Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಧಿಕ ಉಪ್ಪು ಸೇವನೆಯಿಂದ ವರ್ಷದಲ್ಲಿ 1.9 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ: ದೇಹದಲ್ಲಿಈ ಲಕ್ಷಣಗಳು ಅಪಾಯಕಾರಿ
ಉಪ್ಪಿಲ್ಲದ ಊಟ ರುಚಿಸುವುದೇ ಹಾಗಂತ ಅತಿಯಾದ ಉಪ್ಪು ಸೇವನೆ ಇದೆಯಲ್ಲಾ ಅದು ಆರೋಗ್ಯಕ್ಕೆ ಒಂದಿಷ್ಟೂ ಒಳ್ಳೆಯದಲ್ಲ. ಅತಿಯಾದ ಉಪ್ಪು ಸೇವನೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುವುದು ಗೊತ್ತೇ? ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಪ್ರತಿವರ್ಷ 1.9 ಮಿಲಿಯನ್ ಜನರು ಅತಿ ಹೆಚ್ಚು ಉಪ್ಪು ಸೇವನೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ
ಅತಿಯಾದರೆ ಅಮೃತವೂ ವಿಷ ಅಂತಾರೆ ಅಲ್ವಾ? ಅತಿಯಾದ ಉಪ್ಪು ಸೇವನೆಯಿಂದಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ಹೃದಯದ ಸಮಸ್ಯೆ, ಸ್ಟ್ರೋಕ್ (ಪಾರ್ಶ್ವವಾಯು, ಅತ್ಯಧಿಕ ರಕ್ತದೊತ್ತಡ) ಉಂಟಾಗುತ್ತದೆ. ಅತಿಯಾದ ಉಪ್ಪು ಸೇವನೆಯಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಕೂಡ ಕೂಡ ಹೆಚ್ಚಾಗುತ್ತದೆ. ಮಿತಿಯಾದ ಉಪ್ಪಿನ ಸೇವನೆಯಿಂದಾಗಿ ಸಾವಿನ ಸಂಖ್ಯೆ ಕಡಿಮೆಯಾಗುವುದು.
ನಾವು ಅತಿ ಹೆಚ್ಚು ಉಪ್ಪು ಸೇವನೆ ಮಾಡುತ್ತಿದ್ದರೆ ಅದರ ಲಕ್ಷಣಗಳು ಆರೋಗ್ಯದಲ್ಲಿ ಕಂಡು ಬರುತ್ತದೆ:

ಹೊಟ್ಟೆ ಉಬ್ಬಿದಂತೆ ಅನಿಸುವುದು
ಹೊಟ್ಟೆ ಉಬ್ಬುವುದು, ಕಾಲುಗಳಲ್ಲಿ ಊತ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಉಪ್ಪು ಸೇವನೆ ಮಿತಗೊಳಿಸುವುದು ಒಳ್ಳೆಯದು. ದೇಹದಲ್ಲಿ ನೀರಿನಂಶ ಹೆಚ್ಚಾಗಿ ಊತ ಕಂಡು ಬರುವುದು. ಹಾಗಾಗಿ ಅತ್ಯಧಿಕ ಉಪ್ಪಿನಂಶವಿರುವ ಆಹಾರ ಹೆಚ್ಚಾಗಿ ಸೇವಿಸಬೇಡಿ.
ರಕ್ತದೊತ್ತಡ ಹೆಚ್ಚಾಗುವುದು
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಉಪ್ಪು ತುಂಬಾ ಕಡಿಮೆ ತಿನ್ನಬೇಕು. ಇನ್ನು ರಕ್ತದೊತ್ತಡ ಸಮಸ್ಯೆ ಇಲ್ಲದವರು ಹೆಚ್ಚು ಉಪ್ಪು ಸೇವಿಸುವುದರಿಂದ ಅತ್ಯಧಿಕ ರಕ್ತದೊತ್ತಡ ಉಂಟು ಮಾಡುವ ಸಾಧ್ಯತೆ ಇದೆ. ರಕ್ತದೊತ್ತಡ ಸಮಸ್ಯೆ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆ ಕೂಡ ಉಂಟಾಗುವುದು, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.
ಕಾಲುಗಳಲ್ಲಿ ಊತ
ದೇಹದಲ್ಲಿ ಸೋಡಿಯಂ ಹೆಚ್ಚಾದರೆ ಕಾಲುಗಳಲ್ಲಿ ಊತ ಕಂಡು ಬರುವುದು, ಅನೇಕ ಕಾರಣಗಳಿಂದ ಕಾಲುಗಳಲ್ಲಿ ಊತ ಉಂಟಾಗುವುದು. ನಿಮ್ಮ ಕಾಲುಗಳಲ್ಲಿ ಊತ ಕಂಡು ಬಂದರೆ ನೀವು ಉಪ್ಪು ಸೇವನೆ ಕಡೆಗೆ ಗಮನಹರಿಸುವುದು ಒಳ್ಳೆಯದು.
ತುಂಬಾ ಬಾಯಾರಿಕೆ ಉಂಟಾಗುವುದು
ಆಗಾಗ ಬಾಯಾರಿಕೆ ಆಗುತ್ತಿದ್ದರೆ ಉಪ್ಪಿನಂಶ ಹೆಚ್ಚಾಗಿದೆ ಎಂದರ್ಥ.ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತುಂಬಾನ ಬಾಯಾರಿಕೆ ಉಂಟಾಗುವುದು. ಆಗಾಗಿ ತುಂಬಾನೇ ಬಾಯಾರಿಕೆ ಉಂಟಾಗುತ್ತಿದ್ದರೆ ನೀವು ನಿಮ್ಮ ಆಹಾರದಲ್ಲಿ ಉಪ್ಪಿನಂಶ ಕಡಿಮೆ ಮಾಡುವುದು ಒಳ್ಳೆಯದು.
ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು
ದೇಹದಲ್ಲಿ ನೀರಿನಂಶ ಹೆಚ್ಚಾದರೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ, ಇದರಿಂದ ರಾತ್ರಿ ನಿದ್ದೆಗೆ ತೊಂದರೆ ಉಂಟಾಗುವುದು. ನೀವು ಆಗಾಗ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ನೀವು ನೀರು ಕೂಡ ಚೆನ್ನಾಗಿ ಕುಡಿಯಬೇಕು, ಇಲ್ಲದಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವದು.
ಸುಸ್ತು ಅನಿಸುವುದು
ದೇಹದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ತೊಂದರೆಯಾಗುವುದು, ತುಂಬಾ ಸುಸ್ತು ಅನಿಸುವುದು.
ನೀವು ತುಂಬಾ ಸಮಯದಿಂದ ಉಪ್ಪು ಸೇವಿಸುತ್ತಿದ್ದರೆ ?
ತುಂಬಾ ಸಮಯದಿಂದ ಉಪ್ಪು ಸೇವಿಸುತ್ತಿದ್ದರೆ ಹೃದಯದ ಸ್ನಾಯುಗಳು ದುರ್ಬಲವಾಗುವುದು, ತಲೆನೋವು, ಹೃದಯ ಸಂಬಂಧಿ ಸಮಸ್ಯೆ, ಅತ್ಯಧಿಕ ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಕಿಡ್ನಿ ಸ್ಟೋನ್, ಸಂಧಿವಾತ, ಹೊಟ್ಟೆ ಕ್ಯಾನ್ಸರ್, ಪಾರ್ಶ್ವವಾಯು ಸಮಸ್ಯೆ ಉಂಟಾಗುವುದು.
ಈ ಚಿಪ್ಸ್, ಬರ್ಗರ್ ಇವುಗಳಲ್ಲಿ ಉಪ್ಪಿನಂಶ ಅಧಿಕವಿರುತ್ತದೆ, ಸೂಪು, ಉಪ್ಪಿನಕಾಯಿ ಇವುಗಳಲ್ಲಿ ಉಪ್ಪಿನಂಶ ಅಧಿಕವಿರುತ್ತದೆ. ಅಧಿಕ ಉಪ್ಪು ಸೇವನೆಯಿಂದ ಮೈ ತೂಕ ಕೂಡ ತುಂಬಾನೇ ಹೆಚ್ಚಾಗುವುದು, ಒಬೆಸಿಟಿ ಮೈ ಉಂಟಾಗುವುದು.
ಆಹಾರದಲ್ಲಿ ಉಪ್ಪಿನಂಶ ಕಡಿಮೆ ಮಾಡುವುದು ಹೇಗ?
ಉಪ್ಪಿನಂಶ ಮಿತಿಯಲ್ಲಿ ಸೇವಿಸಿ
ಸಂಸ್ಕರಿಸಿದ ಮಾಂಸ ಬದಲಿಗೆ ತಾಜಾ ಮಾಂಸ ಸೇವಿಸಿ
ಸಾಸ್‌ಗಳ ಬಳಕೆ ಕಡಿಮೆ ಮಾಡಿ
ಆಹಾರವನ್ನು ಕೂಡ ಉಪ್ಪು ಕಡಿಮೆ ಬಳಸಿ ತಯಾರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
