Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್‌ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲಿವುಡ್ ನಟಿ ಅದಾ ಶರ್ಮಾ ಫಿಟ್‌ನೆಸ್ ಸೀಕ್ರೆಟ್ ಏನು?
ಬಾಲಿವುಡ್ ನಟಿ ಅದಾ ಶರ್ಮಾ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಅವರು ಹೇಳುವಷ್ಟರ ಮಟ್ಟಿಗೆ ಪ್ರಖ್ಯಾತಿಯನ್ನು ಪಡೆದುಕೊಂಡಿರ್ಲಿಲ್ಲ. ಆದರೆ ಅದ್ಯಾವಾಗ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬಂತೋ ಅಲ್ಲಿ ಅದಾ ಶರ್ಮಾ ಅವರು ತುಂಬಾನೇ ಚರ್ಚೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ 30 ವರ್ಷದ ನಟಿ ಅದಾ ಶರ್ಮಾ ಅವರ ನಟನೆಗೂ ಕೂಡ ಸಾಕಷ್ಟು ಪ್ರಶಂಸೆಗಳು ಕೇಳಿ ಬರ್ತಿದೆ.
ನಟಿ ಅಂದ ಮೇಲೆ ಖಂಡಿತವಾಗಿ ಇವರು ಫಿಟ್‌ನೆಸ್ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಜೀರೋ ಫಿಗರ್‌ನ ಕಾಪಾಡಿಕೊಳ್ಳೋದಕ್ಕೆ ಸಾಕಷ್ಟು ಕಸರತ್ತುಗಳನ್ನು ಮಾಡ್ತಾರೆ. ಅದ್ರಲ್ಲೂ ಅದಾ ಶರ್ಮಾ ಅವರು ಫಿಟ್‌ನೆಸ್ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರಂತೆ. ಚಿತ್ರೀಕರಣದ ವೇಳೆಯೂ ಕೂಡ ಇವರು ವ್ಯಾಯಾಮ ಮಾಡೋದನ್ನು ಮರೆಯುವುದಿಲ್ವಂತೆ. ಅಷ್ಟಕ್ಕು ಅದಾ ಶರ್ಮಾ ಅವರ ಫಿಟ್‌ನೆಸ್ ದಿನಚರಿ ಹೇಗಿರುತ್ತೆ? ಫಿಟ್ ಆಗಿರೋದಕ್ಕೆ ಇವರು ಯಾವ ರೀತಿ ಡಯೆಟ್ ಪ್ಲಾನ್ ಮಾಡ್ಕೊತ್ತಾರೆ ಅನ್ನೋದನ್ನು ತಿಳಿಯೋಣ.

ಅದಾ ಶರ್ಮಾ ಫಿಟ್‌ನೆಸ್‌ಗಾಗಿ ಏನು ಮಾಡ್ತಾರೆ?
ನಟಿ ಅದಾ ಶರ್ಮಾ ಅವರು ಜಿಮ್‌ನಲ್ಲಿ ಸರಿಯಾಗಿ ಬೆವರಿಳಿಸುತ್ತಾರೆ. ನಿತ್ಯವು ಒಂದೇ ರೀತಿಯ ವ್ಯಾಯಾಮಗಳನ್ನು ಮಾಡುವ ಬದಲು ಬೇರೆ ಬೇರೆ ವ್ಯಾಯಾಮಗಳನ್ನು ಪ್ರಯತ್ನಿಸಿದ್ರೆ ಒಳ್ಳೆಯದು ಎಂದು ಅವರು ನಂಬುತ್ತಾರೆ. ಇನ್ನೂ ಇವರು ವ್ಯಾಯಾಮ ಮಾಡುವಾಗ ಬೇರೆ ಬೇರೆ ಉಪಕರಣಗಳನ್ನು ಬಳಸುತ್ತಾರೆ. ಅದಾ ಶರ್ಮಾ ಪ್ರತಿದಿನ ಹೊಸ ರೀತಿಯ ವ್ಯಾಯಾಮ ಮಾಡೋದ್ರಿಂದ ಬೇಸರಗೊಳ್ಳುವುದಿಲ್ವಂತೆ. ಬದಲಾಗಿ ಅದನ್ನು ತುಂಬಾನೇ ಇಷ್ಟ ಪಡುತ್ತಾರಂತೆ. ಹೊಸ ಹೊಸ ಪ್ರಯೋಗಗಳನ್ನು ಮಾಡೋದು ಅವರಿಗೆ ತುಂಬಾನೇ ಇಷ್ಟವಾಗುತ್ತಂತೆ.
ಅದಾ ಶರ್ಮಾ ಅವರು ಜಿಮ್‌ನಲ್ಲಿ ವ್ಯಾಯಾಮ ಉಪಕರಣಗಳು ಹಾಗೂ ಡಂಬಲ್ಸ್‌ಗಳನ್ನು ಮಾತ್ರ ಬಳಕೆ ಮಾಡುವುದಿಲ್ಲ. ಜೊತೆಗೆ ಯುದ್ಧದ ಹಗ್ಗ ಮತ್ತು ಕೆಟಲ್ ಬೆಲ್ಗಳನ್ನು ಕೂಡ ಬಳಕೆ ಮಾಡುತ್ತಾರಂತೆ. ಅನೇಕರಿಗೆ ಶೂಟಿಂಗ್ ಸಮಯದಲ್ಲಿ ವರ್ಕ್‌ಔಟ್ ಮಾಡೋದಕ್ಕೆ ಸಮಯ ಸಿಗೋದಿಲ್ಲ ಅನ್ನೋ ಕೊರಗಿದೆ. ಆದ್ರೆ ಅದಾ ಶರ್ಮಾ ಅವರು ಶೂಟಿಂಗ್ ಇದ್ರೂ ಕೂಡ ಸಮಯ ಸಿಕ್ಕಾಗಲೆಲ್ಲಾ ವರ್ಕ್‌ಔಟ್ ಮಾಡೋದನ್ನು ಮಿಸ್ ಮಾಡೋದಿಲ್ವಂತೆ.
ಫಿಟ್‌ನೆಸ್‌ಗಾಗಿ ಡಾನ್ಸ್ ಮಾಡ್ತಾರೆ
ನಟಿ ಅದಾ ಶರ್ಮಾ ಅವರು ತಮ್ಮನ್ನು ಫಿಟ್ ಆಗಿ ಇಟ್ಟುಕೊಳ್ಳುವುದಕ್ಕೆ ವ್ಯಾಯಾಮದ ಜೊತೆಗೆ ಡಾನ್ಸ್ ಕೂಡ ಮಾಡುತ್ತಾರಂತೆ. ವಿಭಿನ್ನ ರೀತಿಯಲ್ಲಿ ನೃತ್ಯ ಮಾಡುವ ಮೂಲಕ ತನ್ನನ್ನು ತಾನು ಫಿಟ್ ಆಗಿರಿಸಿಕೊಳ್ಳುತ್ತಾರಂತೆ. ಅದಾ ಶರ್ಮಾ ಅವರು ಡಾನ್ಸ್ ಅನ್ನು ತುಂಬಾನೇ ಇಷ್ಟ ಪಡುತ್ತಾರೆ. ಅದ್ರಲ್ಲಿ ಮುಖ್ಯವಾಗಿ ಕಥಕ್ ಹಾಗೂ ಬೆಲ್ಲಿ ಡಾನ್ಸ್ ಅಂದ್ರೆ ಅದಾ ಶರ್ಮಾಗೆ ತುಂಬಾನೇ ಇಷ್ಟವಂತೆ. ಡಾನ್ಸ್ ಮಾಡೋದ್ರಿಂದ ಕೇವಲ ದೇಹದ ಒಂದು ಭಾಗ ಮಾತ್ರವಲ್ಲ. ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ಸಿಗುತ್ತೆ. ಹೀಗಾಗಿ ಅದಾ ಶರ್ಮಾ ನೃತ್ಯವು ಕೂಡ ತಮ್ಮ ದಿನನಿತ್ಯದ ವರ್ಕ್‌ಔಟ್ ಒಂದು ಭಾಗ ಎಂದು ಹೇಳುತ್ತಾರೆ.
ಆಹಾರ ಕ್ರಮ ಹೇಗಿರುತ್ತೆ?
ಫಿಟ್‌ನೆಸ್ ಬಗ್ಗೆ ತುಂಬಾನೇ ಕಾಳಜಿ ವಹಿಸೋ ಅದಾ ಶರ್ಮಾ ಅವರಿಗೆ ರುಚಿ ರುಚಿಯಾದ ಆಹಾರ ಅಂದ್ರೆ ತುಂಬಾನೇ ಇಷ್ಟವಂತೆ. ಇವರ ತಟ್ಟೆ ಯಾವಾಗಲೂ ರುಚಿಕರ ಹಾಗೂ ಆರೋಗ್ಯಕರ ವಸ್ತುಗಳಿಂದ ತುಂಬಿರುತ್ತಂತೆ. ಬೆಳಗ್ಗಿನ ಉಪಹಾರಕ್ಕೆ ತಾಜಾ ಹಣ್ಣುಗಳು, ಮೊಟ್ಟೆಗಳು, ಒಟ್ಮೀಲ್ ಅನ್ನು ಸೇವಿಸುತ್ತಾರಂತೆ. ಇನ್ನೂ ಮಧ್ಯಾಹ್ನದ ಊಟಕ್ಕೆ ಸಿರು ತರಕಾರಿ, ಪ್ರೋಟೀನ್ ಆಹಾರ, ಅನ್ನ ಮತ್ತು ರೊಟ್ಟಿ ತಿನ್ನುತ್ತಾರಂತೆ. ಜೊತೆಗೆ ರಾತ್ರಿಯ ಊಟಕ್ಕೆ ಲಘು ಆಹಾರವನ್ನು ಸೇವಿಸುತ್ತಾರಂತೆ. ಇದ್ರಲ್ಲಿ ಸೂಪ್, ಕೋಳಿ, ಮೀನು ಹಾಗೂ ಸಲಾಡ್ ಇರುತ್ತಂತೆ.
ಇತ್ತೀಚಿಗೆ ಸಾಮಾನ್ಯ ಜನರು ಕೂಡ ಫಿಟ್‌ನೆಸ್ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ನಿತ್ಯವು ಕೆಲವೊಂದು ವ್ಯಾಯಾಮಗಳನ್ನು ತಪ್ಪದೇ ಮಾಡಿ ಜೊತೆಗೆ ಕೆಲವೊಂದು ಡಯೆಟ್ ಆಹಾರಗಳನ್ನು ಸೇವಿಸುವುದರಿಂದ ನೀವು ಕೂಡ ಫಿಟ್ ಆಗಿ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

