Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂಗ್ಲೆಂಡ್‌ನಲ್ಲಿ ಕ್ಯಾನ್ಸರ್ ರೋಗಿಗಳಿಗೆ 7 ನಿಮಿಷದ ಇಂಜೆಕ್ಷನ್ ಟ್ರೀಟ್ಮೆಂಟ್
ಕ್ಯಾನ್ಸರ್ ಎಂಬ ಮಹಾಮಾರಿಗೆ ಸಿಲುಕಿ ಬಹುತೇಕ ಜನರು ನರಳುತ್ತಿದ್ದಾರೆ. ಕ್ಯಾನ್ಸರ್ ನೀಡುವ ನೋವಿನಷ್ಟೇ ಅದರ ಚಿಕಿತ್ಸೆಯಲ್ಲೂ ನೋವನ್ನು ಅನುಭವಿಸಬೇಕಾಗುವುದು. ಒಂದೊಂದು ಕೀಮೋಥೆರಪಿ ಮಾಡಿಸಿ ಬಂದಾಗ ರೋಗಿ ಅನುಭವಿಸುವ ನೋವನ್ನು ನೋಡಿದಾಗ ಎಂಥವರಿಗೂ ಸಂಕಟವಾಗುವುದು.
ಕ್ಯಾನ್ಸರ್ ಚಿಕಿತ್ಸೆ ವಿಷಯದಲ್ಲಿ ಅತ್ಯಾಧುನಿಕ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ಬ್ರಿಟನ್‌ನ ಆರೋಗ್ಯ ಸೇವಾ ಸಂಸ್ಥೆ ಕ್ಯಾನ್ಸರ್ ರೋಗಿಗೆ ನೀಡುವ ಇಂಜೆಕ್ಷನ್‌ನ ಸಮಯ ಕಡಿಮೆ ಮಾಡುವ ಮತ್ತೊಂದು ಹೊಸ ಆವಿಷ್ಕಾರ ಕಂಡು ಹಿಡಿದಿದೆ. ಇದರಿಂದ ಚಿಕತ್ಸೆಗೆ ಬೇಕಾದ ಸಮಯ ಉಳಿತಾಯವಾಗುವುದು, ಇದರಿಂದಾಗಿ ವೈದ್ಯರು ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.

ಕ್ಯಾನ್ಸರ್ ರೋಗಿಗಳಿಗೆ ಇಮ್ಯೂನೋಥೆರಪಿಯಲ್ಲಿ(atezolizumab)ಇಂಜೆಕ್ಷನ್ ನೀಡಲಾಗುವುದು. ಇದನ್ನು ಡ್ರಿಪ್ ಮೂಲಕ ಕೂಡ ಕೊಡಲಾಗುವುದು ಹೀಗೆ ಕೊಡಲು 30 ನಿಮಿಷದಿಂದ ಒಂದು ಗಂಟೆ ಸಮಯ ಬೇಕು. ಆದರೆ ಈಗ ಅನುಮತಿ ಸಿಕ್ಕಿರುವ ಔಷಧ ನೀಡಲು ಕೇವಲ 7 ನಿಮಿಷ ಸಮಯ ಸಾಕು, ಇದನ್ನು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವವರಿಗೆ ಅನುಕೂಲಕರವಾಗುವುದು.
ಇಂಗ್ಲೆಂಡ್‌ನ MHRA (Medicines and Healthcare products Regulatory Agency)7 ನಿಮಿಷ ಚಿಕಿತ್ಸೆಗೆ ಅನುಮತಿ ನೀಡಿದ್ದು ಆಗಸ್ಟ್ 29ಕ್ಕೆ 100 ಕ್ಯಾನ್ಸರ್ ರೋಗಿಗಳಿಗೆ ಈ ಚುಚ್ಚುಮದ್ದು ನೀಡಲಾಯಿತು. ಈ ಚಿಕಿತ್ಸೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಮಯ ಉಳಿತಾಯವಾಗುವುದರಿಂದ ವೈದ್ಯರು ಹಾಜಗೂ ನರ್ಸ್‌ಗಳಿಗೆ ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.
ಈ ಚಿಕಿತ್ಸೆಯನ್ನು ಶ್ವಾಶಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಬ್ಲೇಡರ್ ಕ್ಯಾನ್ಸರ್ ಇರುವವರಿಗೆ ನೀಡಲಾಗುವುದು ಎಂದು ಇಂಗ್ಲೆಂಡ್‌ನ ನ್ಯಾಷನಲ್ ಹೆಲ್ತ್ ಸರ್ವೀಸ್ ಹೇಳಿದೆ.
ಕ್ಯಾನ್ಸರ್ ರೋಗಿಗಳು ಗುಣ ಮುಖರಾಗಲು ಚಿಕಿತ್ಸೆ ಜೊತೆ ಈ ಅಂಶಗಳ ಕಡೆ ಗಮನ ನೀಡುವುದು ಮುಖ್ಯ
ಕ್ಯಾನ್ಸರ್ ರೋಗ ಬಂದರೆ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾನೆ. ಈ ಅ ಸಮಯದಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ತುಂಬಾನೇ ಮುಖ್ಯ.
* ಅವರನ್ನು ಪ್ರೀತಿಯಿಂದ ಆರೈಕೆ ಮಾಡಬೇಕು: ಈ ಅವಧಿಯಲ್ಲಿ ರೋಗಿಗಳು ದೇಹದ ನೋವಿನ ಜೊತೆಗೆ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿರುತ್ತಾರೆ, ಈ ಅವಧಿಯಲ್ಲಿ ಅವರಿಗೆ ಪ್ರೀತಿ ತೋರಬೇಕು, ಅವರಲ್ಲಿ ಧೈರ್ಯ ತುಂಬಬೇಕು.
* ನೀವು ನಂಬುವ ಕಡೆ ಚಿಕಿತ್ಸೆ ಪಡೆಯಿರಿ
ನಾವು ಚಿಕಿತ್ಸೆ ಪಡೆಯುವಾಗ ನಾವು ಚಿಕಿತ್ಸೆ ಪಡೆಯುವ ವೈದ್ಯರ ಮೇಲೆ ನಂಬಿಕೆ ಇರಬೇಕು, ಆವಾಗ ಆ ಔಷಧಿ ಕೂಡ ನಮ್ಮ ಮೇಲೆ ಒಳ್ಳೆಯ ಪ್ರಭಾವ ಬೀರುವುದು, ಆದ್ದರಿಂದ ನಿಮಗೆ ನಂಬಿಕೆ ಇರುವ ಕಡೆ ಚಿಕಿತ್ಸೆ ಪಡೆಯಿರಿ.
* ನಿನ್ನ ಜೊತೆ ನಾನು ಇದ್ದೇನೆ ಎಂದು ಧೈರ್ಯ ತುಂಬಿ: ನಿನಗೆ ಏನು ಅನಿಸುತ್ತದೆ ಎಂದು ನನಗೆ ಗೊತ್ತು ಎಂದು ಹೇಳುವ ಬದಲಿಗೆ ಏನೇ ಆಗಲಿ ನಿನ್ನ ಜೊತೆ ನಾನು ಇರುತ್ತೇನೆ ಎಂದು ಧೈರ್ಯ ತುಂಬಿ.
* ಚಿಕಿತ್ಸೆ, ಔಷಧಗಳನ್ನು ಸರಿಯಾದ ಸಮಯಕ್ಕೆ ಮಾಡಿಸಿ: ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ. ಚಿಕಿತ್ಸೆಯನ್ನು ಸರಿಯಾಗಿ ಸಮಯಕ್ಕೆ ಮಾಡಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
