Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಷಾಢದಲ್ಲಿ ಈ ಆಹಾರಗಳನ್ನು ಮಿಸ್ ಮಾಡಲೇಬಾರದು ಎನ್ನುವುದು ಈ ಕಾರಣಕ್ಕೆ
ಆಷಾಢದಲ್ಲಿ ನಮ್ಮ ಪೂರ್ವಜರು ತಮ್ಮ ಆಹಾರಕ್ರಮದಲ್ಲಿ ಬದಲಾವಣೆ ತರುತ್ತಿದ್ದರು, ಅದರ ಹಿಂದಿರುವ ಬಹುಮುಖ್ಯವಾದ ಕಾರಣ ಆರೋಗ್ಯ ಕಾಪಾಡುವುದು. ಕಾಲ ಬದಲಾದಂತೆ ಆಹಾರಕ್ರಮದಲ್ಲೂ ವ್ಯತ್ಯಾಸ ಮಾಡಬೇಕು, ಆವಾಗ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಆಯಾ ಸೀಸನ್‌ನಲ್ಲಿ ದೊರೆಯುವಂಥ ಆಹಾರ ಸೇವನೆ ಕಡೆಗೆ ಹೆಚ್ಚು ಗಮನಹರಿಸಬೇಕು, ಅವುಗಳಲ್ಲಿ ಆ ಕಾಲಕ್ಕೆ ನಮ್ಮ ದೇಹಕ್ಕೆ ಅಗ್ಯತವಿರುವ ಪೋಷಾಂಶಗಳಿರುತ್ತದೆ.
ಅದರಲ್ಲೂ ಆಷಾಢ ಮಾಸವೆಂದರೆ ಕೆಲವೊಂದು ಆಹಾರಗಳನ್ನು ಕಡ್ಡಾಯವಾಗಿ ತಿನ್ನಬೇಕೆಂದು ಹೇಳುತ್ತಾರೆ. ಉದಾಹರಣೆಗೆ ಕೆಸುವಿನ ಎಲೆ... ಇದನ್ನು ಇತರ ಸಮಯದಲ್ಲಿ ತಿನ್ನುವುದಕ್ಕಿಂತ ಆಷಾಢದಲ್ಲಿಯೇ ತಿನ್ನಬೇಕೆಂದು ಹೇಳಲಾಗುವುದು. ಅದರಂತೆ ಕಣಲೆ ಕೂಡ, ಕಣಲೆ (ಬಿದಿರಿನ ಮೊಳಕೆ) ಮಳೆಗಾಲದಲ್ಲಿ ಸಿಗುವುದು, ಇದನ್ನು ಮಳೆಗಾಲದಲ್ಲಿ ತಿಂದರೆ ಒಳ್ಳೆಯದು. ಆಷಾಢದಲ್ಲಿ ಬಾಳೆದಿಂಡು, ಕಣಲೆ, ಕೆಸುವಿನ ಎಲೆ ಇವುಗಳನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳೇನು ನೋಡೋಣ ಬನ್ನಿ:

ಆಷಾಢದಲ್ಲಿ ಬಾಳೆದಿಂಡು ತಿನ್ನಬೇಕು
ಆಷಾಢದಲ್ಲಿ ಬಾಳೆದಿಂಡಿನ ಪಲ್ಯ ಮಾಡಿ ತಿನ್ನಬೇಕು ಅಲ್ಲದೆ ಈ ಸಮಯದಲ್ಲಿ ಬಾಳೆ ಹೂ ಬಳಸುವುದು ಕೂಡ ಒಳ್ಳೆಯದು, ಇವುಗಳನ್ನು ತಿನ್ನುವುದರಿಂದ ಮೈ ಉಷ್ಣಾಂಶ ಬೆಚ್ಚಗಿಡಲು ಸಹಕಾರಿಯಾಗಿದೆ. ಅಲ್ಲದೆ ಆಷಾಢದಲ್ಲಿ ಚಯಪಚಯ ಕ್ರಿಯೆ ನಿಧಾನವಾಗುವುದು, ಬಾಳೆದಿಂಡು ಹಾಗೂ ಬಾಳೆ ಹೂ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು.
- ಮೂತ್ರ ಸೋಂಕು ತಡೆಗಟ್ಟುತ್ತದೆ: ಬಾಳೆದಿಂಡಿನಲ್ಲಿ ಪೊಟಾಷ್ಯಿಯಂ, ವಿಟಮಿನ್ ಬಿ6 ಅಂಶವಿರುವುದರಿಂದ ಮೂತ್ರನಾಳದ ಸೋಂಕು ತಡೆಗಟ್ಟಲು ಸಹಕಾರಿ.
- ಮಧುಮೇಹ ನಿಯಂತ್ರಣದಲ್ಲಿಡುತ್ತದೆ: ಬಾಳೆದಿಂಡಿನಲ್ಲಿ ಕ್ಯಾಲೋರಿ ಅಂಶ ಕಡಿಮೆಯಾಗಿರುತ್ತದೆ. ಇದು ಮಧುಮೇಹಿಗಳಿಗೆ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ.
- ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಸಹಕಾರಿ: ಬಾಳೆದಿಂಡಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.
- ಅಸಿಡಿಟಿ ಕಡಿಮೆ ಮಾಡುತ್ತದೆ: ಇದರಲ್ಲಿರುವ ಪೋಷಕಾಂಶ ದೇಹದಲ್ಲಿ ಅಸಿಡಿಟಿ ಸಮಸ್ಯೆ ಕಡಿಮೆ ಮಾಡಲು ಸಹಕಾರಿ.
- ಮೈ ತೂಕ ಕಡಿಮೆ ಮಾಡುತ್ತದೆ: ಆಷಾಢದಲ್ಲಿ ಹಸಿವು ಅಧಿಕವಾಗುವುದು, ಈ ಬಗೆಯ ತರಕಾರಿ ಹಸಿವು ನಿಯಂತ್ರಿಸಿ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ.
ಕೆಸುವಿನ ಎಲೆ
ಆಷಾಢದಲ್ಲಿ ಕೆಸುವಿನ ಎಲೆಯಿಂದ ಪತ್ರೊಡೆ ಮಾಡಿ ತಿನ್ನಲಾಗುವುದು. ಕೆಸುವಿನ ಎಲೆ ದೇಹದಲ್ಲಿ ಮೈ ಉಷ್ಣಾಂಶ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪತ್ರೊಡೆಯನ್ನು ಔಷಧೀಯ ಗುಣವಿರುವ ಸಾಂಪ್ರದಾಯಿಕ ಆಹಾರ ಎಂದು ಆಯುಷ್ ಇಲಾಖೆ ಕೂಡ ಹೇಳಿದೆ. ಪತ್ರೊಡೆಯಲ್ಲಿ ಕ್ಯಾಲ್ಸಿಯಂ ಅದಿಕವಿರಲಿದೆ. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವುದು. ಇದರಲ್ಲಿ ಫೀನಾನ್, ಟ್ಯಾನಿನ್ಸ್, ಫ್ಲೇವೋನಾಯ್ಡ್, ಗ್ಲೈಸೋಸೈಡ್ಸ್, ಸ್ಟಿರೋಲ್ಸ್ ಅಂಶವಿರುವುದರಿಂದ ಸಂಧಿವಾತದ ಸಮಸ್ಯೆ ನಿವಾರಣೆಯಾಗಲಿದೆ. ಇದರಲ್ಲಿ ಕೆರೋಟಿನ್ ಅಂಶ ಕೂಡ ಅಧಿಕವಿದೆ. ಕರಾವಳಿ, ಮಲೆನಾಡು, ಕೊಡಗು ಈ ಭಾಗಗಳಲ್ಲಿ ಪತ್ರೊಡೆ ಹೆಚ್ಚಾಗಿ ಸೇವಿಸಲಾಗುವುದು.
ಕಣಲೆ/ಕಳಲೆ
ಮಳೆಗಾಲದಲ್ಲಿ ಬಿದಿರು ಮೊಳಕೆಯೊಡೆಯಲಾರಂಭಿಸಿದಾಗ ಅದನ್ನು ತಂದು ಅದರಿಂದ ಪಲ್ಯ, ಸಾರು ಅಂತ ಮಾಡಲಾಗುವುದು. ಅದನ್ನು ಹಾಗೇ ತಂದು ತಿನ್ನುವಂತಿಲ್ಲ, ವಿಷವಾಗುವುದು. ಇದನ್ನು ತಂದು ಕತ್ತರಿಸಿ ಮೂರು ದಿನ ನೀರಿನಲ್ಲಿ ಹಾಕಿಟ್ಟು ಹುಳಿ ಬರಿಸಿ ನಂತರ ಆ ನೀರನ್ನು ಸೋಸಿ ಬಳಿಕವಷ್ಟೇ ಆಹಾರ ಪದಾರ್ಥ ಮಾಡಲು ಬಳಸಲಾಗುವುದು. ಇದನ್ನು ಆಷಾಢ ಮಾಸದಲ್ಲಿ ತಿನ್ನಬೇಕೆಂದು ಹೇಳಲಾಗುವುದು. ಕಣಲೆಯಲ್ಲಿ ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸತು, ಕ್ರೋಮಿಯಂ, ಸತು, ಕಬ್ಬಿಣದಂಶ, ಥೈಯಾಮಿನ್, ನಿಯಾಸಿನ್, ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಇ ಈ ಅಂಶಗಳಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ತಜಂಕ್: ಇನ್ನು ಮಳೆಗಾಲದಲ್ಲಿ ತಜಂಕ್ ಸೊಪ್ಪಿನ್ನು ಬಳಸುವುದು ಒಳ್ಳೆಯದು. ಇದನ್ನು ದಕ್ಷಿಣ ಕನ್ನಡ, ಉಡುಪಿ ಈ ಭಾಗಗಳಲ್ಲಿ ತಯಾರಿಸಲಾಗುವುದು.
ಮಳೆಗಾಲದಲ್ಲಿ ಅಡುಗೆಯಲ್ಲಿ ಕಾಳು ಮೆಣಸು ಬಳಸಬೇಕು: ಆಷಾಢದಲ್ಲಿ ಆಹಾರ ತಯಾರಿಸುವಾಗ ಒಣ ಮೆಣಸಿನ ಬದಲಿಗೆ ಕಾಳು ಮೆಣಸನ್ನು ಬಳಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications