡುವುದರ ಜೊತೆಗೆ ಹಲವಾರು ಕಾಯಿಲೆಗಳನ್ನು ನಿವಾರಿಸುತ್ತದೆ.
ಹಾಗಾದರೆ ದಾಸವಾಳ ಹೂವಿನಲ್ಲಿರುವ ಆರೋಗ್ಯಕರ ಅಂಶಗಳೇನು? ಯಾವೆಲ್ಲಾ ಕಾರಣದಿಂದಾಗಿ ದಾಸವಾಳ ಹೂವು ಮತ್ತು ಅದರ ಗಿಡದ ಪ್ರತಿಯೊಂದು ಅಂಗವು ಇಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕೂದಲಿನ ಸಮಸ್ಯೆಗೆ ಇದು ರಾಮಬಾಣ
ಈ ಹೂವಿನ ದಳಗಳನ್ನು ಅರೆದು ಸಂಗ್ರಹಿಸಲಾದ ಲೋಳೆ ಕೂದಲ ಪೋಷಣೆಗೆ ಅತ್ಯುತ್ತಮವಾಗಿದ್ದು ಹಲವು ನೈಸರ್ಗಿಕ ಕೂದಲ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದರ ಗಿಡದ ಚೆಕ್ಕೆಯ ಪುಡಿಯನ್ನು ಶಾಂಪೂ ಮೂಲಕ ಬಳಸುವುದರಿಂದ ತಲೆಯ ಚರ್ಮ ಒಣಗುವುದು ಮತ್ತು ತಲೆಹೊಟ್ಟಾಗುವುದರಿಂದ ರಕ್ಷಿಸುತ್ತದೆ.
ಬಿಳಿ ಕೂದಲಿಗೆ ಪರಿಹಾರ
ದಾಸವಾಳ ಹೂವಿನ ದಳಗಳನ್ನು ಬಿಸಿ ನೀರಿನಲ್ಲಿ ಹಾಕಿ 20 ನಿಮಿಷ ಕಾಯಿಸಿ. ಆನಂತರ ಅದನ್ನು ತಣ್ಣಗೆ ಮಾಡಿ, ಪೇಸ್ಟ್ ರೀತಿ ಮಾಡಿಕೊಳ್ಳಿ.ಇನ್ನು ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು ನಂತರ ಇದನ್ನು ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ, ಅದರ ನಂತರ ದಾಸವಾಳ ನೆನೆಸಿದ ಎಣ್ಣೆಯನ್ನು ಹಚ್ಚಿ.
ದಾಸವಾಳದ ಚಹಾದಿಂದ ಕ್ಯಾನ್ಸರ್ ನಿಯಂತ್ರಿಸಬಹುದು
ಇನ್ನೊಂದು ಸಂಶೋಧನೆಯ ಪ್ರಕಾರ ನಿಯಮಿತವಾಗಿ ದಾಸವಾಳದ ಚಹಾ ಸೇವಿಸುವುದರಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ತಗ್ಗುತ್ತದೆ ಹಾಗೂ ಒಂದು ವೇಳೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಪೂರ್ಣವಾಗಿ ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಇದರಲಿರುವ ಉರಿಯೂತ ನಿವಾರಕ ಗುಣ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ದಾಸವಾಳದ ಹೂವಿನ ಚಹಾ ಒಂದು ವರದಾನವಾಗಿದೆ.
ಜ್ವರದ ಸಮಸ್ಯೆಗೆ ಪರಿಹಾರ
ಫ್ಲೂ ಅಥವಾ ಜ್ವರದಿಂದ ಬಳಲ್ಲುತ್ತಿದ್ದೀರಾ? ಚಿಂತೆ ಮಾಡದೆ ಒಣ ದಾಸವಾಳದ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಟೀಯನ್ನು ತಯಾರಿಸಿಕೊಳ್ಳಿ. ಇವು ಜ್ವರದ ಸಮಯದಲ್ಲಿ ನಿಮಗೆ ಉಪಶಮನವನ್ನು ನೀಡುತ್ತದೆ ಎಂದು ಇಂಟರ್‌ನ್ಯಾಶನಲ್ ಜರ್ನಲ್ ರಿಸರ್ಚ್ ಇನ್ ಫಾರ್ಮಾಸೆಟಿಕಲ್ ಅಂಡ್ ಬಯೋಮೆಡಿಕಲ್ ಸೈನ್ಸಸ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಇದರಲ್ಲಿರುವ ಡೆಮುಲ್ಸೆಂಟ್ ಮತ್ತು ಉರಿಬಾವು ನಿರೋಧಕ ಗುಣಗಳು ಉರಿಬಾವನ್ನು ಕಡಿಮೆ ಮಾಡುತ್ತವೆ ಮತ್ತು ಸಿಂಬಳವನ್ನು ಕಡಿಮೆ ಮಾಡಿ ನಿಮಗೆ ಆರಾಮವನ್ನು ನೀಡುತ್ತದೆ.
ದಾಸವಾಳದ ಟೀ ಮಾಡುವುದೇಗೆ?
ಬೇಕಾಗುವ ಸಾಮಾಗ್ರಿಗಳು
- ಚೆನ್ನಾಗಿ ಒಣಗಿಸಿದ ದಾಸವಾಳ ಹೂವಿನ ದಳಗಳು
- ಎರಡು ಚಮಚ ಸಕ್ಕರೆ
- ನೀರು - 1 ಕಪ್
- ಲಿಂಬೆಹಣ್ಣಿನ ರಸ - 2 ಟೀ.ಚಮಚ
- ಶುಂಠಿ - ಸಣ್ಣಕ್ಕೆ ಹೆಚ್ಚಿರುವುದು
ಮಾಡುವ ವಿಧಾನ
1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ)
2. ಇದು ಚೆನ್ನಾಗಿ ಕುದಿದ ನಂತರ ಸೋಸಿಕೊಂಡು ಇದಕ್ಕೆ 2 ಚಮಚದಷ್ಟು ಸಕ್ಕರೆ ಮತ್ತು ಎರಡು ಟೀ ಚಮಚದಷ್ಟು ಲಿಂಬೆಯ ರಸವನ್ನು ಸೇರಿಸಿ
3. ಅರೋಗ್ಯಕರವಾದ ದಾಸವಾಳ ದಳಗಳ ಚಹಾವನ್ನು ಸವಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
