Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಣ್ಣಿನ ಸ್ಕ್ಯಾನಿಂಗ್ ಮಾಡಿದರೆ ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆಹಚ್ಚಬಹುದು!
ಹೆಚ್ಚಿನವರಿಗೆ ಕಿಡ್ನಿ ಸಮಸ್ಯೆ ಪ್ರಾರಂಭದಲ್ಲಿ ತಿಳಿಯುವುದಿಲ್ಲ, ಯಾವಾಗ ಕಿಡ್ನಿಯ ಆರೋಗ್ಯ ಸಂಪೂರ್ಣ ಹಾಳಾಗುವುದೋ ಆವಾಗ ಗೊತ್ತಾಗುವುದು, ಅದೇ ಆರಂಭದಲ್ಲಿಯೇ ಗೊತ್ತಾದರೆ ಕಿಡ್ನಿ ಸಮಸ್ಯೆ ಗಂಭೀರವಾಗುವುದನ್ನು ತಡೆಗಟ್ಟಬಹುದು. ಕಿಡ್ನಿ ಆರೋಗ್ಯ ಹೇಗಿದೆ ಎಂಬುವುದನ್ನು ತಿಳಿಯಲು ಕಣ್ಣಿನ ಸ್ಕ್ಯಾನ್ ಮಾಡಿದರೆ ಸಾಕು ತಿಳಿಯುವುದು, ಅಂಥದ್ದೊಂದು ತಂತ್ರಜ್ಞಾನ ಬಂದಿದೆ.
ಕಿಡ್ನಿಗೆ ಸಮಸ್ಯೆಯಾಗಿದ್ದರೆ ಪ್ರಾರಂಭದಲ್ಲಿಯೇ ತಿಳಿಯಬಹುದು
ಈ ತಂತ್ರಜ್ಞಾನದಲ್ಲಿ ಕಿಡ್ನಿ ಸಮಸ್ಯೆಯಾಗಿದೆ ಎಂಬುವುದನ್ನು ಪ್ರಾರಂಭದಲ್ಲಿಯೇ ಗೊತ್ತಾಗುವುದು. ಕಿಡ್ನಿ ಸಮಸ್ಯೆಯಾಗಿದೆ ಎಂದು ನಮ್ಮ ದೇಹದಲ್ಲಿ ಲಕ್ಷಣಗಳು ಗೊತ್ತಾಗುವ ಮೊದಲೇ ನಮ್ಮ ಕಣ್ಣುಗಳಲ್ಲಿ ಕಂಡು ಪಡೆಯಬಹುದಂತೆ.

ಈಗಿರುವ ಸ್ಕ್ರೀನಿಂಗ್ ಟೆಕ್ನಾಲಾಜಿ ಹೇಗಿದೆ
ಕಿಡ್ನಿಯ ಆರೋಗ್ಯ ಬಗ್ಗೆ ತಿಳಿಯಲು ಸ್ಕ್ಯಾನಿಂಗ್ ಮಾಡಿಸಿದರೆ ಅರ್ಧ ಭಾಗ ಕಿಡ್ನಿ ಹಾಳಾಗುವವರೆಗೂ ಗೊತ್ತಾಗುವುದಿಲ್ಲ, ಅದೇ ಈ ಆಧುನಿಕ ತಂತ್ರಜ್ಞಾನವಾದ ಕಣ್ಣಿನ ಸ್ಕ್ಯಾನಿಂಗ್‌ನಲ್ಲಿ ಕಿಡ್ನಿಯ ಆರೋಗ್ಯ ಶೇ. 1ರಷ್ಟು ಹಾಳಾಗಿದ್ದರೂ ತಿಳಿಯಬಹುದು.
ಕಣ್ಣಿನಲ್ಲಿ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುವುದು
ನಮ್ಮ ದೇಹದಲ್ಲಿ ಮೈಕ್ರೋವ್ಯಾಸ್ಕ್ಯೂಲರ್ ಸರ್ಕ್ಯೂಲೇಷನ್ ಕಣ್ಣಿನಲ್ಲಿ ಮಾತ್ರ ನಡೆಯುತ್ತದೆ. ಅಂದರೆ ಕಣ್ಣಿನಲ್ಲಿ ಅತಿ ಕಿರಿದಾದ ರಕ್ತನಾಳವಾಗಿದ್ದು, ಕಿಡ್ನಿಗೆ ಹಾಳಾದರೆ ಈ ರಕ್ತನಾಳಕ್ಕೆ ಮೊದಲು ಪೆಟ್ಟಾಗುವುದು, ಆದ್ದರಿಂದ ಕಣ್ಣಿನ ಸ್ಕ್ಯಾನಿಂಗ್ ಮಾಡುವುದರಿಂದ ಕಿಡ್ನಿ ಆರೋಗ್ಯ ಬಗ್ಗೆ ತಿಳಿಯಬಹುದಾಗಿದೆ.
3D ಟೆಕ್ನಾಲಾಜಿ
ಅಕ್ಷಿಪಟಲದ 3D ಚಿತ್ರವನ್ನು ಪರೀಕ್ಷಿಸಿ ಕಿಡ್ನಿ ಆರೋಗ್ಯ ಬಗ್ಗೆ ತಿಳಿಯಬಹುದು. ಇದನ್ನು optical coherence tomography (OCT) ಎಂದು ಕರೆಯಲಾಗುವುದು. ಈ ತಂತ್ರಜ್ಞಾನ ಹಲವಾರ ಪ್ರಾಣ ಕಾಪಾಡಲು ಸಹಕಾರಿಯಾಗಿದೆ.
ಕಿಡ್ನಿ ಸಮಸ್ಯೆ ಮೊದಲನೇ ಹಂತದಲ್ಲಿದ್ದಾಗ ಕಂಡು ಬರುವ ಲಕ್ಷಣಗಳು
ಕಿಡ್ನಿ ಸಮಸ್ಯೆ ಮೊದಲನೇ ಹಂತದಲ್ಲಿದ್ದಾಗ ದೇಹದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದು. ಏಕೆಂದರೆ ಪ್ರಾರಂಭದಲ್ಲಿ ನಮ್ಮ ಕಿಡ್ನಿ ತನ್ನ ಸ್ವಲ್ಪ ಮಟ್ಟಿಗೆ ಸರಿಯಾಗಿ ಮಾಡಿಲ್ಲ ಎಂದರೆ ನಮ್ಮ ದೇಹದ ಸರಿದೂಗಿಸಿಕೊಂಡು ಹೋಗುತ್ತದೆ. ಆದ್ದರಿಂದ ಈ ಹಂತದಲ್ಲಿ ಬಹುತೇಕರಿಗೆ ತಮಗೆ ಕಿಡ್ನಿ ಸಮಸ್ಯೆ ಉಂಟಾಗಿದೆ ಎಂದು ಗೊತ್ತಾಗಿರುವುದಿಲ್ಲ.
ಕಿಡ್ನಿ ಆರೋಗ್ಯ ಹಾಳಾಗುತ್ತಾ ಹೋದಂತೆ ಕಂಡು ಬರುವ ಲಕ್ಷಣಗಳು
* ತೂಕ ಇಳಿಕೆ, ಹೊಟ್ಟೆ ಹಸಿವು ಇಲ್ಲದಿರುವುದು
* ಕಾಲು, ಕೈ, ಪಾದಹಳಲ್ಲಿ ಊತ
* ಉಸಿರಾಟದಲ್ಲಿ ತೊಂದರೆ
* ಸುಸ್ತು
* ಮೂತ್ರ ಮಾಡುವಾಗ ಅದರಲ್ಲಿ ರಕ್ತ ಕಂಡು ಬರುವುದು
* ನಿದ್ರಾಹೀನತೆ
* ತುರಿಕೆ
* ಕೈ ಕಾಲು ಸೆಳೆತ
* ತಲೆನೋವು
* ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಪರೀಕ್ಷೆ ಮಾಡಿಸಿ.
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
* ಮೈ ತೂಕ ಕಾಪಾಡಿ
ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು. ಪ್ರತಿದಿನ ವ್ಯಾಯಾಮ ಮಾಡಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ.
* ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಿ
ಮಧುಮೇಹಿಗಳು ಕಿಡ್ನಿ ಆರೋಗ್ಯದ ಬಗ್ಗೆ ತುಂಬಾನೇ ಗಮನಹರಿಸಬೇಕು. ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡದಿದ್ದರೆ ಕಿಡ್ನಿಗೆ ಹಾನಿಯಾಗುವುದು. ಆದ್ದರಿಂದ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಿ.
ಸಾಕಷ್ಟು ನೀರು ಕುಡಿಯಿರಿ
ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಅಂದರೆ 2 ಲೀಟರ್‌ನಷ್ಟು ನೀರು ಕುಡಿಯಿರಿ. ಇದರಿಂದ ಕಿಡ್ನಿ ತನ್ನ ಕೆಲಸ ಮಾಡಲು ಸುಲಭವಾಗುವುದು, ಅಲ್ಲದೆ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಕಾರಿ. ಇದರಿಂದ ಕಿಡ್ನಿ ಆರೋಗ್ಯ ಚೆನ್ನಾಗಿರುತ್ತದೆ.
ಧೂಮಪಾನ ಮಾಡಬೇಡಿ
ಧೂಮಪಾನವೂ ಕಿಡ್ನಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡಲು ಪ್ರಯತ್ನಿಸಿ.
ಇವರುಗಳು ಕಿಡ್ನಿ ಆರೋಗ್ಯದ ಬಗ್ಗೆ ತಿಳಿಯಲು ನಿಯಮಿತ ಪರೀಕ್ಷೆ ಮಾಡುವುದು ಒಳ್ಳೆಯದು
* 60 ವರ್ಷ ಮೇಲ್ಪಟ್ಟವರು
* ಹುಟ್ಟುವಾಗ ಅತಿ ಕಡಿಮೆ ಮೈ ತೂಕ ಹೊಂದಿದ್ದರೆ
* ಹೃದಯ ಸಂಬಂಧಿ ಸಮಸ್ಯೆ ಇರುವವರುುವವರು
* ಅತ್ಯಧಿಕ ಮೈ ತೂಕ ಹೊಂದಿರುವವರು
* ಕಿಡ್ನಿ ಹಾನಿಯಾಗಿದೆ ಎಂಬ ಲಕ್ಷಣಗಳು ಕಂಡು ಬಂದರೆ
ನಮ್ಮ ದೇಹದ ಇತರ ಅಂಗಾಂಗಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಕಿಡ್ನಿ ಆರೋಗ್ಯ ತುಂಬಾನೇ ಗಮನನೀಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications