Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ವ್ಯಾಯಾಮ ಬಿಟ್ಟ ಬಳಿಕ ದೇಹಕ್ಕೆ ಏನಾಗುತ್ತೆ ನೋಡಿ
ವ್ಯಾಯಾಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆದರೆ ಇದಕ್ಕಾಗಿ ಪ್ರತ್ಯೇಕ ಸಮಯವನ್ನು ಮೀಸಲಿರಿಸಿ ನಿತ್ಯವೂ ಕಠಿಣ ಪರಿಶ್ರಮ ವಹಿಸಿ ದೇಹವನ್ನು ಹುರಿಗಟ್ಟಿಸಿದ ಬಳಿಕ ಸಾಧಿಸಲು ಇನ್ನೇನೂ ಉಳಿದಿಲ್ಲ ಎನಿಸಲು ತೊಡಗುತ್ತದೆ. ಇನ್ನೇನಿದ್ದರೂ ಈಗಿರುವ ಮೈಕಟ್ಟನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗುತ್ತದೆ. ಆದರೆ ಇದಕ್ಕಾಗಿ ಸಮಯವನ್ನು ನಿತ್ಯವೂ ವ್ಯಯಿಸುವುದು ಕಾಲಕ್ರಮೇಣ ಆಲಸ್ಯತನಕ್ಕೆ ದಾರಿ ಮಾಡಿ ಕೊಡುತ್ತದೆ. ಅಲ್ಲದೇ ಹೆಚ್ಚಿನವರು ತಮ್ಮ ಉದ್ಯೋಗ ಅಥವಾ ಪ್ರಮುಖ ಕಾರ್ಯಗಳಿಗಾಗಿ ಸಮಯವನ್ನು ಹೊಂದಿಸಲು ಸಾಧ್ಯವಾಗದೇ ವ್ಯಾಯಾಮವೂ ಮೊಟಕುಗೊಳ್ಳಬಹುದು.

ಕಾರಣವೇನೇ ಇರಲಿ, ವ್ಯಾಯಾಮದಿಂದ ಆರೋಗ್ಯ ಉತ್ತಮವಾಗಿಯೇ ಉಳಿಯುವುದು ಮಾತ್ರ ಸುಳ್ಳಲ್ಲ. ಇದರಿಂದ ತೂಕವೂ ನಿಯಂತ್ರಣದಲ್ಲಿರುತ್ತದೆ, ಕಟ್ಟು ಮಸ್ತಾದ ಶರೀರಕ್ಕೆ ರೋಗಗಳು ಆವರಿಸುವ ಸಾಧ್ಯತೆಯೂ ಕಡಿಮೆಯೇ ಇರುತ್ತದೆ. ಸುದೃಢ ಶರೀರ ನೀಡುವಷ್ಟು ಆತ್ಮವಿಶ್ವಾಸವನ್ನು ದುರ್ಬಲ ಶರೀರ ನೀಡಲಾಗದು. ತನ್ಮೂಲಕ ಪ್ರೇರಣೆ ಪಡೆದು ಉತ್ಪಾದಕತೆಯೂ ಹೆಚ್ಚುತ್ತದೆ.
ಆದರೆ ಕಾರಣಾಂತರಗಳಿಂದ ಹಿಂದಿನಷ್ಟು ಕಟ್ಟುನಿಟ್ಟಾಗಿ ನಿತ್ಯವೂ ವ್ಯಾಯಾಮವನ್ನು ಮಾಡಲು ಸಮಯ ಸಾಲದೇ ಹೋಗಬಹುದು ಅಥವಾ ಕೆಲವು ವಾರಗಳವರೆಗೆ ವ್ಯಾಯಾಮವನ್ನು ಮಾಡಲಾಗದೇ ಇರುವ ಸಂದರ್ಭವೂ ಎದುರಾಗಬಹುದು. ವ್ಯಾಯಾಮ ನಿತ್ಯದ ಅಭ್ಯಾಸವಾಗಿದ್ದರೆ, ಈ ಅಭ್ಯಾಸ ತಪ್ಪಿದ ಕೂಡಲೇ ದೇಹ ವ್ಯಾಯಾಮ ಇಲ್ಲದ ದಿನಚರಿಗೆ ಹೊಂದಿಕೊಂಡು ಬದಲಾಗತೊಡಗುತ್ತದೆ. ಏನೆಲ್ಲಾ ಬದಲಾವಣೆಗಳಾಗುತ್ತವೆ, ನೋಡೋಣ:

ನೀವು ಸ್ನಾಯುಗಳ ಬಲವನ್ನು ಕಳೆದುಕೊಳ್ಳುತ್ತೀರಿ:
ನಮ್ಮ ದೇಹದ ಸ್ನಾಯುಗಳು ನಮ್ಮ ದೈಹಿಕ ಅಗತ್ಯಕ್ಕೆ ತಕ್ಕಷ್ಟೇ ಬೆಳೆಯುತ್ತವೆ. ವಾಸ್ತವದಲ್ಲಿ, ನಾವು ವ್ಯಾಯಾಮದಿಂದ ಭಾರವನ್ನು ಸತತವಾಗಿ ಸ್ನಾಯುಗಳ ಮೇಲೆ ಹೇರುವ ಮೂಲಕ 'ಈ ಸ್ನಾಯುಗಳಿಗೆ ಹೆಚ್ಚಿನ ಹೊರೆ ಹೊರಬೇಕಾಗಿದೆ' ಎಂಬ ಸೂಚನೆಯನ್ನು ಮೆದುಳಿಗೆ ನೀಡಿ ಇದನ್ನು ಬೆಳೆಯುವಂತೆ ಮಾಡುತ್ತೇವೆ. ಯಾವಾಗ ವ್ಯಾಯಾಮ ಇಲ್ಲವಾಯಿತೋ, ಆಗ ಆ ಸ್ನಾಯುಗಳಿಗೆ ಕೆಲಸವೂ ಇಲ್ಲವಾಯಿತು. ಆಗ ಮೆದುಳು ಅಗತ್ಯವಿಲ್ಲದ ಸ್ನಾಯುಗಳ ಬೆಳವಣಿಗೆಯನ್ನು ನಿಲ್ಲಿಸಿ ಹೊಸ ಜೀವಕೋಶಗಳ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ. ಇದೇ ಕಾರಣಕ್ಕೆ ವ್ಯಾಯಾಮವಿಲ್ಲದ ದಿನದಿಂದ ಸ್ನಾಯುಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ. ಆದರೆ ಈ ಪರಿಣಾಮಗಳು ನೀವು ಯಾವ ಬಗೆಯ ವ್ಯಾಯಾಮವನ್ನು ಅನುಸರಿಸುತ್ತಿದ್ದೀರಿ ಎಂಬುದನ್ನು ಅನುಸರಿಸಿರುತ್ತದೆ. ಉದಾಹರಣೆಗೆ ನೀವು ಶಕ್ತಿಯ ಬಳಕೆಯ ವ್ಯಾಯಾಮ ಅನುಸರಿಸುತ್ತಿದ್ದರೆ ಹೆಚ್ಚಿನ ಸ್ನಾಯುಗಳನ್ನು ಕಳೆದುಕೊಳ್ಳುವುದಿಲ್ಲ. ಆದರೆ ಓಟ, ಈಜು ಮೊದಲಾದ ಹೆಚ್ಚು ಸಮಯ ತೆಗೆದುಕೊಳ್ಳುವ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಈ ವ್ಯಕ್ತಿಗಳು ಶೀಘ್ರವೇ ಸ್ನಾಯುಗಳನ್ನು ಕಳೆದುಕೊಳ್ಳುತ್ತಾರೆ.

ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುತ್ತದೆ
ಅಧ್ಯಯನಗಳ ಪ್ರಕಾರ, ನಿಯಮಿತವಾದ ವ್ಯಾಯಾಮದಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವೂ ಉತ್ತಮವಾಗಿಯೇ ಇರುತ್ತದೆ ಹಾಗೂ ಗ್ಲೈಸೆಮಿಕ್ ಕೋಷ್ಟಕವೂ ಕಡಿಮೆಯೇ ಇರುತ್ತದೆ. British Journal of Sports Medicine ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ವ್ಯಾಯಾಮದ ಮೂಲಕ ತೂಕ ಇಳಿಸುವ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಮೂಲಕ ಟೈಪ್ 1 ಮತ್ತು 2 ಬಗೆಯ ಮಧುಮೇಹಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಆ ಪ್ರಕಾರ, ಒಂದು ವೇಳೆ ನೀವು ನಿಮ್ಮ ನಿತ್ಯದ ವ್ಯಾಯಾಮವನ್ನು ನಿಲ್ಲಿಸಿದರೆ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುತ್ತದೆ. Comprehensive Physiology ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಒಂದು ವೇಳೆ ಯುವ ಮತ್ತು ಆರೋಗ್ಯವಂತ ವ್ಯಕ್ತಿಗಳೂ ನಿತ್ಯದ ಅಭ್ಯಾಸದ ವ್ಯಾಯಾಮವನ್ನು ನಿಲ್ಲಿಸಿದ ಮೂರನೆಯ ದಿನವೇ ಗ್ಲುಕೋಸ್ ಅಸಹಿಷ್ಣುತೆಗೆ ಗುರಿಯಾಗಬಹುದು.

ನಿಮ್ಮ ತೂಕ ಏರುತ್ತದೆ:
ಕಷ್ಟಪಟ್ಟು ವ್ಯಾಯಾಮ ಮಾಡಿ ಇಳಿಸಿದ ತೂಕ ವ್ಯಾಯಾಮ ನಿಲ್ಲಿಸಿದ ಕೆಲವೇ ದಿನಗಳಲ್ಲಿ ಮತ್ತೆ ಏರುತ್ತದೆ. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬಂತೆ, ನೀವು ವರ್ಷಗಟ್ಟಲೇ ಶ್ರಮಿಸಿ ಇಳಿಸಿದ್ದ ತೂಕ ಈಗ ಏರತೊಡಗುತ್ತದೆ. ಅಂದರೆ ಇದುವರೆಗೂ ನಿಮ್ಮ ತೂಕ ಏರದಂತೆ ನಿಮ್ಮ ವ್ಯಾಯಾಮ ತಡೆಹಿಡಿದಿತ್ತು. ಈಗ ಈ ತಡೆ ಇಲ್ಲವಾದ ಕಾರಣ ತೂಕ ಏರುವುದನ್ನು ತಡೆಯಲು ಸಾಧ್ಯವಿಲ್ಲ. ಡ್ಯೂಕ್ ವಿಶ್ವವಿದ್ಯಾಲದ ವೈದ್ಯಕೀಯ ಕೇಂದ್ರದಲ್ಲಿ ಸಂಶೋಧಕರು ಕಂಡುಕೊಂಡಂತೆ ವ್ಯಾಯಾಮದ ಕೊರತೆಯಿಂದ ಸೊಂಟದ ಭಾಗದಲ್ಲಿ ಅಪಾಯಕರ ಕೊಬ್ಬು (visceral fat) ಸಂಗ್ರಹಗೊಳ್ಳಬಹುದು. ಇದು ಗಂಭೀರ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ನಿಮ್ಮ ರಕ್ತದ ಒತ್ತಡವೂ ಹೆಚ್ಚುತ್ತದೆ
ನಿತ್ಯದ ದೈಹಿಕ ಚಟುವಟಿಕೆಯಿಂದ ರಕ್ತದ ಒತ್ತಡವೂ ಕಡಿಮೆಯೇ ಇರುತ್ತದೆ ಹಾಗೂ ನಿಯಂತ್ರಣದಲ್ಲಿರುತ್ತದೆ. ಯಾವಾಗ ವ್ಯಾಯಾಮ ಇಲ್ಲವಾಯಿತೋ, ಈ ಮಟ್ಟಗಳು ಭಾರೀ ಏರುಪೇರಾಗುತ್ತವೆ. European Journal of Physiology ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ ವ್ಯಾಯಾಮ ನಿಲ್ಲಿಸಿದ ಎರಡು ವಾರಗಳ ಬಳಿಕ ನಿಮ್ಮ ರಕ್ತ ನಾಳಗಳು ಪೆಡಸಾಗತೊಡಗುತ್ತವೆ ಹಾಗೂ ಇದು ಅಧಿಕ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ.

ನಿಮ್ಮ ನಿದ್ದೆ ಹಾಳಾಗುತ್ತದೆ
ವ್ಯಾಯಾಮ ನಿಲ್ಲಿಸಿದ ಬಳಿಕ ನಿಮ್ಮ ನಿದ್ದೆಯೂ ಭಂಗಗೊಳ್ಳುವುದನ್ನು ನೀವು ಗಮನಿಸಬಹುದು. Journal of Behavioral Medicine ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನ ವರದಿಯ ಸಹಿತ, ಹಲವಾರು ಅಧ್ಯಯನಗಳಿಂದ ನಿಯಮಿತವಾದ ವ್ಯಾಯಾಮ ನಿದ್ದೆಯನ್ನು ಉತ್ತಮಗೊಳಿಸುತ್ತದೆ ಎಂದು ವಿವರಿಸಿವೆ. "Exercise and Sleep" ಎಂಬ ಇನ್ನೊಂದು ಮಾಧ್ಯಮ ಕಂಡುಕೊಂಡಂತೆ ಒಟ್ಟಾರೆ ನಿದ್ದೆಯ ಸಮಯ ಹಾಗೂ ದಿನದ ಎಚ್ಚರವಿರುವ ಸಮಯದಲ್ಲಿ ಸಾಕಷ್ಟು ಜಾಗ್ರತೆಯಿಂದ ಇರಲೂ ನೆರವಾಗುತ್ತದೆ.

ಅಷ್ಟೇ ಅಲ್ಲ, ನಿಮಗೆ ಹಿಂದಿನ ವ್ಯಾಯಾಮಕ್ರಮಕ್ಕೆ ಹಿಂದಿರುಗುವುದು ತೀರಾ ಕಷ್ಟವಾಗುತ್ತದೆ
ನಿತ್ಯವೂ ವ್ಯಾಯಾಮ ಮಾಡದೇ ಇದ್ದರೆ ಕೆಲವಾರು ಕೊರತೆಗಳು ಎದುರಾಗಬಹುದು ನಿಜ. ಆದರೆ ನಿತ್ಯವೂ ವ್ಯಾಯಾಮ ಮಾಡಿ ಅಭ್ಯಾಸವಾಗಿದ್ದ ದೇಹಕ್ಕೆ ವ್ಯಾಯಾಮ ಬಿಟ್ಟ ಬಳಿಕ ಮತ್ತೊಮ್ಮೆ ಈ ಅಭ್ಯಾಸಕ್ಕೆ ಮರಳುವುದು ತೀರಾ ಕಷ್ಟಕರವಾಗಿದೆ. ಹಿಂದಿನ ಅಭ್ಯಾಸಕ್ಕೆ ಮರಳಲು ದೃಢ ಮನಸ್ಸು ಹಾಗೂ ಪ್ರೇರಣೆಯನ್ನು ನೀಡುವುದು ನಿಮಗೆ ಸಾಧ್ಯವಾಗದೇ ಹೋಗಬಹುದು. ಅಲ್ಲದೇ ನಿಮ್ಮ ಆಹಾರಾಭ್ಯಾಸದಲ್ಲಿ ಮತ್ತು ದೈಹಿಕ ಚಟುವಟಿಕೆಯಲ್ಲಿ ಯಾವುದೇ ತಕ್ಷಣದ ಬದಲಾವಣೆ ಆದರೆ ಇದರಿಂದ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮ ಬೀರಬಹುದು.
ಆದ್ದರಿಂದ, ಆದಷ್ಟೂ ಮಟ್ಟಿಗೆ ನಿಮ್ಮ ವ್ಯಾಯಾಮದ ದಿನಚರಿಯನ್ನು ಬದಲಿಸಲು ಹೋಗದಿರಿ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ವ್ಯಾಯಾಮದಿಂದ ಪೂರ್ಣವಾಗಿ ವಂಚಿತರಾಗುವುದರ ಬದಲು ಸಾಧ್ಯವಾದಷ್ಟನ್ನಾದರೂ ನಿರ್ವಹಿಸಿ.



Click it and Unblock the Notifications











