Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
108 ಕೆಜಿ ಕಡಿಮೆಯಾಗಿದ್ದ ಅನಂತ್ ಅಂಬಾನಿ ದಪ್ಪಗಾಗಲು ಕಾರಣವೇನು?ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದೇಕೆ?
ಇತ್ತೀಚೆಗೆ ದೇಶದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಮಗನ ಮೈ ತೂಕದ ಬಗ್ಗೆ ಜನ ತುಂಬಾ ಟ್ರೋಲ್ ಮಾಡಿದರು. ತೆಳ್ಳಗಾಗಿದ್ದ ಅವರು ತುಂಬಾನೇ ದಪ್ಪಗಾಗಿದ್ದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. 2016ರಲ್ಲಿ ತನ್ನ ಬೊಜ್ಜು ಮೈ ಕರಗಿಸಿ ಫಿಟ್ ಆಗಿ ಕಾಣಿಸುವ ಮೂಲಕ ಜನರನ್ನು ಹುಬ್ಬೇರುವಂತೆ ಮಾಡಿದ ಅನಂತ್ ಅಂಬಾನಿ ಈಗ ನೋಡಿದರೆ ಮೊದಲು ಇದ್ದ ಬೊಜ್ಜು ದೇಹಕ್ಕಿಂತಲೂ ಅಧಿಕ ಮೈ ತೂಕ ಹೊಂದಿದ್ದಾರೆ.ಒಮ್ಮೆ ಮೈ ತೂಕ ಕಡಿಮೆ ಮಾಡಿಕೊಂಡ ಮೇಲೆ ಇಷ್ಟೊಂದು ಮೈ ತೂಕ ಹೆಚ್ಚಾಗಲು ಕಾರಣವೇನು ಎಂಬುವುದು ಬಹುತೇಕರ ಪ್ರಶ್ನೆಯಾಗಿತ್ತು.
ಏಕೆಂದರೆ ಮೈ ತೂಕ ಕಳೆದುಕೊಂಡ ಮೇಲೆ ಅನಂತ್ ಅಂಬಾನಿ ಫಿಟ್ನೆಸ್ ಕಡೆ ತುಂಬಾನೇ ಗಮನ ಹರಿಸಿದ್ದರು, ಆದರೂ ಮೈ ತೂಕ ಹೆಚ್ಚಾಗಿದ್ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಏಕೆಂದರೆ ಅನಂತ್ ಅಂಬಾನಿ ಆಗರ್ಭ ಶ್ರೀಮಂತ, ಅವರಿಗಾಗಿಯೇ ನ್ಯೂಟ್ರಿಷಿಯನಿಸ್ಟ್, ಡಾಕ್ಟರ್, ಪರ್ಸನಲ್ ಫಿಟ್ನೆಸ್ ಟ್ರೈನರ್ ಎಲ್ಲಾ ಇರುತ್ತಾರೆ. ಆದರೂ ಫಿಟ್ ಆಗಿದ್ದವರೂ ಮತ್ತೆ ಮೈ ಬೊಜ್ಜು ಹೆಚ್ಚಾಗಲು ಕಾರಣವೇನು ನೋಡೋಣ ಬನ್ನಿ:

ಅನಂತ್ ಅಂಬಾನಿ ಮೈ ತೂಕ ಹೆಚ್ಚಾಗಲು ಸ್ಟಿರಾಯ್ಡ್ ಕಾರಣ ಎಂದ ನೀತಾ ಅಂಬಾನಿ
ಮಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದನ್ನು ಗಮನಿಸಿದ ನೀತಾ ತುಂಬಾ ನೋವು ಪಟ್ಟು ' ನನ್ನ ಮಗನನ್ನು ಟ್ರೋಲ್ ಮಾಡ್ಬೇಡಿ, ನನ್ನ ಮಗನ ಮೈ ತೂಕ ಹೆಚ್ಚಾಗಲು ಅವನ ಆರೋಗ್ಯ ಸ್ಥಿತಿ ಕಾರಣ' ಎಂಬುವುದಾಗಿ ತಿಳಿಸಿದ್ದರು. ನೀತಾ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿಗೆ ಅಸ್ತಮಾ ಸಮಸ್ಯೆಗೆ ಸ್ಟಿರಾಯ್ಡ್ ನೀಡಲಾಗುತ್ತಿತ್ತು, ಹೀಗಾಗಿ ಮೈ ತೂಕ ಹೆಚ್ಚಾಗಿದೆ ಎಂದು ತಿಳಿಸಿದ್ದರು.
ಮೈ ತೂಕ ಕಳೆದುಕೊಂಡ ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದು
ಅನಂತ್ ಅಂಬಾನಿ ಮಾತ್ರವಲ್ಲ ಶೇ. 94ರಷ್ಟು ಜನರಿಗೆ ಮೈ ತೂಕ ಕಳೆದುಕೊಂಡು ಮತ್ತೆ ಮೈ ತೂಕ ಹೆಚ್ಚಾಗುವುದು, ಏಕೆ ಹೀಗಾಗುವುದು ಎಂಬುವುದಕ್ಕೆ ಕಾರಣಗಳಿವೆ.

ಕಳೆದುಕೊಂಡ ಮೈ ತೂಕ ಮತ್ತೆ ಹೆಚ್ಚಾಗಲು ಕಾರಣವೇನು?
ಸಾಮಾನ್ಯವಾಗಿ ಮೈ ತೂಕ 30 BMI ದಾಟಿದರೆ ಅದನ್ನು ಬೊಜ್ಜು ಮೈ ಎಂದು ಕರೆಯಲಾಗುವುದು. ಮೈ ತೂಕ ಹೆಚ್ಚಾದಾಗ ಬಹುತೇಕ ಜನರು ಮೈ ತೂಕ ಕರಗಿಸಲು ಪ್ರಯತ್ನ ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ಸು ಆಗುತ್ತಾರೆ ಕೂಡ. ಆದರೆ ಮೈ ತೂಕ ಕಡಿಮೆ ಮಾಡಿಕೊಂಡ ಮೇಲೆ ಅದೇ ಮೈ ತೂಕ ಕಾಪಾಡಿಕೊಳ್ಳುವವರು ಮಾತ್ರ ಶೇ. 6ರಷ್ಟು ಜನ ಮಾತ್ರ, ಉಳಿದ ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದು, ಏಕೆ?
ತೂಕ ಇಳಿಕೆಗೆ ಮಾಡುವ ಡಯಟ್ ಮತ್ತು ವ್ಯಾಯಾಮ
ನಾವೆಲ್ಲಾ ತೂಕ ಕಡಿಮೆ ಮಾಡುವಾಗ ಕಟ್ಟುನಿಟ್ಟಿನ ಡಯಟ್ ಫಾಲೋ ಮಾಡುತ್ತೇವೆ. ಈ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅಂದರೆ ಸಿಹಿ, ಸಕ್ಕರೆಯಂಶ, ಅಧಿಕ ಕೊಬ್ಬಿನಂಶ, ಅಧಿಕ ಕಾರ್ಬೋಹೈಡ್ರೇಟ್ ಇರುವ ಆಹಾರ ಇಂಥ ಆಹಾರಗಳನ್ನು ಮುಟ್ಟುವುದಿಲ್ಲ, ಅಲ್ಲದೆ ವ್ಯಾಯಾಮ ಮಾಡುತ್ತೇವೆ ಈ ಕಾರಣದಿಂದಾಗಿ ಮೈ ತೂಕ ಕಡಿಮೆಯಾಗುವುದು.

ನಮ್ಮ ಹೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಾಗಿರುವುದಿಲ್ಲ
ನಮ್ಮ ಮೈ ತೂಕ ಅಧಿಕವಿದ್ದಾಗ ಅಥವಾ ಕಡಿಮೆ ಇದ್ದಾಗ ನಮ್ಮ ಹೊಟ್ಟೆಯ ಗಾತ್ರ ಒಂದೇ ರೀತಿ ಇರುತ್ತದೆ. ತೂಕ ಇಳಿಕೆ ಮಾಡುವಾಗ ಆಹಾರಕ್ರಮದ ಕಡೆ ತುಂಬಾನೇ ಗಮನ ಕೊಟ್ಟಿರುತ್ತೇವೆ, ಆದರೆ ಮೈ ತೂಕ ಕಡಿಮೆಯಾದ ಮೇಲೆ ಆ ಬಗೆಯ ಆಹಾರಕ್ರಮದ ಕಡೆಗೆ ಗಮನ ಅಷ್ಟಾಗಿ ಕೊಡುವುದಿಲ್ಲ. ಅಲ್ಲದೆ ತಮ್ಮ ಜೀವನಪೂರ್ತಿ ಪಥ್ಯ ಆಹಾರ ಸೇವಿಸುತ್ತೇವೆ ಅಂದರೆ ಅದು ಸ್ವಲ್ಪ ಕಷ್ಟವೇ, ನಮ್ಮ ಮೆದುಳು ಹೊಟ್ಟೆಗೆ ಸಿಗ್ನಲ್ ಕೊಡುವಾಗ ನಾವು ಬಾಯಿಗೆ ರುಚಿ ರುಚಿಯಾದ ಆಹಾರ ಸೇವಿಸುತ್ತೇವೆ ಅಲ್ಲದೆ ವ್ಯಾಯಾಮ ಕೂಡ ಸ್ವಲ್ಪ ಕಡಿಮೆ ಮಾಡಲಾರಂಭಿಸುತ್ತೇವೆ ಇದರ ಪರಿಣಾಮ ಮೈ ತೂಕ ಹೆಚ್ಚಾಗುವುದು.
ಕಾರಣದಿಂದಾಗಿ ಶೇ. 94ರಷ್ಟು ಜನರು ತೂಕ ಕಳೆದುಕೊಂಡರೂ ಮತ್ತೆ ಮೈ ತೂಕ ಹೆಚ್ಚಾಗುವುದು.

ಹಾ ರ್ಮೋನ್‌ಗಳ ಬದಲಾವಣೆ ಹಾಗೂ ಅನಾರೋಗ್ಯ ಕೂಡ ಮೈ ತೂಕ ಹೆಚ್ಚಾಗಿಸುವುದು
ಹಾರ್ಮೋನ್‌ಗಳಲ್ಲಿ ಬದಲಾವಣೆಯಾದಾಗ ಹಾರ್ಮೋನ್‌ಗಳು ಸಮತೋಲನಕ್ಕೆ ಬಾರದೇ ಇದ್ದರೆ ಮೈ ತೂಕ ಹೆಚ್ಚಾಗುವುದು, ಇನ್ನು ಕೆಲವೊಂದು ಆರೋಗ್ಯ ಸಮಸ್ಯೆಗೆ ತೆಗೆದುಕೊಳ್ಳುವ ಔಷಧದ ಅಡ್ಡಪರಿಣಾಮದಿಂದ ಮೈ ತೂಕ ಹೆಚ್ಚಾಗುವುದು.
ಸರ್ಜರಿ ಮಾಡಿದರೂ ಮೈ ತೂಕ ಹೆಚ್ಚಾಗುವುದೇ?
ಅತ್ಯಧಿಕ ಮೈ ತೂಕ ಇರುವವರು ಕೆಲವೊಮ್ಮೆ ಸರ್ಜರಿ ಮಾಡಿ ಮೈ ತೂಕ ಕಳೆದುಕೊಳ್ಳುತ್ತಾರೆ, ಆದರೆ ಈ ರೀತಿ ಮೈ ತೂಕ ಕಳೆದುಕೊಂಡರೆ ಮೈ ತೂಕ ಮತ್ತೆ ಅಧಿಕವಾಗುವ ಸಾಧ್ಯತೆ ತುಂಬಾನೇ ಕಡಿಮೆ , ಶೇ. 10ರಷ್ಟು ಜನರಲ್ಲಿ ಸ್ವಲ್ಪ ಮೈ ತೂಕ ಹೆಚ್ಚಾಗಬಹುದು, ಆದರೆ ಶೇ. 85ರಷ್ಟು ಜನರಿಗೆ ಮೈ ತೂಕ ಕಾಪಾಡಿಕೊಳ್ಳಲು ಸಾಧ್ಯ.
ಸೂಚನೆ: ಸರ್ಜರಿಗಿಂತ ಮೈ ತೂಕವನ್ನು ನೈಸರ್ಗಿಕ ವಿಧಾನಗಳಿಂದ ಕಡಿಮೆ ಮಾಡುವುದು ಆರೋಗ್ಯಕರ. ಇದರಿಂದ ಆರೋಗ್ಯ, ಹಣ ಎರಡೂ ಲಾಭ.



Click it and Unblock the Notifications
