Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಭಾರತದ ಅರ್ಧದಷ್ಟು ಜನಸಂಖ್ಯೆ ದೈಹಿಕ ಕಸರತ್ತಿನಿಂದ ಹೊರಗೆ..! ಏಕೆ ಗೊತ್ತಾ?
ಭಾರತದಲ್ಲಿ ಸ್ಥೂಲಕಾಯತೆ ಸಮಸ್ಯೆ ಅಧಿಕವಾಗುತ್ತಿದೆ. ಈ ನಡುವೆ ಬಹಳಷ್ಟು ಮಂದಿ ವ್ಯಾಯಾಮದಿಂದ ಹೊರಗುಳಿದಿದ್ದಾರೆ ಎಂಬುದು ತಿಳಿದುಬಂದಿದೆ. ಭಾರತದಲ್ಲಿ ಸುಮಾರು ಅರ್ಧದಷ್ಟು ಜನಸಂಖ್ಯೆ ದೈಹಿಕ ಚಟುವಟಿಕೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ.
2022ರಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಈ ವ್ಯಾಯಾಮದಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಮಾಹಿತಿಯ ಪ್ರಕಾರ, ಭಾರತದ ವಯಸ್ಕ ಜನಸಂಖ್ಯೆಯ ಅರ್ಧದಷ್ಟು ಜನರು ಅಗತ್ಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ತಿಳಿದುಬಂದಿದೆ.

ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟವಾದ ಹೊಸ ಮಾಹಿತಿಯು ಭಾರತದಲ್ಲಿ ಸಾಕಷ್ಟು ದೈಹಿಕ ಚಟುವಟಿಕೆಯ ಹರಡುವಿಕೆಯು 200 ರಲ್ಲಿ 22.3% ರಿಂದ 2022 ರಲ್ಲಿ 49.4% ಕ್ಕೆ ಏರಿದೆ ಎಂದು ತೋರಿಸುತ್ತಿದೆ. 2022 ರಲ್ಲಿ ಪುರುಷರಿಗಿಂತ (42%) ಹೆಚ್ಚು ಮಹಿಳೆಯರು (57.2%) ಸಾಕಷ್ಟು ವ್ಯಾಯಾಮದಲ್ಲಿ ತೊಡಗಿಲ್ ಎಂಬುದು ತಿಳಿದುಬರುತ್ತದೆ.
ಇದೇ ಪ್ರವೃತ್ತಿ ಮುಂದುವರಿದರೆ 2030 ರ ವೇಳೆಗೆ ಭಾರತದ ವಯಸ್ಕ ಜನಸಂಖ್ಯೆಯ ಶೇ.60 ಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯಿಂದ ಹೊರಗುಳಿದ ಪ್ರಮಾಣದಲ್ಲಿ ಇರಲಿದ್ದಾರೆ. ಇದು ಹೃದಯ ಸಮಸ್ಯೆ, ಟೈಪ್ 2 ಮಧುಮೇಹ ಸೇರಿದಂತೆ ಹಲವು ದೈಹಿಕ ಚಟುವಟಿಕೆಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಲಿದ್ದಾರೆ ಎಂದು ತಿಳಿದುಬಂದಿದೆ.
ವಯಸ್ಕರು ವಾರಕ್ಕೆ ಕನಿಷ್ಠ 150 ರಿಂದ 300 ನಿಮಿಷಗಳ ಕಾಲ ಸಾಮಾನ್ಯ ವ್ಯಾಯಾಮ ಅಥವಾ 75 ರಿಂದ 150 ನಿಮಿಷಗಳ ಕಠಿಣ ರೀತಿಯ ದೈಹಿಕ ವ್ಯಾಯಾಮದಲ್ಲಿ ತೊಡಗಬೇಕಂತೆ. ಆದರೆ ಈ ಸಮಯಕ್ಕಿಂಯ ಕಡಿಮೆ ಅಥವಾ ದೈಹಿಕ ಕಸರತ್ತಿನಲ್ಲಿ ಭಾಗಿಯಾಗದೇ ಇರುವುದು ಹೃದಯ ಸಮಸ್ಯೆ, ಮಧುಮೇಹ, ಬುದ್ಧಮಾಂದ್ಯತೆ, ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಅನಾರೋಗ್ಯಕ್ಕೆ ಅವರು ಒಳಗಾಗಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಾಗತಿಕವಾಗಿ 195 ದೇಶಗಳಲ್ಲಿ ಸಾಕಷ್ಟು ದೈಹಿಕ ಚಟುವಟಿಕೆಯ ಕಾರ್ಯದಲ್ಲಿ ಭಾರತವು 12ನೇ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ಸುಮಾರು ಶೇ.31 ವಯಸ್ಕರು ಅಥವಾ ಸರಿಸುಮಾರು 1.8 ಶತಕೋಟಿ ಜನರು 2022 ರಲ್ಲಿ ಶಿಫಾರಸು ಮಾಡಲಾಗಿರುವ ದೈಹಿಕ ಚಟುವಟಿಕೆಗಳ ಕಾಯಘಗಳನ್ನು ಮಾಡಲು ವಿಫಲರಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದರಿಂದ ಯುವ ಪೀಳಿಗೆ ಹೆಚ್ಚು ಹೊತ್ತು ದೈಹಿಕ ಕಸರತ್ತಿನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಜಂಕ್ ಫುಡ್‌ಗಳು, ಆಹಾರ ಕ್ರಮದಲ್ಲಿ ಬದಲಾವಣೆ ಸೇರಿದಂತೆ ಕರಿದ ತಿಂಡಿಗಳತ್ತ ವಾಲುತ್ತಿದ್ದಾರೆ ಇದು ಸ್ಥೂಲಕಾಯತೆ ಸೇರಿದಂತೆ, ಹಲವು ರೀತಿಯ ಸಮಸ್ಯೆಗೆ ಕಾರಣವಾಗುತ್ತಿದೆ. ಯುವ ಸಮುದಾಯವು ದೈಹಿಕ ಚಟುವಟಿಕೆಯ ಬದಲಾಗಿ ಕುಳಿತಲ್ಲೇ ಕಾಲ ಕಳೆಯಲು ಮುಂದಾಗುತ್ತಿದ್ದಾರೆ. ಅದರಲ್ಲೂ ಟಿವಿ, ಮೊಬೈಲ್, ಗೇಮಿಂಗ್ ಸೇರಿದಂತೆ ಯುವಪೀಳಿಗೆ ಮನೆಯಲ್ಲೇ ಕುಳಿತು ತೂಕ ಹೆಚ್ಚಳದಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಈ ಸಮಸ್ಯೆಗಳು ಹೆಚ್ಚಾಗಿವೆ ಏಷ್ಯಾ ಪೆಸಿಫಿಕ್‌ನಲ್ಲಿ ಸುಮಾರು ಶೇ.48ರಷ್ಟು ಮಂದಿ ದೈಹಿಕ ಕಸರತ್ತಿನಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ. ಈ ಸಂಖ್ಯೆ ಭಾರತದಲ್ಲೂ ಹೆಚ್ಚಳವಾಗುತ್ತಿದ್ದು, ದೈಹಿಕ ಚಟುವಿಟಿಕೆ ದೇಹಕ್ಕೆ ಬಹಳ ಮುಖ್ಯ. ದೈಹಿಕ ಚಟುವಟಿಕೆಯಿಂದ ಮಾನಸಿಕ ಆರೋಗ್ಯಕ್ಕೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
