Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
35ರ ನಂತರವು ಫಿಟ್ ಆಗಿರಲು ಕತ್ರಿನಾ ಫಿಟ್ನೆಸ್ ಟಿಪ್ಸ್!
ಕತ್ರಿನಾ ಕೈಫ್ ಬಾಲಿವುಡ್ ನ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ವಯಸ್ಸು 39 ದಾಟಿದ್ರು ಕೂಡ ಈಗಲೂ ಕೂಡ ಹದಿನೆಂಟರ ಹುಡುಗಿಯಂತೆ ಮೈ ಮಾಟವನ್ನು ಹೊಂದಿದ್ದಾರೆ. ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿರೋ ಕತ್ರಿನಾ ಈ ವಯಸ್ಸಿನಲ್ಲೂ ಕೂಡ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಅಷ್ಟಕ್ಕು ಈ ವಯಸ್ಸಿನಲ್ಲಿ ಕತ್ರಿನಾ ಫಿಟ್ ಆಗಿರೋದಕ್ಕೆ ಏನು ಮಾಡ್ತಾರೆ? ಅವರ ಡಯೆಟ್ ಪ್ಲಾನ್ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ.
ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳಂತೆ ಕತ್ರಿನಾ ಕೂಡ ಒಂದು ದಿನವೂ ವರ್ಕ್ಔಟ್ ಗೆ ಹೋಗೋದನ್ನು ಮಿಸ್ ಮಾಡೋದಿಲ್ವಂತೆ. ಅಷ್ಟೊಂದು ಡೆಡಿಕೇಶನ್ ಕೊಟ್ಟು ಜಿಮ್ ನಲ್ಲಿ ಬೆವರಿಳಿಸಿರೋದಕ್ಕೆ ಕತ್ರಿನಾ ಇಷ್ಟೊಂದು ಫಿಟ್ ಆಂಡ್ ಫೈನ್ ಆಗಿರೋದಕ್ಕೆ ಕಾರಣ. ಮುಖ್ಯವಾಗಿ ಯಾವೆಲ್ಲಾ ವರ್ಕ್ಔಟ್ ಗಳನ್ನು ಕತ್ರಿನಾ ನಿತ್ಯವು ಮಾಡ್ತಾರೆ ಅಂತ ನೋಡೋದಾದ್ರೆ:
* ಹಿಪ್ ಟ್ವಿಸ್ಟ್ ಜೊತೆಗೆ ಪ್ಲಾಂಕ್
* ಸೈಡ್ ಕಿಕ್
* ಕಮಾಂಡೋ ಪುಶ್ ಅಪ್
* ಸಿಂಗಲ್ ಲೆಗ್ ಲಂಗ್ಸ್
* ಸ್ಕಾಟ್ ಜಂಪ್ಸ್
* ಪೈಲೆಟ್
* ಕಾರ್ಡಿಯೋ
* ಕ್ರಿಯಾತ್ಮಕ ತರಬೇತಿ

ಕತ್ರಿನಾ ವರ್ಕ್ಔಟ್ ದಿನಚರಿ ಹೇಗಿರುತ್ತೆ?
* ಕತ್ರಿನಾ ದಿನ ನಿತ್ಯ ತಪ್ಪದೇ ಓಟ ಅಥವಾ ಜಾಗಿಂಗ್ ಗೆ ಹೋಗ್ತಾರೆ. ಇದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಸಹಾಯವಾಗುತ್ತದೆ
* ಬೆಳಗ್ಗೆ ಎದ್ದ ತಕ್ಷಣ ಜಾಗಿಂಗ್, ಸೈಕ್ಲಿಂಗ್ ಅಥವಾ ವಾಕಿಂಗ್ಗೆ ಹೋಗಬೇಕು. ಇದ್ರಿಂದ ನಮ್ಮ ಮಾಂಸ ಖಂಡಗಳಿಗೆ ತುಂಬಾನೇ ಒಳ್ಳೆಯದು. ವರ್ಕ್ಔಟ್ ಮಾಡುವ ಸಂದರ್ಭದಲ್ಲಿ ಮಾಂಸಖಂಡಗಳಿಗೆ ಯಾವುದೇ ರೀತಿ ತೊಂದರೆಯಾಗೋದಿಲ್ಲ
* ವರ್ಕ್ಔಟ್ ಮಾಡೋದಕ್ಕೆ ಹೋಗೋವಾಗ ಸರಿಯಾದ ಬಟ್ಟೆಗಳನ್ನೇ ಧರಿಸಿ
* ಸಾಧ್ಯವಾದಷ್ಟು ನೀರು ಕುಡಿದು ನಿಮ್ಮ ನೀವು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ
* ಕತ್ರಿನಾ ಹೇಳೋ ಪ್ರಕಾರ ಆರೋಗ್ಯಯುತವಾದ ಆಹಾರವನ್ನೇ ಸೇವಿಸಬೇಕು. ಜಂಕ್ ಮತ್ತು ಎಣ್ಣೆಯುಕ್ತ ಆಹಾರಗಳಿಗೆ ಆದಷ್ಟು ಬ್ರೇಕ್ ಹಾಕಿ
* ಇನ್ನೂ ಕತ್ರಿನಾ ನಿತ್ಯ ಯೋಗ ಹಾಗೂ ಧ್ಯಾನ ಮಾಡುವುದರ ಮೂಲಕ ತಮ್ಮನ್ನು ತಾವು ಒತ್ತಡ ಮುಕ್ತರಾಗಿ ಇರಿಸಲು ಇದು ಸಹಾಯವಾಗುತ್ತಂತೆ
ಕತ್ರಿನಾ ಕೈಫ್ ಡಯಟ್ ಪ್ಲಾನ್ ಹೇಗಿರುತ್ತೆ?
* ಬೆಳಗ್ಗೆ - ಕತ್ರಿನಾ ಎದ್ದ ತಕ್ಷಣ ತನ್ನನ್ನು ತಾನು ಹೈಡ್ರೇಟ್ ಮಾಡಿಕೊಳ್ಳುತ್ತಾರೆ. ಅವರು ಎದ್ದ ನಂತರ ಕನಿಷ್ಠ ನಾಲ್ಕು ಲೋಟ ನೀರು ಕುಡಿಯುತ್ತಾತಂತೆ. ಇದ್ರಿಂದ ದೇಹ ಶುದ್ಧವಾಗುತ್ತದೆ.
* ಬೆಳಗಿನ ಉಪಾಹಾರ - ಕತ್ರಿನಾ ಎದ್ದ ತಕ್ಷಣ ಓಟ್ ಮಿಲ್ ಅಥವಾ ಯಾವುದಾದರೂ ಧ್ಯಾನಗಳನ್ನು ಸೇವಿಸುತ್ತಾರಂತೆ. ಇನ್ನೂ ಒಂದು ಲೋಟ ದಾಳಿಂಬೆ ಜ್ಯೂಸ್ ಜೊತೆಗೆ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನುತ್ತಾರಂತೆ
* ಮಧ್ಯಾಹ್ನದ ಊಟ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ಜೊತೆಗೆ ಬೇಯಿಸಿದ ಅನ್ನ ಸೇವಿಸುತ್ತಾರಂತೆ. ಇದ್ರ ಜೊತೆಗೆ ಸಲಾಡ್, ಗ್ರಿಲ್ಡ್ ಮೀನು ಮತ್ತು ಬ್ರೌನ್ ಬ್ರೆಡ್ ಗೆ ಬೆಣ್ಣೆ ಹಾಕಿ ಸೇವಿಸುತ್ತಾರಂತೆ
* ಸಂಜೆ : ಬ್ರೌನ್ ಬ್ರೆಡ್ ಜೊತೆಗೆ ಪೀನಟ್ ಬಟರ್ ಹಾಗೂ ಸ್ಯಾಂಡ್‌ವಿಚ್ ಸೇವಿಸುತ್ತಾರೆ
ರಾತ್ರಿಯ ಊಟ : ರಾತ್ರಿಯ ಊಟಕ್ಕೆ ಎಣ್ಣೆ ಬಳಸದೇ ಬೇಯಿಸಿದ ತರಕಾರಿಯನ್ನು ಸೇವಿಸುತ್ತಾರೆ. ಇದ್ರ ಜೊತೆಗೆ ಸಲಾಡ್, ದಾಲ್ ಹಾಗೂ ಚಪಾತಿ, ತರಕಾರಿ ಸೂಪ್ ಇರುತ್ತಂತೆ. ಕೆಲವೊಂದು ಸಾರಿ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ
ನಟಿ ಕತ್ರಿನಾ ಕೈಫ್ ಡಯೇಟ್ ಮತ್ತು ಫಿಟ್ನೆಸ್ ಸಿಕ್ರೆಟ್ ಗೊತ್ತಾಯ್ತಲ್ಲ. ಕಟ್ಟು ನಿಟ್ಟಾದ ಡಯೇಟ್ ನಲ್ಲಿ ಈ ರೀತಿಯ ಆಹಾರಗಳನ್ನು ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. ಜೊತೆಗೆ ವ್ಯಾಯಾಮಗಳನ್ನು ದಿನ ನಿತ್ಯ ಅಭ್ಯಾಸ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
